ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಯುವಿ ಬ್ಯಾಟಿಂಗ್‌ಗೆ ಒಂದುಕ್ಷಣ ನಾನೇ ಸ್ಟುವರ್ಟ್ ಬ್ರಾಡ್‌ ಅನ್ನಿಸಿತು: ಚಾಹಲ್

‘I felt like Stuart Broad’- Chahal reveals thinking as Yuvraj went berserk

ಬೆಂಗಳೂರು, ಮಾರ್ಚ್ 29: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗುರುವಾರ (ಮಾರ್ಚ್ 28) ನಡೆದ ಐಪಿಎಲ್ ಪಂದ್ಯದಲ್ಲಿ ಭಾರತದ ಸ್ಫೋಟಕ ಬ್ಯಾಟ್ಸ್ಮನ್ ಯುವರಾಜ್ ಸಿಂಗ್ ಮತ್ತೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಯುವಿ ಬ್ಯಾಟಿಂಗ್ ನೋಡುತ್ತಿದ್ದಂತೆ ಯುಜುವೇಂದ್ರ ಚಾಹಲ್‌ಗೆ ತಾನು ಸ್ಟುವರ್ಟ್ ಬ್ರಾಡ್ ಆದೆನೋ ಅನ್ನಿಸಿಬಿಟ್ಟಿತ್ತಂತೆ!

ಐಪಿಎಲ್ 2019: 4,000 ರನ್‌ನೊಂದಿಗೆ ದಾಖಲೆ ಬರೆದ ಎಬಿ ಡಿವಿಲಿಯರ್ಸ್ಐಪಿಎಲ್ 2019: 4,000 ರನ್‌ನೊಂದಿಗೆ ದಾಖಲೆ ಬರೆದ ಎಬಿ ಡಿವಿಲಿಯರ್ಸ್

ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿದ್ದ ಐಪಿಎಲ್ 7ನೇ ಪಂದ್ಯದಲ್ಲಿ ಯುವರಾಜ್ ಸಿಂಗ್ ಹಿಂದಿನ ರೋಮಾಂಚಕ ಕ್ಷಣವನ್ನು ನೆನಪಿಸಿದ್ದರು. ಸಾಲು ಸಾಲಾಗಿ ಮೂರು ಸಿಕ್ಸ್‌ಗಳನ್ನು ಬಾರಿಸಿದ್ದರು.

ಅಂದು ಮಂಡ್ಯದ ಗೌಡ್ರು ಇಂದು ಮುನ್ನೇಶನ ಹೊಗಳಿದ ಲಕ್ಷ್ಮಣ್ಅಂದು ಮಂಡ್ಯದ ಗೌಡ್ರು ಇಂದು ಮುನ್ನೇಶನ ಹೊಗಳಿದ ಲಕ್ಷ್ಮಣ್

ಆರ್ಸಿಬಿ ಆಟಗಾರ ಚಾಹಲ್ ಎಸೆತಕ್ಕೆ ಮುಂಬೈ ಬ್ಯಾಟ್ಸ್ಮನ್ ಯುವಿ ಬ್ಯಾಟ್ ಬೀಸೋದು ನೋಡುತ್ತಿದ್ದಂತೆ ಚಾಹಲ್‌ಗೆ ಯುವರಾಜ್ ಹಿಂದೊಮ್ಮೆ ಓವರ್‌ ಉದ್ದಕ್ಕೂ ಸಿಕ್ಸ್ ಬಾರಿಸಿದ್ದ ಕ್ಷಣ ನೆನಪಾಯಿತಂತೆ. ಇದನ್ನು ಚಾಹಲ್ ಅವರೇ ಹೇಳಿಕೊಂಡಿದ್ದಾರೆ.

ಚಾಹಲ್‌ ಓವರ್‌ನಲ್ಲಿ ಟ್ರಿಪಲ್ ಸಿಕ್ಸ್!

ಚಾಹಲ್‌ ಓವರ್‌ನಲ್ಲಿ ಟ್ರಿಪಲ್ ಸಿಕ್ಸ್!

ಬೆಂಗಳೂರು ಪಂದ್ಯದಲ್ಲಿ ಯುವರಾಜ್ 12 ಎಸೆತಗಳಿಗೆ 23 ರನ್ ಬಾರಿಸಿದ್ದರು. ಇದರಲ್ಲಿ ಮೂರು ಸಿಕ್ಸ್‌ಗಳು ಸೇರಿದ್ದವು. ಈ ಮೂರೂ ಸಿಕ್ಸ್‌ಗಳು ಸಿಡಿದಿದ್ದು ಚಾಹಲ್ ಓವರ್‌ನಲ್ಲೇ. 14ನೇ ಓವರ್‌ ಎಸೆಯಲು ಬಂದಿದ್ದ ಚಾಹಲ್‌ರ ಪ್ರತಿ ಎಸೆತಕ್ಕೂ ಯುವಿ ಸಿಕ್ಸ್ ಬಾರಿಸುತ್ತ ಹೋಗಿದ್ದರು. ಆದರೆ 4ನೇ ಸಿಕ್ಸ್ ಪ್ರಯತ್ನದ ವೇಳೆ (13.4ನೇ ಓವರ್‌) ಯುವಿ, ಮೊಹಮ್ಮದ್ ಸಿರಾಜ್‌ಗೆ ಕ್ಯಾಚಿತ್ತು ನಿರ್ಗಮಿಸಿದರು.

ಸ್ಟುವರ್ಟ್ ಬ್ರಾಡ್ ನೆನಪಾದರು

ಸ್ಟುವರ್ಟ್ ಬ್ರಾಡ್ ನೆನಪಾದರು

'ಯಾವಾಗ ಅವರು (ಯುವಿ) ಮೂರು ಸಿಕ್ಸ್‌ಗಳನ್ನು ಬಾರಿಸಿದರೋ, ಆಗ ನನಗೆ ನಾನು ಸ್ಟುವರ್ಟ್ ಬ್ರಾಡ್ ಅನ್ನಿಸಿತು. ನಿಮಗೆಲ್ಲರಿಗೂ ಗೊತ್ತು; ಯುವಿ ಒಬ್ಬ ಬ್ಯಾಟಿಂಗ್ ದಂತಕತೆ. ಹೀಗಾಗಿ ಯುವಿ ನನ್ನ ಎಸೆತಕ್ಕೆ ಸಾಲು ಸಾಲಾಗಿ ಸಿಕ್ಸ್ ಬಾರಿಸುವಾಗ ನನಗೆ ನಾನೇ ಸಮಾಧಾನಿಸಿಕೊಂಡೆ' ಎಂದು ಚಾಹಲ್ ಹೇಳಿದರು.

ವೈಡರ್ ಗೂಗ್ಲಿ ಎಸೆತ

ವೈಡರ್ ಗೂಗ್ಲಿ ಎಸೆತ

ಯುವರಾಜ್ ಬೆನ್ನುಬೆನ್ನಿಗೆ ಸಿಕ್ಸ್ ಬಾರಿಸುವುದನ್ನು ನೋಡಿದಾಗ ಅಳುಕೆನಿಸಿದ್ದು ನಿಜ. ಆದರೆ ಬೌಲಿಂಗ್‌ನಲ್ಲಿ ಬದಲಾವಣೆ ಮಾಡಿದರೆ ಯುವರಾಜ್ ವಿಕೆಟ್ ಪಡೆಯುವ ಸಾಧ್ಯತೆಯಿದೆ ಎಂದು ಅನಿಸಿತು. ಯಾಕೆಂದರೆ ನನ್ನ ಬೆಸ್ಟ್ ಬೌಲಿಂಗ್‌ಗೆಲ್ಲ ಯುವಿ ಸಿಕ್ಸ್ ಚಚ್ಚಿದ್ದರು. ಕೊನೆಗೆ ನಾನು ವೈಡರ್ ಗೂಗ್ಲಿ ಎಸೆದೆ' ಎಂದು ಪಂದ್ಯದ ಬಳಿಕ ಸ್ಪಿನ್ನರ್ ಚಾಹಲ್ ಸುದ್ದಿಗಾರರೊಂದಿಗೆ ಮಾತನಾಡುತ್ತ ವಿವರಿಸಿದರು.

ಬ್ರಾಡ್ ಬಲಿಪಶುವಾದ ಕತೆ

ಬ್ರಾಡ್ ಬಲಿಪಶುವಾದ ಕತೆ

19 ಸೆಪ್ಟೆಂಬರ್ 2007ರಲ್ಲಿ ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿರುವ ಕಿಂಗ್ಸ್‌ಮೀಡ್ ಸ್ಟೇಡಿಯಂನಲ್ಲಿ ಐಸಿಸಿ ವಿಶ್ವ ಟಿ20 ಟೂರ್ನಿಯ 21ನೇ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ಈ ವೇಳೆ ಯುವಿ ಕೇವಲ 16 ಎಸೆತಗಳಿಗೆ 58 ರನ್ ಚಚ್ಚಿದ್ದರು. ಈ ರನ್‌ನಲ್ಲಿ ಸ್ಟುವರ್ಟ್ ಬ್ರಾಡ್ ಓವರ್‌ನಲ್ಲಿ ಯುವಿ ಸಿಡಿಸಿದ 6 ಸಿಕ್ಸ್‌ಗಳೂ ಸೇರಿದ್ದವು. ಅಂದ್ಹಾಗೆ, ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದ ಭಾರತ 20 ಓವರ್‌ಗೆ 4 ವಿಕೆಟ್ ಕಳೆದು 218 ರನ್ ಬಾರಿಸಿತ್ತು. ಇಂಗ್ಲೆಂಡ್ 20 ಓವರ್‌ಗೆ 6 ವಿಕೆಟ್ ಕಳೆದು 200 ರನ್ ಪೇರಿಸಿ ಶರಣಾಗಿತ್ತು.

Story first published: Saturday, March 30, 2019, 11:11 [IST]
Other articles published on Mar 30, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X