ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs AUS 2022: ಆಸ್ಟ್ರೇಲಿಯಾ ವಿರುದ್ಧ ಟಿ20 ಪಂದ್ಯದಲ್ಲಿ ಮರೆಯಲಾರದ 5 ಅದ್ಭುತ ಇನ್ನಿಂಗ್ಸ್‌ಗಳಿವು

ಏಷ್ಯಾ ಕಪ್ 2022 ರ ನಿರಾಶಾದಾಯಕ ಅಭಿಯಾನದ ನಂತರ, ಟೀಮ್ ಇಂಡಿಯಾ ಈಗ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ತವರಿನಲ್ಲಿ ಆಡಲಿದೆ. ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ತಂಡದ ಸಿದ್ಧತೆಗಳನ್ನು ಗಮನದಲ್ಲಿಟ್ಟುಕೊಂಡು ಸರಣಿಯು ಮಹತ್ವದ್ದಾಗಿದೆ. ವಿಶ್ವಕಪ್‌ನಲ್ಲಿ ಆಡುವ 11 ಬಳಗವನ್ನು ಹೊಂದಿಸಲು ಟೀಂ ಇಂಡಿಯಾಗೆ ಇನ್ನು 6 ಪಂದ್ಯಗಳಷ್ಟೇ ಉಳಿದಿವೆ. ಆಸ್ಟ್ರೇಲಿಯಾ ನಂತರ ದಕ್ಷಿಣ ಆಫ್ರಿಕಾ ವಿರುದ್ಧ 3 ಟಿ20 ಪಂದ್ಯಗಳನ್ನು ಆಡಲಿದೆ.

ಭಾರತ-ಆಸ್ಟ್ರೇಲಿಯಾ ಸರಣಿಯು ಸೆಪ್ಟೆಂಬರ್ 20 ರಿಂದ 25 ರವರೆಗೆ ನಡೆಯಲಿದ್ದು, ಮೊಹಾಲಿ, ನಾಗ್ಪುರ ಮತ್ತು ಹೈದರಾಬಾದ್‌ನಲ್ಲಿ ಪಂದ್ಯಗಳು ನಡೆಯಲಿವೆ. ಟಿ20 ವಿಶ್ವಕಪ್‌ಗೆ ಆಯ್ಕೆಯಾಗಿರುವ ಭಾರತದ ಹೆಚ್ಚಿನ ಆಟಗಾರರು ಆಸ್ಟ್ರೇಲಿಯಾ ವಿರುದ್ಧದ ತವರು ಸರಣಿಯ ಭಾಗವಾಗಲಿದ್ದಾರೆ.

ಏಷ್ಯಾ ಕಪ್‌ನಲ್ಲಿ ಸಿಕ್ಸರ್ ಸಿಡಿಸಿದ ಬ್ಯಾಟ್ ಹರಾಜಿಗಿಡಲು ಮುಂದಾದ ನಸೀಮ್ ಶಾಏಷ್ಯಾ ಕಪ್‌ನಲ್ಲಿ ಸಿಕ್ಸರ್ ಸಿಡಿಸಿದ ಬ್ಯಾಟ್ ಹರಾಜಿಗಿಡಲು ಮುಂದಾದ ನಸೀಮ್ ಶಾ

ಭಾರತ ಮತ್ತು ಆಸ್ಟ್ರೇಲಿಯಾ ಇದುವರೆಗೆ 23 ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಭಾರತ 13 ಪಂದ್ಯಗಳನ್ನು ಮತ್ತು ಆಸ್ಟ್ರೇಲಿಯಾ 9 ಪಂದ್ಯಗಳನ್ನು ಗೆದ್ದಿದೆ. ಇತ್ತಂಡಗಳ ನಡುವಿನ ಒಂದು ಪಂದ್ಯ ಯಾವುದೇ ಫಲಿತಾಂಶವಿಲ್ಲದೆ ಕೊನೆಗೊಂಡಿತು. ತವರಿನಲ್ಲಿ ಭಾರತ ಆಡಿದ ಏಳು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದು ಮೂರರಲ್ಲಿ ಸೋತಿದೆ.

ಟೀಮ್ ಇಂಡಿಯಾ ಆಸೀಸ್ ವಿರುದ್ಧ ಸೆಡ್ಡು ಹೊಡೆಯಲು ತಯಾರಿ ನಡೆಸುತ್ತಿರುವಾಗ, ಆಸ್ಟ್ರೇಲಿಯನ್ನರ ವಿರುದ್ಧ ಭಾರತೀಯ ಆಟಗಾರರು ಆಡಿದ ಐದು ಅದ್ಭುತ ಇನ್ನಿಂಗ್ಸ್‌ಗಳನ್ನು ಅಭಿಮಾನಿಗಳು ಎಂದಿಗೂ ಮರೆಯಲಾರರು.

ಟಿ20 ವಿಶ್ವಕಪ್‌ಗಾಗಿ ಬಲಿಷ್ಠ ತಂಡವನ್ನು ಪ್ರಕಟಿಸಿದ ಪಾಕಿಸ್ತಾನ; ಮೀಸಲು ಪಟ್ಟಿಯಲ್ಲಿ ಸ್ಟಾರ್ ಬ್ಯಾಟರ್ಟಿ20 ವಿಶ್ವಕಪ್‌ಗಾಗಿ ಬಲಿಷ್ಠ ತಂಡವನ್ನು ಪ್ರಕಟಿಸಿದ ಪಾಕಿಸ್ತಾನ; ಮೀಸಲು ಪಟ್ಟಿಯಲ್ಲಿ ಸ್ಟಾರ್ ಬ್ಯಾಟರ್

 ಬ್ರಿಸ್ಬೇನ್‌ನಲ್ಲಿ ಶಿಖರ್ ಧವನ್ ಬ್ಯಾಟಿಂಗ್

ಬ್ರಿಸ್ಬೇನ್‌ನಲ್ಲಿ ಶಿಖರ್ ಧವನ್ ಬ್ಯಾಟಿಂಗ್

ಶಿಖರ್ ಧವನ್ ಟೀಮ್ ಇಂಡಿಯಾಕ್ಕಾಗಿ ಟಿ20 ಪಂದ್ಯಗಳಲ್ಲಿ ಕೆಲವು ಉತ್ತಮ ಇನ್ನಿಂಗ್ಸ್ ಆಡಿದ್ದಾರೆ. ನವೆಂಬರ್ 2018 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಶಿಖರ್ ಧವನ್ 42 ಎಸೆತಗಳಲ್ಲಿ 76 ರನ್ ಗಳಿಸಿದರು. ಇದರಲ್ಲಿ 10 ಬೌಂಡರಿ ಎರಡು ಭರ್ಜರಿ ಸಿಕ್ಸರ್ ಸೇರಿದ್ದವು.

ಮಳೆ ಅಡ್ಡಿಪಡಿಸಿದ್ದ ಪಂದ್ಯದಲ್ಲಿ ಭಾರತ 17 ಓವರ್‌ಗಳಲ್ಲಿ 174 ರನ್‌ಗಳ ಪರಿಷ್ಕೃತ ಗುರಿಯನ್ನು ಚೇಸ್ ಮಾಡಬೇಕಿತ್ತು. ಆದರೆ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ (7), ಕೆಎಲ್ ರಾಹುಲ್ (13) ಮತ್ತು ವಿರಾಟ್ ಕೊಹ್ಲಿ (4) ಬೇಗನೆ ಔಟಾಗುವ ಮೂಲಕ ತಂಡ ಸಂಕಷ್ಟಕ್ಕೆ ಸಿಲುಕಿತ್ತು, ಆದರೆ ಆ ಒತ್ತಡದಲ್ಲಿಯೂ ಅತ್ಯುತ್ತಮವಾಗಿ ಆಡಿದ ಶಿಖರ್ ಧವನ್ ತಂಡಕ್ಕೆ ಆಸರೆಯಾದರು.

ನಂತರ ಬಂದ ದಿನೇಶ್ ಕಾರ್ತಿಕ್ 13 ಎಸೆತಗಳಲ್ಲಿ 30 ರನ್ ಸಿಡಿಸಿದರು, ಆದರೂ ಅಂತಿಮ ಓವರ್ ನಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ ಮಾರ್ಕಸ್ ಸ್ಟೊಯಿನಿಸ್ ದಿನೇಶ್ ಕಾರ್ತಿಕ್ ಮತ್ತು ಕೃನಾಲ್ ಪಾಂಡ್ಯರನ್ನು ಔಟ್ ಮಾಡುವ ಮೂಲಕ ಆಸ್ಟ್ರೇಲಿಯಾ 4 ರನ್‌ಗಳ ರೋಚಕ ಗೆಲುವು ಸಾಧಿಸಿತು.

 ಸಿಡ್ನಿಯಲ್ಲಿ ಪಂದ್ಯ ಗೆಲ್ಲಿಸಿದ್ದ ಪಾಂಡ್ಯ

ಸಿಡ್ನಿಯಲ್ಲಿ ಪಂದ್ಯ ಗೆಲ್ಲಿಸಿದ್ದ ಪಾಂಡ್ಯ

2020-21 ಆಸ್ಟ್ರೇಲಿಯಾ ಪ್ರವಾಸದ ಮೊದಲು ಹಾರ್ದಿಕ್ ಪಾಂಡ್ಯ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಬಗ್ಗೆ ಅನುಮಾನಗಳಿದ್ದವು. ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಯಿಂದ ಅವರು ಇನ್ನೂ ಚೇತರಿಸಿಕೊಳ್ಳುತ್ತಿದ್ದರಿಂದ ಬೌಲಿಂಗ್ ಮಾಡಲು ಸಾಧ್ಯವಾಗದ ಕಾರಣ ಅವರನ್ನು ಬ್ಯಾಟರ್ ಎಂದು ಆಯ್ಕೆ ಮಾಡಲಾಯಿತು. ಆದಾಗ್ಯೂ, ಪ್ರವಾಸದ ಸಮಯದಲ್ಲಿ ಪಾಂಡ್ಯ ಬ್ಯಾಟ್‌ನಿಂದ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು.

ಎರಡನೇ ಟಿ20I ನಲ್ಲಿ ಸಿಡ್ನಿಯಲ್ಲಿ 195 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ ಹಾರ್ದಿಕ್ ಪಾಂಡ್ಯ 22 ಎಸೆತಗಳಲ್ಲಿ ಅಜೇಯ 42 ರನ್ ಗಳಿಸುವ ಮೂಲಕ ಟೀಮ್ ಇಂಡಿಯಾವನ್ನು ಗೆಲುವಿನತ್ತ ಮುನ್ನಡೆಸಿದರು. ಧವನ್ (52), ರಾಹುಲ್ (30) ಮತ್ತು ಕೊಹ್ಲಿ (40) ಉತ್ತಮ ಪ್ರದರ್ಶನ ನೀಡಿದ್ದರು.

 ಅಡಿಲೇಡ್‌ನಲ್ಲಿ ಅಬ್ಬರಿಸಿದ್ದ ವಿರಾಟ್ ಕೊಹ್ಲಿ

ಅಡಿಲೇಡ್‌ನಲ್ಲಿ ಅಬ್ಬರಿಸಿದ್ದ ವಿರಾಟ್ ಕೊಹ್ಲಿ

2016 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಸರಣಿಯ ಮೊದಲ T20I ನಲ್ಲಿ ಅಡಿಲೇಡ್‌ನಲ್ಲಿ 55 ಎಸೆತಗಳಲ್ಲಿ ಅಜೇಯ 90 ರನ್ ಗಳಿಸುವ ಮೂಲಕ ಕೊಹ್ಲಿ ಟೀಮ್ ಇಂಡಿಯಾಗೆ ಜಯ ತಂದುಕೊಟ್ಟಿದ್ದರು. ಟಾಸ್ ಗೆದ್ದ ಭಾರತವನ್ನು ಆಸೀಸ್ ಬ್ಯಾಟಿಂಗ್‌ಗೆ ಕಳುಹಿಸಿತು. ಚುರುಕಿನ ಆರಂಭದ ನಂತರ, ರೋಹಿತ್ (31) ಮತ್ತು ಧವನ್ (5) ಔಟಾಗುವ ಮೂಲಕ ಕಳೆದುಕೊಂಡು ಎರಡು ವಿಕೆಟ್ ನಷ್ಟಕ್ಕೆ 41 ರನ್ ಗಳಿಸಿದರು.

ಕೊಹ್ಲಿ ಮತ್ತು ಸುರೇಶ್ ರೈನಾ (34 ಎಸೆತಗಳಲ್ಲಿ 41) ನಂತರ ಮೂರನೇ ವಿಕೆಟ್‌ಗೆ 134 ರನ್ ಸೇರಿಸುವ ಮೂಲಕ ಭಾರತ ತಂಡ 20 ಓವರ್ ಗಳಲ್ಲಿ ಮೂರು ವಿಕೆಟ್‌ಗೆ 188 ರನ್ ಗಳಿಸಿತು.

ನಂತರ ಜಸ್ಪ್ರೀತ್ ಬುಮ್ರಾ ಮೂರು ವಿಕೆಟ್ ಪಡೆದರೆ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಮತ್ತು ಪಾದಾರ್ಪಣೆ ಮಾಡಿದ ಪಾಂಡ್ಯ ತಲಾ ಎರಡು ವಿಕೆಟ್ ಪಡೆದರು. ಭಾರತವು ಆಸ್ಟ್ರೇಲಿಯಾವನ್ನು 151 ರನ್‌ಗಳಿಗೆ ಆಲೌಟ್ ಮಾಡಿ 37 ರನ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.

 ವಿಶ್ವಕಪ್ ಸೂಪರ್ 10 ಪಂದ್ಯದಲ್ಲಿ ವಿರಾಟ್ ಪ್ರದರ್ಶನ

ವಿಶ್ವಕಪ್ ಸೂಪರ್ 10 ಪಂದ್ಯದಲ್ಲಿ ವಿರಾಟ್ ಪ್ರದರ್ಶನ

ಸೀಮಿತ ಓವರ್ ಗಳ ಕ್ರಿಕೆಟ್‌ನಲ್ಲಿ ಚೇಸಿಂಗ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿ ಕೆಲವು ಅಸಾಧಾರಣ ಇನ್ನಿಂಗ್ಸ್ ಆಡಿದ್ದಾರೆ. 2016 ರ ಟಿ 20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತವನ್ನು ಗೆಲ್ಲಿಸಿದ್ದು ವಿರಾಟ್ ಕೊಹ್ಲಿ.

161 ರನ್ ಬೆನ್ನಟ್ಟಿದ ಭಾರತ ತಂಡವನ್ನು ವಿರಾಟ್ ಕೊಹ್ಲಿ 51 ಎಸೆತಗಳಲ್ಲಿ ಅಜೇಯ 82 ರನ್ ಗಳಿಸುವ ಮೂಲಕ ಗೆಲುವಿನತ್ತ ಮುನ್ನಡೆಸಿದರು. 8 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 49 ರನ್ ಗಳಿಸಿದ್ದ ಭಾರತಕ್ಕೆ ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್ ಉತ್ತಮ ಜೊತೆಯಾಟ ಆಡಿದರು.

ಅಂತಿಮವಾಗಿ ಕೊಹ್ಲಿಗೆ ಸಾಥ್ ನೀಡಿದ ಮಹೇಂದ್ರ ಸಿಂಗ್ ಧೋನಿ ಭಾರತವನ್ನು ಗೆಲ್ಲಿಸುವ ಮೂಲಕ ಆಸ್ಟ್ರೇಲಿಯಾವನ್ನು ವಿಶ್ವಕಪ್‌ನಿಂದ ಹೊರಹಾಕಿದರು.

 ಡರ್ಬನ್‌ನಲ್ಲಿ ಮಿಂಚಿದ್ದ ಯುವರಾಜ್ ಸಿಂಗ್

ಡರ್ಬನ್‌ನಲ್ಲಿ ಮಿಂಚಿದ್ದ ಯುವರಾಜ್ ಸಿಂಗ್

2007 ರ ಟಿ20 ವಿಶ್ವಕಪ್ ಫೈನಲ್‌ಗೆ ತಲುಪಲು ಯುವರಾಜ್ ಅದ್ಭುತವಾದ ಇನ್ನಿಂಗ್ಸ್ ಅನ್ನು ಆಡಿದರು. ಡರ್ಬನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಅಧಿಕ ಒತ್ತಡದ ಸೆಮಿಫೈನಲ್ ಘರ್ಷಣೆಯಲ್ಲಿ ಅವರು ಕೇವಲ 30 ಎಸೆತಗಳಲ್ಲಿ 70 ರನ್ ಗಳಿಸಿದರು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ 41 ರನ್‌ ಆಗುವಷ್ಟರಲ್ಲಿ ಎರಡು ವಿಕೆಟ್ ಕಳೆದುಕೊಂಡಿತ್ತು.

ನಂತರ ಯುವರಾಜ್ ಮತ್ತು ರಾಬಿನ್ ಉತ್ತಪ್ಪ (28 ಎಸೆತಗಳಲ್ಲಿ 34) ಮೂರನೇ ವಿಕೆಟ್‌ಗೆ 84 ರನ್ ಸೇರಿಸಿ ಟೀಂ ಇಂಡಿಯಾ ಇನ್ನಿಂಗ್ಸ್ ಅನ್ನು ಮರಳಿ ಹಳಿಗೆ ತಂದರು. 21 ಎಸೆತಗಳಲ್ಲಿ 50 ರನ್ ಗಳಿಸಿದ ಯುವರಾಜ್ ಸಿಂಗ್ 30 ಎಸೆತಗಳಲ್ಲಿ 70 ರನ್ ಗಳಿಸಿ ಔಟಾಗಿದ್ದರು. ಟೀಮ್ ಇಂಡಿಯಾ ಐದು ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತು.

ಶ್ರೀಶಾಂತ್ (2/12), ಇರ್ಫಾನ್ ಪಠಾಣ್ (2/44) ಮತ್ತು ಜೋಗಿಂದರ್ ಶರ್ಮಾ (2/37) ಉತ್ತಮ ಪ್ರದರ್ಶನ ನೀಡುವ ಮೂಲಕ ಭಾರತಕ್ಕೆ 15 ರನ್‌ಗಳ ಜಯವನ್ನು ತಂಡುಕೊಟ್ಟರು. ಚೊಚ್ಚಲ ಟಿ 20 ವಿಶ್ವಕಪ್‌ನಿಂದ ಆಸೀಸ್ ತಂಡವನ್ನು ಹೊರಹಾಕಿದ ಟೀಂ ಇಂಡಿಯಾ ಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸಿ ಇತಿಹಾಸ ಸೃಷ್ಟಿಸಿತು.

Story first published: Thursday, September 15, 2022, 20:20 [IST]
Other articles published on Sep 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X