ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC ODI Ranking: ನಂ.1 ಸ್ಥಾನ ಕಳೆದುಕೊಂಡ ಬುಮ್ರಾ; ಕೊಹ್ಲಿ, ರೋಹಿತ್ ಸ್ಥಾನದಲ್ಲಿ ಬದಲಾವಣೆ

ICC ODI Rankings: Jasprit Bumrah Drops Out of Top Spot; Check Kohli And Rohit Sharma Rankings

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತಲಾ ಒಂದು ಸ್ಥಾನ ಕುಸಿದಿದ್ದರೆ, ವೇಗಿ ಜಸ್ಪ್ರೀತ್ ಬುಮ್ರಾ ಅವರು ಇತ್ತೀಚಿನ ಐಸಿಸಿ ಏಕದಿನ ರ್‍ಯಾಂಕಿಂಗ್‌ನಲ್ಲಿ ಮತ್ತೆ ನಂ.1 ಸ್ಥಾನವನ್ನು ಕಳೆದುಕೊಂಡಿದ್ದಾರೆ.

ಬುಧವಾರದಂದು ಇತ್ತೀಚಿನ ಪುರುಷರ ಆಟಗಾರರ ಶ್ರೇಯಾಂಕವನ್ನು ಐಸಿಸಿ ಬಿಡುಗಡೆ ಮಾಡಿತು ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ಭಾರತದ ಆಡುವ 11ರ ಬಳಗದಲ್ಲಿ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯು ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೌಲ್ಟ್ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪುನಃ ಪಡೆದುಕೊಳ್ಳಲು ಸಹಾಯ ಮಾಡಿತು.

ಭಾರತ vs ಜಿಂಬಾಬ್ವೆ: ಮೂರು ಪಂದ್ಯಗಳ ಏಕದಿನ ಸರಣಿ ವೇಳಾಪಟ್ಟಿ ಪ್ರಕಟ; ಇಲ್ಲಿದೆ ಮಾಹಿತಿಭಾರತ vs ಜಿಂಬಾಬ್ವೆ: ಮೂರು ಪಂದ್ಯಗಳ ಏಕದಿನ ಸರಣಿ ವೇಳಾಪಟ್ಟಿ ಪ್ರಕಟ; ಇಲ್ಲಿದೆ ಮಾಹಿತಿ

ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಬ್ಯಾಟರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಭಾರತದ ಬ್ಯಾಟಿಂಗ್ ಜೋಡಿ ವಿರಾಟ್ ಕೊಹ್ಲಿ (ನಾಲ್ಕನೇ) ಮತ್ತು ರೋಹಿತ್ ಶರ್ಮಾ (ಐದನೇ) ಮತ್ತು ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ (ಆರನೇ) ವ್ಯಾನ್ ಡೆರ್ ಡುಸ್ಸೆನ್ ಅವರ ಸ್ಥಾನದ ಏರಿಕೆಯಿಂದಾಗಿ ಸ್ಥಾನ ಕಳೆದುಕೊಂಡಿದ್ದಾರೆ.

16ನೇ ಸ್ಥಾನಕ್ಕೆ ತಲುಪಿದ ಯುಜ್ವೇಂದ್ರ ಚಾಹಲ್

16ನೇ ಸ್ಥಾನಕ್ಕೆ ತಲುಪಿದ ಯುಜ್ವೇಂದ್ರ ಚಾಹಲ್

ಜಸ್ಪ್ರೀತ್ ಬುಮ್ರಾ ಅವರ ಭಾರತ ತಂಡದ ಸಹ ಆಟಗಾರರಿಗೆ ಈ ಸುದ್ದಿ ಉತ್ತಮವಾದ್ದು, ಬೌಲರ್‌ಗಳ ಶ್ರೇಯಾಂಕದಲ್ಲಿ ಯುಜ್ವೇಂದ್ರ ಚಾಹಲ್ ನಾಲ್ಕು ಸ್ಥಾನಗಳನ್ನು ಜಿಗಿದು 16ನೇ ಸ್ಥಾನಕ್ಕೆ ತಲುಪಿದ್ದಾರೆ ಮತ್ತು ಆಲ್ ರೌಂಡರ್‌ಗಳ ಪಟ್ಟಿಯಲ್ಲಿ ಹಾರ್ದಿಕ್ ಪಾಂಡ್ಯ 13 ಸ್ಥಾನಗಳ ಏರಿಕೆಯೊಂದಿಗೆ ಎಂಟನೇ ಸ್ಥಾನಕ್ಕೆ ಏರಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಯುಜ್ವೇಂದ್ರ ಚಹಾಲ್ ಏಳು ವಿಕೆಟ್‌ಗಳನ್ನು ಕಬಳಿಸಿದರೆ, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಬ್ಯಾಟ್ ಮತ್ತು ಬಾಲ್‌ನಲ್ಲಿ ಮಿಂಚಿದರು. ಆರು ವಿಕೆಟ್‌ಗಳನ್ನು ಪಡೆದರಲ್ಲದೆ, ಒಟ್ಟು 100 ರನ್‌ಗಳನ್ನು ಗಳಿಸಿದರು.

'ಅವರ ಸಾಮರ್ಥ್ಯವನ್ನು ತಳ್ಳಿಹಾಕಲು ಸಾಧ್ಯವಿಲ್ಲ'; ವಿರಾಟ್ ಕೊಹ್ಲಿ ಬೆಂಬಲಕ್ಕೆ ನಿಂತ ಆರ್‌ಸಿಬಿ ಆಟಗಾರ

25 ಸ್ಥಾನಗಳ ಏರಿಕೆಯೊಂದಿಗೆ 52ನೇ ಸ್ಥಾನಕ್ಕೆ ತಲುಪಿದ ಪಂತ್

25 ಸ್ಥಾನಗಳ ಏರಿಕೆಯೊಂದಿಗೆ 52ನೇ ಸ್ಥಾನಕ್ಕೆ ತಲುಪಿದ ಪಂತ್

ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ನಾಲ್ಕು ಸ್ಥಾನಗಳನ್ನು ಕಳೆದುಕೊಂಡರು ಮತ್ತು ಆಲ್-ರೌಂಡರ್‌ಗಳ ಅಗ್ರ 10ರಿಂದ ಒಟ್ಟಾರೆ 11ನೇ ಸ್ಥಾನಕ್ಕೆ ಕುಸಿದರು. ಆದರೆ ಅವರ ದೇಶವಾಸಿ ಕ್ರಿಸ್ ವೋಕ್ಸ್ ಸರಣಿಯ ಸಮಯದಲ್ಲಿ ಕಾಣಿಸಿಕೊಳ್ಳಲು ವಿಫಲವಾದ ನಂತರ ಬೌಲರ್ ಮತ್ತು ಆಲ್-ರೌಂಡರ್ ಎರಡೂ ಪಟ್ಟಿಗಳಲ್ಲಿ ತಲಾ ಎರಡು ಸ್ಥಾನಗಳನ್ನು ಕಳೆದುಕೊಂಡರು.

ಪ್ರತಿಭಾನ್ವಿತ ಭಾರತದ ಎಡಗೈ ಬ್ಯಾಟ್ಸ್‌ಮನ್ ರಿಷಭ್ ಪಂತ್ ಇಂಗ್ಲೆಂಡ್ ಸರಣಿಯ ಅಂತಿಮ ಏಕದಿನ ಪಂದ್ಯದಲ್ಲಿ ಅಜೇಯ 125 ರನ್ ಗಳಿಸಿದರು. ಹೀಗಾಗಿ ಬ್ಯಾಟರ್‌ಗಳ ಪಟ್ಟಿಯಲ್ಲಿ ಒಟ್ಟಾರೆಯಾಗಿ 25 ಸ್ಥಾನಗಳ ಏರಿಕೆಯೊಂದಿಗೆ 52ನೇ ಸ್ಥಾನಕ್ಕೆ ತಮ್ಮ ಪ್ರಬಲ ಬ್ಯಾಟಿಂಗ್ ಫಾರ್ಮ್‌ಗಾಗಿ ಬಹುಮಾನ ಪಡೆದರು.

ಬ್ಯಾಟಿಂಗ್‌ನಲ್ಲಿ 42ನೇ ಸ್ಥಾನಕ್ಕೆ ಜಿಗಿದ ಹಾರ್ದಿಕ್ ಪಾಂಡ್ಯ

ಬ್ಯಾಟಿಂಗ್‌ನಲ್ಲಿ 42ನೇ ಸ್ಥಾನಕ್ಕೆ ಜಿಗಿದ ಹಾರ್ದಿಕ್ ಪಾಂಡ್ಯ

ಹಾರ್ದಿಕ್ ಪಾಂಡ್ಯ ಅವರ ಅತ್ಯುತ್ತಮ ಸರಣಿಯ ನಂತರ ಎಂಟು ಸ್ಥಾನಗಳನ್ನು ಗಳಿಸಿ 42ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಪ್ರಬಲ ಆರಂಭದ ನಂತರ ಟಾಪ್ 10ರೊಳಗೆ ಕೆಲವು ಬದಲಾವಣೆ ಕಂಡುಬಂದಿದೆ.

ದಕ್ಷಿಣ ಆಫ್ರಿಕಾದ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಮಂಗಳವಾರ ಚೆಸ್ಟರ್-ಲೆ-ಸ್ಟ್ರೀಟ್‌ನಲ್ಲಿ ತಮ್ಮ ಮೂರನೇ ಏಕದಿನ ಶತಕವನ್ನು ಬಾರಿಸಿದರು ಮತ್ತು ಇದು 33 ವರ್ಷ ವಯಸ್ಸಿನ ಬ್ಯಾಟರ್ ಶ್ರೇಯಾಂಕದಲ್ಲಿ ಮೂರು ಸ್ಥಾನಗಳ ಏರಿಕೆ ಕಂಡು ಒಟ್ಟಾರೆ ಮೂರನೇ ಸ್ಥಾನಕ್ಕೆ ಏರಿದರು.

Story first published: Wednesday, July 20, 2022, 17:00 [IST]
Other articles published on Jul 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X