ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೊಚ್ಚಲ ಟೆಸ್ಟ್‌ನಲ್ಲಿ ಕಣಕ್ಕಿಳಿಯಲು ಐಯ್ಯರ್ ಸಜ್ಜು, 3 ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯುತ್ತಾ ರಹಾನೆ ಪಡೆ!

Ind vs NZ: Rahane likely to field three spinners, Shreyas Iyer set to make Test debut

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ಗುರುವಾರ ಆರಂಭವಾಗಲಿದೆ. ಕೆಲ ಪ್ರಮುಖ ಆಟಗಾರರ ಅಲಭ್ಯತೆಯಲ್ಲಿ ಈ ಪಂದ್ಯ ನಡೆಯುತ್ತಿದ್ದು ಟೀಮ್ ಇಂಡಿಯಾ ಯಾವ ರೀತಿಯಲ್ಲಿ ಪ್ರದರ್ಶನ ನೀಡಲಿದೆ ಎಂಬ ಕುತೂಹಲ ಎಲ್ಲರಲ್ಲಿದೆ. ಅದರಲ್ಲೂ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅಲಭ್ಯತೆಯಲ್ಲಿ ಅಜಿಂಕ್ಯಾ ರಹಾನೆ ಈ ತಂಡವನ್ನು ಮುನ್ನಡೆಸುತ್ತಿದ್ದು ನ್ಯೂಜಿಲೆಂಡ್ ವಿರುದ್ಧ ಯಾವ ರೀತಿಯ ರಣತಂತ್ರವನ್ನು ತಂಡ ಹೆಣೆದಿದೆ ಎಂಬುದು ಕುತೂಹಲ ಮೂಡಿಸಿದೆ.

ಇನ್ನು ಈ ಪಂದ್ಯದ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾದ ಆಡುವ ಬಳಗ ಹೇಗಿರಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ಯಾವ ಸಂಯೋಜನೆಯೊಂದಿಗೆ ಕಣಕ್ಕಿಳಿಯಲಿದೆ ಎಂಬ ವಿಚಾರವಾಗಿ ಕೆಲವೊಂದು ಸುಳಿವು ದೊರೆತಿದೆ. ಅದರಲ್ಲಿ ಪ್ರಮುಖವಾಗಿ ಬೌಲಿಂಗ್ ವಿಭಾಗದಲ್ಲಿನ ಭಾರತದ ಯೋಜನೆ ಹಾಗೂ ಪ್ರಮುಖ ಆಟಗಾರರ ಅಲಭ್ಯತೆಯಲ್ಲಿ ಬ್ಯಾಟಿಂಗ್‌ನಲ್ಲಿ ಟೀಮ್ ಇಂಡಿಯಾದ ಬದಲಾವಣೆ ಬಗ್ಗೆಯೂ ಕೆಲ ಕುತೂಹಲಕಾರಿ ಮಾಹಿತಿಗಳು ಲಭ್ಯವಾಗಿದೆ.

ಆಟಗಾರರು ಏನು ತಿನ್ನಬೇಕು, ಏನು ತಿನ್ನಬಾರದು ಎಂಬುದನ್ನ ಬಿಸಿಸಿಐ ತಿಳಿಸಲ್ಲ: ಅರುಣ್ ಧುಮಾಲ್ಆಟಗಾರರು ಏನು ತಿನ್ನಬೇಕು, ಏನು ತಿನ್ನಬಾರದು ಎಂಬುದನ್ನ ಬಿಸಿಸಿಐ ತಿಳಿಸಲ್ಲ: ಅರುಣ್ ಧುಮಾಲ್

ಮೂವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕೆ: ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಮೊದಲ ಪಂದ್ಯವನ್ನು ಕಾನ್ಪುರದಲ್ಲಿರುವ ಗ್ರೀನ್‌ಪಾರ್ಕ್ ಸ್ಟೇಡಿಯಂನಲ್ಲಿ ಆಡಲು ಸಜ್ಜಾಗಿದೆ. ಗ್ರೀನ್‌ಪಾರ್ಕ್ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚಿನ ಅನುಕೂಲವನ್ನು ಒದಗಿಸಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದು ಭಾರತ ಅದಕ್ಕಾಗಿ ವಿಶೇಷ ರಣತಂತ್ರವನ್ನು ಹೆಣೆದಿದೆ. ಮೂವರು ಸ್ಪಿನ್ನರ್‌ಗಳೊಂದಿಗೆ ಟೀಮ್ ಇಂಡಿಯಾ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಅದರಲ್ಲೂ ಆರ್ ಅಶ್ವಿನ್ ಹಾಗೂ ಅಕ್ಷರ್ ಪಟೇಲ್ ಜೋಡಿ ಈ ಸರಣಿಯಲ್ಲಿಯೂ ಮೋಡಿ ಮಾಡಲು ಸಜ್ಜಾಗಿದೆ. ಇದು ಎದುರಾಳಿ ತಂಡಕ್ಕೆ ದೊಡ್ಡ ತಲೆನೋವಾಗುವುದರಲ್ಲಿ ಅನುಮಾನವಿಲ್ಲ. ಈ ಜೋಡಿಯನ್ನು ಕಿವೀಸ್ ಪಡೆ ಹೇಗೆ ಎದುರಿಸುತ್ತದೆ ಎಂಬುದು ಕೂಡ ಮಹತ್ವವನ್ನು ಪಡೆದುಕೊಂಡಿದೆ.

ಭಾರತಕ್ಕೂ ಕಿವೀಸ್ ಸ್ಪಿನ್ನರ್‌ಗಳ ಭಿತಿ: ಇನ್ನು ಕಾನ್ಪುರದ ಪಿಚ್‌ಅನ್ನು ದೃಷ್ಟಿಯಲ್ಲಿಟ್ಟುಕೊಂಡು ನ್ಯೂಜಿಲೆಂಡ್ ತಂಡ ಕೂಡ ಪೂರಕವಾದ ಯೋಜನೆ ರೂಪಿಸಿಕೊಂಡಿದೆ. ಕಿವೀಸ್ ಪಡೆ ಕೂಡ ಭಾರತದ ವಿರುದ್ಧ ಮೂವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಹೀಗಾಗಿ ಟೀಮ್ ಇಂಡಿಯಾ ದಾಂಡಿಗರಿಗೂ ಇದು ಸವಾಲಾಗಲಿದೆ. ಸ್ವತಃ ನಾಯಕ ರಹಾನೆ ಕೂಡ ಈ ಪಿಚ್‌ನಲ್ಲಿ ನ್ಯೂಜಿಲೆಂಡ್ ಸ್ಪಿನ್ನರ್‌ಗಳು ಭಾರತೀಯ ಬ್ಯಾಟರ್‌ಗಳಿಗೆ ಸವಾಲಾಗುವ ಸಾಧ್ಯತೆಯಿದೆ ಎಂದಿದ್ದಾರೆ. ಆದರೆ ಪಿಚ್ ಹೇಗಿದ್ದರೂ ನಾವು ಅದಕ್ಕೆ ತಕ್ಕನಾದ ಪ್ರದರ್ಶನ ನೀಡಬೇಕು ಎಂದಿದ್ದಾರೆ ಅಜಿಂಕ್ಯಾ ರಹಾನೆ.

ಟೆಸ್ಟ್ ಮಾದರಿಗೆ ಪದಾರ್ಪಣೆ ಮಾಡಲು ಶ್ರೇಯಸ್ ಐಯ್ಯರ್ ಸಜ್ಜು: ಟೀಮ್ ಇಂಡಿಯಾದ ಸೀಮಿತ ಓವರ್‌ನ ತಂಡದಲ್ಲಿ ಖಾಯಂ ಸದಸ್ಯನಾಗಿರುವ ಶ್ರೇಯಸ್ ಐಯ್ಯರ್ ಸುದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ಈವರೆಗೂ ಅವಕಾಶ ಪಡೆದುಕೊಂಡಿರಲಿಲ್ಲ, ಆದರೆ ಇದೀಗ ಶ್ರೇಯಸ್ ಐಯ್ಯರ್ ತಮ್ಮ ಚೊಚ್ಚಲ ಪಂದ್ಯವನ್ನಾಡಲು ಸಜ್ಜಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಆಯ್ಕೆಯಾಗಿರುವ ಐಯ್ಯರ್ ಕಾನ್ಪುರ ಟೆಸ್ಟ್‌ನಲ್ಲಿ ಆಡಲಿದ್ದಾರೆ. ತಂಡದ ಆರಂಭಿಕ ಆಟಗಾರ ಕೆಎಲ್ ರಾಹುಲ್ ಗಾಯದ ಕಾರಣದಿಂದಾಗಿ ಹೊರಗುಳಿಯಲಿದ್ದು ಅವರ ಬದಲಿಗೆ ಶ್ರೇಯಸ್ ಐಯ್ಯರ್ ಸ್ಥಾನ ಗಿಟ್ಟಿಸಿಕೊಳ್ಳಲುದ್ದಾರೆ. ಈ ಬಗ್ಗೆ ಸ್ವತಃ ನಾಯಕ ಅಜಿಂಕ್ಯಾ ರಹಾನೆ ಮಾಹಿತಿ ನೀಡಿದ್ದು "ಶ್ರೇಯಸ್ ಐಯ್ಯರ್ ಪದಾರ್ಪಣೆ ಮಾಡಲಿದ್ದಾರೆ" ಎಂದಿದ್ದಾರೆ.

ಭಾರತ-ನ್ಯೂಜಿಲೆಂಡ್ ಮೊದಲ ಟೆಸ್ಟ್‌: ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ 11ಭಾರತ-ನ್ಯೂಜಿಲೆಂಡ್ ಮೊದಲ ಟೆಸ್ಟ್‌: ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ 11

ಸಂಯೋಜನೆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲ್ಲ: ಇನ್ನು ಇದೇ ಸಂದರ್ಭದಲ್ಲಿ ನಾಯಕ ಶ್ರೇಯಸ್ ಐಯ್ಯರ್ ತಂಡದ ಸಂಯೋಜನೆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ನಾಳೆ ಯಾರೆಲ್ಲಾ ಆಡಲಿದ್ದಾರೋ ಅವರೆಲ್ಲರೂ ಪೂರ್ಣ ಪ್ರಮಾಣದಲ್ಲಿ ಆಡಲು ಸಿದ್ಧವಾಗಿರುತ್ತಾರೆ" ಎಂದಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಮೂವರು ಸ್ಪಿನ್ನರ್‌ಗಳಾಗಿ ಯಾರೆಲ್ಲಾ ಆಡಲಿದ್ದಾರೆ ಎಂಬ ಬಗ್ಗೆಯೂ ರಹಾನೆ ಗುಟ್ಟು ಬಿಟ್ಟುಕೊಟ್ಟಿಲ್ಲ. ಯಾರೆಲ್ಲಾ ಆಡಲಿದ್ದಾರೆ ಎಂಬ ಬಗ್ಗೆ ನಾನು ಯಾವುದೇ ಗುಟ್ಟುಬಿಟ್ಟುಕೊಡಲ್ಲ. ನಾವು ಸಂಯೋಜನ ಬಗ್ಗೆ ಇನ್ನು ಕೂಡ ಸ್ಪಷ್ಟತೆಯನ್ನು ಹೊಂದಿಲ್ಲ. ಸಾಮಾನ್ಯವಾಗಿಯೇ ನಿಮಗೆಲ್ಲಾ ಸ್ಪಿನ್ ಸ್ನೇಹಿ ಪಿಚ್‌ಗಳಿವೆ ಎಂಬುದು ತಿಳಿದಿರುತ್ತದೆ. ಪಿಚ್ ಹೇಗೆ ವರ್ತಿಸುತ್ತದೆ ಎಂಬುದು ನಮಗೂ ತಿಳಿದಿಲ್ಲ. ನಾಳೆಯವರೆಗೂ ನೋಡಿ ಪರೀಕ್ಷಿಸಿ ನಂತರ ತೀರ್ಮಾನಿಸುತ್ತೇವೆ" ಎಂದಿದ್ದಾರೆ ಅಜಿಂಕ್ಯಾ ರಹಾನೆ.

ಟೀಮ್ ಇಂಡಿಯಾ ಸ್ಕ್ವಾಡ್: ಅಜಿಂಕ್ಯಾ ರಹಾನೆ (ನಾಯಕ), ಸೂರ್ಯಕುಮಾರ್ ಯಾದವ್, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ (ಉಪನಾಯಕ), ಶುಬ್ಮನ್ ಗಿಲ್, ಶ್ರೇಯಸ್ ಅಯ್ಯರ್, ವೃದ್ಧಿಮಾನ್ ಸಹಾ (ವಿಕೆಟ್-ಕೀಪರ್), ಕೆಎಸ್ ಭರತ್ (ವಿಕೆಟ್-ಕೀಪರ್), ರವೀಂದ್ರ ಜಡೇಜಾ, ಆರ್. ಅಶ್ವಿನ್, ಆರ್. ಪಟೇಲ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಉಮೇಶ್ ಯಾದವ್, ಎಂಡಿ ಸಿರಾಜ್, ಪ್ರಸಿದ್ಧ್ ಕೃಷ್ಣ.
ನ್ಯೂಜಿಲೆಂಡ್ ಸ್ಕ್ವಾಡ್: ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಕೈಲ್ ಜೇಮಿಸನ್, ಟಾಮ್ ಲ್ಯಾಥಮ್, ಹೆನ್ರಿ ನಿಕೋಲ್ಸ್, ಅಜಾಜ್ ಪಟೇಲ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ವಿಲ್ ಸೋಮರ್ವಿಲ್ಲೆ, ಟಿಮ್ ಸೌಥಿ, ರಾಸ್ ಟೇಲರ್, ವಿಲ್ ಯಂಗ್, ನೀಲ್ ವ್ಯಾಗ್ನರ್

Story first published: Wednesday, November 24, 2021, 18:39 [IST]
Other articles published on Nov 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X