ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ ಟೆಸ್ಟ್: ಟೀಮ್ ಇಂಡಿಯಾ ಆಟಗಾರರಿಗೆ ನೆಟ್ಸ್‌ನಲ್ಲಿ ಸ್ಪಿನ್ ಅಗ್ನಿ ಪರೀಕ್ಷೆ!

IND vs AUS: Team India practice session, Rohit Sharma & Co practice with 10 spinners at Nagpur

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ದಿನಗಣನೆ ಆರಂಭವಾಗಿದ್ದು ಟೀಮ್ ಇಂಡಿಯಾ ಆಟಗಾರರು ನಾಗ್ಪುರದಲ್ಲಿ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಭಾರತದಲ್ಲಿ ನಡೆಯಲಿರುವ ಈ ಟೆಸ್ಟ್ ಪಂದ್ಯದಲ್ಲಿ ಸ್ಪಿನ್ನರ್‌ಗಳು ಮೇಲುಗೈ ಸಾಧಿಸುವ ಸಾಧ್ಯತೆಯಿರುವ ಕಾರಣ ಆಸ್ಟ್ರೇಲಿಯಾ ಆಟಗಾರರಿಗೆ ಮಾತ್ರವಲ್ಲದೆ ಭಾರತ ತಂಡದ ಆಟಗಾರರಿಗೆ ಇದು ಸವಾಲಾಗುವ ಸಾಧ್ಯತೆಯಿದೆ. ಹೀಗಾಗಿ ಟೀಮ್ ಇಂಡಿಯಾ ಆಟಗಾರರಿಗೆ ಕೋಚ್ ರಾಹುಲ್ ದ್ರಾವಿಡ್ ಸ್ಪಿನ್ ಸವಾಲು ಎದುರಿಸಲು ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ.

ಈಗಿನ ಭಾರತ ತಂಡದ ಆಟಗಾರರು ಸ್ಪಿನ್ ವಿರುದ್ಧ ಹೆಚ್ಚಿನ ಕೌಶಲ್ಯ ಹೊಂದಿಲ್ಲ ಎಂಬ ಆಪಾದನೆಗಳಿವೆ. ಅದಕ್ಕೆ ಪೂರಕವಾಗಿ ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿಯೂ ಭಾರತದ ಪ್ರಮುಖ ಬ್ಯಾಟರ್‌ಗಳು ಸ್ಪಿನ್ನರ್‌ಗಳ ವಿರುದ್ಧ ಪರದಾಡಿರುವುದು ಸ್ಪಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಕೋಚ್ ರಾಹುಲ್ ದ್ರಾವಿಡ್ ಈ ವಿಚಾರವಾಗಿ ಆಸ್ಟ್ರೇಲಿಯಾ ವಿರುದ್ಧದ ಸರಣಿಗೂ ಮುನ್ನ ಭಾರತ ತಂಡವನ್ನು ಸ್ಪಿನ್ನರ್‌ಗಳ ವಿರುದ್ಧದ ಸೆಣೆಸಾಟಕ್ಕೆ ಸಿದ್ಧಗೊಳಿಸುತ್ತಿದ್ದಾರೆ.

Ind Vs Aus Test: ಟೆಸ್ಟ್ ಸರಣಿಗೆ ಈ ರೀತಿ ಪಿಚ್ ಬೇಕು ಎಂದು ಕ್ಯುರೇಟರ್‌ಗಳಿಗೆ ಮನವಿ ಮಾಡಿದ ದ್ರಾವಿಡ್ ಮತ್ತು ರೋಹಿತ್ ಶರ್ಮಾInd Vs Aus Test: ಟೆಸ್ಟ್ ಸರಣಿಗೆ ಈ ರೀತಿ ಪಿಚ್ ಬೇಕು ಎಂದು ಕ್ಯುರೇಟರ್‌ಗಳಿಗೆ ಮನವಿ ಮಾಡಿದ ದ್ರಾವಿಡ್ ಮತ್ತು ರೋಹಿತ್ ಶರ್ಮಾ

ಭಾರತ ಪ್ರವಾಸಕ್ಕಾಗಿ ಆಸ್ಟ್ರೇಲಿಯಾ ತಂಡ ನಥನ್ ಲಿಯಾನ್ ನೇತೃತ್ವದಲ್ಲಿ ಬಲಿಷ್ಠ ಸ್ಪಿನ್ನರ್‌ಗಳ ಪಡೆಯೊಂದಿಗೆ ಭಾರತ ಪ್ರವಾಸ ಕೈಗೊಂಡಿದೆ. ಹೀಗಾಗಿ ಈ ತಂಡದ ವಿರುದ್ಧ ಭಾರತದ ದಾಂಡಿಗರು ಹಿನ್ನಡೆ ಅನುಭವಿಸದಿರಲು ಸೂಕ್ತ ಅಭ್ಯಾಸದ ಅಗತ್ಯವನ್ನು ಮನಗಂಡಿರುವ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ದೊಡ್ಡ ಸ್ಪಿನ್ನರ್‌ಗಳ ಪಡೆಯನ್ನು ಸಿದ್ಧಪಡಿಸಿಕೊಂಡಿದ್ದು ಅವರ ವಿರುದ್ಧ ಸಿದ್ಧತೆ ನಡೆಸುತ್ತಿದೆ. ನಾಗ್ಪುರದಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತದ ಆಟಗಾರರು ಹತ್ತು ಸ್ಪಿನ್ನರ್‌ಗಳ ವಿರುದ್ಧ ಅಭ್ಯಾಸವನ್ನು ನಡೆಸಲಿದೆ.

ಆಸ್ಟ್ರೇಲಿಯಾದ ನಾಥನ್ ಲಿಯಾನ್ ಹಾಗೂ ಬಳಗವನ್ನು ಎದುರಿಸಲು ಈಗಾಗಲೇ ವಾಶಿಂಗ್ಟನ್ ಸುಂದರ್, ರಾಹುಲ್ ಚಹರ್, ಸಾಯಿ ಕಿಶೋರ್ ಮತ್ತು ಸೌರಭ್ ಕುಮಾರ್ ನೆಟ್ ಬೌಲರ್‌ಗಳಾಗಿ ತಂಡಕ್ಕೆ ಸೇರ್ಪಡೆಯಾದ ಬಳಿಕ ಮತ್ತಿಬ್ಬರು ಸ್ಪಿನ್ನರ್‌ಗಳು ನೆಟ್ ಬೌಲರ್‌ಗಳಾಗಿ ಸೇರಿಕೊಳ್ಳಲು ಸಿದ್ಧವಾಗಿದ್ದಾರೆ. ಜಯಂತ್ ಯಾದವ್ ಹಾಗೂ ಪುಲ್ಕಿಟ್ ನರಾಂಗ್ ಕೂಡ ನೆಟ್ ಸ್ಪಿನ್ನರ್‌ಗಳಾಗಿ ಭಾರತೀಯ ಸ್ಕ್ವಾಡ್ ಸೇರಿಕೊಂಡಿದ್ದು ಭಾರತದ ಸಿದ್ಧತೆಗೆ ಸಾಥ್ ನೀಡಲಿದ್ದಾರೆ.

ಗೆದ್ದ ಜಯ್ ಶಾ ಹಠ, ಪಾಕ್‌ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರಗೆದ್ದ ಜಯ್ ಶಾ ಹಠ, ಪಾಕ್‌ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ

ಭಾರತದ ಕ್ಯಾಂಪ್‌ನಲ್ಲಿ 10 ಸ್ಪಿನ್ನರ್‌ಗಳು: ಈ ಮೂಲಕ ಸದ್ಯ ಟೀಮ್ ಇಂಡಿಯಾದ ಕ್ಯಂಪ್‌ನಲ್ಲಿ 10 ಸ್ಪಿನ್ನರ್‌ಗಳು ಇದ್ದು ಭರ್ಜರಿಯಾಗಿ ಸಿದ್ಧತೆ ನಡೆಸುತ್ತಿದ್ದಾರೆ.

ಭಾರತದ ಕ್ಯಾಂಪ್‌ನಲ್ಲಿರುವ ಸ್ಪಿನ್ನರ್‌ಗಳು:
ರವಿಚಂದ್ರನ್ ಅಶ್ವಿನ್ (ಆಫ್ ಸ್ಪಿನ್ನರ್)
ರವೀಂದ್ರ ಜಡೇಜಾ (ಎಡಗೈ ಸ್ಪಿನ್ನರ್)
ಅಕ್ಷರ್ ಪಟೇಲ್ (ಎಡಗೈ ಸ್ಪಿನ್ನರ್)
ಕುಲದೀಪ್ ಯಾದವ್ (ಲೆಗ್ ಸ್ಪಿನ್ನರ್)
ಸೌರಭ್ ಕುಮಾರ್ (ಎಡಗೈ ಸ್ಪಿನ್ನರ್)
ಜಯಂತ್ ಯಾದವ್ (ಆಫ್ ಸ್ಪಿನ್ನರ್)
ಪುಲ್ಕಿತ್ ನಾರಂಗ್ (ಆಫ್ ಸ್ಪಿನ್ನರ್)
ಸಾಯಿ ಕಿಶೋರ್ (ಎಡಗೈ ಸ್ಪಿನ್ನರ್)
ರಾಹುಲ್ ಚಹಾರ್ (ಲೆಗ್ ಸ್ಪಿನ್ನರ್)
ವಾಷಿಂಗ್ಟನ್ ಸುಂದರ್ (ಆಫ್ ಸ್ಪಿನ್ನರ್)

Story first published: Sunday, February 5, 2023, 10:13 [IST]
Other articles published on Feb 5, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X