ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Virat Kohli: ಫಾರ್ಮ್‌ನಲ್ಲಿಲ್ಲದ ವಿರಾಟ್ ಕೊಹ್ಲಿ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ ಬಾಬರ್ ಅಜಂ

IND vs ENG: Pakistan Captain Babar Azam Sympathized With Out-of-form Virat Kohli

ಗುರುವಾರ (ಜುಲೈ 14) ಲಾರ್ಡ್ಸ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ತೊಡೆಸಂದು ಸೆಳೆತದಿಂದ ಹಿಂತಿರುಗಿದ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಕಳಪೆ ಫಾರ್ಮ್ ಮತ್ತೆ ಮುಂದುವರೆದಿದೆ.

ವಿರಾಟ್ ಕೊಹ್ಲಿ 25 ಎಸೆತಗಳಲ್ಲಿ 16 ರನ್ ಗಳಿಸಿ ಔಟಾದ ಕಾರಣ ಟೀಂ ಇಂಡಿಯಾ 146 ರನ್‌ಗಳಿಗೆ ಆಲೌಟ್ ಆಗಿ ಎರಡನೇ ಏಕದಿನ ಪಂದ್ಯದಲ್ಲಿ 100 ರನ್‌ಗಳ ಅಂತರದಿಂದ ಸೋತಿತು. ಈ ಮೂಲಕ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ತಂಡ 1-1 ಅಂತರದ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಗಿದೆ.

IND vs ENG: ಲಾರ್ಡ್ಸ್‌ನಲ್ಲಿ ಮೊಹಿಂದರ್ ಅಮರನಾಥ್‌ರ 39 ವರ್ಷಗಳ ದಾಖಲೆ ಮುರಿದ ಚಹಾಲ್IND vs ENG: ಲಾರ್ಡ್ಸ್‌ನಲ್ಲಿ ಮೊಹಿಂದರ್ ಅಮರನಾಥ್‌ರ 39 ವರ್ಷಗಳ ದಾಖಲೆ ಮುರಿದ ಚಹಾಲ್

ಲಂಡನ್‌ನ ಲಾರ್ಡ್ಸ್ ಮೈದಾನದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಡೇವಿಡ್ ವಿಲ್ಲಿ ಅವರ ಬೌಲಿಂಗ್‌ನಲ್ಲಿ ಕೀಪರ್‌ಗೆ ಕ್ಯಾಚ್ ನೀಡಿ ಔಟಾಗುವ ಮೊದಲು ವಿರಾಟ್ ಕೊಹ್ಲಿ ಆಕರ್ಷಕ ಆರಂಭವನ್ನು ಪಡೆದರು. ಭಾರತೀಯ ಬ್ಯಾಟರ್ ಈಗ ಮೂರು ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಗಳಿಸಿಲ್ಲ. 2019ರಲ್ಲಿ ಕೋಲ್ಕತ್ತಾದಲ್ಲಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಗಳಿಸಿದ್ದ ಶತಕ ಕೊನೆಯದಾಗಿದೆ.

ಇದು ಕೂಡ ಹಾದುಹೋಗುತ್ತದೆ. ಬಲವಾಗಿ ಇರಿ

ಭಾರತದ ಕೆಲವು ಮಾಜಿ ಕ್ರಿಕೆಟಿಗರು ವಿರಾಟ್ ಕೊಹ್ಲಿ ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದರೆ, ಇನ್ನು ವಿರಾಟ್ ಕೊಹ್ಲಿಯೊಂದಿಗೆ ಹೆಚ್ಚಾಗಿ ಹೋಲಿಸುವ ಪಾಕಿಸ್ತಾನದ ನಾಯಕ ಬಾಬರ್ ಅಜಂ ವಿಶೇಷ ಸಂದೇಶವನ್ನು ನೀಡಿದ್ದಾರೆ. ಲಾರ್ಡ್ಸ್‌ನಲ್ಲಿ ವಿರಾಟ್ ಕೊಹ್ಲಿ ಔಟಾದ ನಂತರ ಬಾಬರ್ ಅಜಂ ಟ್ವಿಟರ್‌ನಲ್ಲಿ ಹೀಗೆ ಬರೆದಿದ್ದಾರೆ, "ಇದು ಕೂಡ ಹಾದುಹೋಗುತ್ತದೆ. ಬಲವಾಗಿ ಇರಿ". ಅಂದರೆ ಕಳಪೆ ಫಾರ್ಮ್ ಅಥವಾ ಲೀನ್ ಪ್ಯಾಚ್ ಪ್ರತಿಯೊಬ್ಬ ಕ್ರೀಡಾಪಟುವಿಗೆ ಆಗುತ್ತದೆ ಎಂಬ ಅರ್ಥದಲ್ಲಿ ಹೇಳಿದ್ದಾರೆ.

ಟೆಸ್ಟ್, ಏಕದಿನ ಮತ್ತು ಟಿ20 ಕ್ರಿಕೆಟ್‌ನಲ್ಲಿ ಸ್ಥಿರವಾಗಿ ಸ್ಕೋರ್ ಮಾಡುವ ಮೂಲಕ ಬಾಬರ್ ಅಜಂ ಆಟದ ಎಲ್ಲಾ ಸ್ವರೂಪಗಳಲ್ಲಿ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ನಂ. 1 ಬ್ಯಾಟರ್ ಆಗಿ ಬದಲಾಗಿದ್ದಾರೆ. ಟ್ವೀಟ್‌ನಲ್ಲಿ ಹಂಚಿಕೊಂಡಿರುವ ಫೋಟೋವು ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ 2021ರಲ್ಲಿ 10 ವಿಕೆಟ್‌ಗಳಿಂದ ಗೆದ್ದ ಪಂದ್ಯದ್ದಾಗಿದೆ.

7 ಏಕದಿನ ಪಂದ್ಯಗಳಿಂದ ಕೇವಲ 22.57ರ ಸರಾಸರಿಯಲ್ಲಿ 158 ರನ್‌

7 ಏಕದಿನ ಪಂದ್ಯಗಳಿಂದ ಕೇವಲ 22.57ರ ಸರಾಸರಿಯಲ್ಲಿ 158 ರನ್‌

ಏತನ್ಮಧ್ಯೆ, ವಿರಾಟ್ ಕೊಹ್ಲಿ 2022ರಲ್ಲಿ 7 ಏಕದಿನ ಪಂದ್ಯಗಳಿಂದ ಕೇವಲ 22.57ರ ಸರಾಸರಿಯಲ್ಲಿ 158 ರನ್‌ಗಳನ್ನು ಮಾತ್ರ ಗಳಿಸಿದ್ದಾರೆ ಮತ್ತು ಅವರ ಹೆಸರಿನಲ್ಲಿ ಕೇವಲ ಎರಡು ಅರ್ಧ ಶತಕಗಳು ಮಾತ್ರ ದಾಖಲಾಗಿವೆ. ಒಟ್ಟಾರೆ ವಿರಾಟ್ ಕೊಹ್ಲಿ 261 ಏಕದಿನ ಪಂದ್ಯಗಳಿಂದ 57.87ರ ಸರಾಸರಿಯಲ್ಲಿ 43 ಶತಕ ಮತ್ತು 64 ಅರ್ಧಶತಕಗಳೊಂದಿಗೆ 12,327 ರನ್ ಗಳಿಸಿದ್ದಾರೆ. ಮತ್ತೊಂದೆಡೆ ಪಾಕಿಸ್ತಾನ ನಾಯಕ ಬಾಬರ್ ಅಜಂ ಅವರು 89 ಏಕದಿನ ಪಂದ್ಯಗಳಿಂದ 17 ಶತಕ ಮತ್ತು 19 ಅರ್ಧಶತಕಗಳೊಂದಿಗೆ 4,442 ರನ್‌ಗಳೊಂದಿಗೆ ಏಕದಿನ ಪಂದ್ಯಗಳಲ್ಲಿ 59.22 ಸರಾಸರಿ ಹೊಂದಿದ್ದಾರೆ.

West Indies ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟ | *Cricket | OneIndia Kannada
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ವಿಶ್ರಾಂತಿ

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ವಿಶ್ರಾಂತಿ

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ವಿಶ್ರಾಂತಿ ಪಡೆದಿರುವ ಕಾರಣ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಭಾನುವಾರ (ಜುಲೈ 17) ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಅನ್ನು ಎದುರಿಸುವಾಗ ಫಾರ್ಮ್‌ಗೆ ಮರಳಲು ಒಂದು ಅಂತಿಮ ಅವಕಾಶವನ್ನು ಹೊಂದಿದ್ದಾರೆ. ಮುಂದಿನ ಏಷ್ಯಾ ಕಪ್ ಒಳಗೆ ಫಾರ್ಮ್‌ಗೆ ಮರಳದಿದ್ದರೆ ಆಸ್ಟ್ರೇಲಿಯದಲ್ಲಿ ನಡೆಯುವ ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಕಾಣಿಸುವ ಸಾಧ್ಯತೆ ಕಡಿಮೆಯಾಗಿರುತ್ತದೆ.

Story first published: Friday, July 15, 2022, 15:15 [IST]
Other articles published on Jul 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X