ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs SL 3rd ODI: ಮೊಹಮ್ಮದ್ ಸಿರಾಜ್‌ಗಾಗಿ ಇಡೀ ತಂಡ ಬೆಂಬಲ ನೀಡಿದ್ದೇಕೆ?; ರೋಹಿತ್ ಹೇಳಿದ್ದೇನು?

IND vs SL: Team India Captain Rohit Sharma Praises Mohammed Siraj For Taking 4 Wickets vs Sri Lanka

ಭಾನುವಾರ, ಜನವರಿ 15ರಂದು ತಿರುವನಂತಪುರದಲ್ಲಿ ನಡೆದ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಸರಣಿಯ 3ನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ತಂಡ ಏಕದಿನ ಕ್ರಿಕೆಟ್‌ನಲ್ಲಿ ವಿಶ್ವದಾಖಲೆಯ 317 ರನ್‌ಗಳ ಅಂತರದಿಂದ ಗೆದ್ದು ಬೀಗಿತು.

ಇನ್ನು ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು 110 ಎಸೆತಗಳಲ್ಲಿ ಅಜೇಯ 166 ರನ್ ಗಳಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 46ನೇ ಶತಕ ಬಾರಿಸಿದರು. ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 74ನೇ ಶತಕ ಗಳಿಸಿದಂತಾಯಿತು. ಅದೇ ರೀತಿ ಆರಂಭಿಕ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಕೂಡ 97 ಎಸೆತಗಳಲ್ಲಿ 117 ರನ್ ಗಳಿಸಿ ಮಿಂಚಿದರು. ಇದು ಏಕದಿನ ಕ್ರಿಕೆಟ್‌ನಲ್ಲಿ ಅವರ 2ನೇ ಶತಕವಾಗಿದೆ.

IND vs SL: ಶ್ರೀಲಂಕಾ ವಿರುದ್ಧ 'ವಿರಾಟ ರೂಪಂ'; ಏಕದಿನ ರನ್ ಗಳಿಕೆಯಲ್ಲಿ ಜಯವರ್ಧನೆ ಹಿಂದಿಕ್ಕಿದ ಕಿಂಗ್ ಕೊಹ್ಲIND vs SL: ಶ್ರೀಲಂಕಾ ವಿರುದ್ಧ 'ವಿರಾಟ ರೂಪಂ'; ಏಕದಿನ ರನ್ ಗಳಿಕೆಯಲ್ಲಿ ಜಯವರ್ಧನೆ ಹಿಂದಿಕ್ಕಿದ ಕಿಂಗ್ ಕೊಹ್ಲ

ಬೌಲಿಂಗ್‌ನಲ್ಲಿ 4 ವಿಕೆಟ್‌ಗಳ ಸಾಧನೆಯೊಂದಿಗೆ ಮಿಂಚಿದ ಯುವ ವೇಗಿ ಮೊಹಮ್ಮದ್ ಸಿರಾಜ್‌ರನ್ನು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಶ್ಲಾಘಿಸಿದರು.

ಮೊಹಮ್ಮದ್ ಸಿರಾಜ್ ವಿಶ್ವಕಪ್ ವರ್ಷದ ಮೊದಲ ಏಕದಿನ ಸರಣಿಯಲ್ಲಿ 3 ಪಂದ್ಯಗಳಲ್ಲಿ 9 ವಿಕೆಟ್‌ಗಳನ್ನು ಪಡೆಯುವ ಮೂಲಕ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದರು.

5 ವಿಕೆಟ್ ಪಡೆದ ಭಾರತದ ಮೊದಲ ವೇಗಿ ಆಗುವ ಅಂಚಿನಲ್ಲಿದ್ದ ಸಿರಾಜ್

5 ವಿಕೆಟ್ ಪಡೆದ ಭಾರತದ ಮೊದಲ ವೇಗಿ ಆಗುವ ಅಂಚಿನಲ್ಲಿದ್ದ ಸಿರಾಜ್

ಮೊಹಮ್ಮದ್ ಸಿರಾಜ್ ಅವರು 2007ರಲ್ಲಿ ಜಹೀರ್ ಖಾನ್ ನಂತರ ತವರಿನ ಏಕದಿನ ಪಂದ್ಯಗಳಲ್ಲಿ 5 ವಿಕೆಟ್ ಪಡೆಯುವ ಭಾರತದ ಮೊದಲ ವೇಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಅಂಚಿನಲ್ಲಿದ್ದರು. ಆದರೆ ಶ್ರೀಲಂಕಾದ 391 ರನ್ ಚೇಸಿಂಗ್‌ನಲ್ಲಿ ತಮ್ಮ ಕೋಟಾದ 10 ಓವರ್‌ಗಳಲ್ಲಿ 4 ವಿಕೆಟ್‌ಗಳನ್ನು ಪಡೆದರು.

ಶ್ರೀಲಂಕಾ ಕ್ಷಿಪ್ರಗತಿಯಲ್ಲಿ ವಿಕೆಟ್‌ ಕಳೆದುಕೊಂಡಾಗಲೂ ಭಾರತ ನಾಯಕ ರೋಹಿತ್ ಶರ್ಮಾ ಅವರು ನಿರಂತರವಾಗಿ ಮೊಹಮ್ಮದ್ ಸಿರಾಜ್‌ಗೆ ಬಾಲ್ ನೀಡಿದರು.

ಮೊಹಮ್ಮದ್ ಸಿರಾಜ್ ತನ್ನ ಕೊನೆಯ 2 ಓವರ್‌ಗಳಲ್ಲಿ 4 ಸ್ಲಿಪ್ ಮತ್ತು ಒಂದು ಗಲ್ಲಿಯಲ್ಲಿ ಫೀಲ್ಡರ್ ನಿಲ್ಲಿಸಲಾಗಿತ್ತು. ಆದರೂ, ಮೊಹಮ್ಮದ್ ಸಿರಾಜ್ ಅಂತಿಮವಾಗಿ 10 ಓವರ್‌ಗಳನ್ನು 32 ರನ್ ನೀಡಿ 4 ವಿಕೆಟ್‌ಗಳೊಂದಿಗೆ ತನ್ನ ಕೋಟಾ ಮುಗಿಸಿದರು.

ಶ್ರೀಲಂಕಾದ ಕೊನೆಯ ವಿಕೆಟ್ ಪಡೆದ ಕುಲದೀಪ್ ಯಾದವ್

ಶ್ರೀಲಂಕಾದ ಕೊನೆಯ ವಿಕೆಟ್ ಪಡೆದ ಕುಲದೀಪ್ ಯಾದವ್

ಮೊಹಮ್ಮದ್ ಸಿರಾಜ್ ನಂತರ ಬೌಲಿಂಗ್ ದಾಳಿಗೆ ಇಳಿದ ಕುಲದೀಪ್ ಯಾದವ್ ಶ್ರೀಲಂಕಾದ ಕೊನೆಯ ವಿಕೆಟ್ ಪಡೆಯುವ ಮೂಲಕ ಪ್ರವಾಸಿ ತಂಡ 73 ರನ್‌ಗಳಿಗೆ ಆಲೌಟಾಯಿತು. ಈ ಮೂಲಕ ಭಾರತವು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು 317 ರನ್‌ಗಳ ಅಂತರದಿಂದ ಗೆದ್ದಿತು.

ಇಡೀ ಭಾರತ ತಂಡವು ತನ್ನ ಚೊಚ್ಚಲ 5 ವಿಕೆಟ್ ಸಾಧನೆ ಮಾಡಲು ಹೈದರಾಬಾದ್ ವೇಗಿ ಮೊಹಮ್ಮದ್ ಸಿರಾಜ್‌ಗೆ ಬೆಂಬಲ ನೀಡಿತು. ಸಿರಾಜ್ ಕೂಡ ವೃತ್ತಿಜೀವನದ ಅವಿಸ್ಮರಣೀಯ ಬೌಲಿಂಗ್ ಮಾಡಿದರು.

ಸಿರಾಜ್‌ನ 5 ವಿಕೆಟ್ ಸಾಧನೆ ಸಂಭವಿಸಲಿಲ್ಲ

ಸಿರಾಜ್‌ನ 5 ವಿಕೆಟ್ ಸಾಧನೆ ಸಂಭವಿಸಲಿಲ್ಲ

"ನಾವು ಎಲ್ಲಾ ರೀತಿಯ ಪರಿಸ್ಥಿತಿಗಳನ್ನು ಪ್ರಯತ್ನಿಸಿದ್ದೇವೆ. ದುರದೃಷ್ಟವಶಾತ್, 5 ವಿಕೆಟ್ ಸಾಧನೆ ಸಂಭವಿಸಲಿಲ್ಲ. ಆದರೆ ನಾಲ್ಕು ವಿಕೆಟ್‌ಗಳು ಅವನದೇ ಆಗಿವೆ. ಸಿರಾಜ್ ತನ್ನ ತೋಳುಗಳಲ್ಲಿ ಕೆಲವು ತಂತ್ರಗಳನ್ನು ಹೊಂದಿದ್ದಾನೆ ಮತ್ತು ಅವನ ಆತ್ಮವಿಶ್ವಾಸವು ಅತ್ಯುತ್ತಮವಾಗಿತ್ತು," ಎಂದು 3ನೇ ಏಕದಿನ ಪಂದ್ಯದ ಬಳಿಕ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

2019ರ ಜನವರಿಯಲ್ಲಿ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಮೊಹಮ್ಮದ್ ಸಿರಾಜ್, ತನ್ನ ಸಾಮರ್ಥ್ಯದಿಂದ ಹೇಗೆ ಬೆಳೆಯುತ್ತಿದ್ದಾರೆ ಮತ್ತು ಇದು ವಿಶ್ವಕಪ್ ವರ್ಷದಲ್ಲಿ ಭಾರತ ತಂಡಕ್ಕೆ ಉತ್ತಮವಾಗಿದೆ,'' ಎಂದು ರೋಹಿತ್ ಶರ್ಮಾ ತಿಳಿಸಿದರು.

2022ರಲ್ಲಿ 24 ವಿಕೆಟ್‌ಗಳನ್ನು ಪಡೆದ ಮೊಹಮ್ಮದ್ ಸಿರಾಜ್

2022ರಲ್ಲಿ 24 ವಿಕೆಟ್‌ಗಳನ್ನು ಪಡೆದ ಮೊಹಮ್ಮದ್ ಸಿರಾಜ್

ಕಳೆದ ಕೆಲವು ತಿಂಗಳುಗಳಿಂದ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಮೊಹಮ್ಮದ್ ಸಿರಾಜ್ ಮಿಂಚಿದ್ದಾರೆ. ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವ ವೇಗಿ 2022ರಲ್ಲಿ 24 ವಿಕೆಟ್‌ಗಳನ್ನು ಪಡೆದರು ಮತ್ತು 2023ರಲ್ಲಿ ಕೇವಲ 9 ವಿಕೆಟ್‌ಗಳನ್ನು ಹೊಂದಿದ್ದಾರೆ. ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡದ ಆಯ್ಕೆಯ ಮೊದಲ ಹೆಸರುಗಳಲ್ಲಿ ಒಬ್ಬರಾಗಿದ್ದಾರೆ ಎಂದು ಖಚಿತಪಡಿಸಿದ್ದಾರೆ.

ಭಾರತದ ಟಿ20 ಪಂದ್ಯಗಳ ಯೋಜನೆಯ ಭಾಗವಾಗಿಲ್ಲದ ಮೊಹಮ್ಮದ್ ಸಿರಾಜ್, ಜನವರಿ 18ರಿಂದ ಪ್ರಾರಂಭವಾಗುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಆಡಲಿದ್ದಾರೆ.

Story first published: Monday, January 16, 2023, 5:50 [IST]
Other articles published on Jan 16, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X