ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs Ban Test : ಸೋಲಿನ ಭೀತಿಯಲ್ಲಿರುವ ಬಾಂಗ್ಲಾದೇಶಕ್ಕೆ ಆಘಾತ, 2ನೇ ಟೆಸ್ಟ್‌ನಿಂದ ಪ್ರಮುಖ ಆಟಗಾರರು ಹೊರಕ್ಕೆ!

Ind vs Ban Test : Skipper Shakib Al Hasan And Pacer Ebadot Hossain Ruled Out For 2nd Test Vs India

ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲಿನ ಭೀತಿಯಲ್ಲಿರುವ ಬಾಂಗ್ಲಾದೇಶ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಗಾಯಗೊಂಡಿರುವ ನಾಯಕ ಶಕೀಬ್ ಅಲ್ ಹಸನ್ ಮತ್ತು ವೇಗಿ ಎಬಾಡಟ್ ಹೊಸೈನ್ ಎರಡನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ.

ಛತ್ತೋಗ್ರಾಮ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಇವರಿಬ್ಬರೂ ಆಡುತ್ತಿದ್ದರು, ಎರಡನೇ ಇನ್ನಿಂಗ್ಸ್‌ನಲ್ಲಿ ಇಬ್ಬರಿಗೂ ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ. ಗಾಯದ ಸಮಸ್ಯೆಯಿಂದಾಗಿ ಮಿರ್‌ಪುರದಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ಇವರಿಬ್ಬರೂ ಅಲಭ್ಯವಾಗಿರುವುದು ತಂಡಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ.

IPL 2023: ಮಿನಿ ಹರಾಜಿನಲ್ಲಿ ಈ 3 ಆಟಗಾರರ ಮೇಲೆ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಕಣ್ಣುIPL 2023: ಮಿನಿ ಹರಾಜಿನಲ್ಲಿ ಈ 3 ಆಟಗಾರರ ಮೇಲೆ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಕಣ್ಣು

ಎರಡನೇ ಏಕದಿನ ಪಂದ್ಯದ ವೇಳೆ ವೇಗಿ ಉಮ್ರಾನ್ ಮಲಿಕ್ ಬೌಲಿಂಗ್‌ನಲ್ಲಿ ಗಾಯಗೊಂಡಿದ್ದ ಶಕೀಬ್ ಅಲ್ ಹಸನ್, ಪಕ್ಕೆಲುಬು ಮತ್ತು ಭುಜದ ಸಮಸ್ಯೆಯಿಂದ ಬಳಲುತ್ತಿದ್ದರೂ ಆಡುವುದನ್ನು ಮುಂದುವರೆಸಿದ್ದರು. ಮೊದಲನೇ ಟೆಸ್ಟ್ ಆರಂಭಕ್ಕೆ ಮುನ್ನಾದಿನ ಅವರು ಆಸ್ಪತ್ರೆಗೂ ಕೂಡ ದಾಖಲಾಗಿದ್ದರು. ಆದರೂ, ಮೊದಲ ಪಂದ್ಯದಲ್ಲಿ ಅವರು ಆಡುತ್ತಿದ್ದಾರೆ.

ಶಕೀಬ್ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಆಡದಿರಲು ನಿರ್ಧರಿಸಿದ್ದರು, ಆದರೆ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಅಧ್ಯಕ್ಷ ಜಹುರ್ ಅಹ್ಮದ್ ಒತ್ತಡದಿಂದಾಗಿ ಕೊನೆಯ ನಿಮಿಷದಲ್ಲಿ ಟೆಸ್ಟ್ ಪಂದ್ಯದಲ್ಲಿ ಆಡಲು ಒಪ್ಪಿಕೊಳ್ಳಬೇಕಾಯಿತು ಎಂದು ಕ್ರಿಕ್‌ಬಜ್ ವರದಿ ಮಾಡಿದೆ.

ಎರಡನೇ ಟೆಸ್ಟ್ ಆಡಲ್ಲ ಎಂದಿರುವ ಶಕೀಬ್

ಎರಡನೇ ಟೆಸ್ಟ್ ಆಡಲ್ಲ ಎಂದಿರುವ ಶಕೀಬ್

ಮೊದಲ ಟೆಸ್ಟ್ ಪಂದ್ಯದಲ್ಲಿ ಮಾತ್ರ ಬ್ಯಾಟಿಂಗ್ ಮಾಡಲು ಸಿದ್ಧವಿರುವುದಾಗಿ ಟೆಸ್ಟ್ ತಂಡದ ನಾಯಕ ಶಕೀಬ್ ಅಲ್ ಹಸನ್ ತಂಡದ ಮ್ಯಾನೇಜ್‌ಮೆಂಟ್‌ಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಶಕೀಬ್ ಹಾಯದ ಸಮಸ್ಯೆ ತಂಡದ ಮೇಲೆ ಪ್ರಭಾವ ಬೀರಿದೆ, ಶಕೀಬ್ ಬೌಲಿಂಗ್ ಮಾಡಲು ಸಾಧ್ಯವಾಗದ ಕಾರಣ ತೈಜುಲ್ ಇಸ್ಲಾಮ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಯಿತು.

ಬ್ಯಾಟಿಂಗ್ ಕ್ರಮಾಂಕದಲ್ಲಿ ಕೂಡ ಬದಲಾವಣೆ ಮಾಡಲಾಯಿತು. ತೈಜುಲ್‌ಗೆ ಅವಕಾಶ ನೀಡಿದ ಕಾರಣ ಮಹಮ್ಮದುಲ್ ಹಸನ್ ಆಡುವ ಬಳಗದಿಂದ ಹೊರಗುಳಿದರು. ನಜ್ಮುಲ್ ಹಸನ್ ಆರಂಭಿಕರಾಗಿ ಕಣಕ್ಕಿಳಿಯಬೇಕಾಯಿತು. ಲಿಟ್ಟನ್ ದಾಸ್ ಅವರ ಟೆಸ್ಟ್ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ತಂಡದ ನಿರ್ವಹಣೆಯಿಂದ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರು.

ನನಗೆ ಒತ್ತಡದ ಅನುಭವವಾಗಲಿಲ್ಲ: 5 ವಿಕೆಟ್ ಗೊಂಚಲು ಪಡೆದ ಬಳಿಕ ಕುಲ್ದೀಪ್ ಯಾದವ್ ಮಾತು

ಎಬಾಡೊಟ್ ಹೊಸೈನ್ ಕೂಡ ಹೊರಕ್ಕೆ

ಎಬಾಡೊಟ್ ಹೊಸೈನ್ ಕೂಡ ಹೊರಕ್ಕೆ

ಒಂದೆಡೆ ಶಕೀಬ್ ಅಲ್ ಹಸನ್ ಗಾಯಗೊಂಡರೆ, ಮತ್ತೊಂದು ಕಡೆ ತಂಡದ ಪ್ರಮುಖ ವೇಗದ ಬೌಲರ್ ಎಬಾಡೊಟ್ ಹೊಸೈನ್ ಕೂಡ ಗಾಯಗೊಂಡರು. ಮೊದಲ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡಿದ್ದ ಹೊಸೈನ್, ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡಲಿಲ್ಲ. ಇದು ತಂಡದ ತಲೆನೋವನ್ನು ಹೆಚ್ಚು ಮಾಡಿತು.

ಮೊದಲ ಟೆಸ್ಟ್ ಪಂದ್ಯದಲ್ಲಿ ಈಗಾಗಲೇ ಸೋಲುವ ಭೀತಿಯನ್ನು ಹೆದರಿಸುತ್ತಿರುವ ಬಾಂಗ್ಲಾದೇಶ ತಂಡಕ್ಕೆ ಎರಡನೇ ಟೆಸ್ಟ್‌ ಪಂದ್ಯಕ್ಕೆ ಪ್ರಮುಖ ಆಟಗಾರರು ಅಲಭ್ಯವಾಗಿರುವುದು ಸಂಕಷ್ಟಕ್ಕೆ ದೂಡಿದೆ. ಇವರಿಗೆ ಬದಲೀ ಆಟಗಾರರನ್ನು ಬಿಸಿಬಿ ಹೆಸರಿಸುವ ಸಾಧ್ಯತೆ ಇದೆ.

ಮೊದಲನೇ ಟೆಸ್ಟ್ ಸೋಲುವ ಭೀತಿಯಲ್ಲಿ ಬಾಂಗ್ಲಾದೇಶ

ಮೊದಲನೇ ಟೆಸ್ಟ್ ಸೋಲುವ ಭೀತಿಯಲ್ಲಿ ಬಾಂಗ್ಲಾದೇಶ

ಛತ್ತೋಗ್ರಾಮ್‌ನಲ್ಲಿ ನಡೆಯುತ್ತಿರುವ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶಕ್ಕೆ ಸೋಲಿನ ಭಯ ಕಾಡುತ್ತಿದೆ. ಭಾರತ ತಂಡ ಮೊದಲನೇ ಇನ್ನಿಂಗ್ಸ್‌ನಲ್ಲಿ 404 ರನ್‌ಗಳಿಗೆ ಆಲೌಟ್ ಆಗಿತ್ತು. ಆದರೆ, ಬಾಂಗ್ಲಾದೇಶ ಮೊದಲನೇ ಇನ್ನಿಂಗ್ಸ್‌ನಲ್ಲಿ ಕೇವಲ 150 ರನ್‌ಗಳಿಗೆ ಆಲೌಟ್ ಆಗುವ ಮೂಲಕ, 254 ರನ್‌ಗಳ ಭಾರಿ ಹಿನ್ನಡೆ ಅನುಭವಿಸಿತ್ತು.

ಭಾರತ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ 2 ವಿಕೆಟ್ ಕಳೆದುಕೊಂಡು 258 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಳ್ಳುವ ಮೂಲಕ ಒಟ್ಟು 513 ರನ್‌ಗಳ ಬೃಹತ್ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಿರುವ ಬಾಂಗ್ಲಾದೇಶ 3ನೇ ದಿನದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 42 ರನ್ ಗಳಿಸಿದೆ. ಇನ್ನೂ ಎರಡು ದಿನಗಳ ಆಟ ಬಾಕಿಯಿದ್ದು, ಬಾಂಗ್ಲಾದೇಶಕ್ಕೆ ಸೋಲಿನ ಭೀತಿ ಎದುರಾಗಿದೆ.

Story first published: Saturday, December 17, 2022, 8:45 [IST]
Other articles published on Dec 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X