ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'1ನೇ ದಿನಕ್ಕೆ ಆತಿಥೇಯ ತಂಡ ಆಲ್ ಔಟ್ ಮಾಡಿದರೆ ನಾವು ಉತ್ತಮಸ್ಥಿತಿಯಲ್ಲಿದ್ದೀವಿ ಎಂದರ್ಥ'

If you bowl out home team for 183 on day one, you are in good position: Indian Pacer Mohammed Shami

ನ್ಯಾಟಿಂಗ್‌ಹ್ಯಾಮ್: ಟೆಸ್ಟ್‌ ಪಂದ್ಯವೊಂದರ ಆರಂಭಿಕ ದಿನವೇ ನಾವು 183 ರನ್‌ಗೆ ಆತಿಥೇಯರನ್ನು ಆಲ್ ಔಟ್ ಮಾಡುತ್ತೀವಿ ಎಂದಾದರೆ ನಾವು ಉತ್ತಮ ಸ್ಥಿತಿಯಲ್ಲಿದ್ದೀವಿ. ಉತ್ತಮ ಫಾರ್ಮ್‌ನಲ್ಲಿದ್ದೀವಿ ಎಂದರ್ಥ ಎಂದು ಭಾರತದ ಅನುಭವಿ ವೇಗಿ ಮೊಹಮ್ಮದ್ ಶಮಿ ಹೇಳಿದ್ದಾರೆ. ಸದ್ಯ ನ್ಯಾಟಿಂಗ್‌ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲನೇ ಟೆಸ್ಟ್ ಪಂದ್ಯದ ಬಗ್ಗೆ ಈ ಹೇಳಿಕೆ ನೀಡಿದ್ದಾರೆ.

ಒಲಿಂಪಿಕ್ ಸ್ಟಾರ್ ಆಟಗಾರ್ತಿ ವಂದನಾ ಕಟಾರಿಯಾ ಕುಟುಂಬಕ್ಕೆ ಜಾತಿ ನಿಂದಿಸಿ ವಿಕೃತಿ!ಒಲಿಂಪಿಕ್ ಸ್ಟಾರ್ ಆಟಗಾರ್ತಿ ವಂದನಾ ಕಟಾರಿಯಾ ಕುಟುಂಬಕ್ಕೆ ಜಾತಿ ನಿಂದಿಸಿ ವಿಕೃತಿ!

ಆತಿಥೇಯ ಇಂಗ್ಲೆಂಡ್ ವಿರುದ್ಧ ಮೊದಲನೇ ಟೆಸ್ಟ್‌ ಪಂದ್ಯಕ್ಕಾಗಿ ಮೈದಾನಕ್ಕಿಳಿದಿರುವ ಭಾರತೀಯ ತಂಡ ಇನ್ನಿಂಗ್ಸ್‌ಗೆ ಇಳಿಸಿದ್ದ ಇಂಗ್ಲೆಂಡ್ ತಂಡವನ್ನು 183 ರನ್‌ಗೆ ಆಲ್ ಔಟ್ ಮಾಡಿತ್ತು. ಅದೂ ಪಂದ್ಯ ಶುರುವಾದ ಆಗಸ್ಟ್‌ 1ರಂದು ಮೊದಲನೇ ದಿವೇ ಇಂಗ್ಲೆಂಡ್‌ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

ಜಸ್‌ಪ್ರೀತ್‌ ಬೂಮ್ರಾ ಮಾರಕ ಬೌಲಿಂಗ್
ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದ್ದ ಇಂಗ್ಲೆಂಡ್ ಆರಂಭಿಕ ಇನ್ನಿಂಗ್ಸ್‌ನಲ್ಲಿ ಕಡಿಮೆ ರನ್ ಕಲೆಹಾಕಿ ಹಿನ್ನಡೆಯ ಭೀತಿಯಲ್ಲಿದೆ. ರೋರಿ ಬರ್ನ್ಸ್ 0, ಡೊಮಿನಿಕ್ ಸಿಬ್ಲಿ 18, ಝ್ಯಾಕ್ ಕ್ರಾವ್ಲಿ 27, ಜೋ ರೂಟ್ 64(ಸಿ), ಜಾನಿ ಬೈರ್‌ಸ್ಟೊ 29, ಡೇನಿಯಲ್ ಲಾರೆನ್ಸ್ 0, ಜೋಸ್ ಬಟ್ಲರ್ (wk) 0, ಸ್ಯಾಮ್ ಕರ್ರನ್ 27, ಒಲ್ಲಿ ರಾಬಿನ್ಸನ್ 0, ಸ್ಟುವರ್ಟ್ ಬ್ರಾಡ್ 4, ಜೇಮ್ಸ್ ಆಂಡರ್ಸನ್ 1ರನ್‌ನೊಂದಿಗೆ ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ನಲ್ಲಿ 65.4 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 183 ರನ್ ಗಳಿಸಿತ್ತು. ಆಂಗ್ಲ ಇನ್ನಿಂಗ್ಸ್‌ ವೇಳೆ ಭಾರತದ ವೇಗಿ ಜಸ್‌ಪ್ರೀತ್‌ ಬೂಮ್ರಾ 4, ಮೊಹಮ್ಮದ್ ಶಮಿ 3, ಶಾರ್ದೂಲ್ ಠಾಕೂರ್ 2, ಮೊಹಮ್ಮದ್ ಸಿರಾಜ್ 1 ವಿಕೆಟ್ ಪಡೆದಿದ್ದರು.

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಟಾಸ್ ಸೋತ ಭಾರತದ 5 ನಾಯಕರುಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಟಾಸ್ ಸೋತ ಭಾರತದ 5 ನಾಯಕರು

ಖಂಡಿತಾ ಮೇಲುಗೈ ಸಾಧಿಸಿದ್ದೇವೆ
ಆರಂಭಿಕ ದಿನದಾಟ ಮುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೊಹಮ್ಮದ್ ಶಮಿ, "ಖಂಡಿತವಾಗಿಯೂ 183 ರನ್‌ಗೆ ನಾವು ಆತಿಥೇಯರನ್ನು ಆಲ್ ಔಟ್ ಮಾಡಿದ್ದೀವೆಂದರೆ ನಾವು ಉತ್ತಮ ಸ್ಥಿತಿಯಲ್ಲಿದ್ದೀವಿ ಎಂದರ್ಥ. ಒಟ್ಟಿನಲ್ಲಿ ನಾವು ಉತ್ತಮ ರನ್ ಗಳಿಸಬೇಕು. ಲೀಡ್ ಪಡೆದುಕೊಳ್ಳಬೇಕು. ನಾವೀಗ ಉತ್ತಮ ಸ್ಥಿತಿಯಲ್ಲಿದ್ದೇವೆ. ಯಾಕೆಂದರೆ ಆತಿಥೇಯ ತಂಡವನ್ನು ಅದರ ತವರು ನೆಲದಲ್ಲಿ ನೀವು 183 ರನ್‌ಗೆ ಇನ್ನಿಂಗ್ಸ್ ಮುಗಿಸುತ್ತೀರೆಂದರೆ ನೀವು ಉತ್ತಮ ಸ್ಥಿತಿಯಲ್ಲಿದ್ದೀರಿ, ಉತ್ತಮ ಪ್ರದರ್ಶನ ನೀಡುತ್ತಿದ್ದೀರಿ ಎಂದರ್ಥ," ಎಂದು ಶಮಿ ಹೇಳಿದ್ದಾರೆ. ಪ್ರವಾಸಿ ಭಾರತ ಈಗ ಮೇಲುಗೈ ಸಾಧಿಸಿದೆ ಅನ್ನಿಸುತ್ತಿದೆಯಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಹೀಗೆ ಶಮಿ ಪ್ರತಿಕ್ರಿಯಿಸಿದ್ದಾರೆ.

ಇತ್ತಂಡಗಳ ಪ್ಲೇಯಿಂಗ್ XI
ಇಂಗ್ಲೆಂಡ್ ಪ್ಲೇಯಿಂಗ್ XI: ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಝ್ಯಾಕ್ ಕ್ರಾವ್ಲಿ, ಜೋ ರೂಟ್ (ಸಿ), ಜಾನಿ ಬೈರ್‌ಸ್ಟೊ, ಡೇನಿಯಲ್ ಲಾರೆನ್ಸ್, ಜೋಸ್ ಬಟ್ಲರ್ (wk), ಸ್ಯಾಮ್ ಕುರ್ರನ್, ಒಲ್ಲಿ ರಾಬಿನ್ಸನ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್.
ಬೆಂಚ್: ಮಾರ್ಕ್ ವುಡ್, ಕ್ರೇಗ್ ಓವರ್ಟನ್, ಜ್ಯಾಕ್ ಲೀಚ್, ಡೊಮಿನಿಕ್ ಬೆಸ್, ಒಲ್ಲಿ ಪೋಪ್, ಹಸೀಬ್ ಹಮೀದ್.
ಭಾರತ ಪ್ಲೇಯಿಂಗ್ XI: ರೋಹಿತ್ ಶರ್ಮಾ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ಸಿ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆ), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬೂಮ್ರಾ.
ಬೆಂಚ್: ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮಾ, ಅಕ್ಸರ್ ಪಟೇಲ್, ವೃದ್ಧಿಮಾನ್ ಸಹಾ, ಉಮೇಶ್ ಯಾದವ್, ಹನುಮ ವಿಹಾರಿ, ಅಭಿಮನ್ಯು ಈಶ್ವರನ್.

Story first published: Thursday, August 5, 2021, 16:27 [IST]
Other articles published on Aug 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X