ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs NZ 3rd T20: ನ್ಯೂಜಿಲೆಂಡ್ ವಿರುದ್ಧ ಸರಣಿ ಗೆಲ್ಲಲು ಭಾರತಕ್ಕೆ ಇವರ ಆಟವೇ ನಿರ್ಣಾಯಕ!

IND vs NZ 3rd T20: Top Order Batting Is Crucial For India To Win The T20 Series Against New Zealand

ಬುಧವಾರ, ಫೆಬ್ರವರಿ 1ರಂದು ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಅಂತಿಮ ಹಾಗೂ ಸರಣಿ ನಿರ್ಣಾಯಕ ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡ ಸರಣಿ ಗೆಲುವಿಗಾಗಿ ಎದುರು ನೋಡುತ್ತಿದೆ. ಈಗಾಗಲೇ ಎರಡೂ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದು 1-1ರಲ್ಲಿ ಸರಣಿ ಸಮಬಲಗೊಳಿಸಿಕೊಂಡಿವೆ.

ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಯನ್ನು ಗೆಲ್ಲಲು ಭಾರತ ತಂಡಕ್ಕೆ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಆಟ ನಿರ್ಣಾಯಕವಾಗಿದ್ದು, ಹೀಗಾಗಿ ಯುವ ಬ್ಯಾಟರ್‌ಗಳು ಇದೀಗ ಒತ್ತಡಕ್ಕೆ ಸಿಲುಕಿದ್ದಾರೆ. ಗೆದ್ದರೆ ಸರಣಿ ಜಯದ ಹೆಗ್ಗಳಿಕೆ, ಸೋತರೆ ತವರಿನಲ್ಲೇ ಭಾರೀ ಮುಖಭಂಗದ ಅವಮಾನ.

IND vs NZ: 2ನೇ ಟಿ20 ಪಂದ್ಯದಲ್ಲಿ ಕಳಪೆ ಪಿಚ್ ನಿರ್ಮಾಣ; ಲಕ್ನೋ ಪಿಚ್ ಕ್ಯುರೇಟರ್ ವಜಾIND vs NZ: 2ನೇ ಟಿ20 ಪಂದ್ಯದಲ್ಲಿ ಕಳಪೆ ಪಿಚ್ ನಿರ್ಮಾಣ; ಲಕ್ನೋ ಪಿಚ್ ಕ್ಯುರೇಟರ್ ವಜಾ

ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರ ಅನುಪಸ್ಥಿತಿಯಲ್ಲಿ ಯುವ ಬ್ಯಾಟರ್‌ಗಳಾದ ಶುಭ್ಮನ್ ಗಿಲ್, ಇಶಾನ್ ಕಿಶನ್ ಮತ್ತು ರಾಹುಲ್ ತ್ರಿಪಾಠಿ ಭಾರತ ತಂಡದ ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಆದರೆ, ಈ ಸರಣಿಯಲ್ಲಿ ಅವರ ಪ್ರದರ್ಶನ ಕಳಪೆಯಾಗಿದೆ. ಇದು ಭಾರತ ತಂಡವನ್ನು ಆತಂಕಕ್ಕೆ ದೂಡಿದೆ.

ಬುಧವಾರದ ಮೂರನೇ ಟಿ20 ಪಂದ್ಯದ ನಂತರ, ಭಾರತ ತಂಡವು ದೀರ್ಘಕಾಲದವರೆಗೆ ಅಂತಾರಾಷ್ಟ್ರೀಯ ಚುಟುಕು ಕ್ರಿಕೆಟ್ ಆಡುವುದಿಲ್ಲ. ನಂತರ, ಟೆಸ್ಟ್ ಹಾಗೂ ಏಕದಿನ ಸ್ವರೂಪದತ್ತ ಗಮನ ಹರಿಸಲಿದೆ. ಹೀಗಾಗಿ ಮುಂದಿನ ಟಿ20 ವಿಶ್ವಕಪ್ ಪಂದ್ಯಾವಳಿ ಗಮನದಲ್ಲಿರಿಸಿಕೊಂಡು ಯುವ ಆಟಗಾರರರಿಂದ ಉತ್ತಮ ಪ್ರದರ್ಶನ ನಿರೀಕ್ಷಿಸಲಾಗುತ್ತಿದೆ.

ಏಕದಿನ ಫಾರ್ಮ್ ಅನ್ನು ಟಿ20 ಕ್ರಿಕೆಟ್‌ನಲ್ಲಿ ಮುಂದುವರೆಸಲಾಗಿಲ್ಲ

ಏಕದಿನ ಫಾರ್ಮ್ ಅನ್ನು ಟಿ20 ಕ್ರಿಕೆಟ್‌ನಲ್ಲಿ ಮುಂದುವರೆಸಲಾಗಿಲ್ಲ

ಬಾಂಗ್ಲಾದೇಶ ವಿರುದ್ಧ ದ್ವಿಶತಕದ ನಂತರ ಇಶಾನ್ ಕಿಶನ್ ಬ್ಯಾಟಿಂಗ್‌ನಲ್ಲಿ ಫಾರ್ಮ್ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ದೊಡ್ಡ ಹೊಡೆತಗಳಿಗೆ ಮುಂದಾಗಿ ವಿಕೆಟ್ ಒಪ್ಪಿಸುತ್ತಿದ್ದಾರೆ. ಅದೇ ರೀತಿ ಶುಭ್ಮನ್ ಗಿಲ್ ಕೂಡ ಟರ್ನಿಂಗ್ ಬಾಲ್‌ಗಳಿಗೆ ಬ್ಯಾಟ್‌ನಿಂದ ಉತ್ತರ ನೀಡುತ್ತಿಲ್ಲ ಹಾಗೂ ಟಿ20 ಕ್ರಿಕೆಟ್‌ನಲ್ಲಿ ತಮ್ಮ ಏಕದಿನ ಫಾರ್ಮ್ ಅನ್ನು ಮುಂದುವರೆಸಲು ಸಾಧ್ಯವಾಗಿಲ್ಲ. ಇನ್ನು ರಾಹುಲ್ ತ್ರಿಪಾಠಿ ಅವರು ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಸಿಕ್ಕ ಮೂರನೇ ಕ್ರಮಾಂಕದ ಅವಕಾಶಗಳನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ.

ಎರಡನೇ ಟಿ20 ಪಂದ್ಯದಲ್ಲಿ ಉಪನಾಯಕ ಸೂರ್ಯಕುಮಾರ್ ಯಾದವ್ ಮತ್ತು ನಾಯಕ ಹಾರ್ದಿಕ್ ಪಾಂಡ್ಯ ಔಟಾಗಿದ್ದರೆ, ಭಾರತ 100 ರನ್‌ಗಳ ಮೊತ್ತ ಬೆನ್ನಟ್ಟಲು ಪರದಾಡಿತು.

ಎದುರಾಳಿ ತಂಡದ ಮೇಲೆ ಒತ್ತಡ ಹಾಕುವಲ್ಲಿ ಕುಲ್‌ಚಾ ಜೋಡಿ ಯಶಸ್ವಿ

ಎದುರಾಳಿ ತಂಡದ ಮೇಲೆ ಒತ್ತಡ ಹಾಕುವಲ್ಲಿ ಕುಲ್‌ಚಾ ಜೋಡಿ ಯಶಸ್ವಿ

ಭಾರತ ಬೌಲಿಂಗ್ ವಿಭಾಗದಲ್ಲಿ ಯುಜ್ವೇಂದ್ರ ಚಹಾಲ್ ಮತ್ತು ಕುಲದೀಪ್ ಯಾದವ್ ಜೋಡಿಯು ಎದುರಾಳಿ ತಂಡದ ಮೇಲೆ ಒತ್ತಡ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಎರಡನೇ ಟಿ20 ಪಂದ್ಯದಲ್ಲಿ ಕಿವೀಸ್‌ನ ಫಿನ್ ಅಲೆನ್ ಅವರ ವಿಕೆಟ್ ಪಡೆದ ನಂತರವೂ ಯುಜ್ವೇಂದ್ರ ಚಹಾಲ್ ಅವರಿಗೆ ಕೇವಲ ಎರಡು ಓವರ್‌ಗಳನ್ನು ನೀಡಿದ್ದು ಆಶ್ಚರ್ಯ ಮೂಡಿಸಿತ್ತು.

ಎಡಗೈ ವೇಗಿ ಅರ್ಶ್‌ದೀಪ್ ಸಿಂಗ್ ಲಕ್ನೋದಲ್ಲಿ ನಡೆದ ಪಂದ್ಯದಲ್ಲಿ ಕಡಿಮೆ ರನ್ ನೀಡುವ ಮೂಲಕ ಅತ್ಯುತ್ತಮ ಫಾರ್ಮ್‌ಗೆ ಮರಳಿದರು ಮತ್ತು ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಭಾರತಕ್ಕೆ ಹೆಚ್ಚಿನ ವಿಶ್ವಾಸವನ್ನು ನೀಡುತ್ತದೆ.

ಭಾರತ ತನ್ನ ಆಡುವ 11ರ ಬಳಗವನ್ನು ಬದಲಾಯಿಸುವ ಸಾಧ್ಯತೆಯಿಲ್ಲ

ಭಾರತ ತನ್ನ ಆಡುವ 11ರ ಬಳಗವನ್ನು ಬದಲಾಯಿಸುವ ಸಾಧ್ಯತೆಯಿಲ್ಲ

ಇನ್ನು ಈ ಸರಣಿಯಲ್ಲಿ ರಾಷ್ಟ್ರೀಯ ತಂಡಕ್ಕೆ ಪುನರಾಗಮನ ಮಾಡಿದ ಪೃಥ್ವಿ ಶಾ ಅವರನ್ನು ಆಡಿಸುವ ಒತ್ತಡದ ಹೊರತಾಗಿಯೂ ನಾಯಕ ಹಾರ್ದಿಕ್ ಪಾಂಡ್ಯ ಆಡುವ 11ರ ಬಳಗವನ್ನು ಬದಲಾಯಿಸುವ ಸಾಧ್ಯತೆಯಿಲ್ಲ ಎಂದು ತಿಳಿದುಬಂದಿದೆ.

ಮತ್ತೊಂದೆಡೆ, ನ್ಯೂಜಿಲೆಂಡ್ ತನ್ನ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ನಿಂದ ಹೆಚ್ಚಿನ ಪ್ರದರ್ಶನವನ್ನು ನಿರೀಕ್ಷಿಸುತ್ತಿದೆ. ಭಾರತ ವಿರುದ್ಧ ಅವರದೇ ನೆಲದಲ್ಲಿ ಅಪರೂಪದ ಸರಣಿ ಗೆಲ್ಲುವ ಅವಕಾಶ ಸಿಕ್ಕಿದ್ದು,ಕಿವೀಸ್ ಪಡೆ ಅದನ್ನು ಹೇಗೆ ಸವಾಲಾಗಿ ಸ್ವೀಕರಿಸುತ್ತದೆ ಎಂಬುದನ್ನು ನೋಡಬೇಕಾಗಿದೆ.

ಭಾರತ vs ನ್ಯೂಜಿಲೆಂಡ್ ಸಂಭಾವ್ಯ ಆಡುವ 11ರ ಬಳಗ

ಭಾರತ vs ನ್ಯೂಜಿಲೆಂಡ್ ಸಂಭಾವ್ಯ ಆಡುವ 11ರ ಬಳಗ

ಭಾರತ: ಪೃಥ್ವಿ ಶಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ/ರಜತ್ ಪಾಟಿದಾರ್, ಹಾರ್ದಿಕ್ ಪಾಂಡ್ಯ (ನಾಯಕ), ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಯುಜ್ವೇಂದ್ರ ಚಹಾಲ್, ಅರ್ಶ್‌ದೀಪ್ ಸಿಂಗ್, ಶಿವಂ ಮಾವಿ

ನ್ಯೂಜಿಲೆಂಡ್: ಫಿನ್ ಅಲೆನ್, ಡೆವೊನ್ ಕಾನ್ವೇ, ಡೇನ್ ಕ್ಲೀವರ್ (ವಿಕೆಟ್ ಕೀಪರ್), ಡೇರಿಲ್ ಮಿಚೆಲ್, ಮೈಕೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಮಾರ್ಕ್ ಚಾಪ್‌ಮನ್, ಲಾಕ್ ಫರ್ಗುಸನ್, ಜಾಕೋಬ್ ಡಫಿ, ಇಶ್ ಸೋಧಿ, ಬ್ಲೇರ್ ಟಿಕ್ನರ್.

Story first published: Tuesday, January 31, 2023, 16:25 [IST]
Other articles published on Jan 31, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X