ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs SA ODI: ರಜತ್ ಪಾಟೀದಾರ್‌ಗೆ ಚೊಚ್ಚಲ ಅವಕಾಶ ಸಿಗುವ ಸಾಧ್ಯತೆ

Rajat Patidar

ಐಪಿಎಲ್ ಹಾಗೂ ದೇಶೀಯ ಕ್ರಿಕೆಟ್ ಎರಡರಲ್ಲೂ ಭರ್ಜರಿ ಪ್ರದರ್ಶನ ನೀಡಿರುವ ಮಧ್ಯಪ್ರದೇಶದ ಬ್ಯಾಟ್ಸ್ ಮನ್ ರಜತ್ ಪಾಟೀದಾರ್ ಭಾರತ ತಂಡವನ್ನು ಸದ್ಯದಲ್ಲೇ ಸೇರಿಕೊಳ್ಳಲಿದ್ದಾರೆ. ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅವರನ್ನು ಸೇರಿಸಿಕೊಳ್ಳಲಾಗುವುದು ಎಂದು ವರದಿಗಳಿವೆ. ಹಾಗೇನಾದ್ರು ಆದಲ್ಲಿ ಪಾಟಿಧಾರ್ ರಾಷ್ಟ್ರೀಯ ತಂಡಕ್ಕೆ ಬರುತ್ತಿರುವುದು ಇದೇ ಮೊದಲು.

ಸಂಜು ಸ್ಯಾಮ್ಸನ್ ನಾಯಕತ್ವದಲ್ಲಿ ನ್ಯೂಜಿಲೆಂಡ್ ಎ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಪಾಟೀದಾರ್ ಮಿಂಚಿದ್ದಾರೆ. ಇದು ದಕ್ಷಿಣ ಆಫ್ರಿಕಾ ವಿರುದ್ಧದ ಹಿರಿಯ ತಂಡಕ್ಕೆ ಅವರನ್ನು ಪರಿಗಣಿಸಲು ಆಯ್ಕೆದಾರರನ್ನು ಪ್ರೇರೇಪಿಸುತ್ತದೆ.

Ind vs SA T20: ಈ ಮೂವರು ಆಟಗಾರರಿಗೆ ಅವಕಾಶ ಸಿಗೋದೆ ಅನುಮಾನ!Ind vs SA T20: ಈ ಮೂವರು ಆಟಗಾರರಿಗೆ ಅವಕಾಶ ಸಿಗೋದೆ ಅನುಮಾನ!

ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಟಿ20ಐ ಸರಣಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಬಲಿಷ್ಠ ತಂಡವನ್ನು ಭಾರತ ಕಣಕ್ಕಿಳಿಸಲಿದೆ. ಆದರೆ ಟಿ20 ಸರಣಿಯ ನಂತರ ಭಾರತ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಎರಡನೇ ಶ್ರೇಯಾಂಕಿತ ತಂಡವನ್ನು ಪರೀಕ್ಷಿಸಲಿದೆ.

ಏಕೆಂದರೆ ಟಿ20 ಸರಣಿಯ ನಂತರ ಭಾರತ ತಂಡ ಅಕ್ಟೋಬರ್ 4 ರಂದು ಟಿ20 ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾಕ್ಕೆ ಮರಳಲಿದೆ. ಆದ್ದರಿಂದ ವಿಶ್ವಕಪ್ ತಂಡದಲ್ಲಿರುವವರು ಏಕದಿನ ಸರಣಿಯಿಂದ ದೂರ ಉಳಿಯಬೇಕಾಗುತ್ತದೆ. ಅದಕ್ಕಾಗಿಯೇ ಭಾರತ ಎರಡನೇ ಹಂತದ ತಂಡವನ್ನು ಆಯ್ಕೆ ಮಾಡುತ್ತದೆ.

ಇದಕ್ಕೂ ಮುನ್ನ ಜಿಂಬಾಬ್ವೆಯಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಎರಡನೇ ಹಂತದ ತಂಡವನ್ನು ಪರೀಕ್ಷಿಸಿತ್ತು. ಅಂದು ಏಷ್ಯಾಕಪ್‌ಗೂ ಮುನ್ನ ಭಾರತ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿತ್ತು. ಆರಂಭದಲ್ಲಿ ಶಿಖರ್ ಧವನ್ ಅವರನ್ನು ಏಕದಿನ ತಂಡದ ನಾಯಕ ಎಂದು ಘೋಷಿಸಲಾಯಿತು, ಆದರೆ ನಂತರ KL ರಾಹುಲ್ ತಂಡಕ್ಕೆ ಮರಳಿದ ನಂತರ ಅವರಿಗೆ ನಾಯಕತ್ವವನ್ನು ನೀಡಲಾಯಿತು.

ಜಿಂಬಾಬ್ವೆಯಲ್ಲಿ ಏಕದಿನ ಸರಣಿ ಆಡಿದ ಬಹುತೇಕ ತಂಡವೇ ದಕ್ಷಿಣ ಆಫ್ರಿಕಾ ವಿರುದ್ಧವೂ ಮುಂದುವರಿಯಲಿದೆ ಎಂದು ವರದಿಯಾಗಿದೆ. ಶಿಖರ್ ಧವನ್ ತಂಡವನ್ನು ಮುನ್ನಡೆಸಲಿದ್ದಾರೆ. ಜಿಂಬಾಬ್ವೆಯಲ್ಲಿ ವಿಕೆಟ್ ಕಾಯ್ದುಕೊಂಡಿದ್ದ ಸಂಜು ಸ್ಯಾಮ್ಸನ್ ದಕ್ಷಿಣ ಆಫ್ರಿಕಾ ವಿರುದ್ಧ ವಿಕೆಟ್ ಕೀಪರ್ ಪಾತ್ರದಲ್ಲಿ ಮುಂದುವರಿಯಲಿದ್ದಾರೆ. ಜಿಂಬಾಬ್ವೆಯಲ್ಲಿ ಅಮೋಘ ಪ್ರದರ್ಶನ ನೀಡಿದ ಯುವ ಆಟಗಾರ ಶುಭಮನ್ ಗಿಲ್ ಏಕದಿನ ತಂಡದಲ್ಲೂ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.

ಇವರೊಂದಿಗೆ ಹೊಸಬರಾದ ರಜತ್ ಪಾಟೀದಾರ್ ಅವರನ್ನೂ ತಂಡಕ್ಕೆ ಕರೆಸಿಕೊಳ್ಳಲಾಗುವುದು. ಐಪಿಎಲ್ ನಲ್ಲಿ ಆರ್ ಸಿಬಿ ಪರ ಮಿಂಚಿದ್ದ ಆಟಗಾರ, ರಣಜಿ ಟ್ರೋಫಿಯ ಫೈನಲ್ ನಲ್ಲಿ ಶತಕ ಬಾರಿಸಿದ್ದರು. ನ್ಯೂಜಿಲೆಂಡ್ ಎ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವರು ಭಾರತ ಎ ಪರ ಎರಡು ಶತಕಗಳನ್ನು ಗಳಿಸಿದರು. ಕಿವೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಪಾಟೀದಾರ್‌ ಅಜೇಯ 45 ರನ್ ಗಳಿಸಿದ್ದರು.

Story first published: Monday, September 26, 2022, 23:52 [IST]
Other articles published on Sep 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X