ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs Ban Test: ಆಡುವ ಬಳಗದಲ್ಲಿ ಅವಕಾಶ ಪಡೆಯದ ಮೂವರು ನತದೃಷ್ಟ ಆಟಗಾರರು

Ind vs Ban 1st Test: These 3 Indian Players May Not Get Chance To Play In Bangladesh Test Series

ಡಿಸೆಂಬರ್ 14 ರಂದು ಬುಧವಾರ ಭಾರತ-ಬಾಂಗ್ಲಾದೇಶ ಟೆಸ್ಟ್ ಸರಣಿಯ ಮೊದಲನೇ ಪಂದ್ಯ ಆರಂಭವಾಗಲಿದೆ. ಛತ್ತೋಗ್ರಾಮ್‌ನಲ್ಲಿ ಮೊದಲ ಟೆಸ್ಟ್ ನಡೆಯಲಿದ್ದು, ಭಾರತ ತಂಡದ ಆಟಗಾರರು ಈಗಾಗಲೇ ಭರ್ಜರಿ ಅಭ್ಯಾಸ ಮಾಡಿದ್ದಾರೆ.

ನಾಯಕ ರೋಹಿತ್ ಶರ್ಮಾ ಏಕದಿನ ಸರಣಿಯ ಎರಡನೇ ಪಂದ್ಯದ ವೇಳೆ ಗಾಯಗೊಂಡ ನಂತರ ಅವರು ಮೂರನೇ ಏಕದಿನ ಮತ್ತು ಟೆಸ್ಟ್ ಸರಣಿಯಿಂದ ಹೊರಬಿದ್ದರು. ಉಪನಾಯಕ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸುವ ಹೊಣೆ ಹೊತ್ತಿದ್ದಾರೆ.

ಭಾರತ ತಂಡಕ್ಕೆ ಶುಭಮನ್ ಗಿಲ್ ವಾಪಸಾಗಿದ್ದು, ಕೆಎಲ್ ರಾಹುಲ್ ಜೊತೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಅನುಭವಿಗಳಾದ ಚೇತೇಶ್ವರ ಪೂಜಾರಾ, ರವಿಚಂದ್ರನ್ ಅಶ್ವಿನ್ ಕೂಡ ಆಡುವ ಬಳಗದಲ್ಲಿ ಅವಕಾಶ ಪಡೆಯಲಿದ್ದಾರೆ.

ಇಂಗ್ಲೆಂಡ್ ಟೆಸ್ಟ್ ಶೈಲಿ ಬಗ್ಗೆ ರಾಹುಲ್ ಪ್ರಶಂಸೆ: ಭಾರತದಿಂದಲೂ ಆಕ್ರಮಣಕಾರಿ ಆಟದ ಬಗ್ಗೆ ಸುಳಿವು!ಇಂಗ್ಲೆಂಡ್ ಟೆಸ್ಟ್ ಶೈಲಿ ಬಗ್ಗೆ ರಾಹುಲ್ ಪ್ರಶಂಸೆ: ಭಾರತದಿಂದಲೂ ಆಕ್ರಮಣಕಾರಿ ಆಟದ ಬಗ್ಗೆ ಸುಳಿವು!

ವಿಶ್ವಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯುವ ದೃಷ್ಟಿಯಿಂದ ಭಾರತಕ್ಕೆ ಇದು ಪ್ರಮುಖ ಸರಣಿಯಾಗಿರುವುದರಿಂದ ಅನುಭವಿ ಆಟಗಾರರಿಗೆ ಅವಕಾಶ ನೀಡಲು ಉದ್ದೇಶಿಸಿದೆ. ಎರಡೂ ಪಂದ್ಯಗಳಲ್ಲಿ ಭಾರತ ತಂಡ ಗೆಲುವು ಸಾಧಿಸುವ ವಿಶ್ವಾಸದಲ್ಲಿದೆ. ರಿಷಬ್ ಪಂತ್ ಕೂಡ ಈಗ ತಂಡವನ್ನು ಸೇರಿಕೊಂಡಿದ್ದಾರೆ. ತಂಡದ ಭಾಗವಾಗಿದ್ದರೂ, ಈ ಮೂವರು ಕ್ರಿಕೆಟಿಗರಿಗೆ ಆಡುವ ಬಳಗದಲ್ಲಿ ಅವಕಾಶ ಸಿಗುವುದು ಅನುಮಾನವಾಗಿದೆ.

ಆಯ್ಕೆಯಾದರೂ ಉನಾದ್ಕತ್‌ ಕಣಕ್ಕಿಳಿಯಲ್ಲ

ಆಯ್ಕೆಯಾದರೂ ಉನಾದ್ಕತ್‌ ಕಣಕ್ಕಿಳಿಯಲ್ಲ

2010 ರಲ್ಲಿ ಭಾರತ ತಂಡಕ್ಕಾಗಿ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದ ಜಯದೇವ್ ಉನಾದ್ಕತ್ 12 ವರ್ಷಗಳ ನಂತರ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ರಣಿಜಿ ಸೇರಿದಂತೆ ದೇಶೀಯ ಕ್ರಿಕೆಟ್‌ನಲ್ಲಿ ಅವರು ನೀಡಿದ ಉತ್ತಮ ಪ್ರದರ್ಶನವನ್ನು ಪರಿಗಣಿಸಿ ತಂಡಕ್ಕೆ ಆಯ್ಕೆ ಮಾಡಲಾಗಿದೆ.

ಎಡಗೈ ವೇಗದ ಬೌಲರ್ ದೇಶೀಯ ಕ್ರಿಕೆಟ್‌ನಲ್ಲಿ ಎಲ್ಲಾ ಮಾದರಿಯನ್ನು ಉತ್ತಮವಾಗಿ ಬೌಲಿಂಗ್ ಮಾಡಿದ್ದರು. ವಿಶೇಷವಾಗಿ ರಣಜಿ ಟ್ರೋಫಿಯಲ್ಲಿ, ಕಳೆದ ಕೆಲವು ಋತುಗಳಲ್ಲಿ ಅವರು ಪ್ರಮುಖ ವಿಕೆಟ್‌ ಟೇಕರ್ ಆಗಿದ್ದಾರೆ. ಭಾರತದ ಹಿರಿಯ ಬೌಲರ್ ಮೊಹಮ್ಮದ್ ಶಮಿ ಗಾಯಗೊಂಡು ಹೊರಬಿದ್ದ ನಂತರ ಅವರ ಸ್ಥಾನಕ್ಕೆ ಜಯದೇವ್ ಉನಾದ್ಕತ್ ಅವರಿಗೆ ಅವಕಾಶ ನೀಡಲಾಗಿದೆ.

ಆದರೆ, ತಂಡಕ್ಕೆ ಆಯ್ಕೆಯಾದರೂ ಕೂಡ ಜಯದೇವ್ ಉನಾದ್ಕತ್ ಆಡುವ ಬಳಗದಲ್ಲಿ ಅವಕಾಶ ಪಡೆಯುವುದು ಕಷ್ಟವಾಗಲಿದೆ. ಉಮೇಶ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್ ಮೊದಲ ಆಯ್ಕೆಯಾಗಿದ್ದು, ಶಾರ್ದೂಲ್ ಠಾಕೂರ್ ಆಲ್‌ರೌಂಡರ್ ಆಗಿ ಕಣಕ್ಕಿಳಿಯಲಿದ್ದಾರೆ. ಮೂವರು ವೇಗಿಗಳು ಇಬ್ಬರು ಸ್ಪಿನ್ನರ್ ತಂಡದಲ್ಲಿ ಸ್ಥಾನ ಪಡೆಯಲಿದ್ದು, ಉನಾದ್ಕತ್‌ಗೆ ಅವಕಾಶಕ್ಕಾಗಿ ಕಾಯಬೇಕಾಗಿದೆ.

ENG vs PAK 2nd Test: ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ವಿಶ್ವದ 3ನೇ ಆಟಗಾರ ಜೋ ರೂಟ್

ಪದಾರ್ಪಣೆ ಮಾಡಲು ಕಾಯಬೇಕಿದೆ ಭರತ್

ಪದಾರ್ಪಣೆ ಮಾಡಲು ಕಾಯಬೇಕಿದೆ ಭರತ್

ಬಾಂಗ್ಲಾದೇಶ ವಿರುದ್ಧದ ಎರಡು ಟೆಸ್ಟ್‌ಗಳ ಸರಣಿಯಲ್ಲಿ ಕೆಎಸ್ ಭರತ್ ಪದಾರ್ಪಣೆ ಮಾಡಬಹುದೆಂದು ಕೆಲವು ಚರ್ಚೆಗಳು ನಡೆದರೂ ಅವರು ಅದು ಈ ಸರಣಿಯಲ್ಲಿ ನನಸಾಗುವುದು ಕಷ್ಟ.

ರಿಷಬ್ ಪಂತ್‌ ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತಮ ಅಂಕಿ ಅಂಶಗಳನ್ನು ಹೊಂದಿರುವುದರಿಂದ ಕೆಎಸ್ ಭರತ್ ತಂಡಕ್ಕೆ ಆಯ್ಕೆಯಾಗುವುದು ಕಷ್ಟವಾಗಲಿದೆ. ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಮತ್ತು ಅಕ್ಷರ್ ಪಟೇಲ್ ಮಧ್ಯಮ ಕ್ರಮಾಂಕದಲ್ಲಿ ಆಡುವ ಪ್ರಮುಖ ಆಟಗಾರರಾಗಿದ್ದು, ಕೆಎಸ್‌ ಭರತ್‌ಗೆ ಅವಕಾಶ ಸಿಗುವುದಿಲ್ಲ ಎನ್ನಲಾಗಿದೆ.

ಸೈನಿಗೆ ಅವಕಾಶ ಸಿಗೋದೆ ಕಷ್ಟ

ಸೈನಿಗೆ ಅವಕಾಶ ಸಿಗೋದೆ ಕಷ್ಟ

ಭಾರತ ಟೆಸ್ಟ್ ತಂಡಕ್ಕೆ ತಡವಾಗಿ ಸೇರ್ಪಡೆಯಾಗಿರುವ ನವದೀಪ್ ಸೈನಿ, ಬಾಂಗ್ಲಾದೇಶ ಎ ತಂಡದ ವಿರುದ್ಧ ನಡೆದ ಎರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಅವರು ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಆರು ವಿಕೆಟ್‌ಗಳನ್ನು ಪಡೆದರು ಮತ್ತು ಎರಡನೇ ಪಂದ್ಯದಲ್ಲಿ ಅಜೇಯ ಅರ್ಧಶತಕವನ್ನು ಸಹ ಗಳಿಸಿ ಗಮನ ಸೆಳೆದರು.

ಆದರೂ, ಸೈನಿ ಬಾಂಗ್ಲಾದೇಶದ ವಿರುದ್ಧದ ಸರಣಿಯಲ್ಲಿ ಆಡುವ ಬಳಗ ಸೇರುವುದು ಕಷ್ಟ. ಅವರ ಪ್ರಥಮ ದರ್ಜೆಯ ಅಂಕಿ ಅಂಶಗಳು ಕೂಡ ಉತ್ತಮವಾಗಿಲ್ಲದ ಕಾರಣ, ಉನಾದ್ಕತ್ ಅವರನ್ನು ಮೀರಿ ಸೈನಿಗೆ ಅವಕಾಶ ನೀಡುವ ಬಗ್ಗೆ ತಂಡದ ಆಡಳಿತ ಮಂಡಳಿ ಚಿಂತೆ ಮಾಡುವುದಿಲ್ಲ.

Story first published: Monday, December 12, 2022, 22:02 [IST]
Other articles published on Dec 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X