ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs SL: ಸಚಿನ್‌ರ ಈ ದೊಡ್ಡ ದಾಖಲೆಯನ್ನು ಕೊಹ್ಲಿ ಶೀಘ್ರದಲ್ಲೇ ಮುರಿಯಲಿದ್ದಾರೆ; ಸಂಜಯ್ ಮಂಜ್ರೇಕರ್

IND vs SL: Virat Kohli To Break Sachin Tendulkars Big Record Soon Says Sanjay Manjrekar

ಭಾರತದ ಮಾಜಿ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ 49 ಏಕದಿನ ಶತಕಗಳ ದಾಖಲೆಯನ್ನು ಹಾಲಿ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಶೀಘ್ರದಲ್ಲೇ ಹಿಂದಿಕ್ಕಲಿದ್ದಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಮಾಜಿ ಬ್ಯಾಟ್ಸ್‌ಮನ್ ಬ್ಯಾಟರ್ ಸಂಜಯ್ ಮಂಜ್ರೇಕರ್ ಹೇಳಿದರು.

ಇದೇ ವೇಳೆ, ವಿರಾಟ್ ಕೊಹ್ಲಿಗೆ ಟೆಸ್ಟ್ ಶತಕಗಳ ವಿಷಯದಲ್ಲಿ ಭಾರತದ ಲೆಜೆಂಡ್ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರನ್ನು ಮೀರಿಸುವುದು ಕಷ್ಟ ಎಂದು ತಿಳಿಸಿದರು.

IND vs SL: ಕೊಹ್ಲಿ, ರೋಹಿತ್ ಭರ್ಜರಿ ಬ್ಯಾಟಿಂಗ್; ಶ್ರೀಲಂಕಾದ ಕಳಪೆ ಬೌಲಿಂಗ್ ಎಂದ ಗಂಭೀರ್!IND vs SL: ಕೊಹ್ಲಿ, ರೋಹಿತ್ ಭರ್ಜರಿ ಬ್ಯಾಟಿಂಗ್; ಶ್ರೀಲಂಕಾದ ಕಳಪೆ ಬೌಲಿಂಗ್ ಎಂದ ಗಂಭೀರ್!

ಮಂಗಳವಾರ, ಜನವರಿ 10ರಂದು ಗುವಾಹಟಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ 45ನೇ ಏಕದಿನ ಶತಕವನ್ನು ಬಾರಿಸಿದರು.

ವಿರಾಟ್ ಕೊಹ್ಲಿ ತಮ್ಮ 257ನೇ ಇನ್ನಿಂಗ್ಸ್‌ನಲ್ಲಿ 45ನೇ ಏಕದಿನ ಶತಕವನ್ನು ಗಳಿಸಿದರೆ, ಮಾಜಿ ಬ್ಯಾಟರ್ ಸಚಿನ್ ತೆಂಡೂಲ್ಕರ್ ತಮ್ಮ ವೃತ್ತಿಜೀವನದ 49 ಏಕದಿನ ಶತಕಗಳನ್ನು ಗಳಿಸಲು 424 ಇನ್ನಿಂಗ್ಸ್ ತೆಗೆದುಕೊಂಡಿದ್ದರು.

ವಿರಾಟ್ ಕೊಹ್ಲಿ ಒಟ್ಟು 73 ಅಂತಾರಾಷ್ಟ್ರೀಯ ಶತಕ ಬಾರಿಸಿದ್ದಾರೆ

ವಿರಾಟ್ ಕೊಹ್ಲಿ ಒಟ್ಟು 73 ಅಂತಾರಾಷ್ಟ್ರೀಯ ಶತಕ ಬಾರಿಸಿದ್ದಾರೆ

ಸಚಿನ್ ತೆಂಡೂಲ್ಕರ್ 51 ಟೆಸ್ಟ್ ಶತಕ ಮತ್ತು 49 ಏಕದಿನ ಶತಕಗಳನ್ನು ಬಾರಿಸುವುದರೊಂದಿಗೆ ಕ್ರಿಕೆಟ್ ಇತಿಹಾಸದಲ್ಲಿ 100 ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸಿದ ಮೊದಲ ಮತ್ತು ಏಕೈಕ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಅವರನ್ನು ಬೆನ್ನತ್ತಿರುವ ವಿರಾಟ್ ಕೊಹ್ಲಿ ಏಕದಿನ ಪಂದ್ಯಗಳಲ್ಲಿ 45 ಶತಕ, ಟೆಸ್ಟ್‌ನಲ್ಲಿ 27 ಶತಕ ಮತ್ತು ಒಂದು ಟಿ20 ಶತಕದೊಂದಿಗೆ ಒಟ್ಟು 73 ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸಿ ಎರಡನೇ ಸ್ಥಾನದಲ್ಲಿದ್ದಾರೆ.

ಏಕದಿನ ಕ್ರಿಕೆಟ್ ಸ್ವರೂಪದಲ್ಲಿ ತವರಿನಲ್ಲಿ ಅತಿ ಹೆಚ್ಚು (20) ಶತಕಗಳನ್ನು ಬಾರಿಸಿದ ಸಚಿನ್ ತೆಂಡೂಲ್ಕರ್ ಅವರ ವಿಶ್ವ ದಾಖಲೆಯನ್ನು ವಿರಾಟ್ ಕೊಹ್ಲಿ ಸರಿಗಟ್ಟಿದರು. 2019ರ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಸತತ ಎರಡನೇ ಶತಕ ಗಳಿಸಿದ್ದು ಇದೇ ಮೊದಲು.

ವಿರಾಟ್ ಕೊಹ್ಲಿ 87 ಎಸೆತಗಳಲ್ಲಿ 113 ರನ್ ಕೊಡುಗೆ

ವಿರಾಟ್ ಕೊಹ್ಲಿ 87 ಎಸೆತಗಳಲ್ಲಿ 113 ರನ್ ಕೊಡುಗೆ

2023ರ ವಿಶ್ವಕಪ್ ವರ್ಷದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 373 ರನ್ ಗಳಿಸುವಲ್ಲಿ ವಿರಾಟ್ ಕೊಹ್ಲಿ 87 ಎಸೆತಗಳಲ್ಲಿ 113 ರನ್ ಕೊಡುಗೆ ನೀಡಿದರು. ಏಕದಿನ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಅವರ ಸಾಧನೆಯನ್ನು ಸರಿಗಟ್ಟಲು ಕೊಹ್ಲಿಗೆ ಇನ್ನೂ 4 ಶತಕಗಳ ಅವಶ್ಯಕತೆ ಇದೆ.

ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಮಾಜಿ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್, ವಿರಾಟ್ ಕೊಹ್ಲಿ ಒಂದೂವರೆ ವರ್ಷದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಶತಕಗಳ ಹೆಗ್ಗುರುತನ್ನು ಸ್ಥಾಪಿಸಲಿದ್ದಾರೆ ಎಂಬ ವಿಶ್ವಾಸವಿದೆ. ಆದರೆ ಸಚಿನ್ ತೆಂಡೂಲ್ಕರ್ ಅವರ ಟೆಸ್ಟ್ ಶತಕಗಳ ದಾಖಲೆಗೆ ಹತ್ತಿರವಾಗಲು ಕೊಹ್ಲಿ ಮಹತ್ವಾಕಾಂಕ್ಷೆಯೊಂದಿಗೆ ಆಡಬೇಕಾಗಿದೆ ಎಂದು ನಾನು ಭಾವಿಸುತ್ತೇನೆ ಎಂದರು.

ಸತತ ಎರಡು ಶತಕ ದೊಡ್ಡ ಸಂಕೇತವಾಗಿದೆ

ಸತತ ಎರಡು ಶತಕ ದೊಡ್ಡ ಸಂಕೇತವಾಗಿದೆ

ವಿರಾಟ್ ಕೊಹ್ಲಿಯ ಸತತ ಎರಡು ಏಕದಿನ ಶತಕಗಳು ವಿಶ್ವಕಪ್ ವರ್ಷದಲ್ಲಿ ಭಾರತಕ್ಕೆ ಉತ್ತಮ ಸಂಕೇತವಾಗಿದೆ ಎಂದು ಹೇಳಿದ ಸಂಜಯ್ ಮಾಂಜ್ರೇಕರ್, ವಿರಾಟ್ ಕೊಹ್ಲಿ ತಮ್ಮ 45ನೇ ಶತಕ ಬಂದ ನಂತರ ಭಾವನಾತ್ಮಕವಾಗಿ ಸಂಭ್ರಮಿಸಿದರು.

ಶತಕದ ರನ್ ಗಳಿಸಿದ ಕೊಹ್ಲಿ ಅವರು ತಮ್ಮ ಹೆಲ್ಮೆಟ್ ಅನ್ನು ತೆಗೆಯುವ ಮುನ್ನ ಸಂತೋಷದಿಂದ ಗಾಳಿಯಲ್ಲಿ ಗುದ್ದಿದರು ಮತ್ತು ಮಾಜಿ ನಾಯಕನ ಭರ್ಜರಿ ಶತಕಕ್ಕೆ ನೆರೆದಿದ್ದ ಗುವಾಹಟಿ ಪ್ರೇಕ್ಷಕರಿಂದ ದೊಡ್ಡ ಚಪ್ಪಾಳೆ ಗಿಟ್ಟಿಸಿಕೊಂಡರು.

Story first published: Tuesday, January 10, 2023, 20:15 [IST]
Other articles published on Jan 10, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X