ಬೆವರಿಳಿಸುತ್ತಿದ್ದ ವಿಶ್ವದ ಟಾಪ್‌ 5 ಬ್ಯಾಟ್ಸ್‌ಮನ್‌ಗಳ ಹೆಸರಿಸಿದ ಹರ್ಭಜನ್ ಸಿಂಗ್!

ಪಂಜಾಬ್, ಏಪ್ರಿಲ್ 24: ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಸುಮಾರು 18 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಬದುಕು ಕಂಡವರು. ಅಲ್ಲದೆ ರಿಕಿ ಪಾಂಟಿಂಗ್, ಮ್ಯಾಥ್ಯೂ ಹೇಡನ್, ಬ್ರಿಯಾನ್ ಲಾರಾ, ಜಾಕ್ ಕ್ಯಾಲೀಸ್, ಹಾಶಿಮ್ ಆಮ್ಲಾ, ಕುಮಾರ ಸಂಗಕ್ಕಾರ, ಇನ್ಝಮಾಮ್ ಉಲ್ ಹಕ್ ಇಂಥ ಬಹಳಷ್ಟು ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಿದ್ದ ಆಧುನಿಕ ಕ್ರಿಕೆಟ್‌ ಯುಗದಲ್ಲಿ ಆಡಿದ ಅನುಭವವೂ ಭಜ್ಜಿಗಿದೆ. ಹರ್ಭಜನ್, ವಿಶ್ವದ ಬೆಸ್ಟ್ ಆಫ್‌ ಸ್ಪಿನ್ನರ್‌ಗಳಲ್ಲಿ ಗುರುತಿಸಿಕೊಂಡಿದ್ದರು ಕೂಡ.

ಆರ್‌ಸಿಬಿ ಪರ ಕ್ರಿಸ್‌ ಗೇಲ್ ಸಿಡಿದಿದ್ದು, ದಾಖಲೆ ರನ್ ಗಳಿಸಿದ್ದು ಇದೇ ದಿನ!ಆರ್‌ಸಿಬಿ ಪರ ಕ್ರಿಸ್‌ ಗೇಲ್ ಸಿಡಿದಿದ್ದು, ದಾಖಲೆ ರನ್ ಗಳಿಸಿದ್ದು ಇದೇ ದಿನ!

ನಿಮ್ಮ ಪಾಲಿಗೆ ಔಟ್ ಮಾಡಲು ಅತೀ ಕಷ್ಟವೆನಿಸಿದ ಟಾಪ್ 5 ಬ್ಯಾಟ್ಸ್‌ಮನ್‌ಗಳು ಯಾರು ಎಂಬ ಪ್ರಶ್ನೆಯನ್ನು ವೀಡಿಯೋ ಕಾಲ್ ವೇಳೆ ಹರ್ಭಜನ್‌ ಅವರಲ್ಲಿ ಕೇಳಲಾಯ್ತು. ಈ ವೇಳೆ ಭಜ್ಜಿ ಜೊತೆ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಕೂಡ ಇದ್ದರು. ಟೆಸ್ಟ್‌ನಲ್ಲಿ 417 ವಿಕೆಟ್‌ಗಳು, ಏಕದಿನದಲ್ಲಿ 269 ವಿಕೆಟ್‌ಗಳು, ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 25 ವಿಕೆಟ್‌ ದಾಖಲೆ ಹೊಂದಿರುವ ಸಿಂಗ್‌ಗೆ ಈ ಪ್ರಶ್ನೆಗೆ ಉತ್ತರಿಸಲು ಕಷ್ಟವೆನಿಸಲಿಲ್ಲ.

ಕ್ರಿಕೆಟಿಗರು ಕ್ರೀಡಾಸ್ಫೂರ್ತಿ ಮೆರೆದು ಮನಗೆದ್ದಿದ್ದ ಟಾಪ್ 5 ಸಂದರ್ಭಗಳುಕ್ರಿಕೆಟಿಗರು ಕ್ರೀಡಾಸ್ಫೂರ್ತಿ ಮೆರೆದು ಮನಗೆದ್ದಿದ್ದ ಟಾಪ್ 5 ಸಂದರ್ಭಗಳು

ತಾನು ಆಡುತ್ತಿದ್ದಾಗ ಬೆವರಿಳಿಸುತ್ತಿದ್ದ ಟಾಪ್ 5 ಬ್ಯಾಟ್ಸ್‌ಮನ್‌ಗಳನ್ನು ಭಜ್ಜಿ ಹೆಸರಿಸಿದ್ದಾರೆ. ಈ ಪಟ್ಟಿಯಲ್ಲಿ ಪಾಕಿಸ್ತಾನದ ಇಬ್ಬರು, ದಕ್ಷಿಣ ಆಫ್ರಿಕಾ-ಆಸ್ಟ್ರೇಲಿಯಾದ ಒಬ್ಬೊಬ್ಬರು, ವೆಸ್ಟ್ ಇಂಡೀಸ್‌ನ ಒಬ್ಬ ಬ್ಯಾಟ್ಸ್‌ಮನ್ ಇದ್ದಾರೆ.

ಜಾಕ್‌ ಕ್ಯಾಲೀಸ್

ಜಾಕ್‌ ಕ್ಯಾಲೀಸ್

ಹರ್ಭಜನ್ ಸಿಂಗ್ ಹೆಸರಿಸಿರುವ ಟಫೆಸ್ಟ್ ಟಾಪ್ 5 ಬ್ಯಾಟ್ಸ್‌ಮನ್‌ಗಳಲ್ಲಿ ದಕ್ಷಿಣ ಆಫ್ರಿಕಾದ ಆಲ್ ರೌಂಡರ್ ಜಾಕ್ ಕ್ಯಾಲೀಸ್ ಇದ್ದಾರೆ. ಏಕದಿನ ಮತ್ತು ಟೆಸ್ಟ್ ಎರಡರಲ್ಲೂ ದಕ್ಷಿಣ ಆಫ್ರಿಕಾ ಪರ ಅತ್ಯಧಿಕ ರನ್ ಸರದಾರರಲ್ಲಿ ಕ್ಯಾಲೀಸ್ ಇದ್ದಾರೆ. ಕ್ಯಾಲೀಸ್, ಟೆಸ್ಟ್‌ನಲ್ಲಿ 13289 ರನ್, ಏಕದಿನದಲ್ಲಿ 11579 ರನ್ ಗಳಿಸಿದ್ದಾರೆ. 'ಜಾಕ್ ಕ್ಯಾಲೀಸ್ ಅವರನ್ನು ಟೆಸ್ಟ್‌ನಲ್ಲಿ ಔಟ್ ಮಾಡಲು ಬಲ ಕಷ್ಟವೆನಿಸುತ್ತಿತ್ತು,' ಎಂದು ಹರ್ಭಜನ್ ಹೇಳಿದ್ದಾರೆ.

ಮ್ಯಾಥ್ಯೂ ಹೇಡನ್

ಮ್ಯಾಥ್ಯೂ ಹೇಡನ್

ಹರ್ಭಜನ್ ಪಟ್ಟಿಯಲ್ಲಿ ಎರಡನೇ ಬ್ಯಾಟ್ಸ್‌ಮನ್ ಆಗಿ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಮ್ಯಾಥ್ಯೂ ಹೇಡನ್ ಕಾಣಿಸಿಕೊಂಡಿದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್‌ಗಳಲ್ಲಿ ಬೆಸ್ಟ್ ಬ್ಯಾಟ್ಸ್‌ಮನ್ ಅನ್ನಿಸಿಕೊಂಡಿದ್ದವರು ಹೇಡನ್. ಅದರಲ್ಲೂ ಸ್ಪಿನ್ನರ್‌ಗಳ ಪಾಲಿಗೆ ಅಪಾಯಕಾರಿ ಬ್ಯಾಟ್ಸ್‌ಮನ್ ಆಗಿದ್ದರು.

ಬ್ರಿಯಾನ್ ಲಾರ

ಬ್ರಿಯಾನ್ ಲಾರ

ವೆಸ್ಟ್ ಇಂಡೀಸ್‌ನ ದಂತಕತೆ ಬ್ರಿಯಾನ್ ಲಾರಾ ಸರ್ವಕಾಲಿಕ ವಿಶ್ವದ ಕ್ರಿಕೆಟಿಗರಲ್ಲಿ ಈಗಲೂ ಗುರುತಿಸಿಕೊಳ್ಳುವವರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಜ್ಜಿ, ಲಾರಾಗೆ ಹೆಚ್ಚು ರನ್‌ಕೊಟ್ಟಿಲ್ಲ. ಆದರೆ ಎಡಗೈ ಬ್ಯಾಟ್ಸ್‌ಮನ್ ಲಾರಾ ಅದ್ಭುತ ಆಟಗಾರ ಎಂದು ಸಿಂಗ್ ಹೇಳಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ನಿವೃತ್ತಿ ಹೇಳುವಾಗ ಲಾರಾ, ಟೆಸ್ಟ್‌ನಲ್ಲಿ 11953 ರನ್, ಏಕದಿನದಲ್ಲಿ 10405 ರನ್ ಗಳಿಸಿದ್ದರು.

ಯೂನಿಸ್ ಖಾನ್

ಯೂನಿಸ್ ಖಾನ್

ಪಾಕಿಸ್ತಾನದ ಮಾಜಿ ಬ್ಯಾಟ್ಸ್‌ಮನ್ ಯೂನಿಸ್ ಖಾನ್ ಕೂಡ ಭಜ್ಜಿ ಪಾಲಿಗೆ ಕಠಿಣ ಬ್ಯಾಟ್ಸ್‌ಮನ್ ಆಗಿದ್ದರಂತೆ. ಹರ್ಭಜನ್ ಎಸೆತಗಳಿಗೆ ಯೂನಿಸ್ ಟ್ವೀಪ್ ಮಾಡುತ್ತಿದ್ದುದನ್ನು ಪಕ್ಕದಲ್ಲಿದ್ದ ರೋಹಿತ್ ನೆನಪಿಸಿದಾಗ ತುಟಿ ಬಿಚ್ಚಿದ ಭಜ್ಜಿ, 'ಯೂನಿಸ್ ಖಾನ್ ನನಗೆ ಬಹಳಷ್ಟು ತೊಂದರೆ ಮಾಡಿದ್ದರು,' ಎಂದರು. ಯೂನಿಸ್ ಖಾನ್ 118 ಟೆಸ್ಟ್‌ಗಳಲ್ಲಿ 52.05ರ ಸರಾಸರಿಯಂತೆ 10099 ರನ್ ಗಳಿಸಿದ್ದಾರೆ.

ಇನ್ಝಮಾಮ್ ಉಲ್ ಹಕ್

ಇನ್ಝಮಾಮ್ ಉಲ್ ಹಕ್

'ನಾನು ಔಟ್ ಮಾಡಲು ಹೆಣಗಾಡುತ್ತಿದ್ದವರಲ್ಲಿ ಇನ್ಝಮಾಮ್ ಉಲ್ ಹಕ್ ಕೂಡ ಒಬ್ಬರು. ನಾನು ಆಡುತ್ತಿದ್ದಾಗ ಬ್ಯಾಟಿಂಗ್‌ನಲ್ಲಿ ಬಲಿಷ್ಠರಿದ್ದ ಅನೇಕರಿದ್ದಾರೆ. ಆದರೆ ಇಲ್ಲಿ ಬರೀ ಐದು ಮಂದಿಯನ್ನಷ್ಟೇ ಹೆಸರಿಸಿದ್ದೇನೆ,' ಎಂದು ಹರ್ಭಜನ್ ನುಡಿದರು. ಪಾಕಿಸ್ತಾನ ಪರ ಇನ್ಝಮಾಮ್ ಟೆಸ್ಟ್‌ನಲ್ಲಿ 8830 ರನ್, ಏಕದಿನದಲ್ಲಿ 11739 ರನ್ ಗಳಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Friday, April 24, 2020, 10:59 [IST]
Other articles published on Apr 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X