ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs NZ: ಗ್ಲೆನ್ ಫಿಲಿಪ್ಸ್, ಡೆವೊನ್ ಕಾನ್ವೇ ಅರ್ಧಶತಕ, ಸಿರಾಜ್ ಮ್ಯಾಜಿಕ್ ಬೌಲಿಂಗ್ ಭಾರತದ ಗೆಲುವಿಗೆ ರನ್‌ಗಳ ಗುರಿ

IND vs NZ: Glenn Phillips And Devon Conway Fifty Helps New Zealand Score 160 Runs

ಭಾರತ-ನ್ಯೂಜಿಲೆಂಡ್ ಟಿ20 ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಭಾರತಕ್ಕೆ 161 ರನ್‌ಗಳ ಗುರಿ ನೀಡಿದೆ. ನೇಪಿಯರ್ ನ ಮೆಕ್‌ಲೀನ್ ಪಾರ್ಕ್‌ನಲ್ಲಿ ಈ ಪಂದ್ಯ ನಡೆಯುತ್ತಿದೆ.

ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮಳೆಯಿಂದಾಗಿ ತಡವಾಗಿ ಆರಂಭವಾದ ಪಂದ್ಯದಲ್ಲಿ ನ್ಯೂಜಿಲೆಂಡ್‌ನ ಗ್ಲೆನ್ ಫಿಲಿಪ್ಸ್, ಡೆವೊನ್ ಕಾನ್ವೇ ಅತ್ಯುತ್ತಮ ಬ್ಯಾಟಿಂಗ್ ಮಾಡಿದರು. ಮೊಹಮ್ಮದ್ ಸಿರಾಜ್ ಮತ್ತು ಅರ್ಷದೀಪ್ ಸಿಂಗ್ ತಲಾ 4 ವಿಕೆಟ್ ಪಡೆದು ಮಿಂಚಿದರು.

ನ್ಯೂಜಿಲೆಂಡ್‌ನ ಆರಂಭಿಕ ಬ್ಯಾಟರ್ ಫಿನ್ ಅಲೆನ್ ವೈಫಲ್ಯ ಮುಂದುವರೆಸಿದರು. 4 ಎಸೆತಗಳಲ್ಲಿ ಕೇವಲ 3 ರನ್ ಗಳಿಸಿ ಅರ್ಷದೀಪ್ ಸಿಂಗ್‌ ಬೌಲಿಂಗ್‌ನಲ್ಲಿ ಔಟ್ ಆದರು. ಕೇನ್ ವಿಲಿಯಮ್ಸನ್ ಬದಲಿಗೆ ಅವಕಾಶ ಪಡೆದ ಮಾರ್ಕ್ ಚಾಪ್‌ಮನ್ ಕೂಡ 12 ಎಸೆತಗಳಲ್ಲಿ 12 ರನ್ ಗಳಿಸಿ ಮೊಹಮ್ಮದ್ ಸಿರಾಜ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು.

ಟಿ20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ಕಳಪೆ ಪ್ರದರ್ಶನ: ನಾಯಕತ್ವ ತೊರೆದ ನಿಕೋಲಸ್ ಪೂರನ್ಟಿ20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ಕಳಪೆ ಪ್ರದರ್ಶನ: ನಾಯಕತ್ವ ತೊರೆದ ನಿಕೋಲಸ್ ಪೂರನ್

ಆದರೆ ಡೆವೊನ್ ಕಾನ್ವೆ ಮತ್ತು ಗ್ಲೆನ್ ಫಿಲಿಪ್ಸ್ ನ್ಯೂಜಿಲೆಂಡ್ ತಂಡಕ್ಕೆ ಆಸರೆಯಾದರು. ಗ್ಲೆನ್ ಫಿಲಿಪ್ಸ್ 33 ಎಸೆತಗಳಲ್ಲಿ 5 ಬೌಂಡರಿ 3 ಸಿಕ್ಸರ್ ಸಹಿತ 54 ರನ್ ಗಳಿಸಿದರು. ಅಂತಿಮ ಓವರ್ ಗಳಲ್ಲಿ ಮಾರಕವಾಗುತ್ತಿದ್ದ ಅವರನ್ನು ಸಿರಾಜ್ ಔಟ್ ಮಾಡಿದರು.

IND vs NZ: Glenn Phillips And Devon Conway Fifty Helps New Zealand Score 160 Runs

ಸಿರಾಜ್, ಅರ್ಷದೀಪ್ ಶ್ರೇಷ್ಠ ಬೌಲಿಂಗ್

ಡೆವೊನ್ ಕಾನ್ವೆ ಕೂಡ ಮುಂದಿನ ಓವರ್ ನಲ್ಲಿ ಅರ್ಷದೀಪ್ ಸಿಂಗ್‌ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. 49 ಎಸೆತಗಳಲ್ಲಿ 59 ರನ್ ಗಳಿಸಿದ ಅವರ ಇನ್ನಿಂಗ್ಸ್‌ನಲ್ಲಿ 5 ಬೌಂಡರಿ ಎರಡು ಸಿಕ್ಸರ್ ಸೇರಿದ್ದವು.

130 ರನ್‌ ಗಳಿಸಿದ್ದಾಗ 2 ವಿಕೆಟ್ ಕಳೆದುಕೊಂಡು ಉತ್ತಮ ಮೊತ್ತ ಕಲೆಹಾಕುವ ವಿಶ್ವಾಸದಲ್ಲಿದ್ದ ನ್ಯೂಜಿಲೆಂಡ್ ಅಂತಿಮ ಓವರ್ ಗಳಲ್ಲಿ ಕುಸಿತ ಕಂಡಿತು. 146 ರನ್‌ಗಳಿಸುವಾಗ 3 ವಿಕೆಟ್‌ ಕಳೆದುಕೊಂಡಿದ್ದ ನ್ಯೂಜಿಲೆಂಡ್, 149 ರನ್ ಗಳಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿತು. ಅಂತಿಮವಾಗಿ 19.4 ಓವರ್ ಗಳಲ್ಲಿ 160 ರನ್ ಗಳಿಗೆ ಆಲೌಟ್ ಆಯಿತು.

ಮೊಹಮ್ಮದ್ ಸಿರಾಜ್ ಅದ್ಭುತ ಬೌಲಿಂಗ್ ಪ್ರದರ್ಶಿಸಿದರು. 4 ಓವರ್ ಗಳಲ್ಲಿ 17 ರನ್ ನೀಡಿ 4 ವಿಕೆಟ್ ಪಡೆದು ಜೀವನ ಶ್ರೇಷ್ಠ ಸಾಧನೆ ಮಾಡಿದರು. ಅರ್ಷದೀಪ್ ಸಿಂಗ್ ಕೂಡ 4 ಓವರ್ ಗಳಲ್ಲಿ 37 ರನ್ ನೀಡಿ 4 ವಿಕೆಟ್ ಪಡೆದರು.

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್

ಭಾರತ: ಇಶಾನ್ ಕಿಶನ್, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ (ನಾಯಕ), ದೀಪಕ್ ಹೂಡಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಾಲ್

ನ್ಯೂಜಿಲೆಂಡ್: ಫಿನ್ ಅಲೆನ್, ಡೆವೊನ್ ಕಾನ್ವೇ, ಮಾರ್ಕ್ ಚಾಪ್ಮನ್, ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಆಡಮ್ ಮಿಲ್ನೆ, ಇಶ್ ಸೋಧಿ, ಟಿಮ್ ಸೌಥಿ(ನಾಯಕ), ಲಾಕಿ ಫರ್ಗುಸನ್

Story first published: Tuesday, November 22, 2022, 14:28 [IST]
Other articles published on Nov 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X