IND vs NZ: ಆತ ನಿವೃತ್ತಿ ಹೊಂದಿಲ್ಲ, ಆದರೆ ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ; ಕೇನ್ ವಿಲಿಯಮ್ಸನ್

ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರು ಮುಂದಿನ ದಿನಗಳಲ್ಲಿ ಸ್ಟಾರ್ ಬ್ಯಾಟ್ಸ್‌ಮನ್ ಮಾರ್ಟಿನ್ ಗಪ್ಟಿಲ್ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಆದರೆ ಆತ ನಿವೃತ್ತಿಯಾಗಿಲ್ಲ ಎಂದು ತಿಳಿಸಿದರು.

ಭವಿಷ್ಯದ ಏಕದಿನ ಪಂದ್ಯಗಳಲ್ಲಿ ತಂಡಕ್ಕೆ ಆಯ್ಕೆ ಮಾಡಲು ಪರಿಗಣಿಸುತ್ತಾರೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಹೆಚ್ಚಿನದಾಗಿ ಉತ್ತರಿಸದ ಕೇನ್ ವಿಲಿಯಮ್ಸನ್, ನವೆಂಬರ್ 25ರಿಂದ ಪ್ರಾರಂಭವಾಗುವ ಭಾರತ ವಿರುದ್ಧ 3 ಪಂದ್ಯಗಳ ಸರಣಿಯಲ್ಲಿ ಬ್ಲ್ಯಾಕ್‌ಕ್ಯಾಪ್ಸ್ ತಮ್ಮ ಅನುಭವಿ ಬ್ಯಾಟರ್‌ನನ್ನು ಮಿಸ್ ಮಾಡಿಕೊಳ್ಳುವುದಾಗಿ ಹೇಳಿದರು.

ಭಾರತ vs ನ್ಯೂಜಿಲೆಂಡ್: ಪ್ರಮುಖ ದಾಖಲೆಗಳ ಮೇಲೆ ಕಣ್ಣಿಟ್ಟ ಇತ್ತಂಡಗಳ ಆಟಗಾರರು!ಭಾರತ vs ನ್ಯೂಜಿಲೆಂಡ್: ಪ್ರಮುಖ ದಾಖಲೆಗಳ ಮೇಲೆ ಕಣ್ಣಿಟ್ಟ ಇತ್ತಂಡಗಳ ಆಟಗಾರರು!

ಮಾರ್ಟಿನ್ ಗಪ್ಟಿಲ್ ಅವರು ಏಕದಿನ ಸರಣಿಯ ಮೊದಲು ನ್ಯೂಜಿಲೆಂಡ್ ಕ್ರಿಕೆಟ್‌ನ ಕೇಂದ್ರ ಒಪ್ಪಂದದಿಂದ ಬಿಡುಗಡೆಯನ್ನು ಕೋರಿದರು. ಕಳೆದ ಕೆಲವು ತಿಂಗಳುಗಳಲ್ಲಿ ಹೀಗೆ ಮಾಡಿದ 3ನೇ ನ್ಯೂಜಿಲೆಂಡ್ ಆಟಗಾರರಾದರು.

2022ರ ಟಿ20 ವಿಶ್ವಕಪ್‌ಗೆ ಮಾರ್ಟಿನ್ ಗಪ್ಟಿಲ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ನ್ಯೂಜಿಲೆಂಡ್ ತಂಡ ಹಿರಿಯ ಆರಂಭಿಕ ಆಟಗಾರನಿಗಿಂತ ಫಿನ್ ಅಲೆನ್‌ಗೆ ಆದ್ಯತೆ ನೀಡಿದ್ದರಿಂದ ಅವರು ಆಸ್ಟ್ರೇಲಿಯಾದಲ್ಲಿ ಬೆಂಚ್ ಕಾಯಿಸಬೇಕಾಯಿತು.

ಟಿ20 ವಿಶ್ವಕಪ್‌ನ ಮುಕ್ತಾಯದ ನಂತರ, ಮಾರ್ಟಿನ್ ಗಪ್ಟಿಲ್ ಅವರು ನ್ಯೂಜಿಲೆಂಡ್ ಕ್ರಿಕೆಟ್‌ನ ಕೇಂದ್ರ ಒಪ್ಪಂದಗಳಿಂದ ಹೊರಗುಳಿಯಲು ಪ್ರಯತ್ನಿಸಿದರು. ಇದಕ್ಕೂ ಮುನ್ನ ಇತ್ತೀಚೆಗೆ ಮುಕ್ತಾಯಗೊಂಡ ಟಿ20 ಸರಣಿಯಿಂದ ಹೊರಗುಳಿದ ನಂತರ ಭಾರತದ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೂ ಮಾರ್ಟಿನ್ ಗಪ್ಟಿಲ್ ಅವರನ್ನು ಆಯ್ಕೆ ಮಾಡಲಾಗಿಲ್ಲ.

ಏಕದಿನ ಸರಣಿಯ ಮುನ್ನಾದಿನ ಗುರುವಾರದಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇನ್ ವಿಲಿಯಮ್ಸನ್, ಮಾರ್ಟಿನ್ ಗಪ್ಟಿಲ್ ಇನ್ನೂ ಬಹಳಷ್ಟು ಕೆಲಸ ಮಾಡಬೇಕಾಗಿದೆ. ಆದರೆ ಅವರು ಭವಿಷ್ಯದಲ್ಲಿ ನ್ಯೂಜಿಲೆಂಡ್ ತಂಡದ ಯೋಜನೆಗಳಲ್ಲಿ ಇರುತ್ತಾರೆಯೇ ಎಂಬ ಬಗ್ಗೆ ಪ್ರತಿಕ್ರಿಯಿಸಲಿಲ್ಲ. ಟಿ20 ವಿಶ್ವಕಪ್‌ನಲ್ಲಿ ಅವಕಾಶ ಸಿಗದಿದ್ದರೂ, ಮಾರ್ಟಿನ್ ಗಪ್ಟಿಲ್ ತನ್ನನ್ನು ತಾನು ನಿಭಾಯಿಸಿದ ರೀತಿಯನ್ನು ಕಿವೀಸ್ ನಾಯಕ ಶ್ಲಾಘಿಸಿದರು.

"ಮಾರ್ಟಿನ್ ಗಪ್ಟಿಲ್ ವಿಶ್ವದ ಬೇರೆ ಕಡೆ ಇತರ ಆಯ್ಕೆಗಳನ್ನು ಹುಡುಕಲು ನಿರ್ಧಾರ ಮಾಡಿದ್ದಾರೆ. ಆದರೆ ಆಟಗಾರನಾಗಿ ಮತ್ತು ಗುಂಪಿನ ಅನುಭವಿ ಸದಸ್ಯರಾಗಿ ತಂಡಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ನ್ಯೂಜಿಲೆಂಡ್ ತಂಡದ ಅತ್ಯುತ್ತಮ ವೈಟ್-ಬಾಲ್ ಆಟಗಾರರಲ್ಲಿ ಒಬ್ಬರಾಗಿದ್ದಾರೆ," ಎಂದು ಕೇನ್ ವಿಲಿಯಮ್ಸನ್ ಹೇಳಿದರು.

"ಟಿ20 ವಿಶ್ವಕಪ್‌ನಲ್ಲಿಯೂ ಸಹ ಆಡುವ ಅವಕಾಶವನ್ನು ಪಡೆಯದೆ ಎಲ್ಲಾ ಆಟಗಾರರಿಗೆ ಸಹಕಾರ ನೀಡುವಲ್ಲಿ ಅವರು ಅತ್ಯುತ್ತಮವಾಗಿದ್ದರು. ಅವರು ತಂಡದ ಪರಿಸರದಲ್ಲಿ ಅದ್ಭುತವಾಗಿದ್ದರು," ಎಂದು ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ತಿಳಿಸಿದರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, November 25, 2022, 6:08 [IST]
Other articles published on Nov 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X