ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs SA T20: ಈ ಮೂವರು ಆಟಗಾರರಿಗೆ ಅವಕಾಶ ಸಿಗೋದೆ ಅನುಮಾನ!

Team india

ಐಸಿಸಿ ಟಿ20 ವಿಶ್ವಕಪ್‌ಗೆ ಮುನ್ನ ಭಾರತ ತಂಡದ ಅಂತಿಮ ತಯಾರಿ ಈ ವಾರದಿಂದ ಆರಂಭವಾಗುತ್ತಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಟಿ20 ಅಂತರಾಷ್ಟ್ರೀಯ ಸರಣಿ ಬುಧವಾರ ತಿರುವನಂತಪುರದಲ್ಲಿ ಆರಂಭವಾಗಲಿದೆ. ಎರಡೂ ತಂಡಗಳು ಸರಣಿಯಲ್ಲಿ ಬಲಿಷ್ಠ ತಂಡವನ್ನು ಕಣಕ್ಕಿಳಿಸುತ್ತಿವೆ.

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಗೆದ್ದ ಉತ್ಸಾಹದಲ್ಲಿ ರೋಹಿತ್ ಶರ್ಮಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ. ವಿಶ್ವ ಚಾಂಪಿಯನ್ ಆಗಿರುವ ಕಾಂಗರೂಗಳನ್ನು 2-1 ಅಂತರದಿಂದ ಸೋಲಿಸುವ ಮೂಲಕ ರೋಹಿತ್ ಪಡೆ ವಿಜೇತರಾದರು. ಮೊದಲ ಪಂದ್ಯದಲ್ಲಿ ಸೋತಿದ್ದ ಭಾರತ ಮುಂದಿನ ಎರಡು ಪಂದ್ಯಗಳನ್ನು ಗೆದ್ದು ಸರಣಿ ಕೈವಶ ಮಾಡಿಕೊಂಡಿದೆ.

ಆಸೀಸ್ ವಿರುದ್ಧ ಭಾರತ ತಂಡದಲ್ಲಿದ್ದ ಹಾರ್ದಿಕ್ ಪಾಂಡ್ಯ ಮತ್ತು ಭುವನೇಶ್ವರ್ ಕುಮಾರ್, ದೀಪಕ್ ಹೂಡಾ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಆಡುತ್ತಿಲ್ಲ. ಉಳಿದವರೆಲ್ಲರೂ ತಂಡದ ಜೊತೆಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಸರಣಿಯಲ್ಲಿ ಒಂದೂ ಅವಕಾಶ ಸಿಗದೇ ಭಾರತದ ಕೆಲ ಆಟಗಾರರು ಬೆಂಚ್‌ನಲ್ಲೇ ದಿನದೂಡಿದರು. ಅಂತೆಯೇ ಮುಂಬರುವ ದಕ್ಷಿಣ ಆಫ್ರಿಕಾ ಸರಣಿಯಲ್ಲೂ ಒಂದೂ ಅವಕಾಶ ಸಿಗದೆ ಪೆವಿಲಿಯನ್‌ನಲ್ಲೇ ಉಳಿಯುವ ಮೂವರು ಆಟಗಾರರು ಯಾರೆಂದು ಈ ಕೆಳಗೆ ಕಾಣಬಹುದು.

ಅಶ್ವಿನ್‌ಗೆ ಅವಕಾಶ ಸಿಗುವುದು ಅನುಮಾನ!

ಅಶ್ವಿನ್‌ಗೆ ಅವಕಾಶ ಸಿಗುವುದು ಅನುಮಾನ!

ಸ್ಟಾರ್ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಭಾರತದ ಪರ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶವನ್ನು ಪಡೆಯದ ಪ್ರಮುಖ ಆಟಗಾರ. ಯುಜ್ವೇಂದ್ರ ಚಹಾಲ್ ಮತ್ತು ಸ್ಪಿನ್ ಬೌಲಿಂಗ್ ಆಲ್ ರೌಂಡರ್ ಅಕ್ಷರ್ ಪಟೇಲ್ ಆಸೀಸ್ ವಿರುದ್ಧ ಸ್ಪಿನ್ ನಿಭಾಯಿಸಿದರು. ಅವರು ದಕ್ಷಿಣ ಆಫ್ರಿಕಾ ವಿರುದ್ಧವೂ ಮುಂದುವರಿಯುವ ಸಾಧ್ಯತೆಯಿದೆ.

ಆಸೀಸ್ ವಿರುದ್ಧದ ಮೊದಲ ಎರಡು ಪಂದ್ಯಗಳಲ್ಲಿ ಚಹಾಲ್ ಸಂಪೂರ್ಣ ನಿರಾಸೆ ಮೂಡಿಸಿದ್ದರು. ಆದರೆ ಯುಜಿ ಕೊನೆಯ ಪಂದ್ಯದಲ್ಲಿ ಅದ್ಭುತ ಪುನರಾಗಮನ ಮಾಡಿದರು. ಈ ಪಂದ್ಯದಲ್ಲಿ ಚಹಲ್ ತಮ್ಮ ಹಳೆಯ ಫಾರ್ಮ್‌ಗೆ ಮರಳುವ ಸೂಚನೆ ನೀಡಿದರು. ದಕ್ಷಿಣ ಆಫ್ರಿಕಾ ವಿರುದ್ಧ ಇದನ್ನು ಮುಂದುವರಿಸಲು ತಂಡ ಅವರಿಗೆ ಅವಕಾಶ ನೀಡಲು ಪ್ರಯತ್ನಿಸಬಹುದು.

ಬೆಂಚ್‌ನಲ್ಲೇ ಉಳಿದ ದೀಪಕ್ ಚಹಾರ್

ಬೆಂಚ್‌ನಲ್ಲೇ ಉಳಿದ ದೀಪಕ್ ಚಹಾರ್

ಸೀಮ್ ಬೌಲಿಂಗ್ ಆಲ್ ರೌಂಡರ್ ದೀಪಕ್ ಚಹಾರ್ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ ತಪ್ಪಿಸಿಕೊಳ್ಳುವ ಸಾಧ್ಯತೆಯಿರುವ ಎರಡನೇ ಆಟಗಾರ. ಅನುಭವಿ ಭುವನೇಶ್ವರ್ ಕುಮಾರ್ ಸರಣಿಯಲ್ಲಿ ಆಡದಿದ್ದರೂ ಚಹಾರ್ ಗೆ ಅವಕಾಶ ಸಿಗದಿರಬಹುದು. ಭುವಿ ಬದಲಿಗೆ ಅರ್ಷದೀಪ್ ಸಿಂಗ್ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.

ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ತಂಡದ ಇತರ ವೇಗದ ಬೌಲರ್‌ಗಳಾಗಿದ್ದಾರೆ. ಈ ಮೂವರನ್ನು ಟಿ20 ವಿಶ್ವಕಪ್‌ಗೆ ಪ್ರಮುಖ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಆದರೆ ಚಹಾರ್ ಮೀಸಲು ಪಟ್ಟಿಯಲ್ಲಿದ್ದಾರೆ. ಆದ್ದರಿಂದ, ಭುವಿ, ಹರ್ಷಲ್ ಮತ್ತು ಅರ್ಶ್‌ದೀಪ್ ಚಹಾರ್‌ಗಿಂತ ಹೆಚ್ಚಿನ ಅವಕಾಶಗಳಿಗೆ ಅರ್ಹರು.

ಬ್ಯಾಟ್ ಹಿಡಿಯದ ದೀಪಕ್ ಹೂಡಾ

ಬ್ಯಾಟ್ ಹಿಡಿಯದ ದೀಪಕ್ ಹೂಡಾ

ಆಲ್ ರೌಂಡರ್ ದೀಪಕ್ ಹೂಡಾ ಕೂಡ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿಯಬಹುದು. ರಿಷಬ್ ಪಂತ್ ಮತ್ತು ದಿನೇಶ್ ಕಾರ್ತಿಕ್ ನಡುವಿನ ಪ್ಲೇಯಿಂಗ್ ಇಲೆವೆನ್‌ನಲ್ಲಿ ಯಾರನ್ನು ಸೇರಿಸಬೇಕು ಎಂಬ ಚರ್ಚೆ ಇನ್ನೂ ಬಿಸಿಯಾಗುತ್ತಿದೆ.

ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ತಂಡದ ಭಾಗವಾಗಿದ್ದ ಕಾರಣ ಭಾರತಕ್ಕೆ ಇಬ್ಬರೂ ಜೊತೆಯಾಗಿ ಆಡುವುದು ಕಷ್ಟಕರವಾಗಿತ್ತು. ಆದರೆ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಹಾರ್ದಿಕ್‌ಗೆ ವಿಶ್ರಾಂತಿ ನೀಡಿದೆ. ಆದ್ದರಿಂದ ಭಾರತ ಕಾರ್ತಿಕ್ ಮತ್ತು ರಿಷಭ್ ಇಬ್ಬರನ್ನೂ ಒಟ್ಟಿಗೆ ಕಣಕ್ಕಿಳಿಸಬಹುದು. ಹಾರ್ದಿಕ್ ಪಾಂಡ್ಯ ಬದಲು ಶಹಬಾಜ್ ಅಹಮದ್ ಸ್ಥಾನ ಪಡೆದಿದ್ರೂ ಪ್ಲೇಯಿಂಗ್ ಇಲೆವೆನ್‌ನಲ್ಲಿ ಆಡುವುದು ಅನುಮಾನವಾಗಿದೆ. ಇನ್ನು ದೀಪಕ್ ಹೂಡಾ ಬದಲು ಶ್ರೇಯಸ್ ಅಯ್ಯರ್ ಸ್ಕ್ವಾಡ್ ಸೇರಿದ್ದಾರೆ.

Story first published: Monday, September 26, 2022, 23:34 [IST]
Other articles published on Sep 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X