ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಫಿಟ್‌ನೆಸ್‌ ಸಾಬೀತುಪಡಿಸಬೇಕಿದೆ ಹರ್ಷಲ್ ಪಟೇಲ್

ಮಧ್ಯಮ ವೇಗದ ಬೌಲರ್ ಹರ್ಷಲ್ ಪಟೇಲ್ ಮುಂಬರುವ ಟಿ20 ವಿಶ್ವಕಪ್‌ಗಾಗಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಹರ್ಷಲ್ ಪಟೇಲ್ ಏಷ್ಯಾಕಪ್‌ನಿಂದ ಹೊರಗುಳಿದಿದ್ದರು.

ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುವ ಮುನ್ನ ಭಾರತ ತಂಡ ತವರಿನಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯನ್ನು ಆಡಲಿದೆ. ಈ ಆರು ಪಂದ್ಯಗಳು ಹರ್ಷಲ್ ಪಟೇಲ್‌ಗೆ ಬಹಳ ಮುಖ್ಯವಾಗಿವೆ. ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ತಮ್ಮ ಲಯ ಕಂಡುಕೊಳ್ಳಲು ಸರಣಿ ಮುಖ್ಯವಾಗಿದೆ.

ಗಾಯದ ಸಮಸ್ಯೆಯಿಂದ ಸಂಪೂರ್ಣವಾಗಿ ಗುಣಮುಖವಾಗಿದ್ದು, ತಮ್ಮ ಫಿಟ್‌ನೆಸ್‌ ಅನ್ನು ಸಾಬೀತುಪಡಿಸಲು ಅವರು ಈ ಆರು ಪಂದ್ಯಗಳಲ್ಲಿ ಅವರು ಉತ್ತಮವಾಗಿ ಆಡಬೇಕಿದೆ. ಕಳೆದ ವರ್ಷದಿಂದ ಭಾರತ ಟಿ20 ಸ್ಪೆಷಲಿಸ್ಟ್ ಬೌಲರ್ ಎನಿಸಿಕೊಂಡಿರುವ ಹರ್ಷಲ್ ಪಟೇಲ್, ಗಾಯದ ಸಮಸ್ಯೆಯಿಂದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಮತ್ತು ಏಷ್ಯಾಕಪ್‌ನಲ್ಲಿ ಭಾಗವಹಿಸಿರಲಿಲ್ಲ.

ಟಿ20 ವಿಶ್ವಕಪ್ 2022: ಭಾರತದ ಈ 3 ಕ್ರಿಕೆಟಿಗರಿಗೆ ಇದುವೇ ಅಂತಿಮ ಚುಟುಕು ವಿಶ್ವಕಪ್!ಟಿ20 ವಿಶ್ವಕಪ್ 2022: ಭಾರತದ ಈ 3 ಕ್ರಿಕೆಟಿಗರಿಗೆ ಇದುವೇ ಅಂತಿಮ ಚುಟುಕು ವಿಶ್ವಕಪ್!

ಎನ್‌ಸಿಬಿಯಲ್ಲಿ ನಡೆಸಿದ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಅವರನ್ನು ತಂಡಕ್ಕೆ ಮರಳಿ ಆಯ್ಕೆ ಮಾಡಲಾಗಿದೆ. ಟಿ20 ವಿಶ್ವಕಪ್‌ನಲ್ಲಿ ಹರ್ಷಲ್ ಪಟೇಲ್ ಪ್ರಮುಖ ಪಾತ್ರವನ್ನು ವಹಿಸುವ ನಿರೀಕ್ಷೆಯಿದೆ.

ಹರ್ಷಲ್‌ ಬೌಲಿಂಗ್‌ಗೆ ಆಸ್ಟ್ರೇಲಿಯಾ ಪಿಚ್ ಸೂಕ್ತವಲ್ಲ

ಹರ್ಷಲ್‌ ಬೌಲಿಂಗ್‌ಗೆ ಆಸ್ಟ್ರೇಲಿಯಾ ಪಿಚ್ ಸೂಕ್ತವಲ್ಲ

ಹರ್ಷಲ್ ಪಟೇಲ್ ಬೌಲಿಂಗ್ ಶೈಲಿಯು ಆಸ್ಟ್ರೇಲಿಯಾದ ಪರಿಸ್ಥಿತಿಗಳಿಗೆ 'ಸೂಕ್ತವಾಗಿಲ್ಲ' ಎಂದು ಹೇಳಲಾಗುತ್ತಿದೆ. ಮಧ್ಯಮ ವೇಗಿ ಪಟೇಲ್ ವಿಕೆಟ್‌ ಪಡೆಯಲು ಅವರ ಬದಲಾವಣೆಗಳು ಮತ್ತು ಆಫ್-ಪೇಸ್ ಎಸೆತಗಳ ಮೇಲೆ ಹೆಚ್ಚು ಅವಲಂಬಿತವಾಗಿದ್ದಾರೆ.

ನಿಧಾನಗತಿಯ ಬೌಲಿಂಗ್‌ಗೆ ಪಿಚ್‌ಗಳು ಅನುಕೂಲಕರವಾಗಿರುವ ಭಾರತ ಮತ್ತು ಯುಎಇಯಲ್ಲಿ ಹರ್ಷಲ್ ಪಟೇಲ್ ಹೆಚ್ಚಿನ ಯಶಸ್ಸನ್ನು ಕಂಡಿದ್ದಾರೆ. ಆದರೆ ಆಸ್ಟ್ರೇಲಿಯಾದಲ್ಲಿ, ಪಿಚ್‌ಗಳು ಸೀಮ್ ಮತ್ತು ಬೌನ್ಸ್‌ಗೆ ಸಹಾಯ ಮಾಡುವುದರಿಂದ ಹರ್ಷಲ್ ಪಟೇಲ್ ಬದಲಿಗೆ ಶಮಿಯನ್ನು ಆಯ್ಕೆ ಮಾಡಬೇಕಿತ್ತು ಎನ್ನುವ ವಾದ ಕೇಳಿ ಬಂದಿದೆ.

ಟಿ20 ವಿಶ್ವಕಪ್‌ಗೆ ಆಯ್ಕೆ: RCB ಅಭಿಮಾನಿಗಳಿಗೆ ಧನ್ಯವಾದ ಪತ್ರ ಬರೆದ ದಿನೇಶ್ ಕಾರ್ತಿಕ್

 ಸ್ಟ್ಯಾಂಡ್‌ಬೈ ಆಟಗಾರ ಮೊಹಮ್ಮದ್ ಶಮಿ

ಸ್ಟ್ಯಾಂಡ್‌ಬೈ ಆಟಗಾರ ಮೊಹಮ್ಮದ್ ಶಮಿ

ಮೊಹಮ್ಮದ್ ಶಮಿಯನ್ನು ಟಿ20 ವಿಶ್ವಕಪ್‌ಗೆ ಸ್ಟ್ಯಾಂಡ್‌ಬೈ ಎಂದು ಹೆಸರಿಸಲಾಗಿದೆ. ಆದರೆ, ಶಮಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಗಳಲ್ಲಿ ಆಡಲು ಅವಕಾಶ ಪಡೆಯಲಿದ್ದಾರೆ. ಒಂದು ವೇಳೆ ಸರಣಿಯಲ್ಲಿ ಹರ್ಷಲ್ ಪಟೇಲ್ ಕಳಪೆ ಪ್ರದರ್ಶನ ನೀಡಿ ಶಮಿ ಉತ್ತಮ ಪ್ರದರ್ಶನ ನೀಡಿದರೆ ಪಟೇಲ್ ಟಿ20 ವಿಶ್ವಕಪ್‌ನಲ್ಲಿ ಆಡುವ ತಂಡದಲ್ಲಿ ಸ್ಥಾನ ಪಡೆಯುವುದು ಕಷ್ಟವಾಗಲಿದೆ.

2012ರಿಂದ ಮೊಹಮ್ಮದ್ ಶಮಿ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡುತ್ತಿದ್ದರು ಕೆಲವೇ ಕೆಲವು ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಅವುಗಳಲ್ಲಿ ಹೆಚ್ಚಿನ ಪಂದ್ಯಗಳು ಟಿ 20 ವಿಶ್ವಕಪ್‌ಗಳಲ್ಲಿ ಆಡಿದ್ದಾರೆ. 2022ರ ವಿಶ್ವಕಪ್‌ ಶಮಿಗೆ ನಾಲ್ಕನೇ ವಿಶ್ವಕಪ್ ಪಂದ್ಯಾವಳಿಯಾಗಿದೆ.

ಇಬ್ಬರ ಅಂಕಿ-ಅಂಶಗಳು ಹೇಗಿದೆ?

ಇಬ್ಬರ ಅಂಕಿ-ಅಂಶಗಳು ಹೇಗಿದೆ?

ಹರ್ಷಲ್ ಪಟೇಲ್ ಮತ್ತು ಮೊಹಮ್ಮದ್ ಶಮಿ ಇಬ್ಬರೂ ಕೂಡ ಈವರೆಗೆ ತಲಾ 17 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ್ದಾರೆ. ಆದರೆ ಹರ್ಷಲ್ ಪಟೇಲ್‌ ಶಮಿಗಿಂತ ಹೆಚ್ಚು ವಿಕೆಟ್‌ ಪಡೆದಿದ್ದಾರೆ. 17 ಪಂದ್ಯಗಳಲ್ಲಿ ಶಮಿ 18 ವಿಕೆಟ್ ಪಡೆದಿದ್ದರೆ, ಹರ್ಷಲ್ ಪಟೇಲ್ 23 ವಿಕೆಟ್ ಪಡೆದಿದ್ದಾರೆ.

ಎಕನಾಮಿ ವಿಚಾರದಲ್ಲೂ ಕೂಡ ಶಮಿಗಿಂದ ಹರ್ಷಲ್ ಪಟೇಲ್ ಉತ್ತಮವಾಗಿದ್ದಾರೆ. ಶಮಿ 9.54 ಎಕನಾಮಿ ಹೊಂದಿದ್ದರೆ, ಹರ್ಷಲ್ ಪಟೇಲ್ 8.58 ಎಕನಾಮಿ ಹೊಂದಿದ್ದಾರೆ. ಟಿ20 ಅಂಕಿ ಅಂಶಗಳನ್ನು ಪಕ್ಕಕ್ಕಿಟ್ಟರೆ ಮೊಹಮ್ಮದ್ ಶಮಿ ಅನುಭವಿ ಬೌಲರ್ ಆಗಿದ್ದಾರೆ. ಈ ಬಾರಿ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಅವರು ಆಸ್ಟ್ರೇಲಿಯಾ ಪಿಚ್‌ಗಳಲ್ಲಿ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಬಲ್ಲರು.

ಜಸ್ಪ್ರಿತ್‌ ಬುಮ್ರಾ ಕೂಡ ಲಯ ಕಂಡುಕೊಳ್ಳಬೇಕಿದೆ

ಜಸ್ಪ್ರಿತ್‌ ಬುಮ್ರಾ ಕೂಡ ಲಯ ಕಂಡುಕೊಳ್ಳಬೇಕಿದೆ

ಹರ್ಷಲ್ ಪಟೇಲ್ ಮಾತ್ರವಲ್ಲದೆ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿರುವ ಜಸ್ಪ್ರಿತ್‌ ಬುಮ್ರಾಗೆ ಕೂಡ ಆಸ್ಟ್ರೇಲಿಯಾ ವಿರುದ್ಧದ ಸರಣಿ ಮುಖ್ಯವಾಗಲಿದೆ. ತಮ್ಮ ಮೊದಲಿನ ಲಯವನ್ನು ಕಂಡುಕೊಳ್ಳಲು ವೇಗದ ಬೌಲರ್ ಗೆ ಸರಣಿ ಸಹಾಯ ಮಾಡಲಿದೆ.

ಆಸ್ಟ್ರೇಲಿಯಾದಂತ ವೇಗದ ಪಿಚ್‌ನಲ್ಲಿ ಬುಮ್ರಾ ತಮ್ಮ ವೇಗದ ಬೌಲಿಂಗ್‌ನಿಂದ ಎದುರಾಳಿಗಳನ್ನು ಕಂಗೆಡಿಸುವ ಸಾಮರ್ಥ್ಯ ಹೊಂದಿದ್ದಾರೆ. ಅವರು ಕೂಡ ತಮ್ಮ ಫಿಟ್‌ನೆಸ್‌ ಸಾಬೀತು ಪಡಿಸಲು ವಿಶ್ವಕಪ್‌ಗೂ ಮುಂಚಿನ ಸರಣಿಗಳು ವೇದಿಕೆಯಾಗಲಿವೆ.

Story first published: Wednesday, September 14, 2022, 20:42 [IST]
Other articles published on Sep 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X