ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs SA t20 : ಬ್ಯಾಟಿಂಗ್ ಕ್ರಮಾಂಕದಲ್ಲಿ ಪ್ರಯೋಗಕ್ಕೆ ಮುಂದಾಗಿ ಟೀಂ ಇಂಡಿಯಾ ಸೋಲನ್ನಪ್ಪಿತು ಎಂದ ವಾಸಿಂ ಜಾಫರ್

Ind vs SA t20 : Wasim Jaffer Unhappy With Team India’s Decision To Promote Dinesh Karthik to No.4

ಅಕ್ಟೋಬರ್ 4ರ ಮಂಗಳವಾರ ಇಂದೋರ್‌ನಲ್ಲಿ ನಡೆದ ಮೂರನೇ ಟಿ20 ಪಂದ್ಯದ ವೇಲೆ ದಕ್ಷಿಣ ಆಫ್ರಿಕಾ ವಿರುದ್ಧ ನೀಡಿದ ಬೃಹತ್ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಭಾರತ ತಂಡ 49 ರನ್‌ಗಳ ಅಂತರದಲ್ಲಿ ಸೋಲನ್ನಪ್ಪಿತು.

ದಕ್ಷಿಣ ಆಫ್ರಿಕಾ ನೀಡಿದ 228 ರನ್‌ಗಳ ಗುರಿಯನ್ನು ಬೆನ್ನತ್ತಿದ ಟೀಂ ಇಂಡಿಯಾ 18.3 ಓವರ್ ಗಳಲ್ಲಿ 179 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸೋಲನುಭವಿಸಿತು. ಮೂರನೇ ಟಿ20 ಪಂದ್ಯದಲ್ಲಿ ಬ್ಯಾಟಿಂಗ್‌ ಕ್ರಮಾಂಕದಲ್ಲಿ ನಾಯಕ ರೋಹಿತ್ ಶರ್ಮಾ ಕೆಲವು ಅಚ್ಚರಿಯ ಬದಲಾವಣೆಗಳನ್ನು ಮಾಡಿದರು.

 IND vs SA: ದಕ್ಷಿಣ ಆಫ್ರಿಕಾ ವಿರುದ್ಧ ಡಕ್-ಔಟ್ ಆಗಿ ಅನಗತ್ಯ ದಾಖಲೆ ನಿರ್ಮಿಸಿದ ರೋಹಿತ್ ಶರ್ಮಾ IND vs SA: ದಕ್ಷಿಣ ಆಫ್ರಿಕಾ ವಿರುದ್ಧ ಡಕ್-ಔಟ್ ಆಗಿ ಅನಗತ್ಯ ದಾಖಲೆ ನಿರ್ಮಿಸಿದ ರೋಹಿತ್ ಶರ್ಮಾ

ನಾಯಕ ರೋಹಿತ್ ಶರ್ಮಾ ಜೊತೆ ರಿಷಬ್ ಪಂತ್ ಇನ್ನಿಂಗ್ಸ್ ಆರಂಭಿಸಿದರೆ, ನಾಲ್ಕನೇ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ ಬ್ಯಾಟಿಂಗ್‌ಗೆ ಬಂದರು, 5 ನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್‌ಗೆ ಬಂದು ವೈಫಲ್ಯ ಅನುಭವಿಸಿದರು.

ಫಿನಿಶರ್ ದಿನೇಶ್ ಕಾರ್ತಿಕ್ ಅನ್ನು ನಂ. 4 ಕ್ಕೆ ಬಡ್ತಿ ನೀಡುವ ಟೀಮ್ ಇಂಡಿಯಾದ ನಿರ್ಧಾರದ ಬಗ್ಗೆ ವಾಸಿಂ ಜಾಫರ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಆತ ಫಿನಿಶರ್, ಎಂದಿಗೂ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿಲ್ಲ, ಮುಂದಿನ ಪಂದ್ಯಗಳಲ್ಲೂ ಆತ ಫಿನಿಷರ್ ಪಾತ್ರವನ್ನೇ ನಿರ್ವಹಿಸಬೇಕಿದೆ, ಬ್ಯಾಟಿಂಗ್‌ನಲ್ಲಿ ಸೂರ್ಯಕುಮಾರ್ ಯಾದವ್ ಬದಲಿಗೆ ಡಿಕೆಗೆ ಬಡ್ತಿ ನೀಡಿದ್ದು ಉತ್ತಮ ಕ್ರಮವಲ್ಲ ಎಂದು ವಾಸೀಂ ಜಾಫರ್ ಹೇಳಿದ್ದಾರೆ.

ಕಾಡಿದ ಕೊಹ್ಲಿ, ರಾಹುಲ್ ಅನುಪಸ್ಥಿತಿ

ಕಾಡಿದ ಕೊಹ್ಲಿ, ರಾಹುಲ್ ಅನುಪಸ್ಥಿತಿ

ಮೂರನೇ ಪಂದ್ಯದಲ್ಲಿ ಕೆಎಲ್ ರಾಹುಲ್, ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿತ್ತು. ಇವರಿಬ್ಬರ ಅನುಪಸ್ಥಿತಿ ಮೂರನೇ ಪಂದ್ಯದಲ್ಲಿ ಬಹುವಾಗಿ ಕಾಡಿತು. ಕೆಎಲ್‌ ರಾಹುಲ್ ಬದಲಿಗೆ ನಾಯಕ ರೋಹಿತ್ ಶರ್ಮಾ ಜೊತೆ ರಿಷಬ್ ಪಂತ್ ಇನ್ನಿಂಗ್ಸ್ ಆರಂಭಿಸಿದರು. ನಾಯಕ ರೋಹಿತ್ ಶರ್ಮಾ ಶೂನ್ಯಕ್ಕೆ ಔಟಾದರು.

ಕೊಹ್ಲಿ ಬದಲಾಗಿ ತಂಡದಲ್ಲಿ ಅವಕಾಶ ಪಡೆದ ಶ್ರೇಯಸ್ ಅಯ್ಯರ್ ಕೂಡ 1 ರನ್ ಗಳಿಸಿ ಔಟಾದರು. ಸೂರ್ಯಕುಮಾರ್ ಯಾದವ್ ಕೂಡ ಮೂರನೇ ಟಿ20 ಪಂದ್ಯದಲ್ಲಿ ವಿಫಲರಾದ ಕಾರಣ ಭಾರತಕ್ಕೆ ಸೋಲು ಖಚಿತವಾಗಿತು.

T20 World Cup 2022: ಟಿ20 ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಹೆಸರಿಸಿದ ಮೈಕೆಲ್ ಬೆವನ್

ಬ್ಯಾಟಿಂಗ್‌ನಲ್ಲಿ ಬಡ್ತಿ ಪಡೆದ ಡಿಕೆ

ಬ್ಯಾಟಿಂಗ್‌ನಲ್ಲಿ ಬಡ್ತಿ ಪಡೆದ ಡಿಕೆ

ಶ್ರೇಯಸ್ ಅಯ್ಯರ್ ಔಟ್‌ ಆದ ನಂತರ ಬ್ಯಾಟಿಂಗ್‌ನಲ್ಲಿ ಬಡ್ತಿ ಪಡೆದ ದಿನೇಶ್ ಕಾರ್ತಿಕ್ 21 ಎಸೆತಗಳಲ್ಲಿ 4 ಬೌಂಡರಿ 4 ಸಿಕ್ಸರ್ ಸಹಿತ 46 ರನ್ ಗಳಿಸಿದರು. ಆದರೆ ಕಾರ್ತಿಕ್ ಅವರನ್ನು ಸೂರ್ಯಕುಮಾರ್ ಯಾದವ್‌ಗಿಂತ 4 ನೇ ಸ್ಥಾನದಲ್ಲಿ ಕಳುಹಿಸಲಾಯಿತು. ಟೀಂ ಇಂಡಿಯಾದ ಈ ನಿರ್ಧಾರವನ್ನು ವಾಸಿಂ ಜಾಫರ್ ಪ್ರಶ್ನಿಸಿದ್ದಾರೆ.

"ಅವರು 4 ನೇ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್‌ರನ್ನು ಏಕೆ ಕಳುಹಿಸಿದ್ದಾರೆ ಎಂದು ನನಗೆ ಆಶ್ಚರ್ಯವಾಯಿತು. ಅದು ಯಾವ ಉದ್ದೇಶಕ್ಕಾಗಿ ಬಡ್ತಿ ನೀಡಲಾಯಿತು. ಅವರು ಎಂದಿಗೂ ಆ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಹೋಗುವುದಿಲ್ಲ" ಎಂದು ಹೇಳಿದ್ದಾರೆ.

ಸೂರ್ಯಕುಮಾರ್ ಯಾದವ್‌ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್

ಸೂರ್ಯಕುಮಾರ್ ಯಾದವ್‌ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್

"ಸೂರ್ಯಕುಮಾರ್ ಯಾದವ್, ನಾಲ್ಕನೇ ಕ್ರಮಾಂಕದ ಬದಲಾಗಿ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದರು, 4ನೇ ಕ್ರಮಾಂಕದಲ್ಲಿ ಅವರು ಉತ್ತಮ ಪ್ರದರ್ಶನ ನೀಡುತ್ತಿರುವಾಗ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡುವ ಅಗತ್ಯವೇನಿತ್ತು" ಎಂದು ವಾಸಿಂ ಜಾಫರ್ ಪ್ರಶ್ನಿಸಿದ್ದಾರರೆ.

ರಾಹುಲ್, ಕೊಹ್ಲಿಗೆ ವಿಶ್ರಾಂತಿ ನೀಡಿದ ಸಮಯದಲ್ಲಿ ರೋಹಿತ್ ಬ್ಯಾಟಿಂಗ್ ಕ್ರಮಾಂಕದಲ್ಲಿ ಹೆಚ್ಚಿನ ಪ್ರಯೋಗಗಳನ್ನು ಮಾಡಬಾರದಿತ್ತು ಎಂದು ವಾಸಿಂ ಜಾಫರ್ ಅಭಿಪ್ರಾಯ ಪಟ್ಟಿದ್ದಾರೆ.

ಕೊನೆಯ ಪಂದ್ಯದಲ್ಲಿ ಗೆಲ್ಲಬೇಕಿತ್ತು

ಕೊನೆಯ ಪಂದ್ಯದಲ್ಲಿ ಗೆಲ್ಲಬೇಕಿತ್ತು

ಟಿ20 ವಿಶ್ವಕಪ್‌ಗಿಂತ ಮೊದಲು ಆಡುತ್ತಿರುವ ಕೊನೆಯ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಬೇಕಿತ್ತು ಎಂದು ವಾಸಿಂ ಜಾಫರ್ ಹೇಳಿದ್ದಾರೆ. ಆಟಗಾರರಿಗೆ ವಿಶ್ರಾಂತಿ ನೀಡುವುದರ ಬದಲಾಗಿ ಪೂರ್ಣ ಸಾಮರ್ಥ್ಯದ ತಂಡದೊಂದಿಗೆ ಕೊನೆಯ ಪಂದ್ಯವನ್ನಾಡಬೇಕಿತ್ತು.

ಸರಣಿಯನ್ನು 3-0 ಅಂತರದಿಂದ ವಶಪಡಿಸಿಕೊಂಡಿದ್ದರೆ ಆಸ್ಟ್ರೇಲಿಯಾಕ್ಕೆ ವಿಶ್ವಾಸದಲ್ಲಿ ಪ್ರಯಾಣ ಮಾಡಬಹುದಿತ್ತು ಎಂದು ಅವರು ಹೇಳಿದ್ದಾರೆ.

Story first published: Wednesday, October 5, 2022, 13:29 [IST]
Other articles published on Oct 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X