ತಂಡದಿಂದ ಮಿಥಾಲಿ ಹೊರಗಿಟ್ಟಿದ್ದಕ್ಕೆ ಪಶ್ಚಾತಾಪವೇನಿಲ್ಲ: ಹರ್ಮನ್‌ಪ್ರೀತ್

ಆ್ಯಂಟಿಗುವಾ, ನವೆಂಬರ್ 23: ಐಸಿಸಿ ಮಹಿಳಾ ವಿಶ್ವಕಪ್ ಟಿ20 ಟೂರ್ನಿಯಲ್ಲಿ ಭಾರತ ತಂಡದಲ್ಲಿ ಮಿಥಾಲಿ ರಾಜ್‌ ಇದ್ದಿದ್ದರೆ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ನಲ್ಲಿ ಭಾರತ ಗೆಲ್ಲುವ ಸಾಧ್ಯತೆಯಿತ್ತು ಎಂಬ ಮಾತುಗಳು ಕ್ರೀಡಾವಲಯದಲ್ಲಿ ಕೇಳಿಬರುತ್ತಿವೆ. ಆದರೆ ನಾಯಕಿ ಹರ್ಮನ್ ಪ್ರೀತ್ ಕೌರ್ ಮಾತ್ರ ಪ್ರಮುಖ ಪಂದ್ಯದಲ್ಲಿ ಮಿಥಾಲಿಯನ್ನು ಹೊರಗಿಟ್ಟಿದ್ದಕ್ಕೆ ಪಶ್ಚಾತಾಪವೇನೂ ಆಗಿಲ್ಲ ಎಂದಿದ್ದಾರೆ.

2ನೇ ಟಿ20: ಭಾರತ ಗೆಲ್ಲಿಲ್ಲ, ಆಸ್ಟ್ರೇಲಿಯಾ ಸೋಲ್ಲಿಲ್ಲ, ಎರಡಕ್ಕೂ ಮಳೆ ಬಿಡ್ಲಿಲ್ಲ!

ಶುಕ್ರವಾರ (ನವೆಂಬರ್ 23) ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ 8 ವಿಕೆಟ್ ಭರ್ಜರಿ ಗೆಲುವನ್ನಾಚರಿಸಿತ್ತು. ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಭಾರತದ ವನಿತೆಯರು ಸ್ಮೃತಿ ಮಂಧಾನ 34, ಜೆಮಿಮಾ ರೋಡ್ರಿಗಸ್ 26 ರನ್ ನೆರವಿನೊಂದಿಗೆ 20 ಓವರ್‌ನಲ್ಲಿ ಎಲ್ಲಾ ವಿಕೆಟ್ ಒಪ್ಪಿಸಿ 112 ರನ್ ಕಲೆ ಹಾಕಿತ್ತು.

ವೆಸ್ಟ್ ಇಂಡೀಸ್ ವೇಗಿ ಶಾನನ್ ಗೇಬ್ರಿಯಲ್‌ಗೆ ನಿಷೇಧ ಹೇರಿದ ಐಸಿಸಿ!

ಉತ್ತಮ ಬ್ಯಾಟಿಂಗ್ ಸಾಮರ್ಥ್ಯದ ಮಿಥಾಲಿ ರಾಜ್ ಈ ಪಂದ್ಯದಲ್ಲಿ ಭಾರತದ ಆಡುವ 11 ತಂಡದಲ್ಲಿ ಇರುತ್ತಿದ್ದರೆ ಪಂದ್ಯ ತಿರುವನ್ನು ಪಡೆದುಕೊಳ್ಳುವ ಸಾಧ್ಯತೆಯೂ ಇತ್ತು. ಆದರೆ ಈಗ ಕಾಲ ಕೈಮೀರಿದೆ, ಭಾರತದ ವನಿತಾ ತಂಡ ಸೋತಾಗಿದೆ!

ಇಂಗ್ಲೆಂಡ್‌ನಿಂದ ಇಬ್ಬರು ಅರ್ಧಶತಕ

ಇಂಗ್ಲೆಂಡ್‌ನಿಂದ ಇಬ್ಬರು ಅರ್ಧಶತಕ

ಗುರಿ ಬೆನ್ನತ್ತಿದ ಇಂಗ್ಲೆಂಡ್ ಆಮಿ ಎಲ್ಲೆನ್ ಜೋನ್ಸ್ 53, ನಟಾಲಿಯಾ ಸಿವರ್ 52 ರನ್ ಬೆಂಬಲದೊಂದಿಗೆ 17.1 ಓವರ್‌ನಲ್ಲಿ 2 ವಿಕೆಟ್ ಕಳೆದು 116 ರನ್ ಪೇರಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶ ಗಿಟ್ಟಿಸಿಕೊಂಡಿತ್ತು. ಟೂರ್ನಿಯಲ್ಲಿ ಆಡಿದ್ದ ನಾಲ್ಕರಲ್ಲೂ ಗೆದ್ದಿದ್ದ ಭಾರತ ಅತ್ಯಂತ ಪ್ರಮುಖ ಪಂದ್ಯದಲ್ಲೇ ಸೋತು ಪ್ರಶಸ್ತಿ ಸುತ್ತಿನಿಂದ ಹೊರಬಿದ್ದಿತ್ತು.

ಮಿಥಾಲಿ ಬೆಂಚ್‌ಪ್ಲೇಯರ್

ಮಿಥಾಲಿ ಬೆಂಚ್‌ಪ್ಲೇಯರ್

ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಮಿಥಾಲಿ ರಾಜ್‌ಗೆ ಈ ಪಂದ್ಯದಲ್ಲಿ ಆಡುವ 11 ಮಂದಿಯ ತಂಡದಲ್ಲಿ ಸ್ಥಾನ ನೀಡಿರಲಿಲ್ಲ. ಮಿಥಾಲಿಯನ್ನು ಈ ನಿರ್ಣಾಯಕ ಪಂದ್ಯದಲ್ಲೇ 'ಬೆಂಚ್‌ ಪ್ಲೇಯರ್' ಆಗಿಸಿದ್ದ ತಂಡ ನಿರ್ವಹಣಾ ಸಮಿತಿಯ ನಿರ್ಧಾರ ಅಚ್ಚರಿಗೀಡು ಮಾಡಿತ್ತು.

ಪಶ್ಚಾತಾಪವಿಲ್ಲ

ಪಶ್ಚಾತಾಪವಿಲ್ಲ

ಆದರೆ ಈ ಬಗ್ಗೆ ನಾಯಕಿ ಕೌರ್ ಪ್ರತಿಕ್ರಿಯಿಸಿ, 'ನಾವು ಏನು ನಿರ್ಧರಿಸುತ್ತೇವೋ ಅದು ನಾವು ತಂಡದ ಒಳಿತಿನ ದೃಷ್ಟಿಯಲ್ಲಿ ತೆಗೆದುಕೊಂಡ ನಿರ್ಧಾರ. ಕೆಲವು ನಿರ್ಧಾರ ಕೆಲವೊಂದು ಸಾರಿ ಕೆಲಸ ಮಾಡುತ್ತೆ, ಕೆಲವೊಮ್ಮೆ ಇಲ್ಲ. ಹಾಗಾಗಿ ಇಲ್ಲಿ ಪಶ್ಚಾತಾಪದ ವಿಚಾರವಿಲ್ಲ' ಎಂದರು.

ನತದೃಷ್ಟ ಭಾರತ

ನತದೃಷ್ಟ ಭಾರತ

ಟೂರ್ನಿಯ ಅಂಕಪಟ್ಟಿ ನೋಡುವವರಿಗೆ ಅಚ್ಚರಿಯೂ ಅಘಾತವೂ ಉಂಟು ಮಾಡುತ್ತೆ. ಅಂಕಪಟ್ಟಿಯಲ್ಲಿ ಎ ಗ್ರೂಪ್‌ ನಲ್ಲಿ ವೆಸ್ಟ್ ಇಂಡೀಸ್ ತಂಡ ಎಲ್ಲಾ 4 ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು. ಇತ್ತ ಭಾರತ ಎಲ್ಲಾ ನಾಲ್ಕರಲ್ಲಿ ಗೆದ್ದು ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ತಲೆಬಾಗಿ ಪ್ರಶಸ್ತಿ ಸುತ್ತಿನ ಅವಕಾಶ ಕಾಳೆದುಕೊಂಡಿದೆ. ಆದರೆ ಹಿಂದೆ ಆಡಿದ್ದ ನಾಲ್ಕರಲ್ಲಿ 2 ಪಂದ್ಯ ಗೆದ್ದಿದ್ದ ಇಂಗ್ಲೆಂಡ್, 3 ಪಂದ್ಯ ಗೆದ್ದಿದ್ದ ಆಸ್ಟ್ರೇಲಿಯಾ ಈಗ ಫೈನಲ್‌ ಹಂತಕ್ಕೇರಿವೆ!

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Friday, November 23, 2018, 20:24 [IST]
Other articles published on Nov 23, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X