ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ವಿರುದ್ಧದ ಟೆಸ್ಟ್ ಸರಣಿಗಿಲ್ಲ ಬೆನ್ ಸ್ಟೋಕ್ಸ್: 'ಅನಿರ್ದಿಷ್ಟಾವಧಿ ವಿರಾಮ' ಪಡೆದ ಆಲ್‌ರೌಂಡರ್

Ind vs Eng: Ben Stokes will test series against India, takes indefinite break from all cricket
ಅನಿರ್ದಿಷ್ಟಾವಧಿ ವಿರಾಮ ಪಡೆದ ಆಲ್ರೌಂಡರ್ ಬೆನ್ ಸ್ಟೋಕ್ಸ್ | Oneindia Kannada

ಬೆಂಗಳೂರು, ಜುಲೈ 30: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಆರಂಭಕ್ಕೆ ಬೆರಳೆಣಿಕೆಯ ದಿನಗಳು ಮಾತ್ರವೇ ಬಾಕಿಯಿದೆ. ಐದು ಪಂದ್ಯಗಳ ಟೆಸ್ಟ್ ಸರಣಿಯ ಮೇಲೆ ಎಲ್ಲಾ ಕ್ರಿಕೆಟ್ ಪ್ರೇಮಿಗಳ ಚಿತ್ತ ನೆಟ್ಟಿದೆ. ಈ ಮಧ್ಯೆ ಇಂಗ್ಲೆಂಡ್ ತಂಡದ ಸ್ಟಾರ್ ಆಲ್‌ರೌಂಡರ್ ಕ್ರಿಕೆಟ್ ಪ್ರೇಮಿಗಳಿಗೆ ಶಾಕ್ ಕೊಟ್ಟಿದ್ದಾರೆ. ತಕ್ಷಣದಿಂದಲೇ ಅನ್ವಯವಾಗುವಂತೆ ಎಲ್ಲಾ ರೀತಿಯ ಕ್ರಿಕೆಟ್‌ನಿಂದ ಬೆನ್ ಸ್ಟೋಕ್ಸ್ ಅನಿರ್ದಿಷ್ಟಾವಧಿಯ ವಿಶ್ರಾಂತಿಯನ್ನು ಪಡೆದುಕೊಂಡಿದ್ದಾರೆ. ಬೆನ್ ಸ್ಟೋಕ್ಸ್ ಅವರ ಈ ನಿರ್ಧಾರದಿಂದಾಗಿ ಭಾರತದ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೂ ಬೆನ್ ಸ್ಟೋಕ್ಸ್ ಅಲಭ್ಯರಾಗುವುದು ಖಚಿತವಾಗಿದೆ.

ಬೆನ್ ಸ್ಟೋಕ್ಸ್ ಅವರ ಈ ನಿರ್ಧಾರದ ಬಗ್ಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಅಧಿಕೃತವಾಗಿ ಪ್ರಕಟಣೆಯನ್ನು ಹೊರಡಿಸಿದೆ. "ಮುಂದಿನ ವಾರದಿಂದ ಆರಂಭವಾಗಲಿರುವ ಭಾರತ ವಿರುದ್ಧದ ಎಲ್‌ವಿ ಇನ್ಶೂರೆನ್ಸ್ ಟೆಸ್ಟ್ ಸರಣಿಗೆ ಮುನ್ನ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ಟೆಸ್ಟ್ ತಂಡದಿಂದ ಹಿಂದಕ್ಕೆ ಸರಿದಿದ್ದಾರೆ. ಅವರ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡಲು ಹಾಗೂ ಗಾಯದಿಂದಾಗಿ ಇನ್ನೂ ಸಂಒಊರ್ಣವಾಗಿ ಚೇತರಿಕೆ ಕಾಣದ ಎಡಗೈ ತೋರುಬೆರಳಿಗೆ ವಿಶ್ರಾಂತಿಯನ್ನು ನೀಡುವ ದೃಷ್ಟಿಯಿಂದ ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ" ಎಂದು ಇಸಿಬಿ ಪ್ರಕಟಣೆಯಲ್ಲಿ ತಿಳಿಸಿದೆ.

ಟೋಕಿಯೋ ಒಲಿಂಪಿಕ್ಸ್: ಸೆಮಿಫೈನಲ್ ಪ್ರವೇಶಿಸುವಲ್ಲಿ ಎಡವಿದ ದ್ಯುತಿ ಚಾಂದ್ಟೋಕಿಯೋ ಒಲಿಂಪಿಕ್ಸ್: ಸೆಮಿಫೈನಲ್ ಪ್ರವೇಶಿಸುವಲ್ಲಿ ಎಡವಿದ ದ್ಯುತಿ ಚಾಂದ್

ಬೆನ್ ಸ್ಟೋಕ್ಸ್ ನಿರ್ಧಾರಕ್ಕೆ ಬೆಂಬಲ

ಬೆನ್ ಸ್ಟೋಕ್ಸ್ ನಿರ್ಧಾರಕ್ಕೆ ಬೆಂಬಲ

ಇಂಗ್ಲೆಂಡ್ ಪುರುಷರ ಕ್ರಿಕೆಟ್ ತಂಡದ ಮ್ಯಾನೇಜಿಂಗ್ ಡೈರೆಕ್ಟರ್ ಆಶ್ಲೇ ಗಿಲ್ಸ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ತಮ್ಮ ಆರೋಗ್ಯದ ಯೋಗಕ್ಷೇಮದ ಬಗ್ಗೆ ಹಾಗೂ ಬೆನ್ ಸ್ಟೋಕ್ಸ್ ಧೈರ್ಯದಿಂದ ಭಾವನೆಗಳನ್ನು ವ್ಯಕ್ತಡಿಸಿದ್ದಾರೆ. ನಮ್ಮ ಎಲ್ಲಾ ಆಟಗಾರರ ಮಾನಸಿಕ ಆರೋಗ್ಯದ ಮೇಲೆ ನಾವು ಮೊದಲಿಗೆ ಚಿತ್ತಹರಿಸುತ್ತೇವೆ ಎಂದು ಗಿಲ್ಸ್ ಹೇಳಿದ್ದಾರೆ.

ಆಟಗಾರರ ಮೇಲೆ ಹೆಚ್ಚಾದ ಒತ್ತಡ

ಆಟಗಾರರ ಮೇಲೆ ಹೆಚ್ಚಾದ ಒತ್ತಡ

ಕೊರೊನಾವೈರಸ್‌ನ ಕಾರಣದಿಂದಾಗಿ ಆಟಗಾರರ ಮೇಲಿನ ಮಾನಸಿಕ ಒತ್ತಡ ಹೆಚ್ಚಾಗಿದೆ. ಆಟಗಾರರು ಸತತವಾಗಿ ಕ್ರಿಕೆಟ್ ಆಡುವ ಜೊತೆಗೆ ಸುದೀರ್ಘ ಕಾಲ ಬಯೋಬಬಲ್‌ನ ಒಳಗೆ ಇರುವ ಅನಿವಾರ್ಯತೆಯಲ್ಲಿದ್ದಾರೆ. ಕುಟುಂಬದಿಂದಲೂ ಸುದೀರ್ಘ ಕಾಲ ದೂರವುಳಿಯುವ ಪರಿಸ್ಥಿತಿಗಳು ಇವೆ. ಈ ಮಧ್ಯೆ ತಂಡಗಳಲ್ಲಿ ಬಯೋಬಬಲ್ ಒಳಗೂ ಕೊರೊನಾವೈರಸ್ ಕಾಣಿಸಿಕೊಂಡು ಆಟಗಾರರನ್ನು ಮತ್ತಷ್ಟು ಕಂಗಾಲಾಗುವಂತೆ ಮಾಡುತ್ತಿದೆ. ಇದೆಲ್ಲವೂ ಕೂಡ ಆಟಗಾರರ ಮಾನಸಿಕ ಆರೋಗ್ಯದ ಮೇಲೆ ಗಾಢ ಪರಿಣಾಮ ಬೀರುತ್ತದೆ.

ಏಕದಿನ ತಂಡವನ್ನು ಮುನ್ನಡೆಸಿದ್ದ ಬೆನ್ ಸ್ಟೋಕ್ಸ್

ಏಕದಿನ ತಂಡವನ್ನು ಮುನ್ನಡೆಸಿದ್ದ ಬೆನ್ ಸ್ಟೋಕ್ಸ್

ಇತ್ತೀಚೆಗೆ ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಗೆ ಇಂಗ್ಲೆಂಡ್ ತಂಡವನ್ನು ಬೆನ್ ಸ್ಟೋಕ್ಸ್ ಯಶಸ್ವಿಯಾಗಿ ಮುನ್ನಡೆಸಿದ್ದರು. ಶ್ರೀಲಂಕಾ ವಿರುದ್ಧದ ಸೀಮಿತ ಓವರ್‌ಗಳ ಸರಣಿ ಅಂತ್ಯವಾಗುತ್ತಿದ್ದಂತೆಯೇ ಇಂಗ್ಲೆಂಡ್ ತಂಡದಲ್ಲಿ ಕೊರೊನಾವೈರಸ್ ಪ್ರಕರಣಗಳು ಕಾಣಿಸಿಕೊಂಡ ಪರಿಣಾಮವಾಗಿ ಇಂಗ್ಲೆಂಡ್‌ ತಂಡದ ಎಲ್ಲಾ ಸದಸ್ಯರು ಕ್ವಾರಂಟೈನ್‌ಗೆ ಒಳಗಾಗಿದ್ದರು. ಹೀಗಾಗಿ ಸರಣಿಯ ಆರಂಭಕ್ಕೆ ಎರಡು ದಿನಗಳ ಮುನ್ನ ಸಂಪೂರ್ಣ ಹೊಸ ತಂಡವನ್ನು ಘೋಷಿಸಲಾಗಿತ್ತು. ಆರಂಭದಲ್ಲಿ ಈ ಸರಣಿಯಿಂದ ಹೊರಗುಳಿದಿದ್ದ ಬೆನ್ ಸ್ಟೋಕ್ಸ್ ಬಳಿಕ ತಂಡವನ್ನು ಮುನ್ನಡೆಸಿದ್ದರು. ಈ ಸರಣಿಯನ್ನು ಬೆನ್ ಸ್ಟೋಕ್ಸ್ ಪಡೆ ಭರ್ಜರಿಯಾಗಿ ಗೆದ್ದು ಬೀಗಿತ್ತು.

ಬೆನ್ ಸ್ಟೋಕ್ಸ್‌ಗೆ ಬದಲಿ ಆಟಗಾರನ ಆಯ್ಕೆ

ಬೆನ್ ಸ್ಟೋಕ್ಸ್‌ಗೆ ಬದಲಿ ಆಟಗಾರನ ಆಯ್ಕೆ

ಭಾರತ ವಿರುದ್ಧದ ಟೆಸ್ಟ್ ಸರಣಿ ಮೊದಲ ಎರಡು ಪಂದ್ಯಗಳಿಗೆ ಇಂಗ್ಲೆಂಡ್ ತಂಡವನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ. ಇದರಲ್ಲಿ ಬೆನ್ ಸ್ಟೋಕ್ಸ್ ಕೂಡ ಸ್ಥಾನವನ್ನು ಪಡೆದುಕೊಂಡಿದ್ದರು. ಇದೀಗ ಬೆನ್ ಸ್ಟೋಕ್ಸ್ ತೆಗೆದುಕೊಂಡಿರುವ ಈ ನಿರ್ಧಾರವನ್ನು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಪರಿಗಣಿಸಿದ್ದು ಬೆನ್ ಸ್ಟೋಕ್ಸ್ ಸ್ಥಾನಕ್ಕೆ ಕ್ರೇಗ್ ಓವರ್ಟನ್ ಅವರನ್ನು ಆಯ್ಕೆ ಮಾಡಿದೆ.

Story first published: Saturday, July 31, 2021, 0:05 [IST]
Other articles published on Jul 31, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X