ಐಸಿಸಿ ಟಿ20 ರ‍್ಯಾಂಕಿಂಗ್: ನಂ. 1 ಸ್ಥಾನಕ್ಕೆ ಸೂರ್ಯಕುಮಾರ್ ಮತ್ತಷ್ಟು ಹತ್ತಿರ: ಕೊಹ್ಲಿ, ರೋಹಿತ್‌ಗೆ ನಿರಾಸೆ

ಟಿ20 ವಿಶ್ವಕಪ್ ಸನಿಹದಲ್ಲಿರುವಾಗ ಭಾರತ ತಂಡದ ಬ್ಯಾಟಿಂಗ್ ವಿಭಾಗದ ಪ್ರದರ್ಶನ ಅದ್ಭುತವಾಗಿದೆ. ಅದರಲ್ಲೂ ಮಧ್ಯಮ ಕ್ರಮಾಂಕದ ಆಟಗಾರ ಸೂರ್ಯಕುಮಾರ್ ಯಾದವ್ ಅವರ ಅದ್ಭುತ ಫಾರ್ಮ್ ಮುಂದುವರಿದಿದ್ದು ಚುಟುಕು ವಿಶ್ವಕಪ್‌ನಲ್ಲಿ ಭಾರತ ತಂಡದ ಆತ್ಮವಿಶ್ವಾಸ ಹೆಚ್ಚಲು ಕಾರಣವಾಗಿದೆ. ಈ ಸಂದರ್ಭದಲ್ಲಿ ಐಸಿಸಿ ಟಿ20 ಶ್ರೇಯಾಂಕ ಪಟ್ಟಿಯಲ್ಲಿಯೂ ಸೂರ್ಯಕುಮಾರ್ ಯಾದವ್ ಮಹತ್ವದ ಯಶಸ್ಸು ಸಾಧಿಸಿದ್ದಾರೆ.

ಈಗಾಗಲೇ ಚುಟುಕು ಮಾದರಿಯಲ್ಲಿ ಎರಡನೇ ಶ್ರೇಯಾಂಕದಲ್ಲಿರುವ ಸೂರ್ಯಕುಮಾರ್ ಯಾದವ್ ತಮ್ಮ ಫಾರ್ಮ್ ಮುಂದುವರಿಸಿದ್ದಾರೆ. ಇದೀಗ ಸೂರ್ಯಕುಮಾರ್ ತಮ್ಮ ಅಂಕವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದು ನಂಬರ್ 1 ಸ್ಥಾನಕ್ಕೇರಲು ಮತ್ತಷ್ಟು ಹತ್ತಿರವಾಗಿದ್ದಾರೆ. ಮೊದಲ ಸ್ಥಾನದಲ್ಲಿರುವ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಅವರಿಗಿಂತ ಸೂರ್ಯ ಈಗ ಕೆಲವೇ ಅಂಕಗಳಷ್ಟು ಹಿಂದಿದ್ದಾರೆ.

ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಮಿಂಚುಹರಿಸಿದ SKY

ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಮಿಂಚುಹರಿಸಿದ SKY

ಸೂರ್ಯಕುಮಾರ್ ಯಾದವ್ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿ ಮಿಂಚಿದ್ದಾರೆ. ಈ ಸರಣಿಯಲ್ಲಿ ಎರಡು ಅರ್ಧ ಶತಕವನ್ನು ಗಳಿಸಿದ್ದು ತಿರುವನಂತಪುರಂನ ಕಠಿಣ ಪಿಚ್‌ನಲ್ಲಿಯೂ ಸರಾಗವಾಗಿ ಬ್ಯಾಟಿಂಗ್ ನಡೆಸಿದ್ದರು. ಮೂರು ಪಂದ್ಯಗಳ ಈ ಸರಣಿಯಲ್ಲಿ ಭಾರತ ತಂಡ ಗೆದ್ದ ಎರಡು ಪಂದ್ಯದಲ್ಲಿಯೂ ಸೂರ್ಯಕುಮಾರ್ ಯಾದವ್ ಕೊಡುಗೆ ಬಹಳ ಮಹತ್ವದ್ದಾಗಿತ್ತು. ಈ ಪ್ರದರ್ಶನದ ಕಾರಣದಿಂದಾಗಿ ಸೂರ್ಯಕುಮಾರ್ ಯಾದವ್ ಅವರು ಮೊದಲ ಸ್ಥಾನಕ್ಕೆ ಮತ್ತಷ್ಟು ಹತ್ತಿರವಾಗಿದ್ದಾರೆ. ಅಗ್ರಸ್ಥಾನದಲ್ಲಿರುವ ರಿಜ್ವಾನ್‌ಗಿಂತ ಸೂರ್ಯ ಕೇವಲ 16 ಅಂಕಗಳಿಂದ ಹಿಂದಿದ್ದಾರೆ.

ಗಮನಾರ್ಹ ಸಾಧನೆ ಮಾಡಿದ ಪ್ರಮುಖರು

ಗಮನಾರ್ಹ ಸಾಧನೆ ಮಾಡಿದ ಪ್ರಮುಖರು

ಬ್ಯಾಟರ್‌ಗಳ ಶ್ರೇಯಾಂಕ ಪಟ್ಟಿಯಲ್ಲಿ ಗಮನಾರ್ಹ ಸಾಧನೆ ಮಾಡಿದವರ ಪೈಕಿ ಭಾರತದ ಆರಂಭಿಕ ಆಟಗಾರ ಕೆಎಲ್ ರಾಹುಲ್ ಕೂಡ ಒಬ್ಬರು. ಹರಿಣಗಳ ವಿರುದ್ಧದ ಸರಣಿಯಲ್ಲಿ ಎರಡು ಪಂದ್ಯಗಳಲ್ಲಿ ಕೆಎಲ್ ರಾಹುಲ್ 108 ರನ್ ಗಳಿಸಿದ್ದಾರೆ. ಈ ಹೀಗಾಗಿ ಪರುಷ್ಕೃತ ಪಟ್ಟಿಯಲ್ಲಿ ಮೂರು ಸ್ಥಾನಗಳ ಜಿಗಿತ ಕಂಡಿರುವ ಅವರು 14ನೇ ಸ್ಥಾನಕ್ಕೆ ತಲುಪಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾದ ಆಟಗಾರರ ಪೈಕಿ ಕ್ವಿಂಟನ್ ಡಿ ಕಾಕ್ ಎಂಟು ಸ್ಥಾನಗಳ ಏರಿಕೆ ಕಂಡಿದ್ದು 12 ನೇ ಸ್ಥಾನವನ್ನು ಪಡೆದುಕೊಂಡಿದ್ದರೆ ರಿಲೀ ರೊಸ್ಸೌ ಸ್ಥಾನಗಳ ಏರಿಕೆ ಕಂಡಿದ್ದು 20ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಇನ್ನು ಡೇವಿಡ್ ಡೇವಿಡ್ ಮಿಲ್ಲರ್ 10 ಸ್ಥಾನಗಳ ಗಳಿಕೆ ಕಂಡಿದ್ದು 29ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಒಂದೊಂದು ಸ್ಥಾನಗಳ ಕುಸಿತ ಕಂಡ ಕೊಹ್ಲಿ ರೋಹಿತ್

ಒಂದೊಂದು ಸ್ಥಾನಗಳ ಕುಸಿತ ಕಂಡ ಕೊಹ್ಲಿ ರೋಹಿತ್

ಇನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾದ ಪ್ರಮುಖ ಆಟಗಾರ ವಿರಾಟ್ ಕೊಹ್ಲಿ ಗುವಾಹಟಿಯಲ್ಲಿ ನಡೆದ ಪಂದ್ಯದಲ್ಲಿ ಸ್ಪೋಟಕ ಪ್ರದರ್ಶನ ನೀಡಿ ಅಜೇಯ 49 ರನ್‌ಗಳನ್ನು ಗಳಿಸಿದ್ದರು. ಆದರೆ ಅಂತಿಮ ಪಂದ್ಯದಿಂದ ಕೊಹ್ಲಿ ವಿಶ್ರಾಂತಿ ಪಡೆದಿದ್ದರು. ಇನ್ನು ರೋಹಿತ್ ಶರ್ಮಾ ಈ ಸರಣಿಯಲ್ಲಿಉತ್ತಮ ಆರಂಬವನ್ನು ಪಡೆದರೂ ಅದನ್ನು ಮುಂದುವರಿಸಿಕೊಂಡು ಹೋಗುವಲ್ಲಿ ವಿಫಲವಾಗಿದ್ದಾರೆ. ಟೀಮ್ ಇಂಡಿಯಾದ ಈ ಇಬ್ಬರು ಆಟಗಾರರು ಕೂಡ ಪರಿಷ್ಕೃತ ಅಂಕಪಟ್ಟಿಯಲ್ಲಿ ತಲಾ ಒಂದು ಸ್ಥಾನಗಳ ಕುಸಿತ ಕಂಡಿದ್ದಾರೆ. ವಿರಾಟ್ ಕೊಹ್ಲಿ 15ನೇ ಸ್ಥಾನದಲ್ಲಿದ್ದರೆ ರೋಹಿತ್ ಶರ್ಮಾ 16ನೇ ಸ್ಥಾನದಲ್ಲಿದ್ದಾರೆ.

ಸರಣಿ ಜಯಿಸಿದ ಭಾರತ

ಸರಣಿ ಜಯಿಸಿದ ಭಾರತ

ಇನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ನೀಡಿದ್ದು ಭರ್ಜರಿಯಾಗಿ ಗೆಲುವು ಸಾಧಿಸಿದೆ. ಮೊದಲ ಎರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಮೂರನೇ ಪಂದ್ಯಕ್ಕೂ ಮುನ್ನವೇ ಸರಣಿಯನ್ನು ತನ್ನ ವಶಕ್ಕೆ ಪಡೆದುಕೊಳ್ಳುವಲ್ಲಿ ಸಫಲವಾಗಿತ್ತು. ಹೀಗಾಗಿ ಅಂತಿಮ ಪಂದ್ಯದಲ್ಲಿ ಒಂದಷ್ಟು ಪ್ರಯೋಹಕ್ಕೆ ಮುಂದಾದ ಟೀಮ್ ಇಂಡಿಯಾ ಅದರಲ್ಲಿ ಸಫಲತೆ ಕಾಣಲಿಲ್ಲ. ಇನ್ನು ಈ ಸರಣಿಯಲ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ ವಿಭಾಗದ ಪ್ರದರ್ಶನ ಗಮನಾರ್ಹವಾಗಿದ್ದರೂ ಬೌಲಿಂಗ್‌ ವಿಭಾಗ ಮ್ಯಾನೇಜ್‌ಮೆಂಟ್‌ಗೆ ಅಕ್ಷರಶಃ ತಲೆಕೆಡಿಸಿದೆ. ವಿಶ್ವಕಪ್ ಟೂರ್ನಿಯ ಅರಂಭಕ್ಕೂ ಮುನ್ನ ಭಾರತ ತಂಡಕ್ಕೆ ಎರಡು ಅಭ್ಯಾಸ ಪಂದ್ಯಗಳು ಮಾತ್ರವೇ ಆಸ್ಟ್ರೇಲಿಯಾದಲ್ಲಿ ದೊರೆಯಲಿದೆ. ಹೀಗಾಗಿ ಆಸಿಸ್ ನೆಲದಲ್ಲಿ ಭಾರತದ ಬೌಲಿಂಗ್ ವಿಭಾಗದ ಪ್ರದರ್ಶನ ಈಗ ಕುತೂಹಲ ಮೂಡಿಸಿದೆ.

For Quick Alerts
ALLOW NOTIFICATIONS
For Daily Alerts
Story first published: Wednesday, October 5, 2022, 15:39 [IST]
Other articles published on Oct 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X