ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಫಾರ್ಮ್ ಕಂಡುಕೊಳ್ಳಲು ಕಾರಣವಾದ ಸಂಗತಿಯನ್ನು ಬಹಿರಂಗಪಡಿಸಿದ ಜೋ ರೂಟ್

I was able to regain my form by playing white-ball cricket against Sri Lanka says Joe Root

ನಾಟಿಂಗ್‌ಹ್ಯಾಮ್, ಆಗಸ್ಟ್ 8: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಜೋ ರೂಟ್ ಎರಡನೇ ಇನ್ನಿಂಗ್ಸ್‌ನಲ್ಲಿ ಭರ್ಜರಿ ಶತಕವನ್ನು ಸಿಡಿಸಿದರು. ಈ ಆಟದ ನೆರವಿನಿಂದ ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್‌ನಲ್ಲಿ 303 ರನ್‌ಗಳನ್ನು ಗಳಿಸಲು ಸಾಧ್ಯವಾಯಿತು. ಭಾರತದ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿಯೂ ಅರ್ಧ ಶತಕ ಗಳಿಸಿ ಮಿಂಚಿದ್ದ ಜೋ ರೂಟ್ ಎರಡನೇ ಇನ್ನಿಂಗ್ಸ್‌ನಲ್ಲಿ ಭರ್ಜರಿ 109 ರನ್‌ಗಳನ್ನು ಗಳಿಸಿದ್ದಾರೆ.

ಈ ಸರಣಿಗೂ ಮುನ್ನ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್ ಸತತ ಐದು ಪಂದ್ಯಗಳಲ್ಲಿ ಕನಿಷ್ಟ ಅರ್ಧ ಶತಕವನ್ನು ಗಳಿಸಲು ವಿಫಲವಾಗಿದ್ದರು. ಆದರೆ ಭಾರತ ವಿರುದ್ಧ ಸರಣಿಯ ಮೊದಲ ಇನ್ನಿಂಗ್ಸ್‌ನ್ಲಿ 64 ರನ್‌ಗಳಿಸಿದ್ದರು. ಜೋ ರೂಟ್ ಗಳಿಸಿದ ಈ 21ನೇ ಟೆಸ್ಟ್ ಶತಕದ ಸಹಾಯದಿಂದಾಗಿ ಇಂಗ್ಲೆಂಡ್ 303 ರನ್‌ಗಳಿಸಿತು. ಹೀಗಾಗಿ 208 ರನ್‌ಗಳ ಮುನ್ನಡೆಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಏಕದಿನ ಕ್ರಿಕೆಟ್‌ನಲ್ಲಿ ಆಡುವ ಹಿನ್ನೆಲೆಯಲ್ಲಿ ಕೆಲ ತಾಂತ್ರಿಕ ಬದಲಾವಣೆಯನ್ನು ಮಾಡಿಕೊಂಡಿದ್ದೆ. ಇದರಿಂದಾಗಿ ಟೆಸ್ಟ್ ಸರಣಿಯಲ್ಲಿಯೂ ಲಾಭವನ್ನು ಪಡೆದುಕೊಳ್ಳುತ್ತಿರುವುದಾಗಿ ಜೋ ರೂಟ್ ವಿವರಿಸಿದ್ದಾರೆ. "ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಬಳಿಕ ತಾನು ಕೆಲ ವಿಚಾರಗಳಲ್ಲಿ ಬದಲಾವನೆ ಮಾಡಿಕೊಂಡೆ. ಮುಂದೆ ಆ ಬದಲಾವಣೆ ಉತ್ತಮವಾಗಿ ದೆಎಂದು ನನಗೆ ಅನಿಸಿದೆ ಎಂದು ಜೋ ರೂಟ್ ಹೇಳಿದ್ದಾರೆ. ಏಕದಿನ ಕ್ರಿಕೆಟ್‌ ನನಗೆ ಟೆಸ್ಟ್ ಕ್ರಿಕೆಟ್‌ಗೆ ದೊಡ್ಡ ಮಟ್ಟದಲ್ಲಿ ಸಹಾಯವನ್ನು ಮಾಡಿರುವುದನ್ನು ನಾನು ಕಂಡುಕೊಂಡೆ" ಎಂದು ಜೋ ರೂಟ್ ಹೇಳಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ನಿರ್ಮಿಸಿದ ಅಪರೂಪದ ದಾಖಲೆಗಳಿವು!ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ನಿರ್ಮಿಸಿದ ಅಪರೂಪದ ದಾಖಲೆಗಳಿವು!

"ನಾನು ಶ್ರೀಲಂಕಾ ವಿರುದ್ಧಧ ಸೀಮಿತ ಓವರ್‌ಗಳ ಕ್ರಿಕೆಟ್‌ನಿಂದ ಕೆಲ ಅತ್ಯುತ್ತಮ ಲಾಭವನ್ನು ಪಡೆದುಕೊಂಡಿದ್ದೇನೆ ಎಂದು ಭಾವಿಸುತ್ತೇನೆ" ಎಂದು ಜೋ ರೂಟ್ ಜೂನ್ ಜುಲೈ ತಿಂಗಳಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಸರಣಿಯನ್ನು ನೆನಪಿಸಿಕೊಂಡಿದ್ದಾರೆ. ಈ ಸರಣಿಯಲ್ಲಿ ಜೋ ರೂಟ್ ಅಜೇಯವಾಗಿ 68 ಹಾಗೂ 79 ರನ್‌ಗಳ ಕೊಡುಗೆಯನ್ನು ನೀಡಿದ್ದರು. ಈ ಸಂದರ್ಭದಲ್ಲಿ ರೆಡ್‌ ಬಾಲ್ ಕ್ರಿಕೆಟ್ ನನಗೆ ಆಡಲು ಅವಕಾಶ ಸಿಕ್ಕಿದ್ದು ಉತ್ತಮವಾಗಿದೆ. ಆದರೆ ನನ್ನ ಪ್ರಕಾರ ನಾನು ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಲಯವನ್ನು ಕಂಡುಕೊಳ್ಳಲು ಏಕದಿನ ಕ್ರಿಕೆಟ್ ಉತ್ತಮ ಪ್ರಮಾಣದಲ್ಲಿ ಸಹಕಾರವನ್ನು ನೀಡಿದೆ ಎಂದಿದ್ದಾರೆ.

ಇತ್ತೀಚಿನ ಟೆಸ್ಟ್ ಪಂದ್ಯಗಳಲ್ಲಿ ಜೋ ರೂಟ್ ಅನುಭವಿಸಿದ ಫಾರ್ಮ್ ಕೊರತೆಗಿಂತ ಮುನ್ನ ಜೋ ರೂಟ್ ಮೂರು ಟೆಸ್ಟ್ ಪಂದ್ಯಗಳಲ್ಲಿ ಎರಡು ದ್ವಿಶತಕ ಸಿಡಿಸಿ ಮಿಂಚಿದ್ದರು. ಇದರಲ್ಲಿ ಕಳೆದ ಭಾರತ ಪ್ರವಾಸದಲ್ಲಿ ಚೆನ್ನೈನಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿ ಸಿಡಿಸಿದ 218 ರನ್‌ಗಳ ಪ್ರದರ್ಶನ ಕೂಡ ಸೇರಿಕೊಂಡಿದೆ. ಈ ವರ್ಷ ಜೋ ರೂಟ್ ಟೆಸ್ಟ್ ಕ್ರಿಕೆಟ್‌ನಲ್ಲಿ 1000 ರನ್‌ಗಳಿಸಿದ ಮೊದಲ ಆಟಗಾರ ಎನಿಸಿದ್ದಾರೆ. ಸದ್ಯ ರೂಟ್ 1064 ರನ್‌ಗಳನ್ನು ಈ ಕ್ಯಾಲೆಂಡರ್ ವರ್ಷದಲ್ಲಿ ಗಳಿಸಿದ್ದಾರೆ.

Neeraj Chopraಗೆ ತರಬೇತಿ ನೀಡಿದ ಕನ್ನಡಿಗ Kashinath Naik ಯಾರು? | Oneindia Kannada

ಇನ್ನು ಶತಕವನ್ನು ಗಳಿಸುವುದಕ್ಕೆ ಐದು ಹತ್ತು ನಿಮಿಷಗಳ ಮುನ್ನ ಹೆಚ್ಚು ಆತಂಕಕಾರಿಯಾಗಿತ್ತು. ಆದರೆ ಶತಕ ಗಳಿಸಿದ ಬಳಿಕ ನಿರಾತಂಕ ಮೂಡಿಸಿತು ಎಂದಿದ್ದಾರೆ ಜೋ ರೂಟ್. ಜೋ ರೂಟ್ 90 ರನ್‌ಗಳಿಸಿದ ಬಳಿಕ ಒಂದೆರಡು ಬಾರಿ ಎಲ್‌ಬಿಡಬ್ಲ್ಯೂ ಮನವಿಗೂ ಒಳಗಾದರು. ಜೋ ರೂಟ್ 172 ಎಸೆತಗಳನ್ನು ಎದುರಿಸಿ 109 ರನ್‌ಗಳಿಸಿದರು. ಇದರಲ್ಲಿ 14 ಬೌಂಡರಿ ಒಳಗೊಂಡಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿಯೂ ಜೋ ರೂಟ್ ಇಂಗ್ಲೆಂಡ್ ತಮಡದ ಪರವಾಗಿ ಹೈಯೆಸ್ಟ್ ಸ್ಕೋರರ್ ಎನಿಸಿದ್ದರು. ಮೊದಲ ಇನ್ನಿಂಗ್ಸ್ನಲ್ಲಿ 64 ರನ್‌ಗಳಿಸಿದ್ದರು.

Story first published: Sunday, August 8, 2021, 19:43 [IST]
Other articles published on Aug 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X