ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs SL ODI Series: ಸಚಿನ್ ಸೇರಿದಂತೆ ಪ್ರಮುಖ ದಾಖಲೆಗಳ ಮೇಲೆ ಕಣ್ಣಿಟ್ಟ ವಿರಾಟ್ ಕೊಹ್ಲಿ

IND vs SL ODI Series: Virat Kohli Eyes On Major ODI Records Including Sachin Tendulkar Records

2023ರ ಹೊಸ ಕ್ಯಾಲೆಂಡರ್ ವರ್ಷದಲ್ಲಿ ವೃತ್ತಿಪರ ಕ್ರಿಕೆಟ್‌ಗೆ ಮರಳುತ್ತಿರುವ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಭಾರತದ ಲೆಜೆಂಡ್ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅವರ ಪ್ರಮುಖ ಏಕದಿನ ಕ್ರಿಕೆಟ್ ದಾಖಲೆಗಳಲ್ಲಿ ಒಂದನ್ನು ಸಮಬಲಗೊಳಿಸುವ ಅವಕಾಶವನ್ನು ಹೊಂದಿದ್ದಾರೆ.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಅವರಂತಹ ಆಟಗಾರರು ಇತ್ತೀಚೆಗೆ ಮುಕ್ತಾಯಗೊಂಡ ಟಿ20 ಸರಣಿಯಿಂದ ವಿಶ್ರಾಂತಿ ಪಡೆದ ನಂತರ, ಜನವರಿ 10ರಿಂದ ಶ್ರೀಲಂಕಾ ವಿರುದ್ಧ ಆರಂಭವಾಗುವ ಏಕದಿನ ಸರಣಿಗೆ ಹಿಂದಿರುಗಲಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಮತ್ತೊಂದು ದಾಖಲೆ ನಿರ್ಮಿಸಲು ಸಜ್ಜಾದ ವಿಶ್ವದ ನಂ.1 ಬ್ಯಾಟರ್ ಸೂರ್ಯಕುಮಾರ್!ಟಿ20 ಕ್ರಿಕೆಟ್‌ನಲ್ಲಿ ಮತ್ತೊಂದು ದಾಖಲೆ ನಿರ್ಮಿಸಲು ಸಜ್ಜಾದ ವಿಶ್ವದ ನಂ.1 ಬ್ಯಾಟರ್ ಸೂರ್ಯಕುಮಾರ್!

ವಿರಾಟ್ ಕೊಹ್ಲಿ ತಮ್ಮ ಖಾತೆಗೆ ಮತ್ತೊಂದು ಶತಕ ದಾಖಲಿಸುವಲ್ಲಿ ಯಶಸ್ವಿಯಾದರೆ, ಏಕದಿನ ಕ್ರಿಕೆಟ್‌ನಲ್ಲಿ ತವರಿನಂಗಳದಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿರುವ ಸಚಿನ್ ತೆಂಡೂಲ್ಕರ್ ಅವರ ವಿಶ್ವ ದಾಖಲೆಯನ್ನು ಸರಿಗಟ್ಟಲಿದ್ದಾರೆ. ಕಳೆದ ನವೆಂಬರ್-ಡಿಸೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ 3 ಪಂದ್ಯಗಳ ಸರಣಿಯಲ್ಲಿ ವಿರಾಟ್ ಕೊಹ್ಲಿ ಸುಮಾರು 4 ವರ್ಷಗಳ ಏಕದಿನ ಶತಕದ ಬರವನ್ನು ಕೊನೆಗೊಳಿಸಿದರು.

ವಿರಾಟ್ ಕೊಹ್ಲಿ ಕೇವಲ 101 ಪಂದ್ಯಗಳಲ್ಲಿ 19 ಶತಕ

ವಿರಾಟ್ ಕೊಹ್ಲಿ ಕೇವಲ 101 ಪಂದ್ಯಗಳಲ್ಲಿ 19 ಶತಕ

ಬಾಂಗ್ಲಾದೇಶದ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ 91 ಎಸೆತಗಳಲ್ಲಿ 113 ರನ್ ಬಾರಿಸಿದರು. ಆದರೆ ಟೆಸ್ಟ್ ಸರಣಿಯಲ್ಲಿ ಅವರ ಬ್ಯಾಟಿಂಗ್ ಫಾರ್ಮ್ ಕಳಪೆಯಾಯಿತು. ಈ ಬಲಗೈ ಸ್ಟಾರ್ ಬ್ಯಾಟರ್ ಎರಡು ಟೆಸ್ಟ್‌ ಪಂದ್ಯಗಳಲ್ಲಿ ಕೇವಲ 45 ರನ್ ಗಳಿಸಲಷ್ಟೇ ಶಕ್ತರಾದರು.

ಸಚಿನ್ ತೆಂಡೂಲ್ಕರ್ 164 ಪಂದ್ಯಗಳಲ್ಲಿ 20 ಶತಕಗಳೊಂದಿಗೆ ತವರಿನಲ್ಲಿ ಅತಿ ಹೆಚ್ಚು ಏಕದಿನ ಶತಕಗಳನ್ನು ಗಳಿಸಿದ ದಾಖಲೆ ಹೊಂದಿದ್ದಾರೆ. ವಿರಾಟ್ ಕೊಹ್ಲಿ ಕೇವಲ 101 ಪಂದ್ಯಗಳಲ್ಲಿ 19 ಶತಕ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಕೊಹ್ಲಿಯ ಕೊನೆಯ ಶತಕವು ಮಾರ್ಚ್ 2019ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಬಂದಿತ್ತು. ಪ್ರವಾಸಿ ಆಸ್ಟ್ರೇಲಿಯ ವಿರುದ್ಧದ ಸರಣಿಯಲ್ಲಿ ವಿರಾಟ್ ಕೊಹ್ಲಿ ಸತತ ಎರಡು ಶತಕಗಳನ್ನು ಬಾರಿಸಿದ್ದರು.

ತವರಿನಲ್ಲಿ ಹೆಚ್ಚಿನ ಏಕದಿನ ಶತಕ ಗಳಿಸಿದ ಆಟಗಾರರು

ತವರಿನಲ್ಲಿ ಹೆಚ್ಚಿನ ಏಕದಿನ ಶತಕ ಗಳಿಸಿದ ಆಟಗಾರರು

ಸಚಿನ್ ತೆಂಡೂಲ್ಕರ್ - 164 ಏಕದಿನ ಪಂದ್ಯಗಳಲ್ಲಿ 20 ಶತಕ

ವಿರಾಟ್ ಕೊಹ್ಲಿ - 101 ಏಕದಿನ ಪಂದ್ಯಗಳಲ್ಲಿ 19 ಶತಕ

ಹಾಶಿಮ್ ಆಮ್ಲಾ - 69 ಏಕದಿನ ಪಂದ್ಯಗಳಲ್ಲಿ 14 ಶತಕ

ರಿಕಿ ಪಾಂಟಿಂಗ್ - 153 ಏಕದಿನ ಪಂದ್ಯಗಳಲ್ಲಿ 13 ಶತಕ

ರಾಸ್ ಟೇಲರ್ - 110 ಏಕದಿನ ಪಂದ್ಯಗಳಲ್ಲಿ 12 ಶತಕ

ಭಾರತ vs ಶ್ರೀಲಂಕಾ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕಗಳು

ಭಾರತ vs ಶ್ರೀಲಂಕಾ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕಗಳು

ಇನ್ನು ವಿರಾಟ್ ಕೊಹ್ಲಿ ಅವರು ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಸಚಿನ್ ತೆಂಡೂಲ್ಕರ್‌ ಜೊತೆ ಜಂಟಿ ಅಗ್ರ ಸ್ಥಾನದಲ್ಲಿದ್ದಾರೆ. ಕೊಹ್ಲಿ ಶ್ರೀಲಂಕಾ ವಿರುದ್ಧ 8 ಶತಕಗಳೊಂದಿಗೆ 60 ಸರಾಸರಿಯಲ್ಲಿ 2220 ರನ್ ಗಳಿಸಿದ್ದಾರೆ. ಇದೇ ವೇಳೆ ಮಾಜಿ ಬ್ಯಾಟರ್ ಸಚಿನ್ ತೆಂಡೂಲ್ಕರ್ 84 ಪಂದ್ಯಗಳಲ್ಲಿ 8 ಶತಕಗಳೊಂದಿಗೆ 3113 ರನ್‌ ಗಳಿಸಿದ್ದು, ಉಭಯ ದೇಶಗಳ ನಡುವಿನ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ವಿರಾಟ್ ಕೊಹ್ಲಿ - 47 ಪಂದ್ಯಗಳಲ್ಲಿ 8 ಶತಕ

ಸಚಿನ್ ತೆಂಡೂಲ್ಕರ್ - 84 ಪಂದ್ಯಗಳಲ್ಲಿ 8 ಶತಕ

ಸನತ್ ಜಯಸೂರ್ಯ - 89 ಪಂದ್ಯಗಳಲ್ಲಿ 7 ಶತಕ

ಗೌತಮ್ ಗಂಭೀರ್ - 37 ಪಂದ್ಯಗಳಲ್ಲಿ 6 ಶತಕ

ರೋಹಿತ್ ಶರ್ಮಾ - 46 ಪಂದ್ಯಗಳಲ್ಲಿ 6 ಶತಕ

ಕುಮಾರ ಸಂಗಕ್ಕಾರ - 76 ಪಂದ್ಯಗಳಲ್ಲಿ 6 ಶತಕ

ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಸಾರ್ವಕಾಲಿಕ ಪಟ್ಟಿ

ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಸಾರ್ವಕಾಲಿಕ ಪಟ್ಟಿ

ಇದೇ ವೇಳೆ ಏಕದಿನ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ರನ್ ಸ್ಕೋರರ್‌ಗಳ ಪಟ್ಟಿಯಲ್ಲಿ ಅಗ್ರ 5ರೊಳಗೆ ಪ್ರವೇಶಿಸುವ ಅವಕಾಶವನ್ನು ವಿರಾಟ್ ಕೊಹ್ಲಿ ಹೊಂದಿದ್ದಾರೆ. ಏಕದಿನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ಅವರನ್ನು ಹಿಂದಿಕ್ಕಲು ಕೊಹ್ಲಿಗೆ ಇನ್ನೂ 180 ರನ್‌ಗಳ ಅಗತ್ಯವಿದ್ದು, ಮುಂಬರುವ ಏಕದಿನ ಸರಣಿಯಲ್ಲಿ ಈ ಸಾಧನೆ ಮಾಡಲು ವಿರಾಟ್ ಕೊಹ್ಲಿಗೆ ಉತ್ತಮ ಅವಕಾಶವಿದೆ.

ಸಚಿನ್ ತೆಂಡೂಲ್ಕರ್ - 463 ಏಕದಿನ ಪಂದ್ಯಗಳಲ್ಲಿ 18426 ರನ್

ಕುಮಾರ ಸಂಗಕ್ಕಾರ - 404 ಏಕದಿನ ಪಂದ್ಯಗಳಲ್ಲಿ 14234 ರನ್

ರಿಕಿ ಪಾಂಟಿಂಗ್ - 375 ಏಕದಿನ ಪಂದ್ಯಗಳಲ್ಲಿ 13704 ರನ್

ಸನತ್ ಜಯಸೂರ್ಯ - 445 ಏಕದಿನ ಪಂದ್ಯಗಳಲ್ಲಿ 134300 ರನ್

ಮಹೇಲಾ ಜಯವರ್ಧನೆ - 448 ಏಕದಿನ ಪಂದ್ಯಗಳಲ್ಲಿ 12650 ರನ್

ವಿರಾಟ್ ಕೊಹ್ಲಿ - 265 ಏಕದಿನ ಪಂದ್ಯಗಳಲ್ಲಿ 12471 ರನ್

Story first published: Monday, January 9, 2023, 18:13 [IST]
Other articles published on Jan 9, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X