ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs NZ: ದ್ವಿಶತಕ ಬಾರಿಸಿದ ನಂತರ ಇಶಾನ್ ಕಿಶನ್ ಗ್ರಾಫ್ ಏರುತ್ತದೆ ಎಂದು ಭಾವಿಸಿದ್ದೆ; ಗೌತಮ್ ಗಂಭೀರ್

IND vs NZ: Indian Former Cricketer Gautam Gambhir Reaction On Ishan Kishans Poor Batting Form

ಭಾನುವಾರ, ಜನವರಿ 29ರಂದು ಲಕ್ನೋದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಆತಿಥೇಯ ಭಾರತ ತಂಡವು ಪ್ರವಾಸಿ ನ್ಯೂಜಿಲೆಂಡ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತು ಮತ್ತು ಮೂರು ಪಂದ್ಯಗಳ ಟಿ20 ಸರಣಿಯನ್ನು 1-1 ಅಂತರದಿಂದ ಸಮಬಲಗೊಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

ನ್ಯೂಜಿಲೆಂಡ್ ವಿರುದ್ಧದ ಕಳೆದ ಎರಡು ಟಿ20 ಪಂದ್ಯಗಳಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ ನಿರಾಸೆ ಮೂಡಿಸಿದ್ದಾರೆ. ಮೊದಲ ಪಂದ್ಯದಲ್ಲಿ 4 ರನ್ ಗಳಿಸಿ ಔಟಾದರೆ, ಎರಡನೇ ಪಂದ್ಯದಲ್ಲಿ 19 ರನ್ ಗಳಿಸಿ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆದರು.

IND vs NZ: ಟಿ20 ಕ್ರಿಕೆಟ್‌ನಲ್ಲಿ ಭಾರತ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ ಯುಜ್ವೇಂದ್ರ ಚಾಹಲ್IND vs NZ: ಟಿ20 ಕ್ರಿಕೆಟ್‌ನಲ್ಲಿ ಭಾರತ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ ಯುಜ್ವೇಂದ್ರ ಚಾಹಲ್

ಬಾಂಗ್ಲಾದೇಶ ವಿರುದ್ಧದ ಏಕದಿನ ದ್ವಿಶತಕದ ನಂತರ ಇಶಾನ್ ಕಿಶನ್ ಅವರ ಗ್ರಾಫ್ ಬೆಳೆಯುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಇಶಾನ್ ಕಿಶನ್ ಅವರ ಇತ್ತೀಚಿನ ಬ್ಯಾಟಿಂಗ್ ಪ್ರದರ್ಶನಗಳಿಂದ ನನಗೆ ಆಶ್ಚರ್ಯವಾಗಿದೆ ಎಂದು ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಹೇಳಿದ್ದಾರೆ.

IND vs NZ: Indian Former Cricketer Gautam Gambhir Reaction On Ishan Kishans Poor Batting Form

ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಗೌತಮ್ ಗಂಭೀರ್, ಯುವ ಭಾರತೀಯ ಬ್ಯಾಟರ್‌ಗಳು ಯಾವಾಗಲೂ ದೊಡ್ಡ ಸಿಕ್ಸರ್‌ಗಳನ್ನು ಬಾರಿಸಲು ಪ್ರಯತ್ನಿಸುವ ಬದಲು, ಕಠಿಣ ಪರಿಸ್ಥಿತಿಯಲ್ಲಿ ಸ್ಟ್ರೈಕ್ ಅನ್ನು ಹೇಗೆ ತಿರುಗಿಸಬೇಕೆಂದು ಕಲಿಯಬೇಕು ಎಂದು ಗೌತಮ್ ಗಂಭೀರ್ ಸಲಹೆ ನೀಡಿದರು.

"ಭಾರತದ ಯುವ ಬ್ಯಾಟ್ಸ್‌ಮನ್‌ಗಳು ಸ್ಟ್ರೈಕ್ ಅನ್ನು ಹೇಗೆ ತಿರುಗಿಸಬೇಕು ಎಂಬುದನ್ನು ಕಲಿಯಬೇಕು. ಏಕೆಂದರೆ, ನೆಲದ ಕೆಳಗೆ ಬಾಲ್ ಬರುವ ವಿಕೆಟ್‌ನಲ್ಲಿ ದೊಡ್ಡ ಸಿಕ್ಸರ್‌ಗಳನ್ನು ಹೊಡೆಯುವುದು ಸುಲಭವಲ್ಲ," ಎಂದು ಗೌತಮ್ ಗಂಭೀರ್ ಅಭಿಪ್ರಾಯಪಟ್ಟರು.

IND vs NZ: ಯುಜ್ವೇಂದ್ರ ಚಾಹಲ್ ನನ್ನ ಬ್ಯಾಟಿಂಗ್ ಕೋಚ್ ಎಂದ ಸೂರ್ಯಕುಮಾರ್ ಯಾದವ್IND vs NZ: ಯುಜ್ವೇಂದ್ರ ಚಾಹಲ್ ನನ್ನ ಬ್ಯಾಟಿಂಗ್ ಕೋಚ್ ಎಂದ ಸೂರ್ಯಕುಮಾರ್ ಯಾದವ್

ಡಿಸೆಂಬರ್ 2022ರಲ್ಲಿ ಬಾಂಗ್ಲಾದೇಶ ವಿರುದ್ಧದ ತನ್ನ ದ್ವಿಶತಕ ನಂತರ ಇಶಾನ್ ಕಿಶನ್ ಅದೇ ಫಾರ್ಮ್ ಮುಂದುವರೆಸುತ್ತಾರೆ ಎಂದು ಭಾವಿಸಿದ್ದೆ ಅವರು ಕಿಶನ್ ಅವರ ಪ್ರದರ್ಶನದಿಂದ ಆಶ್ಚರ್ಯಚಕಿತರಾಗಿದ್ದಾರೆ ಎಂದು ಗೌತಮ್ ಗಂಭೀರ್ ಹೇಳಿದರು.

"ಡಿಸೆಂಬರ್ 2022ರಲ್ಲಿ ಬಾಂಗ್ಲಾದೇಶ ವಿರುದ್ಧದ ತನ್ನ ದ್ವಿಶತಕ ನಂತರ ಇಶಾನ್ ಕಿಶನ್ ಅದೇ ಫಾರ್ಮ್ ಮುಂದುವರೆಸುತ್ತಾರೆ ಎಂದುಕೊಂಡಿದ್ದೆ. ನ್ಯೂಜಿಲೆಂಡ್ ವಿರುದ್ಧ ಅವರು ಬ್ಯಾಟ್ ಮಾಡಿದ ರೀತಿಯಿಂದ ನನಗೆ ಆಶ್ಚರ್ಯವಾಗಿದೆ. ಕಿವೀಸ್ ಬೌಲರ್‌ಗಳನ್ನು ಎದುರಿಸಲು ಕಷ್ಟಪಡುತ್ತಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಬ್ಯಾಟಿಂಗ್ ಲಯಕ್ಕೆ ಮರಳಬೇಕಿದೆ," ಎಂದು ಮಾಜಿ ಎಡಗೈ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ತಿಳಿಸಿದರು.

IND vs NZ: Indian Former Cricketer Gautam Gambhir Reaction On Ishan Kishans Poor Batting Form

ಇಡೀ ಭಾರತೀಯ ಬ್ಯಾಟಿಂಗ್ ವಿಭಾಗವು ಎದುರಾಳಿ ಸ್ಪಿನ್ ಬೌಲಿಂಗ್ ವಿರುದ್ಧ ಹೋರಾಡಿದೆ ಎಂದ ಗೌತಮ್ ಗಂಭೀರ್, ಲಕ್ನೋ ಮೈದಾನದಲ್ಲಿ ಇಶಾನ್ ಕಿಶನ್ ಅವರು ಮೈಕೆಲ್ ಬ್ರೇಸ್‌ವೆಲ್ ಅವರ ಬೌಲಿಂಗ್ ಅನ್ನು ಎದುರಿಸುವಾಗ ಅದು ಸ್ಪಷ್ಟವಾಗಿದೆ ಎಂದರು.

"ಸ್ಪಿನ್ ವಿರುದ್ಧ ಆಡಲು ಬ್ಯಾಟ್ಸ್‌ಮನ್‌ಗಳಿಗೆ ಕುಶಲತೆ ಮತ್ತು ಸಾಮರ್ಥ್ಯ ಬೇಕು. ದೊಡ್ಡ ಸಿಕ್ಸರ್‌ಗಳನ್ನು ಹೊಡೆಯುವುದು ಸುಲಭ. ಆದರೆ, ಸ್ಟ್ರೈಕ್‌ಗಳನ್ನು ಸ್ಥಿರವಾಗಿ ತಿರುಗಿಸುವ ಸಾಮರ್ಥ್ಯ ಹೊಂದಿರಬೇಕು," ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ತಿಳಿಸಿದರು.

ಸ್ಪಿನ್ನರ್‌ಗಳು ಪಿಚ್‌ನಿಂದ ಸಾಕಷ್ಟು ನೆರವು ಪಡೆಯುತ್ತಿರುವುದರಿಂದ ಟಿ20 ಕ್ರಿಕೆಟ್‌ಗೆ ಈ ತರಹದ ವಿಕೆಟ್ ಸೂಕ್ತವಲ್ಲ ಎಂದು ಗೌತಮ್ ಗಂಭೀರ್ ಲಕ್ನೋದ ಪಿಚ್ ಪರಿಸ್ಥಿತಿ ಬಗ್ಗೆ ಕಿಡಿಕಾರಿದರು.

Story first published: Monday, January 30, 2023, 19:13 [IST]
Other articles published on Jan 30, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X