ಹಳೆ ಯುಜಿ ವಾಪಸ್ಸಾಗ್ತಾರೆ: ಉತ್ತಮ ಪ್ರದರ್ಶನದ ಭರವಸೆಯಿತ್ತ ಚಾಹಲ್

ಅಬುಧಾಬಿ: ಟೀಮ್ ಇಂಡಿಯಾದ ಪ್ರಮುಖ ಸ್ಪಿನ್ನರ್ ಆಗಿದ್ದ ಯುಜುವೇಂದ್ರ ಚಾಹಲ್ ಮುಂಬರಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ದ್ವಿತೀಯ ಹಂತದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆ ನೀಡಿದ್ದಾರೆ. ಹಳೆಯ ಯುಜು ಈ ಸಾರಿ ವಾಪಸ್ಸಾಗ್ತಾರೆ ಅನ್ನೋ ಭರವಸೆ ನೀಡಬಲ್ಲೆ ಎಂದು ಚಾಹಲ್ ಹೇಳಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಪ್ರತಿಭಾನ್ವಿತ ಬೌಲರ್ ಚಾಹಲ್‌ ಈ ಬಾರಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ.

ಆರ್‌ಸಿಬಿ ಸೇರಿ ಐಪಿಎಲ್ ತಂಡಗಳಿಗೆ ಪ್ರಮುಖ 5 ಸಲಹೆಗಳಿತ್ತ ಆಕಾಶ್ ಚೋಪ್ರಾ!ಆರ್‌ಸಿಬಿ ಸೇರಿ ಐಪಿಎಲ್ ತಂಡಗಳಿಗೆ ಪ್ರಮುಖ 5 ಸಲಹೆಗಳಿತ್ತ ಆಕಾಶ್ ಚೋಪ್ರಾ!

ಅಕ್ಟೋಬರ್‌ 17ರಿಂದ ನವೆಂಬರ್ 14ರ ವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಓಮನ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗಾಗಿ ಪ್ರಕಟವಾಗಿದ್ದ ಭಾರತ ತಂಡದಲ್ಲಿ ಯುಜುವೇಂದ್ರ ಚಾಹಲ್‌ಗೆ ಸ್ಥಾನವೇ ನೀಡಿರಲಿಲ್ಲ. ಇದು ಚಾಹಲ್‌ಗೆ ಬೇಸರವುಂಟು ಮಾಡಿತ್ತು.

ನಾನೀಗ ಒಳ್ಳೆಯ ಉತ್ಸಾಹದಲ್ಲಿದ್ದೇನೆ

ನಾನೀಗ ಒಳ್ಳೆಯ ಉತ್ಸಾಹದಲ್ಲಿದ್ದೇನೆ

ಐಪಿಎಲ್ ತಯಾರಿಯ ಬಗ್ಗೆ ಪ್ರಶ್ನಿಸಿದ್ದಾಗ ಉತ್ತರಿಸಿದ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಾಹಲ್, ದ್ವಿತೀಯ ಹಂತದ ಐಪಿಎಲ್‌ನಲ್ಲಿ ವಿಕೆಟ್‌ಗಳನ್ನು ಉರುಳಿಸುವ ಹಳೆ ಯುಜು ವಾಪಸ್ಸಾಗ್ತಾರೆ ಎಂದಿದ್ದಾರೆ. "ಸಹಜವಾಗಿಯೇ ಒಳ್ಳೆಯ ಭಾವನೆಗಳಿವೆ. ಇವತ್ತಿನ ಅಭ್ಯಾಸದ ವೇಳೆ ನನ್ನ ಬೌಲಿಂಗ್‌ ಒಕೆ ಅನ್ನಿಸಿದೆ. ಅಭ್ಯಾಸ ಖುಷಿ ನೀಡಿದೆ. ಬಹಳ ದಿನಗಳ ಬಳಿಕ ನಿಮಗೆ ಬೌಲಿಂಗ್‌ ಮಾಡಲು ಅವಕಾಶ ಸಿಗುತ್ತದೆಯೆಂದರೆ ನಿಮ್ಮಲ್ಲಿ ಖುಷಿ ಇದ್ದೇ ಇರುತ್ತದೆ. ಈ ಬಾರಿ ನನ್ನ ಉತ್ಸಾಹ ಇನ್ನೂ ಹೆಚ್ಚಿದೆ. ನಾವು ಪಾಯಿಂಟ್ಸ್‌ ಟೇಬಲ್‌ನಲ್ಲಿ ಉತ್ತಮ ಸ್ಥಾನದಲ್ಲಿರುವುದರಿಂದ ಟಾಪ್‌ನಲ್ಲೇ ಉಳಿಯಲು ನಮಗೆ ಅವಕಾಶವಿದೆ. ಹಳೆ ಯುಜಿ ವಾಪಸ್ಸಾಗ್ತಾರೆ ಅನ್ನೋದನ್ನು ನಾನು ಈ ದಿನ ಹೇಳಬಲ್ಲೆ," ಎಂದು ಚಾಹಲ್ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ.

ಮೂರನೇ ಸ್ಥಾನದಲ್ಲಿ ಆರ್‌ಸಿಬಿ

ಮೂರನೇ ಸ್ಥಾನದಲ್ಲಿ ಆರ್‌ಸಿಬಿ

ಭಾರತದಲ್ಲಿ ಆರಂಭಾಗಿದ್ದ ಐಪಿಎಲ್ ಕೋವಿಡ್-19 ಕಾರಣದಿಂದಾಗಿ ಅರ್ಧಕ್ಕೆ ನಿಲ್ಲಿಸಲ್ಪಟ್ಟಿತ್ತು. ಆರಂಭಿಕ ಹಂತದಲ್ಲಿ 29 ಪಂದ್ಯಗಳು ನಡೆದಿದ್ದವು. ಇನ್ನುಳಿದ 31 ಪಂದ್ಯಗಳು ಯುಎಇಯಲ್ಲಿ ನಡೆಯಲಿದೆ. ಆರಂಭಿಕ ಹಂತದ ಪಂದ್ಯಗಳು ಮುಗಿಯುವಾಗ ಅಂಕಪಟ್ಟಿಯಲ್ಲಿ ಆರ್‌ಸಿಬಿ 3ನೇ ಸ್ಥಾನದಲ್ಲಿತ್ತು. 7 ಪಂದ್ಯಗಳನ್ನಾಡಿದ್ದ ಆರ್‌ಸಿಬಿ 5 ಗೆಲುವು, 2 ಸೋಲಿನೊಂದಿಗೆ 10 ಅಂಕ ಕಲೆ ಹಾಕಿ 3ನೇ ಸ್ಥಾನದಲ್ಲಿತ್ತು. ಮೊದಲ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ದ್ವಿತೀಯ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಇದ್ದವು. ಹೀಗಾಗಿ ಈ ಬಾರಿ ಫೈನಲ್‌ ಪ್ರವೇಶಿಸಲು ಮತ್ತು ಟ್ರೋಫಿ ಗೆಲ್ಲಲು ಆರ್‌ಸಿಬಿಗೆ ಅವಕಾಶವಿದೆ. ಗ್ಲೆನ್ ಮ್ಯಾಕ್ಸ್‌ವೆಲ್‌ ಕೂಡ ಆರ್‌ಸಿಬಿ ಸೇರಿಕೊಂಡಿರುವುದರಿಂದ ತಂಡದ ಬಲ ಹೆಚ್ಚಿದೆ. ಆರ್‌ಸಿಬಿ ಮೊದಲ ಪಂದ್ಯವಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ಸವಾಲು ಸ್ವೀಕರಿಸಲಿದೆ.

ಸ್ಟೇಡಿಯಂನಲ್ಲಿ IPL ಮ್ಯಾಚ್ ನೋಡ್ಬೇಕಾ? ಹಾಗಾದ್ರೆ ತಡಮಾಡ್ದೆ ಟಿಕೆಟ್ ಬುಕ್ ಮಾಡಿ | Oneindia Kannada
ರಾಯಲ್ ಚಾಲೆಂಜರ್ಸ್ ಬೆಂಗಳೂರು ವೇಳಾಪಟ್ಟಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ವೇಳಾಪಟ್ಟಿ

* ಸೆಪ್ಟೆಂಬರ್ 20: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕೋಲ್ಕತಾ ನೈಟ್ ರೈಡರ್ಸ್, ರಾತ್ರಿ 7.30

* ಸೆಪ್ಟೆಂಬರ್ 24: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್, ರಾತ್ರಿ 7.30

* ಸೆಪ್ಟೆಂಬರ್ 26: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್, ರಾತ್ರಿ 7.30 ಕ್ಕೆ

* ಸೆಪ್ಟೆಂಬರ್ 29: ರಾಜಸ್ಥಾನ ರಾಯಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸಂಜೆ 7.30 ಕ್ಕೆ

* ಅಕ್ಟೋಬರ್ 3: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್, ಮಧ್ಯಾಹ್ನ 3.30 ಕ್ಕೆ

* ಅಕ್ಟೋಬರ್ 6: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸನ್ ರೈಸರ್ಸ್ ಹೈದರಾಬಾದ್, ಸಂಜೆ 7.30 ಕ್ಕೆ

* ಅಕ್ಟೋಬರ್ 8: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ದೆಹಲಿ ಕ್ಯಾಪಿಟಲ್ಸ್, ಸಂಜೆ 7.30 ಕ್ಕೆ

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 15 - October 24 2021, 03:30 PM
ಶ್ರೀಲಂಕಾ
ಬಾಂಗ್ಲಾದೇಶ್
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, September 16, 2021, 13:58 [IST]
Other articles published on Sep 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X