ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

"ವಿದೇಶದಲ್ಲಿ ಭಾರತೀಯರ ಅತ್ಯುತ್ತಮ ಶತಕಗಳ ಪೈಕಿ ಒಂದು"

Ind vs SA: Gautam Gambhir praises Rishabh Pant batting says one of the best Hundred

ಭಾರತ ಹಾಗೂ ದಕ್ಷಿಣ ಆಪ್ರಿಕಾ ನಡುವಿನ ಟೆಸ್ಟ್ ಸರಣಿಯ ಮೂರನೇ ದಿನ ಟೀಮ್ ಇಂಡಿಯಾ ಪಾಲಿಗೆ ಆಸರೆಯಾಗಿದ್ದು ರಿಷಭ್ ಪಂತ್ ಬ್ಯಾಟಿಂಗ್. ಮೂರನೇ ದಿನದಾಟ ಆರಂಭವಾದ ಮೂರೇ ಓವರ್‌ಗಳಲ್ಲಿ ಪ್ರಮುಖ ಎರಡು ವಿಕೆಟ್ ಕಳೆದುಕೊಳ್ಳುವ ಮೂಲಕ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಕ್ರೀಸ್‌ಗಿಳಿದ ಪಂತ್ ನಾಯಕ ವಿರಾಟ್ ಕೊಹ್ಲಿ ಜೊತೆ ಸೇರಿ ಅದ್ಭುತ ಜೊತೆಯಾಟವನ್ನು ಕಟ್ಟಿದರು. ನಂತರ ನಾಯಕ ಕೊಹ್ಲಿ ವಿಕೆಟ್ ಕಳೆದುಕೊಂಡರೂ ರಿಷಭ್ ಪಂತ್ ಶತಕವನ್ನು ಪೂರ್ಣಗೊಳಿಸಿದರು. ತನ್ನ ಸಹಜ ಶೈಲಿಯಂತೆ ನಿರ್ಭೀತವಾಗಿ ಬ್ಯಾಟ್ ಬೀಸಿದ ರಿಷಬ್ ಪಂತ್ ಭಾರತದ ಬ್ಯಾಟಿಂಗ್‌ನ ಹೀರೋ ಎನಿಸಿದರು.

ರಿಷಭ್ ಪಂತ್ ಅವರ ಈ ಬ್ಯಾಟಿಂಗ್ ಬಗ್ಗೆ ಸಾಕಷ್ಟು ಕ್ರಿಕೆಟಿಗರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ನ್ಯೂಲ್ಯಾಂಡ್ಸ್‌ನಲ್ಲಿ ರಿಷಭ್ ಪಂತ್ ಸಿಡಿಸಿದ ಶತಕವನ್ನು ಭಾರತೀಯ ಆಟಗಾರರು ವಿದೇಶಿ ನೆಲದಲ್ಲಿ ಸಿಡಿಸಿದ ಅದ್ಭುತ ಶತಕಗಳ ಪೈಕಿ ಒಂದು ಎಂದಿದ್ದಾರೆ. 139 ಎಸೆತಗಳಲ್ಲಿ ರಿಷಭ್ ಪಂತ್ ಅಜೇಯ 100 ರನ್ ಸಿಡಿಸಿದ್ದು ಈ ಇನ್ನಿಂಗ್ಸ್‌ನಲ್ಲಿ ಆರು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ಒಳಗೊಂಡಿದೆ.

ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದೆ IPL 15ನೇ ಸೀಸನ್‌? ಪ್ಲ್ಯಾನ್ ಬಿ ರೆಡಿ ಮಾಡಿಕೊಂಡಿರುವ BCCIದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದೆ IPL 15ನೇ ಸೀಸನ್‌? ಪ್ಲ್ಯಾನ್ ಬಿ ರೆಡಿ ಮಾಡಿಕೊಂಡಿರುವ BCCI

ಮೂರನೇ ದಿನದಾಟ ಮುಕ್ತಾಯದ ಬಳಿಕ ಸ್ಟಾರ್‌ಸ್ಪೋರ್ಟ್ಸ್‌ನ ಕಾರ್ಯಕ್ರಮದಲ್ಲಿ ಮಾತನಾಡಿದ ಗೌತಮ್ ಗಂಭೀರ್ ಪಂತ್ ಪ್ರದರ್ಶನಕ್ಕೆ ಮೆಚ್ಚಿಗೆಯನ್ನು ವ್ಯಕ್ತಪಡಿಸಿದ್ದಾರೆ. "ನನ್ನ ಪ್ರಕಾರ ಇದು ವಿದೇಶಿ ನೆಲದಲ್ಲಿ ಭಾರತೀಯ ಆಟಗಾರರ ಅತ್ಯುತ್ತಮ ಶತಕದ ಪೈಕಿ ಇದು ಕೂಡ ಒಂದು. ಇದಕ್ಕೆ ರಿಷಭ್ ಪಂತ್ ಕ್ರೀಸ್‌ಗೆ ಬಂದಾಗಿ ಇದ್ದ ಪರಿಸ್ಥಿತಿಯೂ ಕಾರಣ. ರಿಷಭ್ ಪಂತ್ ಕ್ರೀಸ್‌ಗೆ ಇಳಿಯುವ ವೇಳೆ ಭಾರತ ತಂಡ ಮೊದಲ ಎರಡು ಓವರ್‌‌ಗಳಲ್ಲಿಯೇ ಎರಡು ವಿಕೆಟ್ ಕಳೆದುಕೊಂಡಿತ್ತು ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಉತ್ತಮವಾದ ವೇದಿಕೆಯನ್ನು ಸೃಷ್ಠಿಸಿದ ಬಳಿಕ ಬಂದ ಶತಕ ಇದಲ್ಲ" ಎಂದು ಗಂಭೀರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಐಪಿಎಲ್: ನೂತನ ಫ್ರಾಂಚೈಸಿಗಲ್ಲ, ಈ ತಂಡಕ್ಕೆ ನಾಯಕನಾಗಲಿದ್ದಾರೆ ಶ್ರೇಯಸ್ ಐಯ್ಯರ್ಐಪಿಎಲ್: ನೂತನ ಫ್ರಾಂಚೈಸಿಗಲ್ಲ, ಈ ತಂಡಕ್ಕೆ ನಾಯಕನಾಗಲಿದ್ದಾರೆ ಶ್ರೇಯಸ್ ಐಯ್ಯರ್

"ರಿಷಭ್ ಪಂತ್ ಶೀಘ್ರವಾಗಿ ವಿಕೆಟ್ ಕಳೆದುಕೊಂಡಿದ್ದರೆ. ಈ ಪಂದ್ಯ ಏಕಮುಖವಾಗಿರುತ್ತಿತ್ತು. ಅದನ್ನು ಹೊರತುಪಡಿಸಿದರೂ ಇದೊಂದು ಆಕ್ರಮಣಕಾರಿಯಾದ ಶತಕವಾಗಿದೆ. ಅಲ್ಲದೆ ಬ್ಯಾಟಿಂಗ್‌ನಲ್ಲಿ ಸಾಕಷ್ಟು ನಿಯಂತ್ರಣವನ್ನು ಕೂಡ ಹೊಂದಿದ್ದರು. ಕೊನೆಯವರೆಗೂ ಹೋರಾಡಿದ ಅವರು ಅಜೇಯವಾಗಿ ಉಳಿದುಕೊಂಡರು" ಎಂದು ಪಂತ್ ಆಟಕ್ಕೆ ಗೌತನ್ ಗಂಭೀರ್ ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ನಾಯಕ ವಿರಾಟ್ ಕೊಹ್ಲಿ ಔಟ್ ಆದ ಬಳಿಕ ಕೆಳ ಕ್ರಮಾಂಕದ ಆಟಗಾರರಿಂದಲೂ ಉತ್ತಮ ಸಾಥ್ ದೊರೆಯದಿದ್ದರೂ ಹೆಚ್ಚು ಕಾಲ ಕ್ರೀಸ್ ಕಾಯ್ದುಕೊಳ್ಳುವ ಪ್ರಯತ್ನ ನಡೆಸಿದರು ಪಂತ್. ಈ ಮೂಲಕ ತಂಡದ ಮೊತ್ತವನ್ನು 200ರ ಸನಿಹಕ್ಕೆ ತಲುಪಿಸಿದರು. ಈ ಹಂತದಲ್ಲಿ ರಿಷಭ್ ಪಂತ್ ತಮ್ಮ ಶತಕವನ್ನು ಕೂಡ ಯಶಸ್ವಿಯಾಗಿ ಪೂರ್ಣಗೊಳಿಸಿದರು ಸಂಭ್ರಮಿಸಿದರು. ಈ ಮೂಲಕ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸ್ಮರಣೀಯ ಇನ್ನಿಂಗ್ಸ್ ನೀಡಿದ್ದಾರೆ.

#ThankYouRahane: ಟ್ವಿಟ್ಟರ್‌ನಲ್ಲಿ ಭಾರತದ ಅನುಭವಿ ಕ್ರಿಕೆಟಿಗನಿಗೆ ಧನ್ಯವಾದ ಸಲ್ಲಿಸಿದ ನೆಟ್ಟಿಗರು#ThankYouRahane: ಟ್ವಿಟ್ಟರ್‌ನಲ್ಲಿ ಭಾರತದ ಅನುಭವಿ ಕ್ರಿಕೆಟಿಗನಿಗೆ ಧನ್ಯವಾದ ಸಲ್ಲಿಸಿದ ನೆಟ್ಟಿಗರು

ರಿಷಭ್ ಪಂತ್ ಅವರ ಈ ಭರ್ಜರಿ ಬ್ಯಾಟಿಂಗ್ ಪ್ರದರ್ಶನದಿಂದ ಭಾರತ ತಂಡ 198 ರನ್‌ಗಳಿಗೆ ಆಲೌಟ್ ಆಯಿತು. ಇದರಲ್ಲಿ ರಿಷಭ್ ಪಂತ್ ಒಬ್ಬರೆ 100 ರನ್‌ಗಳನ್ನು ಬಾರಿಸಿದ್ದರು. ಈ ಮೂಕ ಭಾರತ ತಂಡ ದಕ್ಷಿಣ ಆಪ್ರಿಕಾಗೆ 212 ರನ್‌ಗಳ ಗುರಿಯನ್ನು ನಿಗದಿಪಡಿಸಿದೆ.

Story first published: Thursday, January 13, 2022, 23:54 [IST]
Other articles published on Jan 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X