ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್‌ನಲ್ಲಿ ಇಂಡಿಯಾ ಲೆಜೆಂಡ್ಸ್ ತಂಡ ಆಸ್ಟ್ರೇಲಿಯಾ ವಿರುದ್ಧ ಗೆದ್ದು ಫೈನಲ್‌ಗೆ ಪ್ರವೇಶ ಪಡೆದಿದೆ. ಸೆಮಿಫೈನಲ್‌ನಲ್ಲಿ ಇಂಡಿಯಾ ಲೆಜೆಂಡ್ಸ್ ತಂಡದ ಪರವಾಗಿ ಆಟಗಾರರಾದ ನಮನ್ ಓಜಾ ಹಾಗೂ ಇರ್ಫಾನ್ ಪಠಾನ್ ಅದ್ಭುತ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಕಾರಣವಾದರು. ಈ ಪ್ರದರ್ಶನಕ್ಕೆ ನಾಯಕ ಸಚಿನ್ ತೆಂಡೂಲ್ಕರ್ ಹರ್ಷ ವ್ಯಕ್ತಪಡಿಸಿದ್ದು ಇಬ್ಬರು ಆಟಗಾರರನ್ನು ಕೂಡ ಮುಕ್ತಕಂಠದಿಂದ ಹೊಗಳಿದ್ದಾರೆ.
ಟ್ವೀಟ್ ಮೂಲಕ ಇಂಡಿಯಾ ಲೆಜೆಂಡ್ಸ್ ತಂಡದ ಪ್ರದರ್ಶನದ ಬಗ್ಗೆ ಸಚಿನ್ ತೆಂಡೂಲ್ಕರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. "ಟೀಮ್ ಇಂಡಿಯಾದಿಂದ ಅದ್ಭುತವಾದ ಪ್ರದರ್ಶನ. ನಿನ್ನೆ ಕಠಿಣ ಪರಿಸ್ಥಿತಿಯಲ್ಲಿಯೂ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದ್ದರು. ಇಂದಿನ ಆಟದಲ್ಲಿ ಅದ್ಭುತ ಆಟವನ್ನು ಪ್ರದರ್ಶಿಸಿದ ನಮನ್ ಓಜಾ ಹಾಗೂ ಇರ್ಫಾನ್ ಪಠಾಣ್ ಅವರನ್ನು ವಿಶೇಷವಾಗಿ ಉಲ್ಲೇಖಿಸಬೇಕಿದೆ. ಬಲಿಷ್ಠವಾಗಿ ಮುನ್ನುಗ್ಗೋಣ" ಎಂದಿದ್ದಾರೆ ಸಚಿನ್ ತೆಂಡೂಲ್ಕರ್.
ಟಿ20 ವಿಶ್ವಕಪ್ನಲ್ಲಿ ಭಾರತಕ್ಕೆ ದೊಡ್ಡ ಆಘಾತ: ಜಸ್ಪ್ರೀತ್ ಬೂಮ್ರಾ ಸಂಪೂರ್ಣ ಟೂರ್ನಿಯಿಂದ ಔಟ್!
ಟಾಸ್ ಗೆದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡ ಇಂಡಿಯಾ ಲೆಜೆಂಡ್ಸ್ ತಂಡ ಹೇಳಿಕೊಳ್ಳುವಂತಾ ಯಶಸ್ಸು ಆರಂಭದಲ್ಲಿ ಸಾಧಿಸಲು ಸಾಧ್ಯವಾಗಲಿಲ್ಲ. ಆಸ್ಟ್ರೇಲಿಯಾ ಲೆಜೆಂಡ್ಸ್ ತಂಡ ಮೊದಲ ವಿಕೆಟ್‌ಗೆ 60 ರನ್‌ಗಳ ಜೊತೆಯಾಟವನ್ನು ನೀಡಿತ್ತು. ನಾಯಕ ಶೇನ್ ವಾಟ್ಸನ್ 21 ಎಸೆತಗಳಲ್ಲಿ 30 ರನ್‌ಗಳಿಸಿದರೆ ಡೂಲನ್ 35 ರನ್‌ಗಳ ಕೊಡುಗೆ ನೀಡಿದರು. ಇನ್ನು ಬೆನ್ ಡಂಕ್ 26 ಎಸೆತಗಳಲ್ಲಿ 46 ರನ್ ಸಿಡಿಸಿ ಮಿಂಚಿದ್ದರು. ಅಂತಿಮ ಹಂತದಲ್ಲಿ ಕ್ಯಾಮರೂನ್ ವೈಟ್ 18 ಎಸೆತಗಳಲ್ಲಿ 30 ರನ್ ಸಿಡಿಸುವ ಮೂಲಕ 172 ರನ್‌ಗಳ ಸವಾಲಿನ ಗುರಿ ನೀಡಲು ಕಾರಣವಾದರು.
ಇನ್ನು ಆಸ್ಟ್ರೇಲಿಯಾ ಲೆಜೆಂಡ್ಸ್ ತಂಡ ನೀಡಿದ ಸವಾಲಿನ ಮೊತ್ತ ಬೆನ್ನಟ್ಟಿದ ಇಂಡಿಯಾ ಲೆಜೆಂಡ್ಸ್ ತಂಡ ಸಾಧಾರಣ ಆರಂಭವನ್ನು ಪಡೆಯಿತು. ನಾಯಕ ಸಚಿನ್ ತೆಂಡೂಲ್ಕರ್ 10 ರನ್‌ಗಳಿಸಿ ವಿಕೆಟ್ ಕಳೆದುಕೊಂಡರೆ, ಸುರೇಶ್ ರೈನಾ 11 ಯುವರಾಜ್ ಸಿಂಗ್ 18, ಸ್ಟುವರ್ಟ್ ಬಿನ್ನಿ 2, ಯೂಸುಫ್ ಪಠಾಣ್ 1 ರನ್‌ಗಳಿಗೆ ವಿಕೆಟ್ ಕಳೆದುಕೊಂಡಿತು. ಈ ಸಂದರ್ಭದಲ್ಲಿ ಮತ್ತೊಂದು ತುದಿಯಲ್ಲಿದ್ದ ಆರಂಭಿಕ ಆಟಗಾರ ಏಕಾಂಗಿಯಾಗಿ ಹೋರಾಟ ನಡೆಸುತ್ತಾ ಬ್ಯಾಟಿಂಗ್ ಮುಂದುವರಿಸಿದ್ದರು.
ಸೂರ್ಯಕುಮಾರ್ ಅಬ್ಬರ, ಗಬ್ಬರ್ ಹೆಸರಲ್ಲಿದ್ದ ಈ ದಾಖಲೆ ನೆಲಸಮ, ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟರ್
ಯೂಸುಫ್ ಪಠಾಣ್ ವಿಕೆಟ್ ಕಳೆದುಕೊಂಡಾಗ ಇಂಡಿಯಾ ಲೆಜೆಂಡ್ಸ್ ತಂಡ 15.4 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 125 ರನ್‌ಗಳಿಸಿತ್ತು. ಮುಂದಿನ 26 ಎಸೆತಗಳಲ್ಲಿ 47 ರನ್‌ಗಳನ್ನು ಗಳಿಸುವ ಸವಾಲು ಇಂಡಿಯಾ ಲೆಜೆಂಡ್ಸ್ ಮುಂದಿತ್ತು. ಈ ಹಂತದಲ್ಲಿ ಬ್ಯಾಟಿಂಗ್‌ಗೆ ಇಳಿದ ಇರ್ಫಾನ್ ಪಠಾಣ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು. ಸ್ಪೋಟಕವಾಗಿ ಬ್ಯಾಟ್ ಬೀಸಿದ ಅವರು ಕೇವಲ 12 ಎಸೆತಗಳಲ್ಲಿ 37 ರನ್‌ಗಳನ್ನು ಸಿಡಿಸಿದರು. ಎರಡು ಬೌಂಡರಿ ಹಾಗೂ ನಾಲ್ಕು ಭರ್ಜರಿ ಸಿಕ್ಸರ್‌ಗಳನ್ನು ಈ ಇನ್ನಿಂಗ್ಸ್ ಹೊಂದಿತ್ತು. ಇನ್ನು ಆರಂಭಿಕನಾಗಿ ಕಣಕ್ಕಿಳಿದು ಅಂತಿಮ ಹಂತದವರೆಗೂ ಬ್ಯಾಟಿಂಗ್ ನಡೆಸಿದ ನಮನ್ ಓಜಾ 62 ಎಸೆತಗಳಲ್ಲಿ 90 ರನ್ ಸಿಡಿಸಿ ಗೆಲುವಿನ ರೂವಾರಿಯೆನಿಸಿದರು. ಇನ್ನೂ 4 ಎಸೆತಗಳು ಬಾಕಿಯಿರುವಂತೆಯೇ ಭಾರತ 5 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದ್ದು ಫೈನಲ್‌ಗೆ ಪ್ರವೇಶ್ ಪಡೆದುಕೊಂಡಿದೆ.
ಇತ್ತಂಡಗಳ ಆಡುವ ಬಳಗ
ಇಂಡಿಯಾ ಲೆಜೆಂಡ್ಸ್ ಪ್ಲೇಯಿಂಗ್ XI: ನಮನ್ ಓಜಾ (ವಿಕೆಟ್ ಕೀಪರ್), ಸಚಿನ್ ತೆಂಡೂಲ್ಕರ್ (ನಾಯಕ), ಸುರೇಶ್ ರೈನಾ, ಯುವರಾಜ್ ಸಿಂಗ್, ಯೂಸುಫ್ ಪಠಾಣ್, ಇರ್ಫಾನ್ ಪಠಾಣ್, ಸ್ಟುವರ್ಟ್ ಬಿನ್ನಿ, ರಾಜೇಶ್ ಪವಾರ್, ರಾಹುಲ್ ಶರ್ಮಾ, ಮುನಾಫ್ ಪಟೇಲ್, ಅಭಿಮನ್ಯು ಮಿಥುನ್
ಬೆಂಚ್: ಎಸ್ ಬದ್ರಿನಾಥ್, ಮನ್‌ಪ್ರೀತ್ ಗೋನಿ, ವಿನಯ್ ಕುಮಾರ್, ಪ್ರಗ್ಯಾನ್ ಓಜಾ, ಹರ್ಭಜನ್ ಸಿಂಗ್, ರವಿ ಗಾಯಕ್ವಾಡ್
ಆಸ್ಟ್ರೇಲಿಯಾ ಲೆಜೆಂಡ್ಸ್: ಶೇನ್ ವ್ಯಾಟ್ಸನ್ (ನಾಯಕ), ಅಲೆಕ್ಸ್ ಡೂಲನ್, ಬೆನ್ ಡಂಕ್, ಕ್ಯಾಲಮ್ ಫರ್ಗುಸನ್, ನಾಥನ್ ರಿಯರ್ಡನ್, ಕ್ಯಾಮೆರಾನ್ ವೈಟ್, ಬ್ರಾಡ್ ಹ್ಯಾಡಿನ್ (ವಿಕೆಟ್ ಕೀಪರ್), ಬ್ರೈಸ್ ಮೆಕ್‌ಗೇನ್, ಜೇಸನ್ ಕ್ರೆಜ್ಜಾ, ಡಿರ್ಕ್ ನ್ಯಾನೆಸ್, ಬ್ರೆಟ್ ಲೀ
ಬೆಂಚ್: ಬ್ರಾಡ್ ಹಾಡ್ಜ್, ಚಾಡ್ ಸೇಯರ್ಸ್, ಸ್ಟುವರ್ಟ್ ಕ್ಲಾರ್ಕ್, ಜಾನ್ ಹೇಸ್ಟಿಂಗ್ಸ್, ಜಾರ್ಜ್ ಹಾರ್ಲಿನ್