ಭಾರತದೆದುರು ಆಡುವುದು ನಿಜಕ್ಕೂ ದೊಡ್ಡ ಸವಾಲಾಗಿರುತ್ತದೆ: ನ್ಯೂಜಿಲೆಂಡ್ ಕೋಚ್

ಮುಂಬರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ದ್ವಿಪಕ್ಷೀಯ ಟಿ20 ಮತ್ತು ಟೆಸ್ಟ್ ಸರಣಿ ಸಾಕಷ್ಟು ಕುತೂಹಲ ಮೂಡಿಸಿದ್ದು, ಬಲಿಷ್ಠ ತಂಡಗಳ ಕಾದಾಟಕ್ಕೆ ಭಾರತವು ವೇದಿಕೆಯಾಗಿದೆ.

ವಿಶ್ವಕ್ರಿಕೆಟ್‌ನಲ್ಲಿ ಅಗ್ರಕ್ರಮಾಂಕದ ಎರಡು ಟೆಸ್ಟ್‌ ತಂಡಗಳ ಮುಖಾಮುಖಿ ನೋಡಲು ಕ್ರಿಕೆಟ್‌ ಪ್ರೇಮಿಗಳು ಕಾತುರರಾಗಿದ್ದಾರೆ. ಜೊತೆಗೆ ಎರಡು ತಂಡಗಳು ಪ್ರಬಲ ಸ್ಪರ್ಧೆಯನ್ನೊಡ್ಡಲಿವೆ. ಹೀಗಾಗಿ ಭಾರತದೆದೆರು ಸರಣಿ ಕಠಿಣ ಮತ್ತು ಸವಾಲಿನಿಂದ ಕೂಡಿರುತ್ತದೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗ್ಯಾರಿ ಸ್ಟೆಡ್ ಹೇಳಿದ್ದಾರೆ.

ಭಾರತವು ಇತ್ತೀಚಿನ ದಿನಗಳಲ್ಲಿ ಬಲಿಷ್ಠ ತಂಡಗಳಲ್ಲಿ ಒಂದಾಗಿದೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಸಿಸಿ T20 ವಿಶ್ವಕಪ್ 2021 ರಲ್ಲಿ ಅವರ ಕಳಪೆ ಪ್ರದರ್ಶನದ ಹೊರತಾಗಿಯೂ, ಯಾವುದೇ ತಂಡವನ್ನ ಮಣಿಸುವ ಸಾಮರ್ಥ್ಯ ಹೊಂದಿದ್ದಾರೆ. ಅದ್ರಲ್ಲೂ ತವರಿನಲ್ಲಿ ಭಾರತ ಬಹುತೇಕ ಅಜೇಯವಾಗಿದೆ. ಟೆಸ್ಟ್‌ ಫಾರ್ಮೆಟ್‌ನಲ್ಲಿ ಅವರನ್ನು ಸೋಲಿಸಲು ಇದು ಇನ್ನಷ್ಟು ಕಠಿಣವಾಗುತ್ತದೆ. ವಿರಾಟ್ ಕೊಹ್ಲಿ ಪಡೆ 2017 ರಿಂದ ತವರಿನಲ್ಲಿ ಕೇವಲ ಎರಡು ಟೆಸ್ಟ್‌ಗಳನ್ನು ಸೋತಿದೆ.

ಕಠಿಣ ಕೆಲಸದ ಜವಾಬ್ದಾರಿ ನ್ಯೂಜಿಲೆಂಡ್ ಕೈಲಿದೆ

ಕಠಿಣ ಕೆಲಸದ ಜವಾಬ್ದಾರಿ ನ್ಯೂಜಿಲೆಂಡ್ ಕೈಲಿದೆ

ಭಾರತ ವಿರುದ್ಧದ ಟೆಸ್ಟ್ ಹಾಗೂ ಟಿ20 ಸರಣಿ ಕುರಿತು ಮಾತನಾಡಿರುವ ನ್ಯೂಜಿಲೆಂಡ್ ಕೋಚ್ ಗ್ಯಾರಿ, ಕಿವೀಸ್ ಕೈನಲ್ಲಿ ಕಠಿಣ ಕೆಲಸವಿದೆ. ಭಾರತವನ್ನು ಸೋಲಿಸಬೇಕಾದರೆ ಅವರು ತಮ್ಮ ಅತ್ಯುತ್ತಮಕ್ಕಿಂತ ಉತ್ತಮವಾದ ಪ್ರದರ್ಶನ ತೋರಬೇಕಾಗುತ್ತದೆ. ನ್ಯೂಜಿಲೆಂಡ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತವನ್ನು ಸೋಲಿಸಿದೆ. ಇದರ ಜೊತೆಗೆ ಐಸಿಸಿ ಟಿ20 ವಿಶ್ವಕಪ್ 2021ರಲ್ಲಿ ಭಾರತವನ್ನು ಸೋಲಿಸಿದ್ದರೂ ಸಹ ವಿಲಿಯಮ್ಸ್ನ ಟೀಮ್ ಭಾರತದಲ್ಲಿ ತೀವ್ರ ಸ್ಪರ್ಧೆಯನ್ನೆದುರಿಸಲಿದೆ.

ಮತ್ತೆ ಆರಂಭವಾಗುತ್ತಾ ಭಾರತ vs ಪಾಕಿಸ್ತಾನ ದ್ವಿಪಕ್ಷೀಯ ಸರಣಿ?: ಬಿಸಿಸಿಐ ಅಧ್ಯಕ್ಷ ಗಂಗೂಲಿ ಪ್ರತಿಕ್ರಿಯೆ

ಭಾರತದೆದರು ಗೆಲ್ಲುವುದು ಸುಲಭವಲ್ಲ: ಗ್ಯಾರಿ

ಭಾರತದೆದರು ಗೆಲ್ಲುವುದು ಸುಲಭವಲ್ಲ: ಗ್ಯಾರಿ

ಟಿ20 ವಿಶ್ವಕಪ್ ಮುಗಿದ ಬೆನ್ನಲ್ಲೇ ಭಾರತದೆದರು ಟಿ20, ಟೆಸ್ಟ್ ಸರಣಿಗಳನ್ನ ಆಡುತ್ತಿರುವ ನ್ಯೂಜಿಲೆಂಡ್ ಟೀಮ್ , ಭಾರತದೆದುರು ಗೆಲ್ಲುವುದು ನಿಜಕ್ಕೂ ಸುಲಭದ ವಿಚಾರವಾಗಿಲ್ಲ ಎಂದು ಗ್ಯಾರಿ ಇಎಸ್‌ಪಿಎನ್‌ಕ್ರಿಕ್‌ಇನ್‌ಫೋಗೆ ಹಂಚಿಕೊಂಡಿದ್ದಾರೆ.

"ಇದು ಖಂಡಿತವಾಗಿಯೂ ಕಠಿಣ ಮತ್ತು ಸವಾಲಾಗಿದ್ದು, ಅದು ನಮ್ಮ ಮುಂದೆ ಇದೆ." ಎಂದು ಗ್ಯಾರಿ ಹೇಳಿದರು. ನ್ಯೂಜಿಲೆಂಡ್‌ನ T20 ವಿಶ್ವಕಪ್ ತಂಡದ ಭಾಗವಾಗಿರದ ಸದಸ್ಯರು ಈಗಾಗಲೇ ಭಾರತದಲ್ಲಿದ್ದಾರೆ ಮತ್ತು ಸರಣಿಗಾಗಿ ತಯಾರಿ ಆರಂಭಿಸಿದ್ದಾರೆ.

ಡೇವಿಡ್ ವಾರ್ನರ್‌ರನ್ನ ಖರೀದಿಸಲಿದ್ಯಾ ಆರ್‌ಸಿಬಿ? ಬ್ರಾಡ್‌ ಹಾಗ್‌ ಭವಿಷ್ಯ ನಿಜವಾಗುತ್ತಾ?

ಕಿವೀಸ್‌ನ 9 ಆಟಗಾರರು ಭಾರತದಲ್ಲಿದ್ದಾರೆ!

ಕಿವೀಸ್‌ನ 9 ಆಟಗಾರರು ಭಾರತದಲ್ಲಿದ್ದಾರೆ!

"ನಾವು ಈಗಾಗಲೇ ಭಾರತದಲ್ಲಿ 9-10 ಹುಡುಗರನ್ನು ಭಾರತದಲ್ಲಿ ಹೊಂದಿದ್ದೇವೆ. ಈಗಾಗಲೇ ಅವರು ಟೆಸ್ಟ್ ಪಂದ್ಯಗಳಿಗೆ ತಯಾರಿ ನಡೆಸುತ್ತಿದ್ದಾರೆ. ಭಾರತದ ವಿರುದ್ಧ ನಿಜವಾಗಿಯೂ ಉತ್ತಮ ಪ್ರದರ್ಶನವನ್ನು ನೀಡಬಹುದು ಎಂದು ಭಾವಿಸುತ್ತೇವೆ." ಎಂದು ಗ್ಯಾರಿ ತಿಳಿಸಿದ್ದಾರೆ.

ವಿಶ್ವಕಪ್‌ನಲ್ಲಿ ಭಾಗಿಯಾಗದ ಆಟಗಾರರು ವಿಶ್ವಕಪ್ ಮುಕ್ತಾಯಕ್ಕೂ ಮೊದಲೇ ಭಾರತಕ್ಕೆ ಆಗಮಿಸಿ ತರಬೇತಿಯಲ್ಲಿ ತೊಡಗಿದ್ದರು.

Boot ಗಳಲ್ಲಿ ಬಿಯರ್ ಕುಡಿದು ಸಂಭ್ರಮಿಸಿದ ಆಸೀಸ್ ಆಟಗಾರರ ವಿಡಿಯೋ ವೈರಲ್ | Oneindia Kannada
ಲ್ಯೂಕಿ ಫರ್ಗುಸನ್ ಭಾರತದೆದರು ಸರಣಿಗೆ ಲಭ್ಯವಿದ್ದಾರ?

ಲ್ಯೂಕಿ ಫರ್ಗುಸನ್ ಭಾರತದೆದರು ಸರಣಿಗೆ ಲಭ್ಯವಿದ್ದಾರ?

ಕೊನೆಯದಾಗಿ ತನ್ನ ಮಾತು ಮುಗಿಸಿದ ಗ್ಯಾರಿ ಸ್ಟೆಡ್‌ ಅವರು ಪ್ರಮುಖ ಬೌಲರ್ ಲ್ಯುಕಿ ಫರ್ಗುಸನ್ ಕುರಿತಾಗಿ ಲಭ್ಯತೆ ಬಗ್ಗೆ ಅಪ್‌ಡೇಟ್ ನೀಡಿದ್ದಾರೆ. ಟಿ20 ವಿಶ್ವಕಪ್ ಆರಂಭದಲ್ಲೇ ಗಾಯಾಳುವಾಗಿ ತಂಡದಿಂದ ಹೊರಬಿದ್ದಿದ್ದ ಫರ್ಗುಸನ್ '' ತಂಡಕ್ಕೆ ಕಂಬ್ಯಾಕ್ ಮಾಡಲು ತುಂಬಾ ಹತ್ತಿರವಾಗಿದ್ದಾನೆ ಎಂದು ನಾನು ಭಾವಿಸುತ್ತೇನೆ'' ಎಂದು ಸ್ಟೆಡ್ ಹೇಳಿದರು.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸರಣಿಯು ನವೆಂಬರ್ 17 ರಂದು ಜೈಪುರದಲ್ಲಿ ಮೊದಲ ಟಿ20 ಪಂದ್ಯದೊಂದಿಗೆ ಪ್ರಾರಂಭವಾಗಲಿದೆ. ಟಿ20 ಸರಣಿಯು ಮುಗಿದ ನಂತರ, ಟೆಸ್ಟ್ ಸರಣಿಯು ನವೆಂಬರ್ 25 ರಂದು ಪ್ರಾರಂಭವಾಗುತ್ತದೆ. ಕಾನ್ಪುರ ಮತ್ತು ಮುಂಬೈ ಟೆಸ್ಟ್ ಸರಣಿಯ ಆತಿಥ್ಯವಹಿಸಲಿದೆ.

For Quick Alerts
ALLOW NOTIFICATIONS
For Daily Alerts
Story first published: Monday, November 15, 2021, 18:50 [IST]
Other articles published on Nov 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X