ಭಾರತ ಈ ಟೂರ್ನಿ ಗೆಲ್ಲದಿದ್ರೆ, ಟಿ20 ವಿಶ್ವಕಪ್ ಗೆಲ್ಲಲ್ಲ: ಗೌತಮ್ ಗಂಭೀರ್‌ ಶಾಕಿಂಗ್ ಹೇಳಿಕೆ

ಟಿ20 ವಿಶ್ವಕಪ್‌ಗೂ ಮುನ್ನ ಆಸ್ಟ್ರೇಲಿಯಾ ತಂಡ ಭಾರತದಲ್ಲಿ ಬೀಡು ಬಿಟ್ಟಿದ್ದು, ಸೆಪ್ಟೆಂಬರ್ 20 ರಿಂದ ಸೆಪ್ಟೆಂಬರ್ 25ರವರೆಗೆ ಮೂರು ಟಿ20 ಪಂದ್ಯಗಳ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಚುಟುಕು ವಿಶ್ವಕಪ್‌ಗೂ ಮುನ್ನ ಆಸ್ಟ್ರೇಲಿಯಾ ವಿರುದ್ಧವೇ ಸರಣಿ ಆಗಿರೋದ್ರಿಂದ ಉಭಯ ತಂಡಗಳಿಗೆ ಅಭ್ಯಾಸಕ್ಕೆ ಸಾಕಷ್ಟು ನೆರವಾಗಲಿದೆ.

ಈ ವಾರ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಆರಂಭವಾಗುವುದಕ್ಕೂ ಮೊದಲು ಭಾರತ ತಂಡದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಭಾರತ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ. ಪ್ರಸ್ತುತ ಟಿ20 ವಿಶ್ವಕಪ್ ಚಾಂಪಿಯನ್ ಆಗಿರುವ ಆಸೀಸ್ ವಿರುದ್ಧದ ಸರಣಿಯೂ ಭಾರತದ ವಿಶ್ವಕಪ್ ತಯಾರಿಯ ಪ್ರಮುಖ ಭಾಗವಾಗಿದೆ.

ವಿಶ್ವಕಪ್ ಆತಿಥೇಯರೂ ಆಗಿರುವ ಆಸೀಸ್ ಭಾರತಕ್ಕೆ ಕಠಿಣ ಸವಾಲು ಒಡ್ಡುವುದು ಖಚಿತ. ಆದ್ದರಿಂದ, ಹಿಟ್‌ಮ್ಯಾನ್ ಮತ್ತು ಅವರ ತಂಡವು ಅತ್ಯುತ್ತಮ ಆಟವನ್ನು ಹೊರತರಲು ಸಾಧ್ಯವಾದರೆ ಮಾತ್ರ ಕಾಂಗರೂ ಸೈನ್ಯವನ್ನು ಸೋಲಿಸಲು ಸಾಧ್ಯವಾಗುತ್ತದೆ. ಕಳೆದ ಏಷ್ಯಾಕಪ್‌ನಲ್ಲಿ ಭಾರತ ಪ್ರಶಸ್ತಿಯ ಫೇವರಿಟ್‌ ಆಗಿ ಹೋಗಿದ್ದರೂ ಫೈನಲ್‌ ಕೂಡ ನೋಡದೆ ವಾಪಸ್ಸಾಗಿತ್ತು.

ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಭಾರತಕ್ಕೆ ನಿರ್ಣಾಯಕ!

ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಭಾರತಕ್ಕೆ ನಿರ್ಣಾಯಕ!

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಭಾರತಕ್ಕೆ ಅತ್ಯಂತ ನಿರ್ಣಾಯಕ ಎಂದು ಗೌತಮ್ ಗಂಭೀರ್ ಗಮನಸೆಳೆದಿದ್ದಾರೆ. ಇದರಲ್ಲಿ ಗೆಲುವು ಸಾಧಿಸುವುದು ತಂಡಕ್ಕೆ ಬಹಳ ಮುಖ್ಯ ಎಂದು ಹೇಳಿದರು.

''ನಾನು ಇದನ್ನು ಮೊದಲೇ ಹೇಳಿದ್ದೇನೆ ಮತ್ತು ಮತ್ತೆ ಹೇಳುತ್ತೇನೆ. ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಲು ಭಾರತ ವಿಫಲವಾದರೆ ವಿಶ್ವಕಪ್ ಗೆಲ್ಲುವುದಿಲ್ಲ'' ಎಂದು ಗಂಭೀರ್ ಎಚ್ಚರಿಕೆ ನೀಡಿದ್ದಾರೆ. ಗಂಭೀರ್ ಅವರ ಸವಾಲು ರೋಹಿತ್ ಶರ್ಮಾ ಮತ್ತು ಅವರ ತಂಡಕ್ಕೆ ದೊಡ್ಡ ಸವಾಲಾಗಿದೆ.

ಆಸ್ಟ್ರೇಲಿಯಾಲ್ಲಿ ವಿಶ್ವಕಪ್‌ ಗೆಲ್ಲಬೇಕಾದ್ರೆ, ಈಗ ಗೆಲ್ಲಬೇಕು!

ಆಸ್ಟ್ರೇಲಿಯಾಲ್ಲಿ ವಿಶ್ವಕಪ್‌ ಗೆಲ್ಲಬೇಕಾದ್ರೆ, ಈಗ ಗೆಲ್ಲಬೇಕು!

2007ರ ಮೊದಲ ಟಿ20 ವಿಶ್ವಕಪ್ ನೋಡಿ, ಸೆಮಿಫೈನಲ್‌ನಲ್ಲಿ ನಾವು ಆಸ್ಟ್ರೇಲಿಯಾವನ್ನು ಸೋಲಿಸಿದ್ದೇವೆ. 2011ರ ಏಕದಿನ ವಿಶ್ವಕಪ್ ಕ್ವಾರ್ಟರ್ ಫೈನಲ್‌ನಲ್ಲಿ ನಾವು ಆಸೀಸ್ ವಿರುದ್ಧವೂ ಗೆದ್ದಿದ್ದೇವೆ. ಆಸ್ಟ್ರೇಲಿಯಾ ವಿಶ್ವದ ಅತ್ಯಂತ ಅಪಾಯಕಾರಿ ತಂಡಗಳಲ್ಲಿ ಒಂದಾಗಿದೆ. ಆದ್ದರಿಂದ ಯಾವುದೇ ಟೂರ್ನಿಯಲ್ಲಿ ಗೆಲ್ಲಬೇಕಾದರೆ ಅವರನ್ನು ಸೋಲಿಸಲೇಬೇಕು ಎಂದು ಗೌತಮ್ ಗಂಭೀರ್ ವಿವರಿಸಿದರು. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟಿ20 ಮಂಗಳವಾರ ಮೊಹಾಲಿಯಲ್ಲಿ ನಡೆಯಲಿದೆ. ಮುಂದಿನ ಪಂದ್ಯಗಳು ಶುಕ್ರವಾರ ಮತ್ತು ಭಾನುವಾರ ನಡೆಯಲಿದೆ.

ಟಿ20 ವಿಶ್ವಕಪ್‌ಗೂ ಮುನ್ನ ಭಾರತ ತಂಡ ಆರು ಟಿ20 ಪಂದ್ಯಗಳನ್ನು ಆಡುತ್ತಿದೆ. ಮೂರು ಆಸ್ಟ್ರೇಲಿಯಾ ವಿರುದ್ಧ ಮತ್ತು ಉಳಿದ ಮೂರು ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿಯೇ ಆಡಲಿದೆ.

ಈ ಆರು ಟಿ20ಗಳು ಭಾರತಕ್ಕೆ ಏಷ್ಯಾಕಪ್‌ನ ತಪ್ಪುಗಳನ್ನು ಸರಿಪಡಿಸಲು ಮತ್ತು ಟಿ20 ವಿಶ್ವಕಪ್‌ಗೆ ಅತ್ಯುತ್ತಮ ಹನ್ನೊಂದು ಆಟಗಾರರನ್ನ ಆಯ್ಕೆ ಮಾಡಲು ಉತ್ತಮ ಅವಕಾಶವಾಗಿದೆ.

T20 World Cup: ಈತನಿಗೆ ಅಭದ್ರತೆ ಕಾಡುತ್ತದೆ, ಹೀಗಾಗಿ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಆರಂಭಿಸುವುದು ಬೇಡ; ಗಂಭೀರ್

ಏಷ್ಯಾಕಪ್‌ನಲ್ಲಿ ಮುಗ್ಗರಿಸಿದ ಟೀಂ ಇಂಡಿಯಾ

ಏಷ್ಯಾಕಪ್‌ನಲ್ಲಿ ಮುಗ್ಗರಿಸಿದ ಟೀಂ ಇಂಡಿಯಾ

ಏಷ್ಯಾಕಪ್‌ನಲ್ಲಿ ಭಾರತ ಗ್ರೂಪ್ ಹಂತದಲ್ಲಿ ಎರಡೂ ಪಂದ್ಯಗಳನ್ನು ಗೆದ್ದು ಸೂಪರ್ ಫೋರ್‌ಗೆ ಮುನ್ನಡೆದಿದೆ. ಆದರೆ ಸೂಪರ್ ಫೋರ್‌ನಲ್ಲಿ ಮೊದಲೆರಡು ಪಂದ್ಯಗಳಲ್ಲಿ ಸೋಲನುಭವಿಸುವುದರೊಂದಿಗೆ ತಂಡದ ಫೈನಲ್‌ ನಿರೀಕ್ಷೆ ಹುಸಿಯಾಯಿತು. ಸಾಂಪ್ರದಾಯಿಕ ಎದುರಾಳಿಗಳಾದ ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಭಾರತ ಸೋಲನ್ನು ಒಪ್ಪಿಕೊಂಡಿತು. ಕೊನೆಯ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಅದ್ಭುತ ಗೆಲುವು ಸಾಧಿಸಿದ್ರೂ, ಅದಾಗಲೇ ಟೂರ್ನಿಯಿಂದ ಹೊರಬಿದ್ದಿತು.

ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಬುಮ್ರಾಗೆ ಸರಿಸಮ ಈತ‌, ಆಯ್ಕೆಯಾಗದೇ ಇರುವುದು ದುರಂತ: ಮ್ಯಾಥ್ಯೂ ಹೇಡನ್

ಟಿ20 ಸರಣಿಗೆ ಭಾರತ ಮತ್ತು ಆಸ್ಟ್ರೇಲಿಯಾ ತಂಡ

ಟಿ20 ಸರಣಿಗೆ ಭಾರತ ಮತ್ತು ಆಸ್ಟ್ರೇಲಿಯಾ ತಂಡ

ಟೀಂ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಯುಜವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ದೀಪಕ್ ಚಹಾರ್ ಮತ್ತು ಜಸ್ಪ್ರೀತ್ ಬುಮ್ರಾ

ಆಸ್ಟ್ರೇಲಿಯಾ: ಆ್ಯರೋನ್ ಫಿಂಚ್ (ನಾಯಕ), ಪ್ಯಾಟ್ ಕಮ್ಮಿನ್ಸ್ (ಉಪನಾಯಕ), ಕ್ಯಾಮೆರಾನ್ ಗ್ರೀನ್, ಜೋಶ್ ಹೇಜಲ್‌ವುಡ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಕೇನ್ ರಿಚರ್ಡ್ಸನ್, ಡೇನಿಯಲ್ ಸ್ಯಾಮ್ಸ್, ಸ್ಟೀವ್ ಸ್ಮಿತ್, ಮ್ಯಾಥ್ಯೂ ವೇಡ್, ಆ್ಯಡಮ್ ಝಂಪಾ, ಶೇನ್ ಅಬಾಟ್, ಆಷ್ಟನ್ ಅಗರ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Sunday, September 18, 2022, 15:18 [IST]
Other articles published on Sep 18, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X