IND vs SA 2nd T20I : ಸರಣಿ ಗೆಲ್ಲುವ ಉತ್ಸಾಹದಲ್ಲಿ ಗುವಾಹಟಿಗೆ ಬಂದಿಳಿದ ರೋಹಿತ್ ಶರ್ಮಾ ಪಡೆ

ತಿರುವನಂತಪುರದಲ್ಲಿ ನಡೆದ ಮೊದಲನೇ ಟಿ20 ಪಂದ್ಯದಲ್ಲಿ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ಟೀಂ ಇಂಡಿಯಾ, ಎರಡನೇ ಟಿ20 ಪಂದ್ಯವನ್ನು ಗೆಲ್ಲುವ ಉತ್ಸಾಹದಲ್ಲಿದೆ. ರೋಹಿತ್ ಶರ್ಮಾ ಮತ್ತು ತಂಡ ಈಗಾಗಲೇ ಎರಡನೇ ಟಿ20 ಪಂದ್ಯವನ್ನಾಡಲು ಗುವಾಹಟಿಗೆ ಬಂದಿಳಿದಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಆಡಬಾರದಿತ್ತು: ವಾಸಿಂ ಜಾಫರ್ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಆಡಬಾರದಿತ್ತು: ವಾಸಿಂ ಜಾಫರ್

ಅಕ್ಟೋಬರ್ 2ರಂದು ಭಾನುವಾರ ಅಸ್ಸಾಂನ ಗುವಾಹಟಿಯ ಬರ್ಸಾಪರಾ ಕ್ರೀಡಾಂಗಣದಲ್ಲಿ ಎರಡನೇ ಟಿ20 ಪಂದ್ಯ ನಿಗದಿಯಾಗಿದೆ. ಭಾರತೀಯ ಆಟಗಾರರು ಶುಕ್ರವಾರ ಸಂಪೂರ್ಣ ತರಬೇತಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಪ್ರಾರಂಭಿಸಲು ನಿಗದಿಪಡಿಸಲಾಗಿದೆ.

ಕೆಲವು ಭಾರತೀಯ ಆಟಗಾರರು ಗುವಾಹಟಿಗೆ ತೆರೆಳಲು ವಿಮಾನ ಹತ್ತುವ ಮುನ್ನ ಸಾಮಾಜಿಕ ಮಾಧ್ಯಮದಲ್ಲಿ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಯುಜುವೇಂದ್ರ ಚಹಾಲ್ ಮತ್ತು ಶ್ರೇಯಸ್ ಅಯ್ಯರ್ ಕ್ರಮವಾಗಿ ವಿಮಾನ ಮತ್ತು ವಿಮಾನ ನಿಲ್ದಾಣದ ಒಳಗಿನಿಂದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಭಾರತ ತಂಡವು ಪಂದ್ಯಕ್ಕೂ ಮುನ್ನ ಎರಡು ಅಭ್ಯಾಸ ಸೆಷನ್‌ಗಳನ್ನು ಹೊಂದಿರುತ್ತದೆ. ಶುಕ್ರವಾರ ಹಗಲು ಅಭ್ಯಾಸವಾದರೆ, ಶನಿವಾರ ರಾತ್ರಿ ವೇಳೆ ತರಬೇತಿ ಪಡೆಯಲಿದ್ದಾರೆ.

ಸರಣಿ ವಶಪಡಿಸಿಕೊಳ್ಳಲಿದೆಯಾ ಟೀಂ ಇಂಡಿಯಾ?

ಸರಣಿ ವಶಪಡಿಸಿಕೊಳ್ಳಲಿದೆಯಾ ಟೀಂ ಇಂಡಿಯಾ?

ಸರಣಿಯ ಮೊದಲನೇ ಟಿ20 ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ 8 ವಿಕೆಟ್‌ಗಳ ಜಯ ಸಾಧಿಸಿದ್ದ ಟೀಂ ಇಂಡಿಯಾ, ಎರಡನೇ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ಭಾರತಕ್ಕೆ ಬೌಲಿಂಗ್ ವಿಭಾಗದಲ್ಲಿ ಚಿಂತೆ ಸ್ವಲ್ಪ ದೂರವಾಗಿದ್ದು, ಎರಡನೇ ಪಂದ್ಯದಲ್ಲೂ ಅದೇ ರೀತಿ ಉತ್ತಮ ಪ್ರದರ್ಶನ ನೀಡುವ ಉತ್ಸಾಹದಲ್ಲಿದ್ದಾರೆ ಭಾರತದ ಬೌಲರ್ ಗಳು.

ಮೂರು ಪಂದ್ಯಗಳ ಸರಣಿಯಲ್ಲಿ ಈಗಾಗಲೇ ಮೊದಲ ಪಂದ್ಯವನ್ನು ಜಯಿಸಿರುವ ಟೀಂ ಇಂಡಿಯಾ, ಎರಡನೇ ಪಂದ್ಯದಲ್ಲಿ ಜಯ ಸಾಧಿಸಿದರೆ ಸರಣಿ ಕೈವಶವಾಗಲಿದೆ. ಟಿ20 ವಿಶ್ವಕಪ್ ಕೆಲವೇ ದಿನಗಳಿರುವಾಗ ಪ್ರತಿ ಗೆಲುವು ಟೀಂ ಇಂಡಿಯಾ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ.

RSWS 2022: ಫೈನಲ್ ತಲುಪಿದ ಇಂಡಿಯಾ ಲೆಜೆಂಡ್ಸ್: ತಂಡದ ಪ್ರದರ್ಶನಕ್ಕೆ ಸಚಿನ್ ತೆಂಡೂಲ್ಕರ್ ಸಂತಸ

ಪುಟಿದೇಳುವ ವಿಶ್ವಾಸದಲ್ಲಿ ದಕ್ಷಿಣ ಆಫ್ರಿಕಾ

ಪುಟಿದೇಳುವ ವಿಶ್ವಾಸದಲ್ಲಿ ದಕ್ಷಿಣ ಆಫ್ರಿಕಾ

ಮೊದಲನೇ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡುವ ಸೋಲನುಭವಿಸಿದ್ದ ದಕ್ಷಿಣ ಆಫ್ರಿಕಾ ತಂಡ ಎರಡನೇ ಪಂದ್ಯದಲ್ಲಿ ವಾಪಸಾಗುವ ವಿಶ್ವಾಸದಲ್ಲಿದೆ. ಮೊದಲನೇ ಪಂದ್ಯದಲ್ಲಿ ಮಾಡಿದ ತಪ್ಪನ್ನು ಸರಿ ಪಡಿಸಿಕೊಂಡು ಪಂದ್ಯವನ್ನು ಜಯಿಸುವ ಮೂಲಕ ಸರಣಿ ಸಮಬಲಗೊಳಿಸಲು ತಂತ್ರ ರೂಪಿಸುತ್ತಿದೆ.

ಮೊದಲನೇ ಪಂದ್ಯದಲ್ಲಿ ಸಂಪೂರ್ಣ ವಿಫಲವಾಗಿದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಪಡೆ ಎರಡನೇ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಗೆಲ್ಲುವ ಅವಕಾಶ ಇರುತ್ತದೆ. ಬೌಲಿಂಗ್ ವಿಭಾಗದಲ್ಲಿ ಕೂಡ ಅದು ಉತ್ತಮ ಪ್ರದರ್ಶನ ನೀಡಬೇಕಿದೆ. ಎರಡನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದಲ್ಲಿ ಕೆಲವು ಬದಲಾವಣೆ ಆಗುವ ನಿರೀಕ್ಷೆ ಇದೆ.

 ಭಾರತಕ್ಕೆ ಕಾಡುತ್ತದೆ ಬುಮ್ರಾ ಅನುಪಸ್ಥಿತಿ

ಭಾರತಕ್ಕೆ ಕಾಡುತ್ತದೆ ಬುಮ್ರಾ ಅನುಪಸ್ಥಿತಿ

ಸರಣಿಯ ಮೊದಲನೇ ಪಂದ್ಯದಲ್ಲಿ ಗಾಯದ ಸಮಸ್ಯೆಯಿಂದಾಗಿ ಪಂದ್ಯದಿಂದ ಹೊರಗುಳಿದಿದ್ದ ಭಾರತದ ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಈಗ ಸರಣಿಯಿಂದಲೇ ಹೊರಬಿದ್ದಿದ್ದಾರೆ. ಮಾತ್ರವಲ್ಲದೆ ಅವರು ಮುಂಬರುವ ಟಿ20 ವಿಶ್ವಕಪ್‌ ಪಂದ್ಯಾವಳಿಗೂ ಅಲಭ್ಯರಾಗಲಿದ್ದಾರೆ.

ಬುಮ್ರಾ ಬದಲಿಗೆ ಮೊಹಮ್ಮದ್ ಸಿರಾಜ್ ಅವರನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಆಡುವ ಭಾರತ ತಂಡದಲ್ಲಿ ಹೆಸರಿಸಲಾಗಿದೆ. ಆದರೆ, ಟಿ20 ವಿಶ್ವಕಪ್‌ನಲ್ಲಿ ಅವರ ಬದಲಿ ಆಟಗಾರ ಯಾರೆಂದು ಬಿಸಿಸಿಐ ಇನ್ನೂ ಹೆಸರಿಸಿಲ್ಲ.

8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ್ದ ಟೀಂ ಇಂಡಿಯಾ

8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ್ದ ಟೀಂ ಇಂಡಿಯಾ

ಬಾಲ್ ಹೆಚ್ಚಿನ ಸ್ವಿಂಗ್‌ ಆಗುತ್ತಿದ್ದ ಪಿಚ್‌ನಲ್ಲಿ ದಕ್ಷಿಣ ಆಫ್ರಿಕಾದ ಆಟಗಾರರು ಭಾರತದ ಬೌಲರ್ ಗಳನ್ನು ಎದುರಿಸಲು ಪರದಾಡಿದರು. ನಾಲ್ವರು ಆಟಗಾರರು ಡಕ್‌ಗೆ ಔಟಾಗುವುದರೊಂದಿಗೆ 5 ವಿಕೆಟ್‌ಗೆ 9 ರನ್ ಗಳಿಸಿ ಆಘಾತಕ್ಕೆ ಒಳಗಾಯಿತು.

ಕೇಶವ್ ಮಹಾರಾಜ್ ಮತ್ತು ವೇಯ್ನ್ ಪಾರ್ನೆಲ್ ಅವರ ಉತ್ತಮ ಕೊಡುಗೆ ಮಾತ್ರ 100 ರನ್ ಗಡಿ ದಾಟಲು ನೆರವಾಯಿತು. ಉತ್ತರವಾಗಿ ಭಾರತ, ಸೂರ್ಯಕುಮಾರ್ ಯಾದವ್ ಮತ್ತು ಕೆಎಲ್ ರಾಹುಲ್ ಅರ್ಧಶತಕಗಳ ನೆರವಿನಿಂದ ಗುರಿಯನ್ನು ಬೆನ್ನಟ್ಟಿತು.

ಟಿ20 ವಿಶ್ವಕಪ್‌ಗೂ ಮುನ್ನ ಎರಡೂ ತಂಡಗಳಿಗೆ ಈ ಸರಣಿ ಕೊನೆಯದಾಗಿರುವುದರಿಂದ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಭಾನುವಾರ ಉತ್ತಮ ಕ್ರಿಕೆಟ್ ಆಡಲು ಉತ್ಸುಕವಾಗಿವೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, September 30, 2022, 11:29 [IST]
Other articles published on Sep 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X