ICC ODI Ranking: ಬ್ಯಾಟಿಂಗ್‌ನಲ್ಲಿ ಏರಿಕೆ ಕಂಡ ಗಿಲ್, ಸ್ಯಾಮ್ಸನ್; ಕೊಹ್ಲಿ, ರೋಹಿತ್ ಸ್ಥಾನವೇನು?

ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್, ಸ್ಟಾರ್ ಬ್ಯಾಟರ್ ಟಾಮ್ ಲ್ಯಾಥಮ್ ಮತ್ತು ಭಾರತದ ಶುಭಮನ್ ಗಿಲ್, ಶ್ರೇಯಸ್ ಅಯ್ಯರ್ ಮತ್ತು ಸಂಜು ಸ್ಯಾಮ್ಸನ್ ಅವರು ನವೆಂಬರ್ 30ರ ಬುಧವಾರದಂದು ಬಿಡುಗಡೆಯಾದ ಬ್ಯಾಟರ್‌ಗಳ ಐಸಿಸಿ ಏಕದಿನ ರ್‍ಯಾಂಕಿಂಗ್‌ನಲ್ಲಿ ಏರಿಕೆ ಕಂಡಿದ್ದಾರೆ.

ಕೇನ್ ವಿಲಿಯಮ್ಸನ್ ಅವರು ಭಾರತ ವಿರುದ್ಧದ 3 ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಅಜೇಯ 94 ರನ್ ಗಳಿಸಿದ ನಂತರ ಬ್ಯಾಟಿಂಗ್ ಪಟ್ಟಿಯಲ್ಲಿ ಅಗ್ರ 10ರೊಳಗೆ ಪ್ರವೇಶಿಸಿದ್ದಾರೆ.

Vijay Hazare Trophy: ಸೆಮಿಫೈನಲ್‌ನಲ್ಲಿ ಸೋತ ಕರ್ನಾಟಕ; ಫೈನಲ್‌ಗೇರಿದ ಸೌರಾಷ್ಟ್ರVijay Hazare Trophy: ಸೆಮಿಫೈನಲ್‌ನಲ್ಲಿ ಸೋತ ಕರ್ನಾಟಕ; ಫೈನಲ್‌ಗೇರಿದ ಸೌರಾಷ್ಟ್ರ

ಬುಧವಾರ ಅಂತ್ಯಗೊಂಡ ಏಕದಿನ ಸರಣಿಯನ್ನು ನ್ಯೂಜಿಲೆಂಡ್ 1-0 ಅಂತರದಿಂದ ವಶಪಡಿಸಿಕೊಂಡಿದ್ದು, ಮಳೆಯಿಂದಾಗಿ ಸರಣಿಯ ಅಂತಿಮ ಪಂದ್ಯವನ್ನು ಫಲಿತಾಂಶ ಕಾಣದೇ ಅಂತ್ಯವಾಯಿತು.

ಭಾರತವು ಮೊದಲು ಬ್ಯಾಟಿಂಗ್ ಮಾಡಿ 47.3 ಓವರ್‌ಗಳಲ್ಲಿ 219 ರನ್ ಗಳಿಸಿ ಅಲೌಟ್ ಆಯಿತು. 50 ಓವರ್‌ಗಳ ಸಂಪೂರ್ಣ ಕೋಟಾವನ್ನು ಪೂರ್ಣಗೊಳಿಸಲು ವಿಫಲವಾಯಿತು. ನಂತರ ಆತಿಥೇಯ ಕಿವೀಸ್ ಪಡೆ 18 ಓವರ್‌ಗಳಲ್ಲಿ 1 ವಿಕೆಟ್‌ಗೆ 104 ರನ್ ಗಳಿಸಿದರು. ಆಗ ಮಳೆ ಸುರಿದ ಕಾರಣದಿಂದ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.

ಕೇನ್ ವಿಲಿಯಮ್ಸನ್ 10ನೇ ಸ್ಥಾನ ತಲುಪಿದರು

ಕೇನ್ ವಿಲಿಯಮ್ಸನ್ 10ನೇ ಸ್ಥಾನ ತಲುಪಿದರು

ಆಕ್ಲೆಂಡ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ತಮ್ಮ ವೃತ್ತಿಜೀವನದ ಅತ್ಯುತ್ತಮ 145 ರನ್ ಗಳಿಸಿದ ಟಾಮ್ ಲ್ಯಾಥಮ್ ಅವರು 10 ಸ್ಥಾನ ಮೇಲೇರಿ 18ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಕೇನ್ ವಿಲಿಯಮ್ಸನ್ 10ನೇ ಸ್ಥಾನ ತಲುಪಿದರು.

ಇದೇ ವೇಳೆ, ಬ್ಯಾಟರ್‌ಗಳ ಐಸಿಸಿ ಏಕದಿನ ನೂತನ ರ್‍ಯಾಂಕಿಂಗ್‌ನಲ್ಲಿ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ನಾಯಕ ರೋಹಿತ್ ಶರ್ಮಾ ತಲಾ ಒಂದು ಸ್ಥಾನ ಇಳಿಕೆ ಕಂಡು ಕ್ರಮವಾಗಿ 8 ಮತ್ತು 9ನೇ ಸ್ಥಾನದಲ್ಲಿದ್ದಾರೆ.

ಶುಭಮನ್ ಗಿಲ್ 3 ಸ್ಥಾನ ಮೇಲೇರಿ 34ನೇ ಸ್ಥಾನ

ಶುಭಮನ್ ಗಿಲ್ 3 ಸ್ಥಾನ ಮೇಲೇರಿ 34ನೇ ಸ್ಥಾನ

ಕೆಎಲ್ ರಾಹುಲ್ ಜೊತೆಗೆ ವಿರಾಟ್ ಕೊಹ್ಲಿ ಮತ್ತು ನಾಯಕ ರೋಹಿತ್ ಶರ್ಮಾ ನ್ಯೂಜಿಲೆಂಡ್ ಪ್ರವಾಸದ ಭಾಗವಾಗಿರಲಿಲ್ಲ. ಆದರೆ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಆಡುವ ಮೂಲಕ ರ್‍ಯಾಂಕಿಂಗ್‌ನಲ್ಲಿ ಬದಲಾವಣೆ ಕಾಣುವ ಸಾಧ್ಯತೆ ಇದೆ.

ಇನ್ನು ಶ್ರೇಯಸ್ ಅಯ್ಯರ್ ಮೊದಲ ಏಕದಿನ ಪಂದ್ಯದಲ್ಲಿ 80 ರನ್‌ಗಳನ್ನು ಒಳಗೊಂಡು ಸರಣಿಯನ್ನು 129 ರನ್‌ಗಳೊಂದಿಗೆ ಮುಗಿಸಿದರು. ಐಸಿಸಿ ಏಕದಿನ ನೂತನ ರ್‍ಯಾಂಕಿಂಗ್‌ನಲ್ಲಿ 6 ಸ್ಥಾನಗಳ ಏರಿಕೆ ನಂತರ 27ನೇ ಸ್ಥಾನಕ್ಕೆ ತಲುಪಿದ್ದಾರೆ. ಮತ್ತೊಂದೆಡೆ 3 ಪಂದ್ಯಗಳಲ್ಲಿ 108 ರನ್ ಗಳಿಸಿ ಮಿಂಚಿದ್ದ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ 3 ಸ್ಥಾನ ಮೇಲೇರಿ 34ನೇ ಸ್ಥಾನದಲ್ಲಿದ್ದಾರೆ.

ಸಂಜು ಸ್ಯಾಮ್ಸನ್ ಒಂದೇ ಪಂದ್ಯ ಆಡಿದರು

ಸಂಜು ಸ್ಯಾಮ್ಸನ್ ಒಂದೇ ಪಂದ್ಯ ಆಡಿದರು

ಏಕದಿನ ಸರಣಿಯಲ್ಲಿ ಸಂಜು ಸ್ಯಾಮ್ಸನ್ ಒಂದೇ ಒಂದು ಪಂದ್ಯದಲ್ಲಿ ಆಡುವ ಅವಕಾಶವನ್ನು ಪಡೆದರು. ಆದರೆ ಅವರು ಸರಣಿಯ ಆರಂಭಿಕ ಪಂದ್ಯದಲ್ಲಿ 36 ರನ್‌ಗಳನ್ನು ಗಳಿಸಿದ ಫಲವಾಗಿ 10 ಸ್ಥಾನಗಳನ್ನು ನೆಗೆತ ಕಂಡು 82ನೇ ಸ್ಥಾನಕ್ಕೆ ತಲುಪಿದ್ದಾರೆ.

ಅಫ್ಘಾನಿಸ್ತಾನದ ವಿಕೆಟ್‌ಕೀಪರ್-ಬ್ಯಾಟರ್ ರಹಮಾನುಲ್ಲಾ ಗುರ್ಬಾಜ್ ಅವರು ಶ್ರೀಲಂಕಾ ವಿರುದ್ಧ ಮೊದಲ ಏಕದಿನ ಮತ್ತು ರದ್ದಾದ ಎರಡನೇ ಪಂದ್ಯದಲ್ಲಿ ಅರ್ಧಶತಕಗಳನ್ನು ಗಳಿಸಿ ಪಂದ್ಯವಿಜೇತ ಆಟವಾಡಿದರು. ಇದೀಗ 21 ಸ್ಥಾನಗಳ ಏರಿಕೆಯೊಂದಿಗೆ 48ನೇ ಸ್ಥಾನಕ್ಕೆ ತಲುಪಿದ್ದಾರೆ.

ಫರ್ಗುಸನ್, ಸೌಥಿ ರ್‍ಯಾಂಕಿಂಗ್‌ನಲ್ಲಿ ಏರಿಕೆ

ಫರ್ಗುಸನ್, ಸೌಥಿ ರ್‍ಯಾಂಕಿಂಗ್‌ನಲ್ಲಿ ಏರಿಕೆ

ಇನ್ನು ಐಸಿಸಿ ಬೌಲಿಂಗ್ ರ್‍ಯಾಂಕಿಂಗ್‌ನಲ್ಲಿ ನ್ಯೂಜಿಲೆಂಡ್ ವೇಗಿಗಳಾದ ಲಾಕಿ ಫರ್ಗುಸನ್ ಐದು ಸ್ಥಾನ ಮೇಲೇರಿ 32ನೇ ಸ್ಥಾನದಲ್ಲಿದ್ದರೆ, ಟಿಮ್ ಸೌಥಿ ಎರಡು ಸ್ಥಾನ ಏರಿಕೆ ಕಂಡು 34ನೇ ಸ್ಥಾನ ತಲುಪಿದ್ದಾರೆ. ಇದೇ ವೇಳೆ ಕಿವೀಸ್ ಬೌಲರ್ ಮ್ಯಾಟ್ ಹೆನ್ರಿ ಅಗ್ರ ಐದರಲ್ಲಿದ್ದಾರೆ.

ಶ್ರೀಲಂಕಾದ ಲೆಗ್ ಸ್ಪಿನ್ನರ್ ವನಿಂದು ಹಸರಂಗಾ ಎರಡು ಪಂದ್ಯಗಳಲ್ಲಿ ಮೂರು ವಿಕೆಟ್ ಕಬಳಿಸಿ ಆರು ಸ್ಥಾನ ಮೇಲೇರಿ 27ನೇ ಸ್ಥಾನಕ್ಕೆ ತಲುಪಿದ್ದಾರೆ. ಮೊದಲ ಪಂದ್ಯದಲ್ಲಿ 66 ರನ್ ಗಳಿಸುವುದರೊಂದಿಗೆ, ಅವರು ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ 20 ಸ್ಥಾನ ಮೇಲೇರಿ 102ನೇ ಸ್ಥಾನ ತಲುಪಿದ್ದಾರೆ ಮತ್ತು ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದಾರೆ.

ಐಸಿಸಿ ಏಕದಿನ ಬ್ಯಾಟಿಂಗ್ ರ್‍ಯಾಂಕಿಂಗ್ ಪಟ್ಟಿ

ಐಸಿಸಿ ಏಕದಿನ ಬ್ಯಾಟಿಂಗ್ ರ್‍ಯಾಂಕಿಂಗ್ ಪಟ್ಟಿ

1. ಬಾಬರ್ ಅಜಂ (ಪಾಕಿಸ್ತಾನ) - 890 ಅಂಕಗಳು

2. ಇಮಾಮ್-ಉಲ್-ಹಕ್ (ಪಾಕಿಸ್ತಾನ) - 779 ಅಂಕಗಳು

3. ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (ದಕ್ಷಿಣ ಆಫ್ರಿಕಾ) - 766 ಅಂಕಗಳು

4. ಕ್ವಿಂಟನ್ ಡಿ ಕಾಕ್ (ದಕ್ಷಿಣ ಆಫ್ರಿಕಾ) - 759 ಅಂಕಗಳು

5. ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ) - 747 ಅಂಕಗಳು

6. ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ) - 719 ಅಂಕಗಳು

7. ಜಾನಿ ಬೈರ್‌ಸ್ಟೋವ್ (ಇಂಗ್ಲೆಂಡ್) - 710 ಅಂಕಗಳು

8. ವಿರಾಟ್ ಕೊಹ್ಲಿ (ಭಾರತ) - 707 ಅಂಕಗಳು

9. ರೋಹಿತ್ ಶರ್ಮಾ (ಭಾರತ) - 704 ಅಂಕಗಳು

10. ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್) - 701 ಅಂಕಗಳು

For Quick Alerts
ALLOW NOTIFICATIONS
For Daily Alerts
Story first published: Wednesday, November 30, 2022, 21:32 [IST]
Other articles published on Nov 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X