ನಾನು ಬೌಲಿಂಗ್ ಮಿಸ್ ಮಾಡಿಕೊಳ್ಳುತ್ತಿದ್ದೇನೆ, ಆದರೆ ಒತ್ತಡವಿಲ್ಲ: ಹಾರ್ದಿಕ್

ಮುಂಬೈ: ಸದ್ಯ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನಲ್ಲಿ ತಾನು ಬೌಲಿಂಗ್‌ ಮಾಡುವುದನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಆದರೆ ಅದರಿಂದ ನನಗೆ ಒತ್ತಡವೇನೂ ಆಗುತ್ತಿಲ್ಲ ಎಂದು ಮುಂಬೈ ಇಂಡಿಯನ್ಸ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.

ಐಪಿಎಲ್ 2021 : ಎರಡನೇ ವಾರದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರ ಪಟ್ಟಿ

ಬೆನ್ನು ಮೂಳೆ ಶಸ್ತ್ರ ಚಿಕಿತ್ಸೆಯ ಬಳಿಕ ಹಾರ್ದಿಕ್ ಪಾಂಡ್ಯ ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಾಪಸ್ಸಾಗಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲೂ ಆಡಿದ್ದರು. ಆದರೆ ಐಪಿಎಲ್ ವೇಳೆ ಹಾರ್ದಿಕ್‌ಗೆ ಭುಜದ ನೋವಿನ ಸಮಸ್ಯೆ ಕಾಡಿತ್ತು. ಹೀಗಾಗಿ ಪಾಂಡ್ಯ ಬೌಲಿಂಗ್‌ನಿಂದ ದೂರವಿದ್ದಾರೆ.

'ನಾನು ನನ್ನ ಬೌಲಿಂಗ್‌ ಅನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಆದರೆ ಅದು ನನ್ನ ಬ್ಯಾಟಿಂಗ್‌ನ ಮೇಲೆ ಒತ್ತಡ ಹೇರುತ್ತಿದೆ ಎಂದು ನನಗನ್ನಿಸುತ್ತಿಲ್ಲ. ನಾನು ನನ್ನ ವೃತ್ತಿ ಬದುಕಿನ ಉದ್ದಕ್ಕೂ ಆಲ್ ರೌಂಡರ್ ಆಗಿ ಆಡಿದ್ದೇನೆ. ಈಗ ನಾನು ನಗುವಿನೊಂದಿಗೆ ಬದುಕಿನಲ್ಲಿ ಮುನ್ನಡೆಯುವುದನ್ನು ಕಲಿಯಬೇಕಿದೆ,' ಎಂದು ಹಾರ್ದಿಕ್ ಹೇಳಿದ್ದಾರೆ.

ರಾಜಸ್ಥಾನ್ ರಾಯಲ್ಸ್‌ ಪರ ವೇಗಿ ಜೋಫ್ರಾ ಆರ್ಚರ್ ಇನ್ನು ಪಂದ್ಯ ಆಡಲ್ಲ!

ಮುಂಬೈ ವಿರುದ್ಧ ಗೆದ್ದ ನಂತರ KL Rahul ಹೇಳಿದ್ದು ಒಂದೇ ಮಾತು | Oneindia Kannada

ಮುಂಬೈ ಇಂಡಿಯನ್ಸ್ ತಂಡ ಆಡಿರುವ ನಾಲ್ಕು ಪಂದ್ಯಗಳಲ್ಲಿ 2 ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್‌ಗೆ ಶುಕ್ರವಾರ ಪಂಜಾಬ್ ಕಿಂಗ್ಸ್‌ ವಿರುದ್ಧ ಪಂದ್ಯವಿತ್ತು.

For Quick Alerts
ALLOW NOTIFICATIONS
For Daily Alerts
Story first published: Friday, April 23, 2021, 21:12 [IST]
Other articles published on Apr 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X