ಮಹತ್ವದ ಟಿ20 ಸರಣಿಯಿಂದ ಟೀಮ್ ಇಂಡಿಯಾ ಪ್ರಮುಖ ಆಟಗಾರರಿಗೆ ವಿಶ್ರಾಂತಿ ಸಂಭವ

ಮುಂಬರುವ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ವಿರುದ್ಧದ ಟಿ20 ಸರಣಿಯಲ್ಲಿ ಭಾರತದ ಪ್ರಮುಖ ಸ್ಟಾರ್ ಆಟಗಾರರಿಗೆ ವಿಶ್ರಾಂತಿ ನಿಡುವ ಸಾಧ್ಯತೆಯಿದೆ. ಟೀಮ್ ಇಂಡಿಯಾದ ಹಾಲಿ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಜಸ್ಪ್ರೀತ್ ಬೂಮ್ರಾ ಸೇರಿದಂತೆ ಇನ್ನೂ ಕೆಲ ಅನುಭವಿ ಆಟಗಾರರು ಈ ಸರಣಿಯಿಂದ ಹೊರಗುಳಿಯುವ ಸಾಧ್ಯತೆಯಿದೆ. ಮುಂದಿನ ಟಿ20 ವಿಶ್ವಕಪ್‌ನ ಫೈನಲ್ ಪಂದ್ಯ ನಡೆದು ಕೇವಲ ಮೂರನೇ ದಿನಗಳ ಅಂತರದಲ್ಲಿ ಈ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಆರಂಭವಾಗಲಿದೆ.

ಟಿ20 ವಿಶ್ವಕಪ್‌ನ ಮುಕ್ತಾಯದ ಬಳಿಕ ಭಾರತದಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಅಕ್ಟೋಬರ್ 17ರಿಂದ ಈ ಸರಣಿ ಆಯೋಜನೆಯಾಗಲಿದ್ದು ಕಳೆದ ಮೇ ತಿಂಗಳಿನಲ್ಲಿ ಐಪಿಎಲ್ ಮುಂದೂಡಿಕೆಯಾದ ಬಳಿಕ ಮತ್ತೆ ಭಾರತದಲ್ಲಿ ಕ್ರಿಕೆಟ್ ಸರಣಿ ಆಯೋಜನೆಯಾಗಲಿದೆ.

ಟಿ20 ವಿಶ್ವಕಪ್‌ನಲ್ಲಿ ಈತನೇ ಟೀಮ್ ಇಂಡಿಯಾಗೆ ಆಧಾರ: ಕನ್ನಡಿಗನ ಬಗ್ಗೆ ಬ್ರೇಟ್ ಲೀಗೆ ಭರವಸೆಟಿ20 ವಿಶ್ವಕಪ್‌ನಲ್ಲಿ ಈತನೇ ಟೀಮ್ ಇಂಡಿಯಾಗೆ ಆಧಾರ: ಕನ್ನಡಿಗನ ಬಗ್ಗೆ ಬ್ರೇಟ್ ಲೀಗೆ ಭರವಸೆ

ಟೀಮ್ ಇಂಡಿಯಾ ಸತತವಾಗಿ ಕ್ರಿಕೆಟ್ ಆಡುತ್ತಿರುವ ಕಾರಣದಿಂದಾಗಿ ಕೆಲ ಆಟಗಾರರು ಸುದೀರ್ಘ ಕಾಲದಿಂದ ಬಯೋಬಬಲ್‌ನಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಈ ಬಯೋಬಬಲ್‌ನಿಂದ ಕೆಲ ಕಾಲ ವಿರಾಮ ನೀಡುವ ಕಾರಣದಿಂದಾಗಿ ಈ ಸರಣಿಗೆ ಅನುಭವಿ ಆಟಗಾರರಿಗೆ ವಿಶ್ರಾಂತಿ ನಿಡುವ ಸಾಧ್ಯತೆಯಿದೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬೂಮ್ರಾ ಸೇರಿದಂತೆ ಕೆಲ ಪ್ರಮುಖ ಆಟಗಾರರು ನಿರಂತರವಾಗಿ ಬಯೋಬಬಲ್‌ನಲ್ಲಿ ಕಾಲ ಕಳೆದಯುತ್ತಿದ್ದಾರೆ.

ಐಪಿಎಲ್ 2021: ಕೆಕೆಆರ್‌ ಬ್ಯಾಟ್ಸ್‌ಮನ್‌ ದಿನೇಶ್ ಕಾರ್ತಿಕ್‌ಗೆ ದಂಡಐಪಿಎಲ್ 2021: ಕೆಕೆಆರ್‌ ಬ್ಯಾಟ್ಸ್‌ಮನ್‌ ದಿನೇಶ್ ಕಾರ್ತಿಕ್‌ಗೆ ದಂಡ

ಕಳೆದ ಆಸ್ಟ್ರೇಲಿಯಾ ಪ್ರವಾಸ ಮುಗಿಸಿ ಬಂದ ಭಾರತೀಯ ತಂಡದ ಆಟಗಾರರಿಗೆ ಒಂದು ವಾರಗಳ ಕಾಲ ಬಯೋಬಬಲ್‌ನಿಂದ ವಿರಾಮ ದೊರೆತಿತ್ತು. ಅದಾದ ಬಳಿಕ ಇಂಗ್ಲೆಂಡ್ ವಿರುದ್ಧ ಮೂರು ಮಾದರಿಯ ಸರಣಿಯಲ್ಲಿ ಪಾಲ್ಗೊಂಡಿದ್ದ ಭಾರತೀಯ ತಂಡ ನಂತರ ಭಾರತದಲ್ಲಿ ಐಪಿಎಲ್ ಸರಣಿಗಾಗಿ ಐಪಿಎಲ್ ಬಯೋಬಬಲ್‌ಗೆ ಸೇರ್ಪಡೆಯಾಗಿದ್ದರು. ನಂತರ ಕೊರೊನಾವೈರಸ್‌ನ ಕಾರಣದಿಂದಾಗಿ ಸರಣಿ ಮುಂದೂಡಿಕೆಯಾದರೂ ಟೀಮ್ ಇಂಡಿಯಾ ಆಟಗಾರರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಹಾಗೂ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸಲು ಇಂಗ್ಲೆಂಡ್‌ಗೆ ಪ್ರಯಾಣಿಸಿದ್ದರು. ಈ ಸರಣಿಯ ನಂತರ ಐಪಿಎಲ್‌ನ ಎರಡನೇ ಚರಣದ ಪಂದ್ಯಗಳನ್ನಾಡಲು ಯುಎಇನಲ್ಲಿರುವ ಆಟಗಾರರು ಟಿ20 ವಿಶ್ವಕಪ್‌ಗಾಗಿ ಟೀಮ್ ಇಂಡಿಯಾದ ಬಯೋಬಬಲ್‌ಗೆ ಸೇರ್ಪಡೆಯಾಗಲಿದ್ದಾರೆ.

ಹೀಗಾಗಿ ಭಾರತದ ಪರವಾಗಿ ಮೂರು ಮಾದರಿಯಲ್ಲಿಯೂ ಆಡುತ್ತಿರುವ ಆಟಗಾರರು ನಿರಂತರವಾಗಿ ಬಯೋಬಬಲ್ ಒಳಗಿದ್ದು ಸಹಜವಾಗಿಯೇ ಒತ್ತಡವನ್ನು ಅನುಭವಿಸುವ ಸಾಧ್ಯತೆಯಿದೆ. ಹೀಗಾಗಿ ಬಿಸಿಸಿಐ ಇಂತಾ ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಇದರಲ್ಲಿ ಪ್ರಮುಖವಾಗಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬೂಮ್ರಾ ಇದ್ದು ಈ ಮೂವರಿಗೆ ವಿಶ್ರಾಂತಿ ನೀಡುವುದು ಬಹುತೇಕ ಖಚಿತವಾಗಿದೆ.

ಐಪಿಎಲ್‌ 2021: ಕೆಟ್ಟ ದಾಖಲೆ ನಿರ್ಮಿಸಿದ ಡೆಲ್ಲಿ ಕ್ಯಾಪಿಟಲ್ಸ್
ಈ ಬಗ್ಗೆ ಮೂಲಗಳ ಪ್ರತಿಕ್ರಿಯೆಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. "ಭಾರತದ ಹೆಚ್ಚಿನ ಅನುಭವಿ ಆಟಗಾರರು, ಅದರಲ್ಲೂ ಹಿರಿಯ ಆಟಗಾರರು ಕಳೆದ ನಾಲ್ಕು ತಿಂಗಳಿನಲ್ಲಿ ಮೂರು ಬೇರೆ ಬೇರೆ ಬಯೋಬಬಲ್‌ನಲ್ಲಿ ಕಾಲ ಕಳೆದಿದ್ದಾರೆ. ಟಿ20 ವಿಶ್ವಕಪ್‌ ಮುಕ್ತಾಯವಾಗುತ್ತಿದ್ದಂತೆಯೇ ಅಂತಾ ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಡಿಸೆಂಬರ್ ಅಂತ್ಯದಲ್ಲಿ ದಕ್ಷಿಣ ಆಪ್ರಿಕಾ ಪ್ರವಾಸದ ಸಂದರ್ಭದಲ್ಲಿ ಅಂತಾ ಆಟಗಾರರಿಗೆ ತಾಜಾತನದಿಂದ ಮರಳಲು ಸಮಯ ನೀಡುವ ಅವಶ್ಯಕತೆಯಿದೆ" ಎಂದು ಪಿಟಿಐಗೆ ಆಯ್ಕೆ ಸಮಿತಿಯ ಮೂಲಗಳು ಮಾಹಿತಿ ನೀಡಿದೆ.

ಕಿವಿಸ್ ವಿರುದ್ಧ ಯುವ ತಂಡ ಕಣಕ್ಕೆ ಸಾಧ್ಯತೆ: ಟಿ20 ವಿಶ್ವಕಪ್‌ ಅಂತ್ಯವಾಗುತ್ತಿದ್ದಂತೆಯೇ ನಡೆಯಲಿರುವ ನ್ಯೂಜಿಲೆಂಡ್ ತಂಡದ ವಿರುದ್ಧದ ಈ ಸರಣಿಯಲ್ಲಿ ಬಹುತೇಕ ಯುವ ಆಟಗಾರರ ತಂಡ ಆಡುವ ಸಾಧ್ಯತೆ ದಟ್ಟವಾಗಿದೆ. ಅದೆಲ್ಲೂ ಈ ಬಾರಿಯ ಐಪಿಎಲ್‌ನಲ್ಲಿ ಮಿಂಚಿದ ಕೆಲ ಯುವ ಸ್ಟಾರ್ ಆಟಗಾರರಿಗೆ ಈ ಸರಣಿಯಲ್ಲಿ ಅವಕಾಶ ದೊರೆಯುವ ಸಾಧ್ಯತೆಯಿದೆ. ಆವೇಶ್ ಖಾನ್, ಹರ್ಷಲ್ ಪಟೇಲ್, ವೆಂಕಟೇಶ್ ಐಯ್ಯರ್, ಸಂಜು ಸ್ಯಾಮ್ಸನ್, ಋತುರಾಜ್ ಗಾಯಕ್ವಾಡ್ ಮುಂತಾದ ಆಟಗಾರರು ಟೀಮ್ ಇಂಡಿಯಾ ಪರವಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ.

ಟಿ20 ವಿಶ್ವಕಪ್‌ ಇತಿಹಾಸದಲ್ಲಿ 6 ಮರೆಯಲಾಗದ ಘಟನೆಗಳಿವು!ಟಿ20 ವಿಶ್ವಕಪ್‌ ಇತಿಹಾಸದಲ್ಲಿ 6 ಮರೆಯಲಾಗದ ಘಟನೆಗಳಿವು!

ನ್ಯೂಜಿಲೆಂಡ್ ವಿರುದ್ಧದ ಈ ಸರಣಿ ನವೆಂಬರ್ 17, 19 ಹಾಗೂ 21ರಂದು ಭಾರತದಲ್ಲಿಯೇ ನಡೆಯಲಿದೆ. ಈ ಮೂರು ಪಂದ್ಯಗಳು ಕ್ರಮವಾಗಿ ಜೈಪುರ, ರಾಂಚಿ ಹಾಗೂ ಕೋಲ್ಕತ್ತಾದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಅದಾದ ಬಳಿಕ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದ್ದು ಮೊದಲ ಪಂದ್ಯ ನವೆಂಬರ್ 25ರಿಂದ ಕಾನ್ಪುರದಲ್ಲಿ ನಡೆದರೆ ಎರಡನೇ ಪಂದ್ಯ ಡಿಸೆಂಬರ್ 3ರಿಂದ ಮುಂಬೈನಲ್ಲಿ ನಡೆಯಲಿದೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 20 - October 27 2021, 03:30 PM
ಇಂಗ್ಲೆಂಡ್
ಬಾಂಗ್ಲಾದೇಶ್
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, October 14, 2021, 18:52 [IST]
Other articles published on Oct 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X