
ಇಶಾನ್ ಕಿಶನ್ ವಿಕೆಟ್‌ಕೀಪರ್- ಬ್ಯಾಟರ್ ಆಗಿ ಆಡುವ ಸಾಧ್ಯತೆ
ಬುಧವಾರ, ಜನವರಿ 18ರಂದು ಮೂರು ಏಕದಿನ ಪಂದ್ಯಗಳ ಹೈದರಾಬಾದ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಮೊದಲ ಪಂದ್ಯವನ್ನು ಆಡಲಿರುವ ಭಾರತ ತಂಡ ಕಠಿಣ ಸವಾಲು ಒಡ್ಡಲು ಸಿದ್ಧತೆ ನಡೆಸಿದೆ. ಸೀಮಿತ ಓವರ್‌ಗಳ ಸರಣಿಗೆ ಕೆಎಲ್ ರಾಹುಲ್ ಅಲಭ್ಯತೆ ಕಾರಣದಿಂದ ಇಶಾನ್ ಕಿಶನ್ ವಿಕೆಟ್‌ಕೀಪರ್- ಬ್ಯಾಟರ್ ಆಗಿ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಸ್ಟಾರ್ ಸ್ಪೋರ್ಟ್ಸ್ ಶೋ "ಗೇಮ್ ಪ್ಲಾನ್' ನಲ್ಲಿ ಸಂವಾದದ ಸಂದರ್ಭದಲ್ಲಿ, ಸಂಜಯ್ ಮಂಜ್ರೇಕರ್ ಅವರಿಗೆ ಈ ಬಾರಿ ಆಡುವ 11ರ ಬಳಗದಲ್ಲಿ ಶುಭ್ಮನ್ ಗಿಲ್- ಕೆಎಲ್ ರಾಹುಲ್ ಜೋಡಿ ಅಥವಾ ಶುಭ್ಮನ್ ಗಿಲ್-ಇಶಾನ್ ಕಿಶನ್ ಜೋಡಿ ಇನ್ನಿಂಗ್ಸ್ ಆರಂಭಿಸಲು ನೋಡುತ್ತೀರಾ ಎಂದು ಕೇಳಲಾಯಿತು.

3ನೇ ಕ್ರಮಾಂಕದಲ್ಲಿ ಶುಭ್ಮನ್ ಗಿಲ್ ಬ್ಯಾಟ್ ಮಾಡಲಿ
ಈ ಪ್ರಶ್ನೆಗೆ ಉತ್ತರಿಸಿದ ಸಂಜಯ್ ಮಂಜ್ರೇಕರ್, "ಈ ಸನ್ನಿವೇಶ ತುಂಬಾ ಕಠಿಣವಾಗಿರುತ್ತದೆ. ಇದರಿಂದ ಒಬ್ಬ ಆಟಗಾರ ನಿಜವಾಗಿಯೂ ಅಸಮಾಧಾನಗೊಳ್ಳುತ್ತಾನೆ. ಈ ಅವ್ಯವಸ್ಥೆಯನ್ನು ಪರಿಹರಿಸಲು ನನಗೆ ಒಂದು ಉಪಾಯವಿದೆ. 3ನೇ ಕ್ರಮಾಂಕದಲ್ಲಿ ಶುಭ್ಮನ್ ಗಿಲ್ ಬ್ಯಾಟ್ ಮಾಡಲಿ, ಅವನು ಆ ಸ್ಥಾನವನ್ನು ನಿಭಾಯಿಸಬಲ್ಲನೆಂದು ತೋರುತ್ತದೆ ಮತ್ತು ವಿರಾಟ್ ಕೊಹ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು, ತನ್ನ 3ನೇ ಕ್ರಮಾಂಕವನ್ನು ತ್ಯಾಗ ಮಾಡಬೇಕೆಂದು," ತಿಳಿಸಿದ್ದಾರೆ.
ಈ ಹಿಂದೆಯೂ ತಂಡದ ಸಲುವಾಗಿ ವಿರಾಟ್ ಕೊಹ್ಲಿ ತಮ್ಮ 3ನೇ ಸ್ಥಾನವನ್ನು ತ್ಯಾಗ ಮಾಡಿದ್ದಾರೆ ಮತ್ತು ಇಶಾನ್ ಕಿಶನ್ ಬ್ಯಾಟಿಂಗ್‌ನಲ್ಲಿ ಅಗ್ರಸ್ಥಾನದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವುದರಿಂದ, ಆ ಪ್ರಯೋಜನವನ್ನು ಪಡೆಯಬೇಕೆಂದು ಮಾಜಿ ಭಾರತೀಯ ಬ್ಯಾಟ್ಸ್‌ಮನ್ ಸಂಜಯ್ ಮಂಜ್ರೇಕರ್ ಗಮನಸೆಳೆದರು.

ಇಶಾನ್ ಕಿಶನ್ ಕೇವಲ ಎರಡು ಬಾರಿ ಮಾತ್ರ ಇನ್ನಿಂಗ್ಸ್ ತೆರೆದಿದ್ದಾರೆ
ಇಶಾನ್ ಕಿಶನ್ ಅವರು ಆಡಿದ ಒಂಬತ್ತು ಏಕದಿನ ಇನ್ನಿಂಗ್ಸ್‌ಗಳಲ್ಲಿ ಕೇವಲ ಎರಡು ಬಾರಿ ಮಾತ್ರ ಇನ್ನಿಂಗ್ಸ್ ತೆರೆದಿದ್ದಾರೆ. ನಾಲ್ಕು ಸಂದರ್ಭಗಳಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದಾರೆ ಮತ್ತು ಮೂರು ಬಾರಿ 4ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಇಳಿದಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಭಾರತದ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಕಡಿಮೆ. ಆದಾಗ್ಯೂ, ಟೀಂ ಮ್ಯಾನೇಜ್‌ಮೆಂಟ್ ಶುಭ್ಮನ್ ಗಿಲ್ ಬದಲಿಗೆ ಇಶಾನ್ ಕಿಶನ್ ಅವರನ್ನು ಆಡುವ 11ರ ಬಳಗದಲ್ಲಿ ಸೇರಿಸಲಿದೆಯೇ ಅಥವಾ ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡುವುದನ್ನು ಮುಂದುವರಿಸಲಿದೆಯೇ ಎಂಬುದನ್ನು ಪಂದ್ಯದವರೆಗೂ ಕಾದು ನೋಡಬೇಕಿದೆ.

ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಸ್ ಭರತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಹಾಲ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್.