ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಬುಮ್ರಾಗೆ ಸರಿಸಮ ಈತ‌, ಆಯ್ಕೆಯಾಗದೇ ಇರುವುದು ದುರಂತ: ಮ್ಯಾಥ್ಯೂ ಹೇಡನ್

M Hayden

ಟಿ20 ವಿಶ್ವಕಪ್‌ಗೆ ದಿನಗಣನೆ ಶುರುವಾಗಿದ್ದು ಕಾಂಗರೂ ತವರು ಆಸ್ಟ್ರೇಲಿಯಾದ ವೇದಿಕೆ ಸಿದ್ದಗೊಂಡಿದೆ. ಟಿ20 ವಿಶ್ವಕಪ್‌ಗೂ ಮುನ್ನ ಆಸ್ಟ್ರೇಲಿಯಾ ತಂಡ ಭಾರತದಲ್ಲಿದ್ದು, ಸೆ.20ರಿಂದ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿದೆ.

ಈಗಾಗಲೇ ಟಿ20 ವಿಶ್ವಕಪ್‌ಗೆ ಭಾಗವಹಿಸುವ ಎಲ್ಲಾ ತಂಡಗಳು ಸ್ಕ್ವಾಡ್ ಅನ್ನು ಘೋಷಣೆ ಮಾಡಿವೆ. ಬಿಸಿಸಿಐ ಹಿರಿಯ ಆಟಗಾರರ ಆಯ್ಕೆ ಸಮಿತಿ ರೋಹಿತ್ ಶರ್ಮಾ ನಾಯಕತ್ವದಲ್ಲಿ15 ಆಟಗಾರರು ಹಾಗೂ ನಾಲ್ವರು ಸ್ಟ್ಯಾಂಡ್‌ ಬೈ ಆಟಗಾರರನ್ನು ಘೋಷಣೆ ಮಾಡಿದೆ. ಆದ್ರೆ ತಂಡ ಘೋಷಣೆ ಬಳಿಕ ಭಾರತದ ಹಿರಿಯ ಅನುಭವಿ ವೇಗಿ ಮೊಹಮ್ಮದ್ ಶಮಿ ತಂಡದಲ್ಲಿರದೆ ಇರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಮೊಹಮ್ಮದ್ ಶಮಿಗೆ ಕೊಕ್, ಯುವಕರಿಗೆ ಮಣೆ

ಮೊಹಮ್ಮದ್ ಶಮಿಗೆ ಕೊಕ್, ಯುವಕರಿಗೆ ಮಣೆ

ಟಿ20 ವಿಶ್ವಕಪ್‌ಗೆ ಮೊಹಮ್ಮದ್ ಶಮಿ ಅವರನ್ನು ಆಯ್ಕೆ ಮಾಡದೆ, ಭಾರತೀಯ ಆಯ್ಕೆದಾರರು ಕ್ರಿಕೆಟ್ ಪಂಡಿತರಿಗೆ ಚರ್ಚೆಯ ವೇದಿಕೆಯನ್ನ ಸೃಷ್ಟಿಸಿದ್ದಾರೆ. ವಿಶ್ವಕಪ್‌ನ ತಂಡಗಳೊಂದಿಗೆ ಕೆಲವು ಹಿರಿಯ ಆಟಗಾರರೇ ಹೊರಗುಳಿದಿದ್ದು, ಅವರ ಜಾಗದಲ್ಲಿ ಯುವ ಆಟಗಾರರಿಗೆ ಮಣೆ ಹಾಕಲಾಗಿದೆ. ಈ ಬಾರಿ ಅರ್ಷದೀಪ್ ಸಿಂಗ್ ಬದಲಿಗೆ ಮೊಹಮ್ಮದ್ ಶಮಿ ಔಟ್ ಆಗಿದ್ದಾರೆ. ಹರ್ಷಲ್ ಪಟೇಲ್ ಕೂಡ ತಂಡದಲ್ಲಿದ್ದು, ಬುಮ್ರಾ ವಾಪಸ್ಸಾಗಿದ್ದಾರೆ. ಆದ್ರೆ ವಿಚಿತ್ರವೆಂದರೆ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಶಮಿ ಅವರನ್ನು ಇರಿಸಲಾಗಿದೆ.

ಶಮಿಗೆ ಕೋವಿಡ್ ಪಾಸಿಟಿವ್, ಆಸಿಸ್ ಸರಣಿಯಿಂದ ಹೊರಕ್ಕೆ!

ಶಮಿಗೆ ಕೋವಿಡ್ ಪಾಸಿಟಿವ್, ಆಸಿಸ್ ಸರಣಿಯಿಂದ ಹೊರಕ್ಕೆ!

ಶಮಿ ಅವರು ಕೋವಿಡ್ -19 ಪಾಸಿಟಿವ್ ಆದ ಕಾರಣ ಆಸ್ಟ್ರೇಲಿಯಾ ವಿರುದ್ಧದ ಸರಣಿಯಿಂದ ಹೊರಗುಳಿದಿರುವುದು ವಿಪರ್ಯಾಸ. ಒಟ್ಟಾರೆಯಾಗಿ, ಶಮಿ ಅವರ ಅದೃಷ್ಟ ಉತ್ತಮವಾಗಿದ್ದಂತೆ ಕಂಡುಬರುತ್ತಿಲ್ಲ, ಹೀಗಾಗಿಯೇ ಅವರು ಟಿ 20 ಸ್ವರೂಪದಿಂದ ದೂರವಿದ್ದಾರೆ.

ಆದ್ರೆ, ಶಮಿ ಅವರನ್ನು ಸ್ಟ್ಯಾಂಡ್‌ಬೈ ಆಟಗಾರನಾಗಿ ವಿಶ್ವಕಪ್ ತಂಡದಲ್ಲಿ ಇರಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಶಮಿ ಆಡುವುದರಲ್ಲಿ ವಿಶೇಷ ಅರ್ಥವಿಲ್ಲ ಎಂದು ಆಸ್ಟ್ರೇಲಿಯಾದ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್ ಹೇಳಿದ್ದಾರೆ. ಏಕೆಂದರೆ ನೀವು ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಿದ ಅದೇ ಆಟಗಾರರಿಗೆ ಪಂದ್ಯದ ಅಭ್ಯಾಸವನ್ನು ಪಡೆಯಲು ಅವಕಾಶವನ್ನು ನೀಡಲು ಬಯಸುತ್ತೀರಿ. ಇದು ದೊಡ್ಡ ವಿಪರ್ಯಾಸ ಎಂದು ಹೇಡನ್ ಲೇವಡಿ ಮಾಡಿದ್ದಾರೆ.

IND vs AUS: ಮೊದಲ ಟಿ20 ಪಂದ್ಯಕ್ಕೆ ಭಾರತ vs ಆಸ್ಟ್ರೇಲಿಯ ಸಂಭಾವ್ಯ ಆಡುವ 11ರ ಬಳಗ

ವಿಶ್ವಕಪ್‌ಗೂ ಮುನ್ನ ಶಮಿ ಆಯ್ಕೆ ಅಂತಿಮವಾಗಬೇಕು!

ವಿಶ್ವಕಪ್‌ಗೂ ಮುನ್ನ ಶಮಿ ಆಯ್ಕೆ ಅಂತಿಮವಾಗಬೇಕು!

ಭಾರತ ತಂಡದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ವಿಶ್ವಕಪ್‌ಗೆ ಮುನ್ನ ಶಮಿಯನ್ನು ಆಡಿಸುವ ತಪ್ಪನ್ನು ತಂಡ ಮಾಡಲು ಬಯಸುವುದಿಲ್ಲ ಎಂದು ಭಾವಿಸುತ್ತಾರೆ. ಏಕೆಂದರೆ ಅದು ತಂಡದ ನಿರ್ವಹಣೆಗೆ ನಷ್ಟವಾಗಬಹುದು. ವಿಶ್ವಕಪ್‌ಗೂ ಮುನ್ನ ಶಮಿ ಉತ್ತಮ ಪ್ರದರ್ಶನ ತೋರಿದರೆ ಟೀಕೆಗಳು ಹೆಚ್ಚಾಗಲಿವೆ. ವಿಶ್ವಕಪ್‌ಗೆ ಹೋದ ವೇಗಿಗಳಿಗೆ ತವರಿನ ಸರಣಿಯಲ್ಲಿ ಕೆಟ್ಟ ಪ್ರದರ್ಶನ ನೀಡಿದ್ರೆ, ಶಮಿಯನ್ನು ಏಕೆ ತೆಗೆದುಕೊಳ್ಳಲಿಲ್ಲ ಎಂದು ಆಯ್ಕೆಗಾರರು ಇನ್ನೂ ಹೆಚ್ಚಿನ ಟೀಕೆಗೆ ಒಳಗಾಗುತ್ತೇವೆ. ಅಷ್ಟೇ ಏಕೆ ವಿಶ್ವಕಪ್‌ಗೆ ತೆರಳುವ ಬೌಲರ್ ಗಾಯಗೊಂಡಾಗ ಮಾತ್ರ ಶಮಿಗೆ ಸ್ಥಾನ ನೀಡಬೇಕೆಂದು ಗಂಭೀರ್ ಬಯಸಿದ್ದಾರೆ.

T20 World Cup: ಟಾಪ್-5ರಲ್ಲಿ ಆಸಕ್ತಿ ಇಲ್ಲ; ದಿನೇಶ್ ಕಾರ್ತಿಕ್ ಬಗ್ಗೆ ಗೌತಮ್ ಗಂಭೀರ್ ದೊಡ್ಡ ಹೇಳಿಕೆ

ಬುಮ್ರಾ ಆಯ್ಕೆಯಂತೆಯೇ ಶಮಿಯನ್ನು ಆಯ್ಕೆ ಮಾಡಬೇಕಿತ್ತು!

ಬುಮ್ರಾ ಆಯ್ಕೆಯಂತೆಯೇ ಶಮಿಯನ್ನು ಆಯ್ಕೆ ಮಾಡಬೇಕಿತ್ತು!

ಏತನ್ಮಧ್ಯೆ, ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್‌ಮನ್ ಮ್ಯಾಥ್ಯೂ ಹೇಡನ್ ಅವರನ್ನು ಜಸ್ಪ್ರೀತ್ ಬುಮ್ರಾ ಅವರಂತೆಯೇ ಶಮಿಯನ್ನು ಆಯ್ಕೆ ಮಾಡಬಹುದೇ ಎಂದು ಕೇಳಿದಾಗ, ಅವರು ತಮ್ಮ ಉತ್ತರವನ್ನು ನೀಡಿದರು.

''ವಿಶ್ವಕಪ್‌ಗೆ ಶಮಿ ಆಯ್ಕೆಯಾಗದೇ ನಿಜಕ್ಕೂ ಆಶ್ಚರ್ಯ ಮೂಡಿಸಿದ್ದು, ಅವರೊಬ್ಬ ಅದ್ಭುತ ಕ್ರಿಕೆಟಿಗ ಮತ್ತು ವಿಕೆಟ್ ಪಡೆಯುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ ಅವರು ಜಸ್ಪ್ರೀತ್ ಬುಮ್ರಾ ಅವರಂತೆ ಉತ್ತಮ ಎಂದು ಸಾಬೀತುಪಡಿಸಲಿದ್ದಾರಾ? ಎನ್ನುತ್ತಾ, ನಾವು ಆಶಾವಾದಿ ದೃಷ್ಟಿಕೋನದಿಂದ ಇದೆಲ್ಲವನ್ನೂ ಯೋಚಿಸಬಹುದು ಎಂದು ನಾನು ಭಾವಿಸುತ್ತೇನೆ . ಆದರೆ ನೀವು ಮತ್ತೊಮ್ಮೆ ಆತನನ್ನ ಆಯ್ಕೆ ಮಾಡದೇ ಇರುವುದು ಎಷ್ಟು ಸರಿ ಎಂದು ಸಾಬೀತುಪಡಿಸಬೇಕು'' ಎಂದು ಟೀಕಿಸಿದ್ದಾರೆ.

Story first published: Sunday, September 18, 2022, 12:52 [IST]
Other articles published on Sep 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X