ENG vs PAK 2nd Test: ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ವಿಶ್ವದ 3ನೇ ಆಟಗಾರ ಜೋ ರೂಟ್

ಇಂಗ್ಲೆಂಡ್‌ನ ವೇಗಿ ಮಾರ್ಕ್ ವುಡ್ ಮಾರಕ ಬೌಲಿಂಗ್ ಪ್ರದರ್ಶಿಸಿ ಪಾಕಿಸ್ತಾನದ 4 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಸೋಮವಾರ ಮುಲ್ತಾನ್‌ನಲ್ಲಿ ನಡೆದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ಗೆ 26 ರನ್‌ಗಳ ಭರ್ಜರಿ ಗೆಲುವು ತಂದುಕೊಟ್ಟರು ಮತ್ತು ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಅಂತರದ ಮುನ್ನಡೆ ಕಾಯ್ದುಕೊಂಡರು.

355 ರನ್‌ಗಳ ಸವಾಲಿನ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನವು ಊಟದ ನಂತರ ಸುಮಾರು 50 ನಿಮಿಷಗಳ ಆಟದ ನಂತರ 328 ರನ್‌ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ 26 ರನ್‌ಗಳ ಜಯ ಸಾಧಿಸಿತು.

ICC ತಿಂಗಳ ಆಟಗಾರ ಪ್ರಶಸ್ತಿ ಗೆದ್ದ ಜೋಸ್ ಬಟ್ಲರ್; ಮಹಿಳೆಯರ ವಿಭಾಗದಲ್ಲಿ ಸಿದ್ರಾ ಅಮೀನ್ ಆಯ್ಕೆICC ತಿಂಗಳ ಆಟಗಾರ ಪ್ರಶಸ್ತಿ ಗೆದ್ದ ಜೋಸ್ ಬಟ್ಲರ್; ಮಹಿಳೆಯರ ವಿಭಾಗದಲ್ಲಿ ಸಿದ್ರಾ ಅಮೀನ್ ಆಯ್ಕೆ

ರಾವಲ್ಪಿಂಡಿಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಸೊಂಟದ ನೋವಿನಿಂದಾಗಿ ಇಂಗ್ಲೆಂಡ್‌ನ 74 ರನ್‌ಗಳ ಗೆಲುವಿನ ಪಂದ್ಯದಿಂದ ವಂಚಿತರಾದ ಮಾರ್ಕ್ ವುಡ್, ಕೇವಲ 12 ಎಸೆತಗಳ ಅಂತರದಲ್ಲಿ ಮೊಹಮ್ಮದ್ ನವಾಜ್ (45) ಮತ್ತು ಸೌದ್ ಶಕೀಲ್ (94) ಅವರ ವಿಕೆಟ್‌ ಪಡೆಯುವ ಮೂಲಕ ಪಂದ್ಯವನ್ನು ಇಂಗ್ಲೆಂಡ್‌ನ ಪರವಾಗಿ ತಿರುಗಿಸಿದರು.

ಇದೇ ವೇಳೆ ಇಂಗ್ಲೆಂಡ್‌ನ ಮಾಜಿ ನಾಯಕ ಜೋ ರೂಟ್ ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್ ಮತ್ತು 50 ವಿಕೆಟ್ ಪಡೆದ ವಿಶ್ವದ ಮೂರನೇ ಕ್ರಿಕೆಟಿಗರಾದರು. ಪಾಕಿಸ್ತಾನ ವಿರುದ್ಧ ಮುಲ್ತಾನ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನಲ್ಲಿ ಅವರು ಈ ಸಾಧನೆ ಮಾಡಿದರು.

ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಾಕಿಸ್ತಾನದ ಎರಡನೇ ಇನ್ನಿಂಗ್ಸ್‌ನ 70ನೇ ಓವರ್‌ನಲ್ಲಿ ಫಹೀಮ್ ಅಶ್ರಫ್ ಅವರನ್ನು ಔಟ್ ಮಾಡಿದಾಗ ಜೋ ರೂಟ್ ಈ ಮೈಲಿಗಲ್ಲು ಸ್ಥಾಪಿಸಿದರು. ಆಫ್ ಸ್ಪಿನ್ನರ್‌ ಜೋ ರೂಟ್ ಎಸೆದ ಫುಲ್ ಟಾಸ್ ಬಾಲ್ ಅನ್ನು ಫಹೀಮ್ ತಿವಿಯಲು ಪ್ರಯತ್ನಿಸಿದರು. ಚೆಂಡು ಬ್ಯಾಟ್‌ನ ಅಂಚನ್ನು ಸವರಿ ಸ್ಲಿಪ್‌ನಲ್ಲಿ ನಿಂತಿದ್ದ ಝಾಕ್ ಕ್ರಾಲಿಗೆ ಸರಳ ಕ್ಯಾಚ್ ನೀಡಿದರು.

ಬಿಸಿಸಿಐನ ಕೇಂದ್ರ ಒಪ್ಪಂದ ಕಳೆದುಕೊಳ್ಳುವ ಸಂದಿಗ್ಧತೆಯಲ್ಲಿ ಈ ಆಟಗಾರರು; ಸೂರ್ಯ, ಗಿಲ್‌ಗೆ ಬಡ್ತಿಬಿಸಿಸಿಐನ ಕೇಂದ್ರ ಒಪ್ಪಂದ ಕಳೆದುಕೊಳ್ಳುವ ಸಂದಿಗ್ಧತೆಯಲ್ಲಿ ಈ ಆಟಗಾರರು; ಸೂರ್ಯ, ಗಿಲ್‌ಗೆ ಬಡ್ತಿ

ಈ ಮೂಲಕ ಜೋ ರೂಟ್ ದಕ್ಷಿಣ ಆಫ್ರಿಕಾದ ಮಾಜಿ ಆಲ್‌ರೌಂಡರ್ ಜಾಕ್ವೆಸ್ ಕಾಲಿಸ್ ಮತ್ತು ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ವಾ 10,000 ರನ್ ಗಳಿಸಿದ ಮತ್ತು ಸುದೀರ್ಘ ಸ್ವರೂಪದಲ್ಲಿ 50 ವಿಕೆಟ್‌ಗಳನ್ನು ಗಳಿಸಿದ ಆಟಗಾರರ ಪಟ್ಟಿ ಸೇರಿದರು.

ಜೋ ರೂಟ್ ಪ್ರಸ್ತುತ 10,629 ಟೆಸ್ಟ್ ರನ್ ಮತ್ತು 50 ವಿಕೆಟ್‌ಗಳನ್ನು ಹೊಂದಿದ್ದಾರೆ. ಸ್ಟೀವ್ ವಾ 10,927 ರನ್ ಮತ್ತು 92 ವಿಕೆಟ್‌ಗಳನ್ನು ಪಡೆದಿದ್ದರೆ, ಜಾಕ್ವೆಸ್ ಕಾಲಿಸ್ 13,289 ರನ್ ಮತ್ತು 292 ವಿಕೆಟ್‌ಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Monday, December 12, 2022, 19:43 [IST]
Other articles published on Dec 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X