ಭಾರತ-ದಕ್ಷಿಣ ಆಫ್ರಿಕಾ ಅಂತಿಮ ಟೆಸ್ಟ್: ದಕ್ಷಿಣ ಆಫ್ರಿಕಾ ಗೆಲುವಿಗೆ 212 ರನ್ ಟಾರ್ಗೆಟ್

ಕೇಪ್‌ಟೌನ್‌ನಲ್ಲಿ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್ 198 ರನ್‌ಗಳಿಗೆ ಆಲೌಟ್ ಆಗಿದ್ದು, 211 ರನ್‌ಗಳ ಲೀಡ್‌ ಪಡೆದುಕೊಂಡಿದೆ. ರಿಷಭ್ ಪಂತ್ ಭರ್ಜರಿ ಅಜೇಯ ಶತಕದ ನೆರವಿನಿಂದ ಭಾರತದ ಲೀಡ್ 200 ರನ್‌ಗಳ ಗಡಿ ದಾಟಲು ಸಾಧ್ಯವಾಗಿದೆ.

ನಿನ್ನೆ ಎರಡನೇ ದಿನದಾಟದಂತ್ಯಕ್ಕೆ ಜೊತೆಯಾಗಿದ್ದ ಕೊಹ್ಲಿ ಪೂಜಾರ ಅಜೇಯರಾಗಿ ಮೂರನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದರು. ಕೊಹ್ಲಿ ಅಜೇಯ 14, ಪೂಜಾರ ಅಜೇಯ 9ರನ್‌ಗಳಿಸಿದ್ದು ತಂಡದ ಮೊತ್ತವನ್ನ ಹೆಚ್ಚಿಸುವ ಮಹತ್ತರ ಜವಾಬ್ದಾರಿ ಈ ಜೋಡಿ ಮೇಲಿತ್ತು.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಲಂಕಾ ಕ್ರಿಕೆಟಿಗ ಯೂ ಟರ್ನ್: ನಿವೃತ್ತಿ ನಿರ್ಧಾರ ಹಿಂದೆಗೆದ ಭಾನುಕಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಲಂಕಾ ಕ್ರಿಕೆಟಿಗ ಯೂ ಟರ್ನ್: ನಿವೃತ್ತಿ ನಿರ್ಧಾರ ಹಿಂದೆಗೆದ ಭಾನುಕ

ಆದ್ರೆ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ನಿರೀಕ್ಷೆಗಳನ್ನ ಹುಸಿಗೊಳಿಸಿದ ದಿನದ ಮೊದಲೆರಡು ಓವರ್‌ಗಳಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದ್ದಾರೆ. ಅದ್ರಲ್ಲೂ ದಿನದ ಎರಡನೇ ಎಸೆತದಲ್ಲೇ ಚೇತೇಶ್ವರ ಪೂಜಾರ ಔಟಾದ ರೀತಿಯನ್ನ ಯಾರೂ ಅಂದಾಜಿಸಲು ಸಾಧ್ಯವಿಲ್ಲ.

ಮೂರನೇ ಕ್ರಮಾಂಕದಲ್ಲಿ ಆಡುವ ಪೂಜಾರ ನಿನ್ನೆ ಅಜೇಯ 9 ರನ್‌ಗಳಿಸಿ, ಇಂದು ದೊಡ್ಡ ಇನ್ನಿಂಗ್ಸ್‌ ಕಲೆಹಾಕುವ ಯೋಚನೆಯಲ್ಲಿದ್ದರು. ಆದ್ರೆ ವೇಗಿ ಮಾರ್ಕೊ ಜಾನ್ಸೆನ್ ಹೊಸ ಚೆಂಡಿನೊಂದಿಗೆ ದಾಳಿ ಮಾಡಿದರು. ಆದ್ರೆ ಚೆಂಡಿನ ಗತಿಯನ್ನ ಅರಿಯದೆ ಲೆಗ್ ಸ್ಲಿಪ್‌ನಲ್ಲಿ ಕೀಗನ್ ಪೀಟರ್ಸನ್ ಹಿಡಿದ ಅದ್ಭುತ ಕ್ಯಾಚ್‌ಗೆ ಬಲಿಯಾದ್ರು.

ಹೀಗಾಗಿ ಕೊಹ್ಲಿ-ಪೂಜಾರ ಜೋಡಿ ಉತ್ತಮ ಜೊತೆಯಾಟ ನೀಡಿ ಭಾರತವನ್ನ ಸುಭದ್ರ ಸ್ಥಿತಿಗೆ ತಲುಪಿಸುವ ಜವಾಬ್ದಾರಿಯಿಂದ ನುಣುಚಿಕೊಂಡಿದೆ. ಚೇತೇಶ್ವರ್ ಪೂಜಾರ ಔಟಾದ ನಂತರದ ಓವರ್‌ನಲ್ಲೇ ಅಜಿಂಕ್ಯ ರಹಾನೆ ಕಗಿಸೊ ರಬಾಡಗೆ ವಿಕೆಟ್ ಒಪ್ಪಿಸಿದ್ರು. ದಿನದ ಮೊದಲೆರಡು ಓವರ್‌ಗಳಲ್ಲಿ ಇಬ್ಬರು ಬ್ಯಾಟ್ಸ್‌ಮನ್‌ಗಳು ವಿಕೆಟ್ ಒಪ್ಪಿಸಿದ್ದು ಭಾರತಕ್ಕೆ ಭಾರೀ ಪೆಟ್ಟು ನೀಡಿತು.

ಆದ್ರೆ ಐದನೇ ವಿಕೆಟ್‌ಗೆ ಜೊತೆಯಾದ ಕೊಹ್ಲಿ ಮತ್ತು ರಿಷಭ್ ಪಂತ್ ಟೀಂ ಇಂಡಿಯಾದ ಲೀಡ್ ಹೆಚ್ಚಿಸಲು ಸಹಾಯ ಮಾಡಿದ್ರು. 94ರನ್‌ಗಳ ಜೊತೆಯಾಟವಾಡಿದ ಈ ಜೋಡಿಯನ್ನ ಲುಂಗಿ ಎನ್‌ಗಿಡಿ ಬೇರ್ಪಡಿಸಿದ್ರು. ಅತ್ಯಂತ ತಾಳ್ಮೆಯ ಆಟವಾಡಿದ್ದ ವಿರಾಟ್ ಕೊಹ್ಲಿ 29 ರನ್‌ಗಳಿಸಿದ್ದಾಗ ಔಟಾಗಿ ಪೆವಿಲಿಯನ್ ಸೇರಿಕೊಂಡ್ರು.

ಇದಾದ ಬಳಿಕ ಬಂದ ಯಾವೊಬ್ಬ ಆಟಗಾರನೂ ಕೂಡ ರಿಷಭ್ ಪಂತ್ ಗೆ ಸಾಥ್ ನೀಡಲಿಲ್ಲ. ಆದ್ರೆ ಏಕಾಂಗಿಯಾಗಿ ಹೋರಾಟ ನಡೆಸಿದ ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ ನಾಲ್ಕನೇ ಶತಕ ಸಿಡಿಸಿ ಮಿಂಚಿದ್ರು. ಅದ್ರಲ್ಲೂ ನಾಲ್ಕನೇ ಇನ್ನಿಂಗ್ಸ್‌ ರಿಷಭ್ ಶತಕ ದಾಖಲಿಸಿದ್ದು ವಿಶೇಷವಾಗಿತ್ತು.

ರಿಷಭ್ ಪಂತ್ ಅಜೇಯ 100 ರನ್ ಕಲೆಹಾಕುವ ಮೂಲಕ ದಕ್ಷಿಣ ಆಫ್ರಿಕಾದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿಬಿಟ್ರು. ದಕ್ಷಿಣ ಆಫ್ರಿಕಾ ನೆಲದಲ್ಲಿ ಶತಕ ದಾಖಲಿಸಿದ ಭಾರತದ ಮೊದಲ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದ್ರು.

ಅಂತಿಮವಾಗಿ ಭಾರತ 198ರನ್‌ಗಳಿಗೆ ಆಲೌಟ್ ಆಗುವ ಮೂಲಕ 211ರನ್‌ಗಳ ಲೀಡ್ ಪಡೆದಿದೆ. ದಕ್ಷಿಣ ಆಫ್ರಿಕಾಗೆ 212ರನ್‌ಗಳ ಟಾರ್ಗೆಟ್ ನೀಡಿದೆ. ಭಾರತ ಪಂದ್ಯದಲ್ಲಿ ಮೇಲುಗೈ ಸಾಧಿಸಲು ಬಹುಬೇಗ ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಡೀನ್ ಎಲ್ಗರ್, ಕೀಗನ್ ಪೀಟರ್ಸನ್ ಹಾಗೂ ಟೆಂಬಾ ಬವುಮಾ ವಿಕೆಟ್ ಪಡೆಯಬೇಕಿದೆ.

ದಕ್ಷಿಣ ಆಫ್ರಿಕಾ ಪ್ಲೇಯಿಂಗ್ 11: ಡೀನ್ ಎಲ್ಗರ್ (ನಾಯಕ), ಐಡೆನ್ ಮಾರ್ಕ್ರಾಮ್, ಕೀಗನ್ ಪೀಟರ್ಸನ್, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಟೆಂಬಾ ಬವುಮಾ, ಕೈಲ್ ವೆರ್ರೆನ್ನೆ (ವಿಕೆಟ್ ಕೀಪರ್), ಮಾರ್ಕೊ ಜಾನ್ಸೆನ್, ಕಗಿಸೊ ರಬಾಡಾ, ಕೇಶವ್ ಮಹಾರಾಜ್, ಡುವಾನ್ನೆ ಒಲಿವಿಯರ್, ಲುಂಗಿ ಎನ್ಗಿಡಿ
ಬೆಂಚ್: ಪ್ರೆನೆಲನ್ ಸುಬ್ರಾಯೆನ್, ಬ್ಯೂರಾನ್ ಹೆಂಡ್ರಿಕ್ಸ್, ಸಿಸಂದಾ ಮಗಾಲಾ, ಜಾರ್ಜ್ ಲಿಂಡೆ, ವಿಯಾನ್ ಮುಲ್ಡರ್, ಸರೆಲ್ ಎರ್ವೀ, ರಯಾನ್ ರಿಕೆಲ್ಟನ್, ಗ್ಲೆಂಟನ್ ಸ್ಟೌರ್ಮನ್

ಭಾರತ ಪ್ಲೇಯಿಂಗ್ 11: ಆಡುತ್ತಿರುವವರು: ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್
ಬೆಂಚ್: ಜಯಂತ್ ಯಾದವ್, ಪ್ರಿಯಾಂಕ್ ಪಾಂಚಾಲ್, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಮೊಹಮ್ಮದ್ ಸಿರಾಜ್, ವೃದ್ಧಿಮಾನ್ ಸಹಾ, ಇಶಾಂತ್ ಶರ್ಮಾ

For Quick Alerts
ALLOW NOTIFICATIONS
For Daily Alerts
Story first published: Thursday, January 13, 2022, 19:48 [IST]
Other articles published on Jan 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X