ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ 2021: ಕೆಟ್ಟ ದಾಖಲೆ ನಿರ್ಮಿಸಿದ ಡೆಲ್ಲಿ ಕ್ಯಾಪಿಟಲ್ಸ್

List of Teams finishing in top two and not making final since 2011

ಶಾರ್ಜಾ: ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ (ಅಕ್ಟೋಬರ್ 14) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಕ್ವಾಲಿಫೈಯರ್-2 ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 3 ವಿಕೆಟ್ ರೋಚಕ ಜಯ ಗಳಿಸಿದೆ. ವೆಂಕಟೇಶ್ ಐಯ್ಯರ್ ಅರ್ಧ ಶತಕದೊಂದಿಗೆ ಪಂದ್ಯ ಗೆದ್ದಿರುವ ಕೆಕೆಆರ್ ಐಪಿಎಲ್‌ನಲ್ಲಿ ಮೂರನೇ ಬಾರಿಗೆ ಫೈನಲ್‌ಗೆ ಪ್ರವೇಶಿಸಿದ ಸಾಧನೆ ಮಾಡಿದೆ. ಫೈನಲ್‌ನಲ್ಲಿ ಕೋಲ್ಕತ್ತಾ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅಕ್ಟೋಬರ್ 15ರಂದು ಸೆಣಸಾಡಲಿದೆ.

ಟಿ20 ವಿಶ್ವಕಪ್‌ ಇತಿಹಾಸದಲ್ಲಿ 6 ಮರೆಯಲಾಗದ ಘಟನೆಗಳಿವು!ಟಿ20 ವಿಶ್ವಕಪ್‌ ಇತಿಹಾಸದಲ್ಲಿ 6 ಮರೆಯಲಾಗದ ಘಟನೆಗಳಿವು!

ಡೆಲ್ಲಿ ಕ್ಯಾಪಿಟಲ್ಸ್ ತಂಡ ಕಳೆದ ಸೀಸನ್‌ನಲ್ಲೂ ಫೈನಲ್‌ಗೆ ಪ್ರವೇಶಿಸಿತ್ತು. ಆದರೆ ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋತು ನಿರಾಸೆ ಅನುಭವಿಸಿತ್ತು. ಕಪ್‌ ಗೆಲ್ಲದ ತಂಡಗಳ ಸಾಲಿನಲ್ಲಿರುವ ಡೆಲ್ಲಿಗೆ ಈ ಬಾರಿಯೂ ಟ್ರೋಫಿ ಗೆಲ್ಲುವ ಆಸೆ ಈಡೇರಿಲ್ಲ. ಕೆಕೆಆರ್ ವಿರುದ್ಧದ ಸೋಲಿನೊಂದಿಗೆ ಡೆಲ್ಲಿ ಬೇಡದ ದಾಖಲೆಯೊಂದಕ್ಕೆ ಕಾರಣವಾಗಿದೆ.

ಡೆಲ್ಲಿ-ಕೋಲ್ಕತ್ತ ಸ್ಕೋರ್‌ ಮಾಹಿತಿ

ಡೆಲ್ಲಿ-ಕೋಲ್ಕತ್ತ ಸ್ಕೋರ್‌ ಮಾಹಿತಿ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್, ಪೃಥ್ವಿ ಶಾ 18, ಶಿಖರ್ ಧವನ್ 36, ಶ್ರೇಯಸ್ ಅಯ್ಯರ್ 30, ರಿಷಭ್ ಪಂತ್ 6, ಮಾರ್ಕಸ್ ಸ್ಟೋಯಿನಿಸ್ 18, ಶಿಮ್ರಾನ್ ಹೆಟ್ಮೈರ್ 17, ಅಕ್ಸರ್ ಪಟೇಲ್ 4 ರನ್‌ನೊಂದಿಗೆ 20 ಓವರ್‌ಗೆ 5 ವಿಕೆಟ್ ಕಳೆದು 135 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಕೋಲ್ಕತ್ತಾ ನೈಟ್ ರೈಡರ್ಸ್, ಶುಬ್ಮನ್ ಗಿಲ್ 46, ವೆಂಕಟೇಶ್ ಅಯ್ಯರ್ 55, ರಾಹುಲ್ ತ್ರಿಪಾಠಿ 12, ನಿತೀಶ್ ರಾಣಾ 13 ರನ್‌ನೊಂದಿಗೆ 19.5 ಓವರ್‌ಗೆ 7 ವಿಕೆಟ್ ಕಳೆದು 136 ರನ್ ಗಳಿಸಿತು. ಐಪಿಎಲ್ ಆರಂಭಿಕ 7 ಪಂದ್ಯಗಳ ಬಳಿಕ ಅಂಕಪಟ್ಟಿಯಲ್ಲಿ ತಳ ಸೇರಿದ್ದ ತಂಡ ಆ ಬಳಿಕ ಫೈನಲ್‌ವರೆಗಿನ ಸಾಧನೆ ಮಾಡಿರುವ ಕೆಕೆಆರ್ ವಿಶೇಷ ದಾಖಲೆಗೆ ಕಾರಣವಾಗಿದೆ.

ಬೇಡದ ದಾಖಲೆ ಬರೆದ ಡೆಲ್ಲಿ

ಬೇಡದ ದಾಖಲೆ ಬರೆದ ಡೆಲ್ಲಿ

ಕೆಕೆಆರ್ ವಿರುದ್ಧದ ಸೋಲಿನೊಂದಿಗೆ ಡೆಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ ನಲ್ಲಿ ಬೇಡದ ದಾಖಲೆಯೊಂದಕ್ಕೆ ಕಾರಣವಾಗಿದೆ. ಐಪಿಎಲ್‌ ಅಂಕಪಟ್ಟಿಯಲ್ಲಿ ಅಗ್ರ ಎರಡರಲ್ಲಿ ಸ್ಥಾನ ಪಡೆದು ಕೂಡ ಫೈನಲ್‌ಗೆ ಪ್ರವೇಶ ಗಿಟ್ಟಿಸಿಕೊಳ್ಳದ ತಂಡಗಳ ಸಾಲಿಗೆ ಡೆಲ್ಲಿ ಕ್ಯಾಪಿಟಲ್ಸ್ ಸೇರಿಕೊಂಡಿದೆ. ಡೆಲ್ಲಿ ತಂಡ ಇದೇ ಬೇಡದ ದಾಖಲೆ ಎರಡು ಸಾರಿ ಬರೆದಿದೆ. ಡೆಲ್ಲಿ ಬಿಟ್ಟರೆ ಗುಜರಾತ್ ಲಯನ್ಸ್ ಕೂಡ ಈ ದಾಖಲೆ ಪಟ್ಟಿಯಲ್ಲಿದೆ.
ಐಪಿಎಲ್‌ ಅಂಕಪಟ್ಟಿಯಲ್ಲಿ 2021ರ ನಂತರ ಅಗ್ರ ಎರಡರೊಳಗೆ ಸ್ಥಾನ ಪಡೆದೂ ಫೈನಲ್‌ಗೆ ಪ್ರವೇಶಿಸದ ತಂಡಗಳು
* ಡೆಲ್ಲಿ ಕ್ಯಾಪಿಟಲ್ಸ್ 2012
* ಗುಜರಾತ್ ಲಯನ್ಸ್ 2016
* ಡೆಲ್ಲಿ ಕ್ಯಾಪಿಟಲ್ಸ್ 2021

ಟೀಮ್ ಇಂಡಿಯಾ ಹೊಸ ಜರ್ಸಿ ಅನಾವರಣ:ನಿಮ್ಗೂ ಇದೆ ಧರಿಸೋ ಅವಕಾಶ | Oneindia Kannada
ಡೆಲ್ಲಿ vs ಕೋಲ್ಕತ್ತಾ ಪ್ಲೇಯಿಂಗ್ XI

ಡೆಲ್ಲಿ vs ಕೋಲ್ಕತ್ತಾ ಪ್ಲೇಯಿಂಗ್ XI

ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ XI
ಶುಬ್ಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಇಯಾನ್ ಮಾರ್ಗನ್ (ಸಿ), ದಿನೇಶ್ ಕಾರ್ತಿಕ್ (ವಿಕೆ), ಸುನಿಲ್ ನರೈನ್, ಶಕೀಬ್ ಅಲ್ ಹಸನ್, ಲಾಕಿ ಫರ್ಗುಸನ್, ಶಿವಂ ಮಾವಿ, ವರುಣ್ ಚಕ್ರವರ್ತಿ.
ಬೆಂಚ್: ಹರ್ಭಜನ್ ಸಿಂಗ್, ಟಿಮ್ ಸೌಥಿ, ಆಂಡ್ರೆ ರಸೆಲ್, ಬೆನ್ ಕಟ್ಟಿಂಗ್, ಕರುಣ್ ನಾಯರ್, ಪವನ್ ನೇಗಿ, ಕುಲದೀಪ್ ಯಾದವ್, ಗುರ್ಕೀರತ್ ಸಿಂಗ್ ಮಾನ್, ಶೆಲ್ಡನ್ ಜಾಕ್ಸನ್, ಸಂದೀಪ್ ವಾರಿಯರ್, ಟಿಮ್ ಸೀಫೆರ್ಟ್, ಪ್ರಸಿದ್ ಕೃಷ್ಣ, ರಿಂಕು ಸಿಂಗ್, ಕಮಲೇಶ್ ನಾಗರಕೋಟಿ, ವೈಭವ್ ಅರೋರಾ.

ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ XI
ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (c & wk), ಮಾರ್ಕಸ್ ಸ್ಟೋಯಿನಿಸ್, ಶಿಮ್ರಾನ್ ಹೆಟ್ಮೈರ್, ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಾಡಾ, ಆವೇಶ್ ಖಾನ್, ಅನ್ರಿಚ್ ನಾರ್ಟ್ಜೆ.
ಬೆಂಚ್: ಟಾಮ್ ಕರನ್, ಇಶಾಂತ್ ಶರ್ಮಾ, ಅಜಿಂಕ್ಯ ರಹಾನೆ, ಅಮಿತ್ ಮಿಶ್ರಾ, ಉಮೇಶ್ ಯಾದವ್, ಸ್ಟೀವನ್ ಸ್ಮಿತ್, ಸ್ಯಾಮ್ ಬಿಲ್ಲಿಂಗ್ಸ್, ಲುಕ್ಮನ್ ಮೇರಿವಾಲಾ, ಬೆನ್ ದ್ವಾರಶೂಯಿಸ್, ಪ್ರವೀಣ್ ದೂಬೆ, ವಿಷ್ಣು ವಿನೋದ್, ಕುಲ್ವಂತ್ ಖೇಜ್ರೋಲಿಯಾ, ಲಲಿತ್ ಯಾದವ್, ರಿಪಾಲ್ ಪಟೇಲ್.

Story first published: Thursday, October 14, 2021, 9:58 [IST]
Other articles published on Oct 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X