ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್‌ನಲ್ಲಿ ಭಾರತ ಗೆಲ್ಲಬೇಕಾದರೆ ಈ ಮೂವರು ಮಿಂಚಲೇಬೇಕು!

Ind vs Eng: 3 Indian cricketers should step up to India win one-off Test against England

ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಪಂದ್ಯಕ್ಕೆ ದಿನಗಣನೆ ಆರಂಭವಾಗಿದೆ. ಕಳೆದ ವರ್ಷ ನಡೆಯಬೇಕಿದ್ದ ಈ ಅಂತಿಮ ಪಂದ್ಯ ಕೊರೊನಾವೈರಸ್ ಕಾರಣದಿಂದಾಗಿ ಮುಂದೂಡಿಕೆಯಾಗಿತ್ತು. ಈಗಾಗಲೇ ಸರಣಿಯಲ್ಲಿ 2-1 ಅಂತರದಿಂದ ಭಾರತ ಮುನ್ನಡೆ ಸಾಧಿಸಿದ್ದು ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದೆ.

ಇನ್ನು ಈ ಒಂದು ವರ್ಷದ ಅಂತರದಲ್ಲಿ ಎರಡು ತಂಡಗಳಲ್ಲಿಯೂ ಸಾಕಷ್ಟು ಪ್ರಮುಖ ಬದದಲಾವಣೆಗಳಾಗಿದೆ. ಎರಡು ತಂಡದ ನಾಯಕರು ಹಾಗೂ ಕೋಚ್‌ಗಳು ಬದಲಾಗಿದ್ದಾರೆ. ಕಳೆದ ವರ್ಷ ಭಾರತ ತಂಡದ ನಾಯಕನಾಗಿದ್ದ ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದಿದ್ದು ರೋಹಿತ್ ಶರ್ಮಾ ನಾಯಕನಾಗಿದ್ದಾರೆ. ಇನ್ನು ಕೋಚ್ ಆಗಿದ್ದ ರವಿ ಶಾಸ್ತ್ರಿ ಕಾರ್ಯಾವಧಿ ಅಂತ್ಯವಾಗಿದ್ದು ರಾಹುಲ್ ದ್ರಾವಿಡ್ ಕೋಚ್ ಆಗಿದ್ದಾರೆ. ಇನ್ನು ಇಂಗ್ಲೆಂಡ್ ತಂಡದ ನಾಯಕನಾಗಿದ್ದ ಜೋ ರೂಟ್ ಕೂಡ ನಾಯಕತ್ವವನ್ನು ತ್ಯಜಿಸಿದ್ದು ಬೆನ್ ಸ್ಟೋಕ್ಸ್ ನಾಯಕನಾಗಿದ್ದಾರೆ. ಇನ್ನು ಇಂಗ್ಲೆಂಡ್ ತಂಡದ ಕೋಚ್ ಆಗಿ ಬ್ರೆಂಡನ್ ಮೆಕ್ಕಲಮ್ ಇತ್ತೀಚೆಗಷ್ಟೇ ನೇಮಕಗೊಂಡಿದ್ದಾರೆ.

IRE vs IND: ಎರಡು ಪಂದ್ಯಗಳ ಟಿ20 ಸರಣಿಯ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳುIRE vs IND: ಎರಡು ಪಂದ್ಯಗಳ ಟಿ20 ಸರಣಿಯ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು

ಹೀಗಾಗಿ ಎರಡು ತಂಡಗಳು ಕೂಡ ಅಂತಿಮ ಪಂದ್ಯದಲ್ಲಿ ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ. ಹೀಗಾಗಿ ಭಾರತ ಈ ಅಂತಿಮ ಪಂದ್ಯದಲ್ಲಿ ಗೆಲುವು ಸಾಧಿಸ ಬೇಕಾದರೆ ಈ ಮೂವರು ಆಟಗಾರರು ಅದ್ಭುತ ಪ್ರದರ್ಶನ ನೀಡುವುದು ಅನಿವಾರ್ಯವಾಗಿದೆ.

ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ

ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ

ಕಳೆದ ವರ್ಷ ನಡೆದ ಟೆಸ್ಟ್ ಸರಣಿಯ ಮೊದಲ ನಾಲ್ಕು ಪಂದ್ಯಗಳಲ್ಲಿ ಜಸ್ಪ್ರೀತ್ ಬೂಮ್ರಾ ಉತ್ತಮ ಪ್ರದರ್ಶನ ನೀಡಿದ್ದರು. ಇಂಗ್ಲೆಂಡ್‌ನ ಮೈದಾನಗಳ ಪಿಚ್‌ನ ಲಾಭವನ್ನು ಅದ್ಭುತವಾಗಿ ಬಳಸಿಕೊಂಡ ಬೂಮ್ರಾ ತಂಡದ ಯಶಸ್ಸಿನಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಅದರಲ್ಲೂ ಭಾರತ ಗೆಲುವು ಸಾಧಿಸಿರುವ ಲಾರ್ಡ್ಸ್ ಹಾಗೂ ಓವಲ್ ಪಂದ್ಯಗಳಲ್ಲಿ ಬೂಮ್ರಾ ಪ್ರದರ್ಶನ ನಿರ್ಣಾಯಕವಾಗಿತ್ತು. ಈ ಬಾರಿ ಅನುಭವಿ ಇಶಾಂತ್ ಶರ್ಮಾ ಕೂಡ ಇಲ್ಲದಿರುವ ಕಾರಣ ಬೂಮ್ರಾ ಭಾರತ ಬೌಲಿಂಗ್ ವಿಭಾಗದಲ್ಲಿ ಮಹತ್ವದ ಪಾತ್ರವಹಿಸಲಿದ್ದಾರೆ. ಭಾರತ ಉತ್ತಮ ಪ್ರದರ್ಶನ ನಿಡಬೇಕಾದರೆ ಬೂಮ್ರಾ ಅದ್ಭುತವಾಗಿ ಬೌಲಿಂಗ್ ದಾಳಿ ನಡೆಸಲೇಬೇಕಿದೆ.

ನಾಯಕ ರೋಹಿತ್ ಶರ್ಮಾ

ನಾಯಕ ರೋಹಿತ್ ಶರ್ಮಾ

ಟೆಸ್ಟ್ ನಾಯಕನಾಗಿ ಆಯ್ಕೆಯಾದ ಬಳಿಕ ರೋಹಿತ್ ಶರ್ಮಾ ಮೊದಲ ಬಾರಿಗೆ ಇಂಗ್ಲೆಂಡ್ ಪ್ರವಾಸ ನಡೆಸುತ್ತಿದ್ದು ಈ ಸರಣಿಯಲ್ಲಿ ಅವರ ಪ್ರದರ್ಶನ ಮಹತ್ವದ್ದಾಗಿದೆ. ಕಳೆದ ವರ್ಷ ಓವಲ್ ಮೈದಾನದಲ್ಲಿ ರೋಹಿತ್ ಶರ್ಮಾ ಅವರ ಅದ್ಭುತ ಶತಕ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿತ್ತು. ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಆರಂಭಿಕರಾಗಿ ಕಣಕ್ಕಿಳಿದು ಅದ್ಭುತ ಆರಂಭವನ್ನು ನೀಡಿದ್ದರು. ಆದರೆ ಈ ಬಾರಿ ರಾಹುಲ್ ಗಾಯಗೊಂಡಿರುವ ಕಾರಣ ಅಂತಿಮ ಪಂದ್ಯಕ್ಕೆ ಅವರು ಲಭ್ಯವಿಲ್ಲ. ಹೀಗಾಗಿ ಶುಬ್ಮನ್ ಗಿಲ್ ಆರಂಭಿಕನಾಗಿ ಸಾಥ್ ನೀಡಲಿದ್ದಾರೆ. ಈ ಹಿನ್ನೆಲೆಯಲ್‌ಲಿ ರೋಹಿತ್ ಶರ್ಮಾ ನಾಯಕನ ಪ್ರದರ್ಶನವನ್ನು ನೀಡಿ ತಂಡದ ಆತ್ಮವಿಶ್ವಾಸ ಹೆಚ್ಚಿಸಬೇಕಿದೆ.

ಯುವ ದಾಂಡಿಗ ರಿಷಬ್ ಪಂತ್

ಯುವ ದಾಂಡಿಗ ರಿಷಬ್ ಪಂತ್

ಟೆಸ್ಟ್ ಕ್ರಿಕೆಟ್‌ನಲ್ಲಿ ರಿಷಬ್ ಪಂತ್ ಭಾರತದ ಪ್ರಮುಖ ಅಸ್ತ್ರವಾಗಿ ಮಿಂಚುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧವೂ ಮಿಂಚಿರುವ ಪಂತ್ ಅಂತಿಮ ಪಂದ್ಯದಲ್ಲಿಯೂ ಉತ್ತಮ ಪ್ರದರ್ಶನ ನಿಡಬೇಕಾದ ಅಗತ್ಯವಿದೆ. 24ರ ಹರೆಯದ ಪಂತ್ ಇಂಗ್ಲೆಂಡ್ ನೆಲದಲ್ಲಿ ಈಗಾಗಲೇ ಶತಕಗಳಿಸಿದ ಸಾಧನೆ ಮಾಡಿದ್ದಾರೆ. ಈ ಮಧ್ಯೆ ಇತ್ತೀಚೆಗೆ ಅಂತ್ಯವಾಗಿರುವ ದಕ್ಷಿಣ ಆಪ್ರಿಕಾ ವಿರುದ್ಧದ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿರುವ ರಿಷಭ್ ಪಂತ್ ಮೇಲೆ ಈಗ ಸಾಕಷ್ಟು ಒತ್ತಡವಿದ್ದು ಇಂಥಾ ಸಂದರ್ಭದಲ್ಲಿ ತಂಡಕ್ಕೆ ಯಾವ ರೀತಿಯಾಗಿ ನೆರವಾಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಭಾರತದ ಸ್ಕ್ವಾಡ್ ಹೀಗಿದೆ

ಭಾರತದ ಸ್ಕ್ವಾಡ್ ಹೀಗಿದೆ

ಟೆಸ್ಟ್ ಸ್ಕ್ವಾಡ್ ಹೀಗಿದೆ ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಚೇತೇಶ್ವರ್ ಪೂಜಾರ, ರಿಷಬ್ ಪಂತ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ಆರ್ ಜಡೇಜಾ, ಆರ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಪ್ರಸಿದ್ಧ್ ಕೃಷ್ಣ

Story first published: Friday, June 24, 2022, 20:27 [IST]
Other articles published on Jun 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X