ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs SL 2nd ODI: ಭಾರತ vs ಶ್ರೀಲಂಕಾ ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ತಂಡಗಳು, ಪಂದ್ಯದ ವಿವರ

IND vs SL 2nd ODI: India vs Sri Lanka Fantasy Dream Team, Probable Teams And Match Details

ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಏಕದಿನ ಪಂದ್ಯವನ್ನು ಭಾರತ ತಂಡ 67 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ್ದು, ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.

ಇದೀಗ ಗುರುವಾರ, ಜನವರಿ 12ರಂದು ಕೋಲ್ಕತ್ತಾದ ಈಡನ್ ಗಾರ್ಡನ್‌ ಮೈದಾನದಲ್ಲಿ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾವನ್ನು ಎದುರಿಸಲಿದೆ. ರೋಹಿತ್ ಶರ್ಮಾ ಪಡೆ ಈ ಪಂದ್ಯವನ್ನು ಗೆದ್ದು ಇನ್ನೂ ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ವಶಪಡಿಸಿಕೊಳ್ಳಲು ಎದುರು ನೋಡುತ್ತಿದೆ.

IND vs SL: ದಸುನ್ ಶನಕ ರನೌಟ್ ಮನವಿ ಹಿಂಪಡೆದ ರೋಹಿತ್ ಶರ್ಮಾ ಬಗ್ಗೆ ಜಯಸೂರ್ಯ ಮೆಚ್ಚುಗೆIND vs SL: ದಸುನ್ ಶನಕ ರನೌಟ್ ಮನವಿ ಹಿಂಪಡೆದ ರೋಹಿತ್ ಶರ್ಮಾ ಬಗ್ಗೆ ಜಯಸೂರ್ಯ ಮೆಚ್ಚುಗೆ

ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಗೆದ್ದ ನಂತರ, ಎರಡನೇ ಪಂದ್ಯದಲ್ಲಿಯೂ ಭಾರತ ತಂಡ ಶುಭಮನ್ ಗಿಲ್ ಮತ್ತು ನಾಯಕ ರೋಹಿತ್ ಶರ್ಮಾ ಜೋಡಿ ಇನ್ನಿಂಗ್ಸ್ ಆರಂಭಿಸುವುದು ಖಚಿತವಾಗಿದೆ.

ರೋಹಿತ್ ಶರ್ಮಾ ತನಗೆ ಬೆಂಬಲ ನೀಡುತ್ತಿದ್ದರು ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ "ತನ್ನ ಸಹಜ ಆಟವಾಡಲು' ಹೇಳಿದ್ದಾರೆ ಎಂದು ಶುಭಮನ್ ಗಿಲ್ ತಿಳಿಸಿದರು.

ಏಕದಿನ ಕ್ರಿಕೆಟ್‌ನಲ್ಲಿ ಮತ್ತೊಮ್ಮೆ ಪಾರುಪತ್ಯ ಸಾಧಿಸಿದ ವಿರಾಟ್ ಕೊಹ್ಲಿ

ಏಕದಿನ ಕ್ರಿಕೆಟ್‌ನಲ್ಲಿ ಮತ್ತೊಮ್ಮೆ ಪಾರುಪತ್ಯ ಸಾಧಿಸಿದ ವಿರಾಟ್ ಕೊಹ್ಲಿ

ಮೊದಲ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಶತಕ ಬಾರಿಸಿ, ಏಕದಿನ ಕ್ರಿಕೆಟ್‌ನಲ್ಲಿ ಮತ್ತೊಮ್ಮೆ ಪಾರುಪತ್ಯ ಸಾಧಿಸಿದರು. ಈ ನಡುವೆ ಶ್ರೀಲಂಕಾ ತಂಡದ ನಾಯಕ ದಸುನ್ ಶನಕ ಅವರ ಶತಕ ವ್ಯರ್ಥವಾಯಿತು.

ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಮುನ್ನ ಮಾತನಾಡಿದ್ದ ನಾಯಕ ರೋಹಿತ್ ಶರ್ಮಾ ಅವರು ಹಿಂದಿನ ಪಂದ್ಯದಲ್ಲಿ ದ್ವಿಶತಕ ಗಳಿಸಿದ್ದ ಇಶಾನ್ ಕಿಶನ್ ಬದಲಾಗಿ ಶುಭಮನ್ ಗಿಲ್‌ರನ್ನು ಆಡಿಸುವುದಾಗಿ ಘೋಷಿಸಿದ್ದರು. 2022ರಲ್ಲಿ ಏಕದಿನ ಪಂದ್ಯಗಳಲ್ಲಿ ಭಾರತದ ಪರ ಉತ್ತಮ ಪ್ರದರ್ಶನ ನೀಡಿದ್ದ ಗಿಲ್‌ಗೆ ಅವಕಾಶ ನೀಡುವುದು ನ್ಯಾಯಯುತವಾಗಿದೆ ಎಂದು ರೋಹಿತ ಶರ್ಮಾ ಹೇಳಿದ್ದರು.

ರೋಹಿತ್ ಶರ್ಮಾ(83) ಮತ್ತು ಶುಭಮನ್ ಗಿಲ್ (70) ಮೊದಲ ವಿಕೆಟ್ ಜೊತೆಯಾಟಕ್ಕೆ 143 ರನ್‌ಗಳನ್ನು ಸೇರಿಸಿ ಭಾರತಕ್ಕೆ ಉತ್ತಮ ಆರಂಭ ಒದಗಿಸಿದ್ದರು. ನಂತರ ಬಂದ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ 45ನೇ ಶತಕ ಬಾರಿಸಿದರು. ಇದೇ ಫಾರ್ಮ್‌ನೊಂದಿಗೆ ಕೋಲ್ಕತ್ತಾ ಈಡನ್ ಗಾರ್ಡನ್ ಮೈದಾನಕ್ಕೆ ಇಳಿಯಲಿದ್ದಾರೆ.

ಭಾರತ vs ಶ್ರೀಲಂಕಾ 2ನೇ ಏಕದಿನ ಪಂದ್ಯದ ವಿವರ

ಭಾರತ vs ಶ್ರೀಲಂಕಾ 2ನೇ ಏಕದಿನ ಪಂದ್ಯದ ವಿವರ

ಸ್ಥಳ: ಈಡನ್ ಗಾರ್ಡನ್ಸ್, ಕೋಲ್ಕತ್ತಾ

ಪಂದ್ಯದ ಸಮಯ: ಗುರುವಾರ, ಜನವರಿ 12. ಭಾರತೀಯ ಕಾಲಮಾನ ಮಧ್ಯಾಹ್ನ 1.30

ಲೈವ್ ಸ್ಟ್ರೀಮಿಂಗ್ ಮತ್ತು ಟಿವಿ ವೀಕ್ಷಣೆ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಡಿಸ್ನಿ + ಹಾಟ್‌ಸ್ಟಾರ್ ವೆಬ್‌ಸೈಟ್ ಮತ್ತು ಅಪ್ಲಿಕೇಶನ್.

ಭಾರತ vs ಶ್ರೀಲಂಕಾ 2ನೇ ಏಕದಿನ ಪಂದ್ಯದ ಡ್ರೀಮ್ ಟೀಂ
ವಿಕೆಟ್ ಕೀಪರ್: ಕೆಎಲ್ ರಾಹುಲ್

ಬ್ಯಾಟ್ಸ್‌ಮನ್‌ಗಳು: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದಸುನ್ ಶನಕ, ಪಾತುಮ್ ನಿಸ್ಸಾಂಕ

ಆಲ್ ರೌಂಡರ್: ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ

ಬೌಲರ್‌ಗಳು: ಮೊಹಮ್ಮದ್ ಸಿರಾಜ್, ಚಮಿಕಾ ಕರುಣಾರತ್ನೆ, ಕಸುನ್ ರಜಿತಾ

ನಾಯಕ: ವಿರಾಟ್ ಕೊಹ್ಲಿ

ಉಪನಾಯಕ: ದಸುನ್ ಶನಕ

ಭಾರತ ಮತ್ತು ಶ್ರೀಲಂಕಾ ಸಂಭಾವ್ಯ ಆಡುವ 11ರ ಬಳಗ

ಭಾರತ ಮತ್ತು ಶ್ರೀಲಂಕಾ ಸಂಭಾವ್ಯ ಆಡುವ 11ರ ಬಳಗ

ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಉಮ್ರಾನ್ ಮಲಿಕ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್

ಶ್ರೀಲಂಕಾ: ಪಾತುಮ್ ನಿಸ್ಸಾಂಕ, ಅವಿಷ್ಕ ಫೆರ್ನಾಂಡೋ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಧನಂಜಯ ಡಿ ಸಿಲ್ವ, ಚರಿತ್ ಅಸಲಂಕ, ದಸುನ್ ಶನಕ (ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ದುನಿತ್ ವೆಲ್ಲಲಾಗೆ, ಕಸುನ್ ರಜಿತ, ಪ್ರಮೋದ್ ಮದುಶನ್

Story first published: Thursday, January 12, 2023, 9:53 [IST]
Other articles published on Jan 12, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X