ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs NZ: ಇದೀಗ ರಿಕಿ ಪಾಂಟಿಂಗ್, ವೀರೇಂದ್ರ ಸೆಹ್ವಾಗ್ ದಾಖಲೆ ಮೇಲೆ ಕಣ್ಣಿಟ್ಟ ವಿರಾಟ್ ಕೊಹ್ಲಿ

IND vs NZ: Virat Kohli Eyes On Ricky Ponting, Virender Sehwag Record in ODI Series Against New Zealand

ಇತ್ತೀಚೆಗೆ ಮುಕ್ತಾಯಗೊಂಡ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ 2 ಶತಕಗಳನ್ನು ಬಾರಿಸಿ ಸರಣಿಶ್ರೇಷ್ಠ ಪ್ರಶಸ್ತಿಯನ್ನು ಪಡೆದ ಭಾರತ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಹೊಸ ವರ್ಷವನ್ನು ಅದ್ಧೂರಿಯಾಗಿ ಆರಂಭಿಸಿದರು.

ಬುಧವಾರ, ಜನವರಿ 18ರಿಂದ ತವರಿನಲ್ಲಿ ವಿಶ್ವ ನಂ.1 ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದ್ದು, ಇದೀಗ ಮತ್ತೊಂದು ಸರಣಿ ದಾಖಲೆ ಮುರಿಯುವುದರ ಮೇಲೆ ವಿರಾಟ್ ಕೊಹ್ಲಿ ಕಣ್ಣಿಟ್ಟಿದ್ದಾರೆ.

2023ರ ಏಷ್ಯಾ ಕಪ್ ಆತಿಥ್ಯಕ್ಕಾಗಿ ಜಯ್ ಶಾ ಭೇಟಿ ಬಯಸಿದ ಪಿಸಿಬಿ ಮುಖ್ಯಸ್ಥ ನಜಮ್ ಸೇಥಿ2023ರ ಏಷ್ಯಾ ಕಪ್ ಆತಿಥ್ಯಕ್ಕಾಗಿ ಜಯ್ ಶಾ ಭೇಟಿ ಬಯಸಿದ ಪಿಸಿಬಿ ಮುಖ್ಯಸ್ಥ ನಜಮ್ ಸೇಥಿ

ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಜನವರಿ 18, 21, ಮತ್ತು 24ರಂದು ಕ್ರಮವಾಗಿ ಹೈದರಾಬಾದ್, ರಾಯ್‌ಪುರ ಮತ್ತು ಇಂದೋರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಏಕದಿನ ಪಂದ್ಯಗಳನ್ನು ಆಡಲಿದೆ. ಪಾಕಿಸ್ತಾನದಲ್ಲಿ ಏಕದಿನ ಸರಣಿ ಜಯ ಗಳಿಸಿದ ಹಿನ್ನೆಲೆಯಿಂದ ಆಗಮಿಸುತ್ತಿರುವ ಕಿವೀಸ್ ತಂಡ ಭಾರತಕ್ಕೆ ಕಠಿಣ ಎದುರಾಳಿ ಎನಿಸಿದೆ.

ಗುವಾಹಟಿಯಲ್ಲಿ 113 ರನ್‌, ತಿರುವನಂತಪುರದಲ್ಲಿ 166 ರನ್‌

ಗುವಾಹಟಿಯಲ್ಲಿ 113 ರನ್‌, ತಿರುವನಂತಪುರದಲ್ಲಿ 166 ರನ್‌

ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧ 2 ಶತಕಗಳು ಸೇರಿದಂತೆ 283 ರನ್‌ಗಳ ಮೂಲಕ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು. ಗುವಾಹಟಿಯಲ್ಲಿ 113 ರನ್‌ ಮತ್ತು ತಿರುವನಂತಪುರದಲ್ಲಿ ಅವರ ಎರಡನೇ ಅತ್ಯುತ್ತಮ ಏಕದಿನ ಸ್ಕೋರ್‌ 166 ರನ್‌ಗಳನ್ನು ಬಾರಿಸಿದರು. ಈ ಮೂಲಕ ಭಾರತ ಏಕದಿನ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆಯನ್ನು 317 ರನ್‌ಗಳ ಗೆಲುವು ದಾಖಲಿಸಿತು.

ವಿರಾಟ್ ಕೊಹ್ಲಿ ತಮ್ಮ ಕೊನೆಯ 4 ಏಕದಿನ ಇನ್ನಿಂಗ್ಸ್‌ಗಳಲ್ಲಿ 3 ಶತಕಗಳನ್ನು ಬಾರಿಸಿ, ತಮ್ಮ ಏಕದಿನ ಶತಕಗಳ ಸಂಖ್ಯೆಯನ್ನು 46ಕ್ಕೆ ಏರಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಅವರ ಸಾರ್ವಕಾಲಿಕ 49 ಶತಕಗಳ ದಾಖಲೆ ಸರಿಗಟ್ಟಲು ಕೊಹ್ಲಿಗೆ ಕೇವಲ 3 ಶತಕಗಳ ಅವಶ್ಯಕತೆ ಇದೆ.

ತವರಿನಲ್ಲಿ ಅತಿ ಹೆಚ್ಚು ಏಕದಿನ ಶತಕ ಬಾರಿಸಿದ ಮೊದಲ ಕ್ರಿಕೆಟಿಗ ಕೊಹ್ಲಿ

ತವರಿನಲ್ಲಿ ಅತಿ ಹೆಚ್ಚು ಏಕದಿನ ಶತಕ ಬಾರಿಸಿದ ಮೊದಲ ಕ್ರಿಕೆಟಿಗ ಕೊಹ್ಲಿ

ಶ್ರೀಲಂಕಾ ವಿರುದ್ಧ ಸರಣಿಯಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು 21ನೇ ಶತಕ ಸಿಡಿಸಿ, ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ತವರಿನಲ್ಲಿ ಅತಿ ಹೆಚ್ಚು (20) ಏಕದಿನ ಶತಕಗಳ ದಾಖಲೆ ಅಳಿಸಿ ಹಾಕಿದರು.

ಏಕದಿನ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಅತ್ಯುತ್ತಮ ದಾಖಲೆಯನ್ನು ಹೊಂದಿರುವ ವಿರಾಟ್ ಕೊಹ್ಲಿ ಮತ್ತೊಂದು ಉತ್ತಮ ಸರಣಿಯನ್ನಾಗಿಸಿಕೊಳ್ಳುವ ತವಕದಲ್ಲಿದ್ದಾರೆ. ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧ 5 ಏಕದಿನ ಶತಕಗಳನ್ನು ಬಾರಿಸಿದ್ದು, ಕಿವೀಸ್ ವಿರುದ್ಧ ಅತಿ ಹೆಚ್ಚು ಶತಕ ಗಳಿಸಿದ ರಿಕಿ ಪಾಂಟಿಂಗ್ ಅವರ ಸಾರ್ವಕಾಲಿಕ ದಾಖಲೆಯನ್ನು ಮುರಿಯಲು ಇನ್ನೂ 2 ಶತಕಗಳ ಅಗತ್ಯವಿದೆ.

ತೆಂಡೂಲ್ಕರ್ ಮತ್ತು ಜಯಸೂರ್ಯರೊಂದಿಗೆ ಕೊಹ್ಲಿ ಜಂಟಿ ಎರಡನೇ ಸ್ಥಾನ

ತೆಂಡೂಲ್ಕರ್ ಮತ್ತು ಜಯಸೂರ್ಯರೊಂದಿಗೆ ಕೊಹ್ಲಿ ಜಂಟಿ ಎರಡನೇ ಸ್ಥಾನ

ವಿರಾಟ್ ಕೊಹ್ಲಿ ತಲಾ 5 ಶತಕಗಳನ್ನು ಗಳಿಸಿ ಸಚಿನ್ ತೆಂಡೂಲ್ಕರ್ ಮತ್ತು ಸನತ್ ಜಯಸೂರ್ಯ ಅವರೊಂದಿಗೆ ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ.

ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ 26 ಪಂದ್ಯಗಳಲ್ಲಿ 59.91 ಸರಾಸರಿ ಮತ್ತು 94.64 ಸ್ಟ್ರೈಕ್‌ರೇಟ್‌ನಲ್ಲಿ 1378 ರನ್ ಗಳಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ 5 ಶತಕ ಮತ್ತು 8 ಅರ್ಧಶತಕಗಳನ್ನು ಬಾರಿಸಿದ್ದಾರೆ.

ಏಕದಿನ ಪಂದ್ಯಗಳಲ್ಲಿ ನ್ಯೂಜಿಲೆಂಡ್ ವಿರುದ್ಧ ಹೆಚ್ಚು ಶತಕ ಗಳಿಸಿದವರ ಪಟ್ಟಿ

ಏಕದಿನ ಪಂದ್ಯಗಳಲ್ಲಿ ನ್ಯೂಜಿಲೆಂಡ್ ವಿರುದ್ಧ ಹೆಚ್ಚು ಶತಕ ಗಳಿಸಿದವರ ಪಟ್ಟಿ

ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) - 51 ಪಂದ್ಯಗಳಲ್ಲಿ 6 ಶತಕ

ವೀರೇಂದ್ರ ಸೆಹ್ವಾಗ್ (ಭಾರತ) - 23 ಪಂದ್ಯಗಳಲ್ಲಿ 6 ಶತಕ

ಸನತ್ ಜಯಸೂರ್ಯ (ಶ್ರೀಲಂಕಾ) - 47 ಪಂದ್ಯಗಳಲ್ಲಿ 5 ಶತಕ

ವಿರಾಟ್ ಕೊಹ್ಲಿ (ಭಾರತ) - 26 ಪಂದ್ಯಗಳಲ್ಲಿ 5 ಶತಕ

ಸಚಿನ್ ತೆಂಡೂಲ್ಕರ್ (ಭಾರತ) - 42 ಪಂದ್ಯಗಳಲ್ಲಿ 5 ಶತಕ

ಕೊನೆಯ 7 ಪಂದ್ಯಗಳಲ್ಲಿ ಕೊಹ್ಲಿ ಕೇವಲ 2 ಅರ್ಧಶತಕ

ಕೊನೆಯ 7 ಪಂದ್ಯಗಳಲ್ಲಿ ಕೊಹ್ಲಿ ಕೇವಲ 2 ಅರ್ಧಶತಕ

ಏಕದಿನದಲ್ಲಿ ನ್ಯೂಜಿಲೆಂಡ್ ವಿರುದ್ಧ ವಿರಾಟ್ ಕೊಹ್ಲಿ ಅವರ ಕೊನೆಯ ಕೆಲವು ಪ್ರದರ್ಶನಗಳು ಉತ್ತಮವಾಗಿಲ್ಲ. ನ್ಯೂಜಿಲೆಂಡ್ ವಿರುದ್ಧದ ಕೊನೆಯ 7 ಪಂದ್ಯಗಳಲ್ಲಿ ಕೊಹ್ಲಿ ಕೇವಲ 2 ಅರ್ಧಶತಕಗಳೊಂದಿಗೆ 224 ರನ್ ಗಳಿಸಿದ್ದಾರೆ.

ಮತ್ತೊಂದೆಡೆ, ನ್ಯೂಜಿಲೆಂಡ್ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಕೇನ್ ವಿಲಿಯಮ್ಸನ್ ಮತ್ತು ಟಿಮ್ ಸೌಥಿ ಇಲ್ಲದೆ ಕಣಕ್ಕಿಳಿಯಲಿದೆ. ಟಾಮ್ ಲ್ಯಾಥಮ್ ಏಕದಿನ ಸರಣಿಯಲ್ಲಿ ಪ್ರವಾಸಿ ತಂಡವನ್ನು ಮುನ್ನಡೆಸಲಿದ್ದಾರೆ.

ಏಕದಿನ ಸರಣಿಯ ನಂತರ ಉಭಯ ತಂಡಗಳು 3 ಪಂದ್ಯಗಳ ಟಿ20 ಸರಣಿಯಲ್ಲಿ ಮುಖಾಮುಖಿಯಾಗಲಿವೆ. ಟಿ20 ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

Story first published: Tuesday, January 17, 2023, 10:08 [IST]
Other articles published on Jan 17, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X