ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs SA: ತಮ್ಮನ್ನು ಎದುರಿಸಲಿರುವ ಟೀಮ್ ಇಂಡಿಯಾದಲ್ಲಿ ಪಾಂಡ್ಯ ಅಲ್ಲ ಈ ಇಬ್ಬರು ಇರಬೇಕು ಎಂದ ಮಿಲ್ಲರ್!

IND vs SA: Rahul Tewatia and Shubman Gill should be in India T20I squad says David Miller

ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್‌ ಹಂತ ಮುಕ್ತಾಯದ ಹಂತಕ್ಕೆ ಸಮೀಪಿಸಿದ್ದು, ಗುಜರಾತ್ ಟೈಟನ್ಸ್ ಈಗಾಗಲೇ ಪ್ಲೇಆಫ್ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ. ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಕೂಡ ಪ್ಲೇಆಫ್ ಸುತ್ತಿಗೆ ಅರ್ಹತೆಯನ್ನು ಪಡೆದುಕೊಳ್ಳುವುದು ಖಚಿತವಾಗಿದ್ದು, ನಾಲ್ಕನೇ ಸ್ಥಾನಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಪೈಪೋಟಿ ಏರ್ಪಟ್ಟಿದೆ.

IPL 2022: ಈ ಸೀಸನ್‌ನಲ್ಲಿ ನನ್ನ ಯಶಸ್ಸಿಗೆ ಡೇಲ್ ಸ್ಟೇನ್ ಕಾರಣ ಎಂದ ಉಮ್ರಾನ್ ಮಲ್ಲಿಕ್IPL 2022: ಈ ಸೀಸನ್‌ನಲ್ಲಿ ನನ್ನ ಯಶಸ್ಸಿಗೆ ಡೇಲ್ ಸ್ಟೇನ್ ಕಾರಣ ಎಂದ ಉಮ್ರಾನ್ ಮಲ್ಲಿಕ್

ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಶಸ್ವಿಯಾಗಿ ಪ್ಲೇ ಆಫ್ ಸುತ್ತಿಗೆ ಲಗ್ಗೆ ಇಡಬೇಕೆಂದರೆ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಅಂತಿಮ ಪಂದ್ಯದಲ್ಲಿ ಸೋಲುವುದರ ಜೊತೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೇಬಲ್ ಟಾಪರ್ಸ್ ಗುಜರಾತ್ ಟೈಟನ್ಸ್ ವಿರುದ್ಧ ನಡೆಯಲಿರುವ ತನ್ನ ಅಂತಿಮ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಗುಜರಾತ್ ಟೈಟನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವಿನ ಪಂದ್ಯ ಸಾಕಷ್ಟು ಕುತೂಹಲವನ್ನು ಕೆರಳಿಸಿದ್ದು, ಈ ಪಂದ್ಯಕ್ಕೂ ಮುನ್ನ ಮಾತನಾಡಿರುವ ಗುಜರಾತ್ ಟೈಟನ್ಸ್ ತಂಡದ ಪ್ರಮುಖ ಆಟಗಾರ ಈ ಪಂದ್ಯದ ಕುರಿತು ಮಾತನಾಡುವುದರ ಜೊತೆಗೆ ಈ ಬಾರಿಯ ಐಪಿಎಲ್ ಟೂರ್ನಿ ಮುಕ್ತಾಯದ ನಂತರ ನಡೆಯಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ನಡೆಯಲಿರುವ ಟಿ ಟ್ವೆಂಟಿ ಸರಣಿಯ ಕುರಿತೂ ಸಹ ಡೇವಿಡ್ ಮಿಲ್ಲರ್ ಮಾತನಾಡಿ ಈ ಇಬ್ಬರು ಆಟಗಾರರು ಟೀಮ್ ಇಂಡಿಯಾದಲ್ಲಿ ಇರಬೇಕು ಎಂದಿದ್ದಾರೆ.

ಗುಜರಾತ್ ಟೈಟನ್ಸ್ ತಂಡದ ಈ ಇಬ್ಬರು ಟೀಮ್ ಇಂಡಿಯಾದಲ್ಲಿ ಇರಬೇಕು

ಗುಜರಾತ್ ಟೈಟನ್ಸ್ ತಂಡದ ಈ ಇಬ್ಬರು ಟೀಮ್ ಇಂಡಿಯಾದಲ್ಲಿ ಇರಬೇಕು

ಹೀಗೆ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಜೂನ್ ತಿಂಗಳಲ್ಲಿ ನಡೆಯಲಿರುವ ಟಿ ಟ್ವೆಂಟಿ ಸರಣಿಯ ಕುರಿತು ಮಾತನಾಡಿರುವ ಡೇವಿಡ್ ಮಿಲ್ಲರ್ ಟೀಮ್ ಇಂಡಿಯಾದಲ್ಲಿ ಗುಜರಾತ್ ಟೈಟನ್ಸ್ ಪರ ಮಿಂಚಿರುವ ರಾಹುಲ್ ತೆವಾಟಿಯಾ ಮತ್ತು ಶುಬ್‌ಮನ್ ಗಿಲ್ ಇರಬೇಕು ಎಂದಿದ್ದಾರೆ. ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಹುಲ್ ತೆವಾಟಿಯಾ 11 ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದಿದ್ದು 215 ರನ್ ಬಾರಿಸಿದ್ದಾರೆ ಹಾಗೂ ಅಜೇಯ 43 ರನ್ ಟೂರ್ನಿಯಲ್ಲಿ ತೆವಾಟಿಯಾ ಕಲೆಹಾಕಿರುವ ಗರಿಷ್ಟ ರನ್ ಆಗಿದೆ. ಅತ್ತ ಶುಬ್‌ಮನ್ ಗಿಲ್ 13 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು 402 ರನ್ ಬಾರಿಸಿದ್ದಾರೆ, 96 ರನ್ ಗಿಲ್ ಟೂರ್ನಿಯಲ್ಲಿ ಬಾರಿಸಿರುವ ಗರಿಷ್ಟ ರನ್ ಆಗಿದೆ.

ಹಾರ್ದಿಕ್ ಪಾಂಡ್ಯ ಹೆಸರು ಕೈಬಿಟ್ಟ ಮಿಲ್ಲರ್

ಹಾರ್ದಿಕ್ ಪಾಂಡ್ಯ ಹೆಸರು ಕೈಬಿಟ್ಟ ಮಿಲ್ಲರ್

ಹೀಗೆ ಗುಜರಾತ್ ಟೈಟನ್ಸ್ ತಂಡದಲ್ಲಿ ತಮ್ಮ ಸಹ ಆಟಗಾರರಾದ ರಾಹುಲ್ ತೆವಾಟಿಯಾ ಮತ್ತು ಶುಬ್‌ಮನ್ ಗಿಲ್ ಭಾರತ ಟಿ ಟ್ವೆಂಟಿ ತಂಡದಲ್ಲಿ ಸ್ಥಾನ ಪಡೆದುಕೊಳ್ಳಬೇಕು ಎಂದಿರುವ ಡೇವಿಡ್ ಮಿಲ್ಲರ್ ತಮ್ಮ ತಂಡದ ನಾಯಕನಾದ ಹಾರ್ದಿಕ್ ಪಾಂಡ್ಯ ಹೆಸರನ್ನೇ ಕೈಗೆತ್ತಿಕೊಂಡಿಲ್ಲ. ಫಿಟ್‌ನೆಸ್ ಸಮಸ್ಯೆಯಿಂದ ಟೀಮ್ ಇಂಡಿಯಾದಿಂದ ಸ್ಥಾನ ಕಳೆದುಕೊಂಡಿದ್ದ ಹಾರ್ದಿಕ್ ಪಾಂಡ್ಯ ಇದೀಗ ಫಿಟ್ ಆಗಿದ್ದು, ನಾಯಕತ್ವವನ್ನೂ ಸಹ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಹೀಗಿದ್ದರೂ ಪಾಂಡ್ಯ ಹೆಸರನ್ನು ಮಿಲ್ಲರ್ ಯಾಕೆ ತೆಗೆದುಕೊಂಡಿಲ್ಲ ಎಂಬುದು ಪ್ರಶ್ನೆ ಮೂಡಿಸಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ಸರಣಿ ಯಾವಾಗ?

ಭಾರತ ಮತ್ತು ದಕ್ಷಿಣ ಆಫ್ರಿಕಾ ಸರಣಿ ಯಾವಾಗ?

ಸದ್ಯ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯಗೊಂಡ ನಂತರ ಟೀಮ್ ಇಂಡಿಯಾ ಮೊದಲಿಗೆ ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕೆ ಇಳಿಯಲಿದ್ದು, 5 ಪಂದ್ಯಗಳ ಟಿ ಟ್ವೆಂಟಿ ಸರಣಿ ಇದಾಗಿರಲಿದೆ. ಈ ಸರಣಿಯ ಪ್ರಥಮ ಪಂದ್ಯ ಜೂನ್ 9ರಂದು ದೆಹಲಿಯಲ್ಲಿ ನಡೆಯಲಿದ್ದು, ದ್ವಿತೀಯ ಪಂದ್ಯ ಜೂನ್ 12ರಂದು ಕಟಕ್‌ನಲ್ಲಿ, ಮೂರನೇ ಪಂದ್ಯ ಜೂನ್ 14ರಂದು ವಿಶಾಖಪಟ್ಟಣಂನಲ್ಲಿ, ನಾಲ್ಕನೇ ಟಿ ಟ್ವೆಂಟಿ ಪಂದ್ಯ ಜೂನ್ 17ರಂದು ರಾಜ್‌ಕೋಟ್‌ನಲ್ಲಿ ಮತ್ತು ಸರಣಿಯ ಅಂತಿಮ ಪಂದ್ಯ ಜೂನ್ 19ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿವೆ.

Story first published: Wednesday, May 18, 2022, 15:38 [IST]
Other articles published on May 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X