IND vs BAN: ಪತ್ನಿಯಿಂದಲೇ ಟ್ರೋಲ್ ಆದ ಭಾರತ ತಂಡದ ನಾಯಕ ರೋಹಿತ್ ಶರ್ಮಾ

ನ್ಯೂಜಿಲೆಂಡ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯ ನಂತರ ಭಾರತ ತಂಡ ಮೂರು ಪಂದ್ಯಗಳ ಏಕದಿನ ಮತ್ತು ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಬಾಂಗ್ಲಾದೇಶ ಪ್ರವಾಸ ಕೈಗೊಂಡಿದೆ.

ಭಾನುವಾರ(ಡಿಸೆಂಬರ್ 4) ಮೊದಲ ಏಕದಿನ ಪಂದ್ಯದಲ್ಲಿ ಎರಡು ತಂಡಗಳು ಮುಖಾಮುಖಿಯಾಗಲಿದ್ದು, ನ್ಯೂಜಿಲೆಂಡ್ ವಿರುದ್ಧದ ಸರಣಿಯಿಂದ ವಿಶ್ರಾಂತಿ ಪಡೆದಿದ್ದ ರೋಹಿತ್ ಶರ್ಮಾ ಭಾರತ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ.

ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಏಕದಿನ ಸರಣಿಯ ಮೊದಲ ಪಂದ್ಯಕ್ಕೆ ಮುನ್ನ ಭಾರತ ಕ್ರಿಕೆಟ್ ತಂಡವು ಬಾಂಗ್ಲಾದೇಶದಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದೆ.

IPL 2023: ಈ 5 ಐಪಿಎಲ್ ತಂಡದ ಕೋಚ್‌ಗಳು ಎಂಎಸ್ ಧೋನಿ ನಾಯಕತ್ವದಲ್ಲಿ ಆಡಿದವರುIPL 2023: ಈ 5 ಐಪಿಎಲ್ ತಂಡದ ಕೋಚ್‌ಗಳು ಎಂಎಸ್ ಧೋನಿ ನಾಯಕತ್ವದಲ್ಲಿ ಆಡಿದವರು

ಇದೇ ವೇಳೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಭ್ಯಾಸ ಅವಧಿಯ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲಿ ಅವರ ಪತ್ನಿ ರಿತಿಕಾ ಸಜ್ದೆಹ್ ಅವರು ಹಾಕಿದ ಆ ಕಾಮೆಂಟ್‌ನಿಂದ ಭಾರಿ ಟ್ರೋಲ್ ಆಗಿದ್ದಾರೆ.

ಮೂರನೇ ಫೋಟೋ ಅಷ್ಟೊಂದು ಆಕ್ಷನ್-ಪ್ಯಾಕ್ ಆಗಿಲ್ಲ

ಮೂರನೇ ಫೋಟೋ ಅಷ್ಟೊಂದು ಆಕ್ಷನ್-ಪ್ಯಾಕ್ ಆಗಿಲ್ಲ

'ಬ್ಯಾಕ್ ಇನ್ ಆಕ್ಷನ್' ಎಂಬ ಶೀರ್ಷಿಕೆಯೊಂದಿಗೆ ಅಭ್ಯಾಸ ಅವಧಿಯ ನಾಲ್ಕು ಫೋಟೋಗಳನ್ನು ರೋಹಿತ್ ಶರ್ಮಾ ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಅವರು ಬ್ಯಾಟಿಂಗ್, ಫುಟ್ಬಾಲ್ ಆಡುವುದು, ಸಹ ಆಟಗಾರರೊಂದಿಗೆ ಆನಂದಿಸುವುದು ಮತ್ತು ವಿಶ್ರಾಂತಿ ಪಡೆಯುವುದು ಇವೆ. ರೋಹಿತ್ ಶರ್ಮಾ ವಿಶ್ರಾಂತಿ ಪಡೆಯುತ್ತಿರುವ ಮೂರನೇ ಫೋಟೋವನ್ನು ನೋಡಿದ ಅವರ ಪತ್ನಿ ರಿತಿಕಾ ಸಜ್ದೆಹ್, 'ಮೂರನೇ ಫೋಟೋ ಅಷ್ಟೊಂದು ಆಕ್ಷನ್-ಪ್ಯಾಕ್ ಆಗಿಲ್ಲ' ಎಂದು ಕಾಮೆಂಟ್ ಮಾಡಿದ್ದಾರೆ. ಇದು ಈಗ ಸಾಮಾಜಿಲ ಜಾಲತಾಣದಲ್ಲಿ ಟ್ರೋಲ್‌ಗೊಳಗಾಗಿದೆ.

2021 ಮತ್ತು 2022ರಲ್ಲಿ ಟಿ20 ವಿಶ್ವಕಪ್‌ ಪಂದ್ಯಾವಳಿಗಳು ನಡೆದ ಕಾರಣ ಏಕದಿನ ಕ್ರಿಕೆಟ್‌ಗೆ ಬಹಳ ಕಡಿಮೆ ಗಮನ ಹರಿಸಿದ್ದರು. ಆದರೆ ಇದೀಗ 2023ರ ಏಕದಿನ ವಿಶ್ವಕಪ್ ಟೂರ್ನಿಗೆ ಕೆಲವೇ ತಿಂಗಳುಗಳು ಬಾಕಿ ಇವೆ. ಹೀಗಾಗಿ ಏಕದಿನ ಸ್ವರೂಪವು ವಿಶ್ವದ ಎಲ್ಲ ತಂಡಗಳಿಗೆ ಮತ್ತು ಅಭಿಮಾನಿಗಳಿಗೆ ಕ್ರೇಜ್ ಹೆಚ್ಚಿಸುವಂತೆ ಮಾಡಿದೆ.

ಭಾರತ ತಂಡಕ್ಕೆ ಮರಳಿದ ಕೊಹ್ಲಿ, ರೋಹಿತ್ ಮತ್ತು ರಾಹುಲ್

ಭಾರತ ತಂಡಕ್ಕೆ ಮರಳಿದ ಕೊಹ್ಲಿ, ರೋಹಿತ್ ಮತ್ತು ರಾಹುಲ್

ಭಾರತೀಯ ಯುವ ತಂಡವು ನ್ಯೂಜಿಲೆಂಡ್ ಪ್ರವಾಸದಲ್ಲಿ ಸರಣಿಯನ್ನು 1-0 ಅಂತರದಿಂದ ಸೋತ ನಂತರ, ತಂಡದ ಸಂಯೋಜನೆಯ ಬಗ್ಗೆ ಟೀಕೆಗೆ ಗುರಿಯಾಗಿತ್ತು. ಸಂಜು ಸ್ಯಾಮ್ಸನ್ ಬದಲಿಗೆ ರಿಷಭ್ ಪಂತ್‌ಗೆ ಅವಕಾಶ ನಿಡುತ್ತಿರುವುದಕ್ಕೆ ಅಭಿಮಾನಿಗಳು ಕೋಪಗೊಂಡಿದ್ದರು.

ಇದೀಗ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರು ಢಾಕಾದ ಮೀರ್‌ಪುರದಲ್ಲಿರುವ ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆಯಲಿರುವ ಏಕದಿನ ಸರಣಿಯ ಆರಂಭಿಕ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ಸವಾಲನ್ನು ಎದುರಿಸಲು ಭಾರತ ತಂಡಕ್ಕೆ ಮತ್ತೆ ಮರಳಿದ್ದಾರೆ.

ಬಾಂಗ್ಲಾದೇಶ ಏಕದಿನ ಸರಣಿಗೆ ಭಾರತ ತಂಡ

ಬಾಂಗ್ಲಾದೇಶ ಏಕದಿನ ಸರಣಿಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಶಹಬಾಜ್ ಅಹ್ಮದ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ದೀಪಕ್ ಚಾಹರ್, ಕುಲದೀಪ್ ಸೇನ್, ಉಮ್ರಾನ್ ಮಲಿಕ್.

For Quick Alerts
ALLOW NOTIFICATIONS
For Daily Alerts
Story first published: Saturday, December 3, 2022, 19:53 [IST]
Other articles published on Dec 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X