ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೆಹ್ವಾಗ್ ನಂತರ ಮಯಾಂಕ್ ಅಗರ್ವಾಲ್ ಬೆಸ್ಟ್ ಅಂದಿದ್ಯಾಕೆ ಸಂಜಯ್ ಬಂಗಾರ್!

Ind vs Nz: Mayank Agarwal is the most attacking batter against spin after Virender Sehwag said Sanjay Bangar

ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಅದ್ಭುತ ಶತಕ ಸಿಡಿಸಿ ಮಿಂಚಿದ್ದಾರೆ. ಮಯಾಂಕ್ ಅಗರವವಾಲ್ ಸಿಡಿಸಿದ ಶತಕದ ನೆರವಿನಿಂದ ಟೀಮ್ ಇಂಡಿಯಾ ಸದ್ಯ ಸುಸ್ಥಿತಿಯಲ್ಲಿದೆ. ಅಜೇಯ ಶತಕ ಸಿಡಿಸಿರುವ ಮಯಾಂಕ್ ಅಗರ್ವಾಲ್ ಎರಡನೇ ದಿನಕ್ಕೆ ಆಟ ಕಾಯ್ದಿರಿಸಿದ್ದಾರೆ. ಈ ಬ್ಯಾಟಿಂವಗ್ ಪ್ರದರ್ಶಣ ನೊಡಿದ ನಂತರ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಂಜಯ್ ಬಂಗಾರ್ ಮಯಾಂಕ್ ಆಟದ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಟೀಮ್ ಇಂಡಿಯಾದ ಬ್ಯಾಟರ್‌ಗಳ ಪೈಕಿ ಸ್ಪಿನ್ನರ್‌ಗಳ ವಿರುದ್ಧ ವಿರೇಂದ್ರ ಸೆಹ್ವಾಗ್ ನಂತರ ಆಕ್ರಮಣಕಾರಿಯಾಗಿ ಆಡುವ ಆಟಗಾರ ಮಯಾಂಕ್ ಅಗರ್ವಾಲ್ ಎಂದು ಸಂಜಯ್ ಬಂಗಾರ್ ಅಭಿಪ್ರಾಯಪಟ್ಟಿದ್ದಾರೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಅಜೇಯ 120 ರನ್‌ಗಳನ್ನು ಸಿಡಿಸಿದ್ದಾರೆ. ಮಯಾಂಕ್ ಅಗರ್ವಾಲ್ ಪ್ರದರ್ಶನದ ನೆರವಿನಿಂದ ಟೀಮ್ ಇಂಡಿಯಾ ಮೊದಲ ದಿನದಂತ್ಯಕ್ಕೆ 221/4 ರನ್‌ಗಳಿಸಿದೆ.

ತಡವಾಗಿ ಶುರುವಾದ 2ನೇ ಟೆಸ್ಟ್ ಪಂದ್ಯದ ಟಾಸ್ ವರದಿ, ಪ್ಲೇಯಿಂಗ್ XI; ತಂಡದಲ್ಲಿ ಭಾರೀ ಬದಲಾವಣೆ!ತಡವಾಗಿ ಶುರುವಾದ 2ನೇ ಟೆಸ್ಟ್ ಪಂದ್ಯದ ಟಾಸ್ ವರದಿ, ಪ್ಲೇಯಿಂಗ್ XI; ತಂಡದಲ್ಲಿ ಭಾರೀ ಬದಲಾವಣೆ!

ಸ್ಟಾರ್‌ಸ್ಪೋರ್ಟ್ಸ್‌ ವಾಹಿನಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಜಯ್ ಬಂಗಾರ್ ಮಯಾಂಕ್ ಅಗರ್ವಾಕ್ ಪ್ರದರ್ಶನದ ಬಗ್ಗೆ ಭಾರೀ ಮೆಚ್ಚಿಗೆಯನ್ನು ವ್ಯಕ್ತಪಡಿಸಿದ್ದಾರೆ. "ನನ್ನ ಅಭಿಪ್ರಾಯದ ಪ್ರವಾರ ಮಯಾಂಕ್ ಅಗರ್ವಾಲ್ ಸ್ಪಿನ್ನರ್‌ಗಳ ವಿರುದ್ಧ ವಿರೇಂದ್ರ ಸೆಹ್ವಾಗ್ ನಂತರ ಭಾರೀ ಆಕ್ರಮಣಕಾರಿಯಾಗಿ ಆಡುವ ಆಟಗಾರನಾಗಿದ್ದಾರೆ. ಆತ ಸ್ಪಿನ್ನರ್‌ಗಳ ಎಸೆತಕ್ಕೆ ಮುನ್ನುಗ್ಗಿ ಬಂದು ನೇರವಾಗಿ ಬೌಂಡರಿಗೆ ಗುರಿಯಿಟ್ಟು ಬಾರಿಸುತ್ತಾರೆ" ಎಂದು ಸಂಜಯ್ ಬಂಗಾರ್ ಪ್ರಶಂಶಿಸಿದ್ದಾರೆ.

ಜಡೇಜಾ ಸೇರಿ ಮೂವರು ಪ್ರಮುಖರು ನ್ಯೂಜಿಲೆಂಡ್‌ ವಿರುದ್ಧದ 2ನೇ ಟೆಸ್ಟ್‌ನಿಂದ ಹೊರಕ್ಕೆ!ಜಡೇಜಾ ಸೇರಿ ಮೂವರು ಪ್ರಮುಖರು ನ್ಯೂಜಿಲೆಂಡ್‌ ವಿರುದ್ಧದ 2ನೇ ಟೆಸ್ಟ್‌ನಿಂದ ಹೊರಕ್ಕೆ!

ಮಯಾಂಕ್ ಅಗರ್ವಾಲ್ ಅವರ ಮೊದಲ ದಿನದಾಟದ ಬ್ಯಾಟಿಂಗ್‌ನಲ್ಲಿ 14 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್‌ಗಳು ಸಿಡಿದಿತ್ತು. ಅದರಲ್ಲೂ ಮಯಾಂಕ್ ಅಗರ್ವಾಲ್ ಸ್ಪಿನ್ನರ್‌ಗಳ ವಿರುದ್ಧ ಆಕ್ರಮಣಕಾರಿ ಪ್ರದರ್ಶನ ನೀಡಿದ್ದಾರೆ. ಕಿವಿಸ್ ಸ್ಪಿನ್ನರ್‌ಗಳು ತಳವೂರಲು ಸಾಧ್ಯವಾಗದಂತೆ ದಿನವಿಡೀ ಬ್ಯಾಟಿಂಗ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಮಯಾಂಕ್ ಅಗರ್ವಾಲ್ ಪ್ರದರ್ಶನದ ಬಗ್ಗೆ ಆಕಾಶ್ ಚೋಪ್ರ ಕೂಡ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. "ಆರಂಭ ಬಹಳ ಕಠಿಣವಾಗಿರುತ್ತದೆ. ಹಾಗಿದ್ದರೂ ಅವರು ಸ್ಪಿನ್ನರ್‌ಗಳ ವಿರುದ್ಧ ಅದ್ಭುತವಾಗಿ ಆಡಿದ್ದಾರೆ. ಮಯಾಂಕ್ ಅಗರ್ವಾಲ್ ಅವರಿಗೆ ಅವರ ಸ್ಥಾನದ ಬಗ್ಗೆ ಅವರಿಗೆ ಒತ್ತಡವಿತ್ತು. ಅಲ್ಲದೆ ಪಿಚ್ ಆರಂಭದಿಂದಲೇ ಸ್ವಿಂಗ್ ಹಾಗೂ ಬೌನ್ಸ್ ಪಡೆದುಕೊಳ್ಳುತ್ತಿತ್ತು. ಇಂತಾ ಸಮದರ್ಭದಲ್ಲಿ ಯಾವ ಎಸೆತಜಕ್ಕೆ ಆಡಬೇಕು ಯಾವುದನ್ನು ಬಿಡಬೇಕು ಎಂಬ ತಖಮಳಗಳು ಉಂಟಾಗುತ್ತದೆ. ಹೀಗಿದ್ದಾಗ ಇದರಿಂದ ಹೊರಬರಲು ಉತ್ತಮ ಪ್ರದರ್ಶನ ನೀಡುವುದು ಅನಿವಾರ್ಯವಾಗುತ್ತದೆ" ಎಂದಿದ್ದಾರೆ ಆಕಾಶ್ ಚೋಪ್ರ.

ಭಾರತ vs ನ್ಯೂಜಿಲೆಂಡ್‌: ದ್ರಾವಿಡ್ ಬೌಲಿಂಗ್‌ಗೆ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿರೋ ವಿಡಿಯೋ ವೈರಲ್
ಟೀಮ್ ಇಂಡಿಯಾ: ಮಯಾಂಕ್ ಅಗರ್ವಾಲ್, ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಸರ್ ಪಟೇಲ್, ಜಯಂತ್ ಯಾದವ್, ಉಮೇಶ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್

ನ್ಯೂಜಿಲೆಂಡ್‌: ಟಾಮ್ ಲ್ಯಾಥಮ್ (ನಾಯಕ), ವಿಲ್ ಯಂಗ್, ಡೇರಿಲ್ ಮಿಚೆಲ್, ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ರಚಿನ್ ರವೀಂದ್ರ, ಕೈಲ್ ಜೇಮಿಸನ್, ಟಿಮ್ ಸೌಥಿ, ವಿಲಿಯಂ ಸೋಮರ್ವಿಲ್ಲೆ, ಅಜಾಜ್ ಪಟೇಲ್

ಹಜಾಜ್ ಪಟೇಲ್ ಕನಸು ನನಸಾದ ದಿನ | Oneindia Kannada

Story first published: Friday, December 3, 2021, 21:01 [IST]
Other articles published on Dec 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X