ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ನ್ಯೂಜಿಲ್ಯಾಂಡ್: ವಿಶಿಷ್ಟ ದಾಖಲೆಗೆ ಸಾಕ್ಷಿಯಾದ ಮೊದಲ ಪಂದ್ಯ

Highest Targets Successfully Chased By India In T20I

ಟೀಮ್ ಇಂಡಿಯಾ ಮೊದಲ ಪಂದ್ಯವನ್ನು ಭರ್ಜರಿಯಾಗಿ ಗೆದ್ದುಕೊಂಡಿದೆ. ಈ ಮೂಲಕ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆಯನ್ನು ಕಾಯ್ದುಕೊಂಡಿದೆ. ನ್ಯೂಜಿಲ್ಯಾಂಡ್ ನೀಡಿದ ಬೃಹತ್ ಟಾರ್ಗೆಟನ್ನು ಟೀಮ್ ಇಂಡಿಯಾ ಭರ್ಜರಿಯಾಗಿ ಚೇಸ್ ಮಾಡಿ ಗೆದ್ದು ಬೀಗಿದೆ. ಕೆಲ ವಿಶಿಷ್ಟ ದಾಖಲೆಗೆ ಈ ಪಂದ್ಯ ಸಾಕ್ಷಿಯಾಗಿದೆ.

ಟೀಮ್ ಇಂಡಿಯಾ ಆತಿಥೇಯ ನ್ಯೂಜಿಲ್ಯಾಂಡ್ ನೀಡಿದ 200+ ರನ್‌ಗಳ ಟಾರ್ಗೆಟನ್ನು ಮೆಟ್ಟಿನಿಂತಿತು. ಭಾರತ ತಂಡ ಈ ಮೂಲಕ ಟಿ20 ಪಂದ್ಯಗಳಲ್ಲಿ ತನ್ನ ದಾಖಲೆಯೊಂದನ್ನು ಬಲಿಷ್ಠಗೊಳಿಸಿದೆ.

ಭಾರತ vs ನ್ಯೂಜಿಲ್ಯಾಂಡ್: ಆಕ್ಲೆಂಡ್‌ನಲ್ಲಿ 'ಮಿಣಿಮಿಣಿ' ಮಿಂಚಿದ ಭಾರತಭಾರತ vs ನ್ಯೂಜಿಲ್ಯಾಂಡ್: ಆಕ್ಲೆಂಡ್‌ನಲ್ಲಿ 'ಮಿಣಿಮಿಣಿ' ಮಿಂಚಿದ ಭಾರತ

204 ರನ್‌ಗಳ ಬೃಹತ್‌ ಟಾರ್ಗೆಟನ್ನು ಟೀಮ್ ಇಂಡಿಯಾ ಸರಾಗವಾಗಿ ಚೇಸ್ ಮಾಡಿತು. ಆದರೆ ಈ ಪಂದ್ಯದಲ್ಲಿ ಎರಡೂ ತಂಡಗಳ ಬ್ಯಾಟ್ಸ್‌ಮನ್‌ಗಳು ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದರು. ಟಿ20 ಇತಿಹಾಸದಲ್ಲಿ ಬ್ಯಾಟ್ಸ್‌ಮನ್‌ಗಳು ಹಿಂದೆಂದೂ ಮಾಡದ ದಾಖಲೆಯೊಂದು ಈ ಪಂದ್ಯದಲ್ಲಿ ದಾಖಲಾಗಿದೆ.

ಅರ್ಧಶತಕದ ದಾಖಲೆ

ಅರ್ಧಶತಕದ ದಾಖಲೆ

ಇಂದಿನ ಟಿ20 ಪಂದ್ಯದಲ್ಲಿಬ ಎರಡು ಇನ್ನಿಂಗ್ಸ್‌ನಲ್ಲಿ ಐದು ಅರ್ಧ ಶತಕಗಳು ದಾಖಲಾದವು. ಟಿ20 ಇತಿಹಾಸದಲ್ಲಿ ಹಿಂದೆಂದೂ ಒಂದು ಪಂದ್ಯದಲ್ಲಿ ಐವರು ಬ್ಯಾಟ್ಸ್‌ಮನ್‌‌ಗಳು 50+ ರನ್‌ಗಳನ್ನು ಬಾರಿಸಿಲ್ಲ. ನ್ಯೂಜಿಲ್ಯಾಂಡ್‌ನ ಕಾಲಿನ್ ಮುನ್ರೋ(59), ಕೇನ್ ವಿಲಿಯಮ್ಸನ್ (51), ರಾಸ್‌ ಟೇಲರ್ (54), ಕೆಎಲ್ ರಾಹುಲ್(56) ಮತ್ತು ಶ್ರೇಯಸ್ ಐಯ್ಯರ್ (58) ಅರ್ಧ ಶತಕವನ್ನು ಬಾರಿಸಿ ಮಿಂಚಿದ್ದಾರೆ.

200+ ಚೇಸಿಂಗ್‌ನಲ್ಲಿ ಭಾರತದ ಪಾರಮ್ಯ

200+ ಚೇಸಿಂಗ್‌ನಲ್ಲಿ ಭಾರತದ ಪಾರಮ್ಯ

ಆಕ್ಲಂಡ್ ಮೈದಾನದಲ್ಲಿ ಟೀಮ್ ಇಂಡಿಯಾ 204ರನ್‌ಗಳ ಗುರಿಯನ್ನು ಬೆನ್ನಟ್ಟಿ ಯಶಸ್ವಿಯಾಯಿತು. ಈ ಮೂಲಕ ನಾಲ್ಕನೇ ಬಾರಿಗೆ 200+ ಗುರಿಯನ್ನು ಬೆನ್ನಟ್ಟಿದ ಸಾಧನೆ ಮಾಡಿತು. ಟಿ20ಯಲ್ಲಿ ಟೀಮ್ ಇಂಡಿಯಾ ಅತಿ ಹೆಚ್ಚು ಬಾರಿ ಇನ್ನೂರಕ್ಕೂ ಅಧಿಕ ರನ್ ಬೆನ್ನತ್ತಿದ ದಾಖಲೆಯನ್ನು ಉತ್ತಮ ಪಡಿಸಿಕೊಂಡಿದೆ.

ಎಂಎಸ್ ಧೋನಿ ದಾಖಲೆ ಮೀರಿಸಲು ರೇಸ್‌ನಲ್ಲಿದ್ದಾರೆ ಕೊಹ್ಲಿ, ವಿಲಿಯಮ್ಸನ್

200+ ಚೇಸ್ ದಾಖಲೆ

200+ ಚೇಸ್ ದಾಖಲೆ

ಇನ್ನೂರಕ್ಕು ಹೆಚ್ಚಿನ ಟಾರ್ಗೆಟ್‌ ಬೆನ್ನತ್ತುವುದರಲ್ಲಿ ಟೀಮ್ ಇಂಡಿಯಾ ಮೊದಲ ಸ್ಥಾನದಲ್ಲಿದ್ದರೆ ಎರಡು ಪಂದ್ಯಗಳನ್ನು ಚೇಸ್ ಮಾಡುವ ಮೂಲಕ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ಎರಡನೇ ಸ್ಥಾನದಲ್ಲಿದೆ. ನ್ಯೂಜಿಲ್ಯಾಂಡ್‌, ವೆಸ್ಟ್ ಇಂಡೀಸ್, ಇಂಗ್ಲೆಂಡ್, ಬಾಂಗ್ಲಾದೇಶ ಮತ್ತು ಕತಾರ್‌ ತಂಡಗಳು ತಲಾ ಒಂದೊಂದು ಪಂದ್ಯಗಳಲ್ಲಿ ಇನ್ನೂರಕ್ಕೂ ಅಧಿಕ ರನ್ ಚೇಸ್ ಮಾಡಿವೆ.

ಟೀಮ್ ಇಂಡಿಯಾದ 200+ ಚೇಸಿಂಗ್‌ಗಳು

ಟೀಮ್ ಇಂಡಿಯಾದ 200+ ಚೇಸಿಂಗ್‌ಗಳು

ಶ್ರೀಲಂಕಾ ತಂಡ ನೀಡಿದ್ದ 207 ರನ್‌ಗಳ ಟಾರ್ಗೆಟನ್ನು 2009ರಲ್ಲಿ ಟೀಮ್ ಇಂಡಿಯಾ ಚೇಸ್ ಮಾಡಿ ಗೆದ್ದಿತ್ತು. 2013 ರಲ್ಲಿ ರಾಜ್‌ಕೋಟ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ್ದ 202ರನ್‌ಗಳ ಟಾರ್ಗೆಟ್‌ನ್ನು ಬೆನ್ನತ್ತುವಲ್ಲಿ ಯಶಸ್ವಿಯಾಗಿತ್ತು. 2019ರ ವೆಸ್ಟ್‌ಇಂಡೀಸ್‌ ವಿರುದ್ಧದ ಪಂದ್ಯದಲ್ಲೂ ವಿಂಡೀಸ್‌ ಟೀಮ್ ಇಂಡಿಯಾಗೆ 208ರನ್‌ಗಳ ಗುರಿ ನೀಡಿತ್ತು. ಈ ಪಂದ್ಯವನ್ನೂ ಭಾರತ ಭರ್ಜರಿಯಾಗಿ ಗೆದ್ದು ಬೀಗಿತ್ತು.

Story first published: Friday, January 24, 2020, 19:36 [IST]
Other articles published on Jan 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X