ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್: ರೋಹಿತ್, ಧವನ್ ಫಾರ್ಮ್ ಬಗ್ಗೆ ತುಟಿ ಬಿಚ್ಚಿದ ವಿರಾಟ್ ಕೊಹ್ಲಿ!

ICC World Cup 2019: Virat Kohli speaks about form of Rohit, Dhawan

ಕಾರ್ಡಿಫ್, ಮೇ 29: ಕಾರ್ಡಿಫ್‌ನಲ್ಲಿ ಮಂಗಳವಾರ (ಮೇ 28) ನಡೆದ ಭಾರತ vs ಬಾಂಗ್ಲಾದೇಶ ಅಭ್ಯಾಸ ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟ್ಸ್ಮನ್‌ಗಳಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಕಳಪೆ ಪ್ರದರ್ಶನ ನೀಡಿದ್ದರು. ಅದಕ್ಕೂ ಮುನ್ನ ನ್ಯೂಜಿಲ್ಯಾಂಡ್ ವಿರುದ್ಧದ ಅಭ್ಯಾಸದಲ್ಲೂ ಇಬ್ಬರೂ ಉತ್ತಮ ಬ್ಯಾಟಿಂಗ್ ತೋರಿಸಿರಲಿಲ್ಲ. ಈ ಬಗ್ಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾತನಾಡಿದ್ದಾರೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಮಳೆಯಿಂದಾಗಿ ಪಂದ್ಯ ಕೊಂಚ ತಡವಾಗಿ ಆರಂಭವಾಯಿತಾದರೂ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ಪರ ಧವನ್-ರೋಹಿತ್ ಉತ್ತಮ ಪ್ರದರ್ಶನ ನೀಡಲಿಲ್ಲ. ರೋಹಿತ್ 42 ಎಸೆತಗಳಿಗೆ 19 ರನ್ ಗಳಿಸಿದರೆ, ಶಿಖರ್ ಧವನ್ 9 ಎಸೆತಗಳಿಗೆ ಕೇವಲ 1 ರನ್ ಬಾರಿಸಿದ್ದರು. ಆದರೂ ಕೆಎಲ್ ರಾಹುಲ್, ಎಂಎಸ್ ಧೋನಿ ಶತಕದ ನೆರವಿನಿಂದ ಭಾರತ ಈ ಪಂದ್ಯವನ್ನು 95 ರನ್‌ಗಳಿಂದ ಗೆದ್ದಿತ್ತು.

ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ, 'ಎರಡೂ ಅಭ್ಯಾಸ ಪಂದ್ಯಗಳಲ್ಲೂ ನಾವು ಮೊದಲು ಬ್ಯಾಟ್ ಮಾಡುವ ಮೂಲಕ ಸವಾಲು ಸ್ವೀಕರಿಸಿದೆವು. ರೋಹಿತ್ ಮತ್ತು ಧವನ್ ಇಬ್ಬರೂ ಗುಣಮಟ್ಟದ ಆಟಗಾರರೆ. ಅಭ್ಯಾಸ ಪಂದ್ಯಗಳಲ್ಲಿ ಪ್ರದರ್ಶನ ನೀಡಿಲ್ಲವೆಂದರೆ ಫಾರ್ಮ್ ನಲ್ಲಿ ಇಲ್ಲವೆಂದು ಅರ್ಥವಲ್ಲ' ಎಂದರು.

ವಿಶ್ವಕಪ್: 4ನೇ ಕ್ರಮಾಂಕ ವಿಜಯ್ ಶಂಕರ್ ಬದಲು ಕೆಎಲ್ ರಾಹುಲ್‌ಗೆ?!ವಿಶ್ವಕಪ್: 4ನೇ ಕ್ರಮಾಂಕ ವಿಜಯ್ ಶಂಕರ್ ಬದಲು ಕೆಎಲ್ ರಾಹುಲ್‌ಗೆ?!

'ಇನ್ನೂ ಪ್ರಮುಖ ಪಂದ್ಯಗಳನ್ನು ನಾವು ಆಡಲಿರುವುದರಿಂದ ಅಭ್ಯಾಸ ಪಂದ್ಯದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಿಲ್ಲ. ಆದರೆ ಎರಡೂ ಪಂದ್ಯಗಳಲ್ಲೂ ನಾವು ತಕ್ಕಮಟ್ಟಿನ ಪ್ರದರ್ಶನ ನೀಡಿದ್ದೇವೆ ಎಂಬುದಕ್ಕೆ ನಾನು ಖುಷಿಪಡುತ್ತೇನೆ' ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.

ಐಸಿಸಿ ವಿಶ್ವಕಪ್ 2019-ವೇಳಾಪಟ್ಟಿ/ಫಲಿತಾಂಶಗಳು

ವಿಶ್ವಕಪ್ ಪ್ರಾರಂಭಗೊಳ್ಳುತ್ತಲೇ ಆರಂಭಿಕ ಪಂದ್ಯಗಳಿಂದಲೂ ಗೆಲ್ಲುತ್ತೇವೆ. ಆರಂಭಿಕ ಬ್ಯಾಟ್ಸ್ಮನ್‌ಗಳು ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೇ 30ರಿಂದ ವಿಶ್ವಕಪ್ ಟೂರ್ನಿ ಆರಂಭಗೊಳ್ಳಲಿದ್ದು, ಜೂನ್ 5ರಂದು ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ.

Story first published: Wednesday, May 29, 2019, 11:57 [IST]
Other articles published on May 29, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X