ಟೀಂ ಇಂಡಿಯಾ ಪೂರ್ಣಾವಧಿ ನಾಯಕತ್ವಕ್ಕೆ ನಾನು ರೆಡಿ: ರೋಹಿತ್‌ಗೆ ಸೆಡ್ಡು ಹೊಡೆಯಲು ಪಾಂಡ್ಯ ಸ್ಕೆಚ್‌

ಟೀಂ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅಚ್ಚರಿಕೆ ಹೇಳಿಕೆ ನೀಡುವ ಮೂಲಕ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದ್ದಾರೆ. ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್‌ ನನಗೆ ಪೂರ್ಣಾವಧಿ ನಾಯಕತ್ವವನ್ನು ನೀಡುವುದಾದರೆ ಸಂತೋಷದಿಂದ ಸ್ವೀಕರಿಸುವೆ ಎಂದು ಹೇಳಿದ್ದಾರೆ.

ಫ್ಲೋರಿಡಾದಲ್ಲಿ ನಡೆದ ಐದನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತ 88 ರನ್‌ಗಳ ಭರ್ಜರಿ ಗೆಲುವನ್ನ ದಾಖಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಎದುರಾಳಿಗೆ 189 ರನ್‌ಗಳ ಗುರಿಯನ್ನ ನೀಡಿತ್ತು. ಈ ಗುರಿಯನ್ನ ಬೆನ್ನಟ್ಟಿದ ವೆಸ್ಟ್ ಇಂಡೀಸ್ ಮತ್ತೊಮ್ಮೆ ಹೀನಾಯ ಪ್ರದರ್ಶನದೊಂದಿಗೆ ಕೇವಲ 100ರನ್‌ಗಳಿಗೆ ಆಲೌಟ್ ಆಯಿತು.

ರೋಹಿತ್ ಅನುಪಸ್ಥಿತಿಯಲ್ಲಿ ತಂಡವನ್ನ ಮುನ್ನಡೆಸಿದ ಪಾಂಡ್ಯ

ರೋಹಿತ್ ಅನುಪಸ್ಥಿತಿಯಲ್ಲಿ ತಂಡವನ್ನ ಮುನ್ನಡೆಸಿದ ಪಾಂಡ್ಯ

ರೋಹಿತ್ ಶರ್ಮಾ ಟಿ20 ಸರಣಿ ಗೆಲುವಿನ ಬಳಿಕ ಅಂತಿಮ ಚುಟುಕು ಪಂದ್ಯದಲ್ಲಿ ಪ್ಲೇಯಿಂಗ್ ಇಲೆವೆನ್‌ನಿಂದ ಹೊರಗುಳಿದರು. ಪರಿಣಾಮವಾಗಿ ಉಪನಾಯಕ ಹಾರ್ದಿಕ್ ಪಾಂಡ್ಯ ತಂಡವನ್ನ ಯಶಸ್ವಿಯಾಗಿ ಮುನ್ನಡೆಸಿದರು. ಬೌಲಿಂಗ್‌ನಲ್ಲಿ ಬದಲಾವಣೆ ಮಾಡುವುದರ ಜೊತೆಗೆ ನಾಯಕತ್ವದ ಕೌಶಲ್ಯ ಪ್ರದರ್ಶಿಸಿದ ಪಾಂಡ್ಯ, ತಂಡವನ್ನ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.

ಪಂದ್ಯದ ಗೆಲುವಿನ ಬಳಿಕ ಮಾತನಾಡಿರುವ ಹಾರ್ದಿಕ್ ಟೀಂ ಇಂಡಿಯಾವನ್ನ ಮುನ್ನಡೆಸುವುದು ಹೆಮ್ಮೆಯ ವಿಚಾರವಾಗಿದ್ದು, ಪೂರ್ಣಾವಧಿ ನಾಯಕತ್ವಕ್ಕೂ ತಾನು ಸಿದ್ಧ ಎಂದು ಹೇಳಿಕೆ ನೀಡಿದ್ದಾರೆ.

"ದೇಶವನ್ನು ಮುನ್ನಡೆಸುವ ಅವಕಾಶವನ್ನು ಪಡೆಯುವುದು ತುಂಬಾ ವಿಶೇಷವಾಗಿದೆ. ಮತ್ತು ಆ ಅವಕಾಶವನ್ನು ಪಡೆಯುವುದು ಮತ್ತು ಆ ವಿಜಯವನ್ನು ಪಡೆಯುವುದು ನಾಯಕನಾಗಿ ಮತ್ತು ಒಬ್ಬ ವ್ಯಕ್ತಿಯಾಗಿ ನನಗೆ ಬಹಳಷ್ಟು ಅರ್ಥಪೂರ್ಣವಾಗಿದೆ. ನಾನು ನಮ್ಮ ನಾಯಕನ ಪಾತ್ರಗಳನ್ನು ಅನುಸರಿಸುತ್ತಿದ್ದೆ'' ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.

Commonwealth Games Day 11 Live: ಬ್ಯಾಡ್ಮಿಂಟನ್‌ ವಿಭಾಗದಲ್ಲಿ ಮತ್ತಷ್ಟು ಪದಕಗಳ ನಿರೀಕ್ಷೆ

ಖಾಯಂ ನಾಯಕನಾಗುವ ಆಸೆ ವ್ಯಕ್ತಪಡಿಸಿದ ಪಾಂಡ್ಯ

ಖಾಯಂ ನಾಯಕನಾಗುವ ಆಸೆ ವ್ಯಕ್ತಪಡಿಸಿದ ಪಾಂಡ್ಯ

ಇದೇ ವೇಳೆಯಲ್ಲಿ ಖಾಯಂ ನಾಯಕರಾಗಲು ಎದುರು ನೋಡುತ್ತಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಹಾರ್ದಿಕ್, ''ಹೌದು, ಏಕೆ ಅಲ್ಲ? ನನಗೆ ಅವಕಾಶ ಸಿಕ್ಕರೆ, ನಾನು ಅದನ್ನು ಮಾಡಲು ಹೆಚ್ಚು ಸಂತೋಷಪಡುತ್ತೇನೆ. ಆದರೆ ಸದ್ಯಕ್ಕೆ, ನಾವು ಈಗ ವಿಶ್ವಕಪ್ ಮತ್ತು ಏಷ್ಯಾ ಕಪ್ ಅನ್ನು ಹೊಂದಿದ್ದೇವೆ. ಆದ್ದರಿಂದ ನಾವು ಅದರತ್ತ ಗಮನ ಹರಿಸಬೇಕು ಮತ್ತು ಅಲ್ಲಿ ನಮ್ಮ ಕೌಶಲ್ಯಗಳನ್ನು ಬಳಸಬೇಕು'' ಎಂದು ಹಾರ್ದಿಕ್ ಪಂದ್ಯದ ನಂತರದ ಸಮಾರೋಪ ಸಮಾರಂಭದಲ್ಲಿ ಹೇಳಿದರು.

CWG 2022: ಕಾಮನ್‌ಸೆನ್ಸ್ ಇಲ್ಲದ ಬ್ಯಾಟಿಂಗ್!!: ಭಾರತ ಮಹಿಳಾ ತಂಡದ ಪ್ರದರ್ಶನಕ್ಕೆ ಅಜರುದ್ದೀನ್ ಕಿಡಿ

ಇಂಗ್ಲೆಂಡ್‌ನಂತೆಯೇ ವಿಂಡೀಸ್ ವಿರುದ್ಧವೂ ಭಾರತದ ಪಾರುಪತ್ಯ

ಇಂಗ್ಲೆಂಡ್‌ನಂತೆಯೇ ವಿಂಡೀಸ್ ವಿರುದ್ಧವೂ ಭಾರತದ ಪಾರುಪತ್ಯ

ಇಂಗ್ಲೆಂಡ್ ನೆಲದಲ್ಲಿ ಏಕದಿನ ಹಾಗೂ ಟಿ20 ಸರಣಿಯನ್ನ ಗೆದ್ದು ಬೀಗಿದ್ದ ಟೀಂ ಇಂಡಿಯಾ, ಕೆರಿಬಿಯನ್ನರ ಅಂಗಳದಲ್ಲಿಯೂ ಅಂತಹದ್ದೇ ಪ್ರದರ್ಶನವನ್ನ ಮುಂದುವರಿಸಿದ್ದಾರೆ. ಯುವ ಪಡೆಯನ್ನ ಹೊಂದಿರುವ ಭಾರತವು ಸಾಕಷ್ಟು ಅಗ್ರೆಸ್ಸಿವ್ ಕ್ರಿಕೆಟ್ ಆಡುತ್ತಿದ್ದು, ಏಕದಿನ ಸರಣಿಯನ್ನ 3-0 ಅಂತರದಲ್ಲಿ ಹಾಗೂ ಟಿ20 ಸರಣಿಯನ್ನ 4-1 ಅಂತರದಲ್ಲಿ ಗೆದ್ದು ಬೀಗಿದೆ.

"ಆಟಗಾರರಲ್ಲಿರುವ ಪ್ರತಿಭೆ ಮತ್ತು ನಮಗಿರುವ ಸ್ವಾತಂತ್ರ್ಯ ಇಂತಹ ಪ್ರದರ್ಶನಕ್ಕೆ ಕಾರಣವಾಗಿದೆ. ಇದು ಹೊಸ ಭಾರತ ತಂಡವಾಗಿ ರೂಪುಗೊಂಡಿದ್ದು, ಆಟಗಾರರು ತಮ್ಮನ್ನು ತಾವು ಚೆನ್ನಾಗಿ ವ್ಯಕ್ತಪಡಿಸುತ್ತಿದ್ದಾರೆ ಮತ್ತು ನೀವು ಸ್ವಾತಂತ್ರ್ಯವನ್ನು ಹೊಂದಿರುವಾಗ ನೀವು ಹೆಚ್ಚು ಅಪಾಯಕಾರಿಯಾಗುತ್ತೀರಿ'' ಎಂದು ಹಾರ್ದಿಕ್ ಅಭಿಪ್ರಾಯ ಪಟ್ಟಿದ್ದಾರೆ.

"ಈ ಎಲ್ಲಾ ಕ್ರೆಡಿಟ್ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್‌ಗೆ ಸಲ್ಲಬೇಕು. ಏಕೆಂದರೆ ಆಟಗಾರರು ಆಯ್ಕೆಯಾಗುವುದಿಲ್ಲವೇ ಅಥವಾ ತಂಡದಿಂದ ಕೈಬಿಡುತ್ತಾರೆಯೇ ಎಂಬ ಬಗ್ಗೆ ಚಿಂತಿಸುವ ಅಗತ್ಯವಿಲ್ಲ"ಎಂದು ಪಾಂಡ್ಯ ಹೇಳಿದ್ದಾರೆ.

ಟಿ20 ವಿಶ್ವಕಪ್‌ಗೆ ಎಷ್ಟು ಸಿದ್ಧರಿದ್ದೀರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಹಾರ್ದಿಕ್ ಪಾಂಡ್ಯ, ತುಂಬಾ ಸನಿಹದಲ್ಲಿದ್ದೇವೆ. ಇನ್ನಷ್ಟು ಉತ್ತಮವಾಗಿರಲು ಪ್ರಯತ್ನಿಸುತ್ತಿದ್ದೇವೆ. ಆದ್ರೆ ಈ ಫಾರ್ಮೆಟ್‌ನಲ್ಲಿ ದಿನವೂ ಕಲಿಯೋದು ಇರುತ್ತದೆ ಎಂದು ಹೇಳಿಕೆ ನೀಡಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, August 8, 2022, 13:16 [IST]
Other articles published on Aug 8, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X