ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs NZ 2nd ODI: ಆಡುವ 11ರ ಬಳಗದಿಂದ ಸಂಜು ಸ್ಯಾಮ್ಸನ್ ಮತ್ತೆ ಡ್ರಾಪ್; ಫ್ಯಾನ್ಸ್ ಗರಂ

IND vs NZ 2nd ODI: Sanju Samson Again Dropped From Playing XI; Fans Are Upset Against Indian Team

ಭಾನುವಾರ (ನವೆಂಬರ್ 27) ಹ್ಯಾಮಿಲ್ಟನ್‌ನ ಸೆಡನ್ ಪಾರ್ಕ್‌ನಲ್ಲಿ ನಡೆಯುತ್ತಿರುವ ಮೂರು ಪಂದ್ಯಗಳ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ತಂಡವನ್ನು ಎದುರಿಸುತ್ತಿದೆ.

2ನೇ ಏಕದಿನ ಪಂದ್ಯದಲ್ಲಿ ಭಾರತದ ಆಡುವ 11ರ ಬಳಗದಿಂದ ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ಮತ್ತೊಮ್ಮೆ ಕಡೆಗಣಿಸಲ್ಪಟ್ಟಿದ್ದು, ತಂಡದ ಸಂಯೋಜನೆಯ ಸಲುವಾಗಿ ದೀಪಕ್ ಹೂಡಾಗೆ ಜಾಗ ಮಾಡಿಕೊಟ್ಟಿದ್ದಾರೆ.

IND vs NZ 2nd ODI: ಭಾರತದ ಬ್ಯಾಟಿಂಗ್ ವೇಳೆ ಮಳೆಯಿಂದಾಗಿ ಪಂದ್ಯ ತಾತ್ಕಾಲಿಕ ಸ್ಥಗಿತIND vs NZ 2nd ODI: ಭಾರತದ ಬ್ಯಾಟಿಂಗ್ ವೇಳೆ ಮಳೆಯಿಂದಾಗಿ ಪಂದ್ಯ ತಾತ್ಕಾಲಿಕ ಸ್ಥಗಿತ

ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ನಂತರ ಮಾತನಾಡಿದ ಭಾರತ ತಂಡದ ನಾಯಕ ಶಿಖರ್ ಧವನ್, ಭಾರತ ಎರಡು ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದರು.

ಸಂಜು ಸ್ಯಾಮ್ಸನ್ ಬದಲಿಗೆ ದೀಪಕ್ ಹೂಡಾ

ಸಂಜು ಸ್ಯಾಮ್ಸನ್ ಬದಲಿಗೆ ದೀಪಕ್ ಹೂಡಾ

ಒಂದು ಶಾರ್ದೂಲ್ ಠಾಕೂರ್ ಬದಲಿಗೆ ದೀಪಕ್ ಚಾಹರ್ ಮತ್ತು ಸಂಜು ಸ್ಯಾಮ್ಸನ್ ಬದಲಿಗೆ ದೀಪಕ್ ಹೂಡಾ ಭಾರತದ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ.

ಆರನೇ ಬೌಲರ್ ಆಯ್ಕೆ ಇಲ್ಲದಿದ್ದ ಕಾರಣ ಮೊದಲ ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳಿಂದ ಸೋತಿತ್ತು. ಇದೀಗ ದೀಪಕ್ ಹೂಡಾ ತಂಡಕ್ಕೆ ಸ್ಪಿನ್ ಬೌಲಿಂಗ್ ಆಯ್ಕೆಯನ್ನು ಒದಗಿಸುತ್ತಾರೆ ಎಂದು ನಿರೀಕ್ಷಿಸಲಾಗಿದೆ.

ಸಂಜು ಸ್ಯಾಮ್ಸನ್ ಅಭಿಮಾನಿಗಳು ತಮ್ಮ ಕೋಪದ ಪ್ರತಿಕ್ರಿಯೆ

ಆಡುವ 11ರ ಬಳಗದ ಪ್ರಕಟಣೆಯನ್ನು ಪೋಸ್ಟ್ ಮಾಡಿ, ಸಂಜು ಸ್ಯಾಮ್ಸನ್ ಅಭಿಮಾನಿಗಳು ತಮ್ಮ ಕೋಪದ ಪ್ರತಿಕ್ರಿಯೆಗಳನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ರಿಷಭ್ ಪಂತ್ ಕಳಪೆ ಫಾರ್ಮ್ ಹೊರತಾಗಿಯೂ ಆಡುವ 11ರಲ್ಲಿ ಕಾಣಿಸಿಕೊಳ್ಳುತ್ತಿರುವುದು ಸಂಜು ಫ್ಯಾನ್ಸ್‌ಗೆ ಕೋಪ ತರಿಸಿದೆ ಮತ್ತು ಯಾವಾಗಲೂ ಸಂಜು ಸ್ಯಾಮ್ಸನ್ ಸುಲಭ ಗುರಿ ಎಂದು ಕಿಡಿಕಾರಿದ್ದಾರೆ.

ಇದಕ್ಕೂ ಮೊದಲು ನಡೆದ ಟಿ20 ಸರಣಿಯಲ್ಲಿ ಸಂಜು ಸ್ಯಾಮ್ಸನ್ ಆಡುವ 11ರ ಬಳಗದಲ್ಲಿ ಅವಕಾಶ ನೀಡಲಿಲ್ಲ. ಭಾರತ 3 ಪಂದ್ಯಗಳ ಟಿ20 ಸರಣಿಯನ್ನು 1-0 ಅಂತರದಲ್ಲಿ ಗೆದ್ದರು. ಟಿ20 ಸ್ಪೆಷಲಿಸ್ಟ್ ಆಗಿರುವ ಸ್ಯಾಮ್ಸನ್ ಯಾವುದೇ ಪಂದ್ಯಗಳಲ್ಲಿ ಆಡಿಸದಿರುವುದು ಕೇರಳ ಮತ್ತು ರಾಜಸ್ಥಾನ ರಾಯಲ್ಸ್ ಅಭಿಮಾನಿಗಳ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಮೊದಲ ಪಂದ್ಯದಲ್ಲಿ 38 ಎಸೆತಗಳಲ್ಲಿ 4 ಬೌಂಡರಿಗಳ ಸಮೇತ 36 ರನ್

ಇನ್ನು ಮೊದಲ ಏಕದಿನ ಪಂದ್ಯದಲ್ಲಿ ಸ್ಥಾನ ಪಡೆದ ಸಂಜು ಸ್ಯಾಮ್ಸನ್ 38 ಎಸೆತಗಳಲ್ಲಿ 4 ಬೌಂಡರಿಗಳ ಸಮೇತ 36 ರನ್ ಗಳಿಸಿದರು. ಆದರೆ ಅದು ಯಾವುದೇ ಕಲ್ಪನೆಯಿಂದಲೂ ಕಳಪೆ ಪ್ರದರ್ಶನವಾಗಿರಲಿಲ್ಲ. ಆದರೂ, ಸಂಜು ಸ್ಯಾಮ್ಸನ್ ಅವರನ್ನು ಕೈಬಿಡಲಾಗಿದೆ.

ಸಂಜು ಸ್ಯಾಮ್ಸನ್ ಆಯ್ಕೆಯಾಗದಿರುವುದು ಅವರ ಪ್ರದರ್ಶನದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಆದರೆ ತಂಡದ ಸಂಯೋಜನೆಗಾಗಿ ತಂಡದ ಮ್ಯಾನೇಜ್‌ಮೆಂಟ್ ಈ ನಿರ್ಧಾರ ಕೈಗೊಂಡಿದೆ. ಆಲ್‌ರೌಂಡರ್ ದೀಪಕ್ ಹೂಡಾ ಭಾರತದ ಸ್ಪಿನ್ ಬೌಲಿಂಗ್ ಆಯ್ಕೆಯಾಗಿದ್ದಾರೆ.

ರಿಷಭ್ ಪಂತ್ ಈ ಏಕದಿನ ಸರಣಿಯಲ್ಲಿ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿರುವುದರಿಂದ ಅವರನ್ನು ಕೈಬಿಡಲಾಗಿಲ್ಲ. ಸಂಜು ಸ್ಯಾಮ್ಸನ್ ದುರದೃಷ್ಟವಶಾತ್ ತನ್ನ ಅವಕಾಶಕ್ಕಾಗಿ ಇನ್ನೂ ಕಾಯಬೇಕಾಗಿದೆ.

2ನೇ ಪಂದ್ಯದಲ್ಲಿ ಭಾರತ vs ನ್ಯೂಜಿಲೆಂಡ್ ಆಡುವ 11ರ ಬಳಗ

2ನೇ ಪಂದ್ಯದಲ್ಲಿ ಭಾರತ vs ನ್ಯೂಜಿಲೆಂಡ್ ಆಡುವ 11ರ ಬಳಗ

ಭಾರತ: ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ದೀಪಕ್ ಚಹಾರ್, ಉಮ್ರಾನ್ ಮಲಿಕ್, ಅರ್ಶ್‌ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್

ನ್ಯೂಜಿಲೆಂಡ್: ಫಿನ್ ಅಲೆನ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಮೈಕೆಲ್ ಬ್ರೇಸ್‌ವೆಲ್, ಮ್ಯಾಟ್ ಹೆನ್ರಿ, ಟಿಮ್ ಸೌಥಿ, ಲ್ಯೂಕಿ ಫರ್ಗುಸನ್

Story first published: Sunday, November 27, 2022, 9:42 [IST]
Other articles published on Nov 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X