ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಧೋನಿ ಹೆಸರಿನಲ್ಲಿರುವ ದೊಡ್ಡ ದಾಖಲೆ ಮುರಿಯಲು ರೋಹಿತ್ ಶರ್ಮಾಗೆ ಬೇಕು ಕೇವಲ ಒಂದು ಸಿಕ್ಸರ್!

Ind vs WI: Rohit Sharma is one six away from exceeding Dhonis massive ODI record

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯ ಎರಡನೇ ಪಂದ್ಯಕ್ಕಾಗಿ ಎರಡೂ ತಂಡಗಳು ಸಜ್ಜಾಗಿದೆ. ಒಂದೆಡೆ ಭಾರತ ತವರಿನಲ್ಲಿ ಸರಣಿ ಗೆಲ್ಲಲು ಸಜ್ಜಾಗಿದ್ದರೆ ಮತ್ತೊದೆಡೆ ವೆಸ್ಟ್ ಇಂಡೀಸ್ ಸರಣಿ ಸೋಲಿನಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಡಲಿದೆ. ಐಪಿಎಲ್‌ನಲ್ಲಿ ಒಂದೇ ತಂಡದ ಪರ ಸುದೀರ್ಘ ಕಾಲದಿಂದ ಆಡುತ್ತಿರುವ ರೋಹಿತ್ ಶರ್ಮಾ ಹಾಗೂ ಕಿರಾನ್ ಪೊಲಾರ್ಡ್ ತಮ್ಮ ತಮ್ಮ ದೇಶಗಳ ತಂಡವನ್ನು ಮುನ್ನಡೆಸುತ್ತಿರುವುದು ಈ ಸರಣಿಯ ಕುತೂಹಲವನ್ನು ಹೆಚ್ಚಿಸಿದೆ.

ಇನ್ನು ವೆಸ್ಟ್ ಇಂಡಿಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾಗೆ ಏಕದಿನ ಕ್ರಿಕೆಟ್‌ನಲ್ಲಿನ ದೊಡ್ಡ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆಯುವ ಅತ್ಯುತ್ತಮ ಅವಕಾಶವಿದೆ. ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಹೆಸರಿನಲ್ಲಿರುವ ಈ ದಾಖಲೆಯನ್ನು ಹಿಂದಿಕ್ಕುವ ಅವಕಾಶ ರೋಹಿತ್ ಶರ್ಮಾಗೆ ಇದೆ. ಇದಕ್ಕಾಗಿ ರೋಹಿತ್ ಶರ್ಮಾ ಒಂದು ಸಿಕ್ಸರ್ ಬಾರಿಸಿದರೆ ಸಾಕು.

ಒಬ್ಬನ ಮೇಲೆ ಕೋಟಿ ಸುರಿದ ಆರ್‌ಸಿಬಿ ಕಪ್ ಗೆಲ್ಲುತ್ತಿಲ್ಲ; ಈತನಿಗೆ ನಾಯಕತ್ವ ನೀಡಿ ಎಂದ ಮಾಜಿ ಕ್ರಿಕೆಟಿಗಒಬ್ಬನ ಮೇಲೆ ಕೋಟಿ ಸುರಿದ ಆರ್‌ಸಿಬಿ ಕಪ್ ಗೆಲ್ಲುತ್ತಿಲ್ಲ; ಈತನಿಗೆ ನಾಯಕತ್ವ ನೀಡಿ ಎಂದ ಮಾಜಿ ಕ್ರಿಕೆಟಿಗ

ಹೌದು, ಸದ್ಯ ರೋಹಿತ್ ಶರ್ಮಾ ಹಾಗೂ ಎಂಎಸ್ ಧೋನಿ ತವರಿನಲ್ಲಿ ಒಟ್ಟು ಸಿಕ್ಸರ್‌ಗಳನ್ನು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಸಿಡಿಸಿದ್ದಾರೆ. ಈ ಮೂಲಕ ಇಬ್ಬರು ಕೂಡ ತವರಿನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಹಂಚಿಕೊಂಡಿದ್ದಾರೆ. ವಿಮಡೀಸ್ ವಿರುದ್ಧದ ಎರಡನೇ ಪಂದ್ಯದಲ್ಲಿ ರೋಹಿತ್ ಶರ್ಮಾ ಒಂದು ಸಿಕ್ಸರ್ ಬಾರಿಸಿದರೆ ಈ ಪಟ್ಟಿಯಲ್ಲಿ ಎಂಎಸ್ ಧೋನಿಯನ್ನು ಹಿಂದಿಕ್ಕಿ ಅಗ್ರ ಸ್ಥಾನವನ್ನು ಸಂಪಾದಿಸಲಿದ್ದಾರೆ. ಎಂಎಸ್ ಧೋನಿ 116 ಸಿಕ್ಸರ್‌ಗಳನ್ನು ಬಾರಿಸಲು ತವರಿನಲ್ಲಿ 113 ಇನ್ನಿಂಗ್ಸ್‌ಗಳನ್ನು ಬಳಸಿಕೊಂಡಿದ್ದರೆ, ರೋಹಿತ್ ಶರ್ಮಾ ಕೇವಲ 68 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆಯನ್ನು ಸರಿಗಟ್ಟಿದ್ದಾರೆ.

ಇನ್ನು ಒಟ್ಟಾರೆಯಾಗಿ ತವರಿನಲ್ಲಿ ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಈಗ 5ನೇ ಸ್ಥಾನದಲ್ಲಿದ್ದಾರೆ. ತವರಿನಲ್ಲಿ 147 ಸಿಕ್ಸರ್ ಸಿಡಿಸಿರುವ ವೆಸ್ಟ್ ಇಂಡೀಸ್ ದಿಗ್ಗಜ ಜ್ರಿಸ್ ಗೇಲ್ ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದರೆ, 130 ಸಿಕ್ಸರ್ ಸಿಡಿಸಿರುವ ಮಾರ್ಟಿನ್ ಗಪ್ಟಿಲ್ 2ನೇ ಸ್ಥಾನದಲ್ಲಿ, 126 ಸಿಕ್ಸರ್ ಸಿಡಿಸಿರುವ ಬ್ರೆಂಡನ್ ಮೆಕ್‌ಕಲಮ್ 3ನೇ ಸ್ಥಾನದಲ್ಲಿದ್ದಾರೆ. ಅದಾದ ಬಳಿಕದ ಸ್ಥಾನದಲ್ಲಿ ಇಯಾನ್ ಮಾರ್ಗನ್ ಇದ್ದು ತವರಿನಲ್ಲಿ ಮಾರ್ಗನ್ 119 ಸಿಕ್ಸರ್ ಸಿಡಿಸಿದ್ದಾರೆ.

ಇನ್ನು ಈ ವೈಯಕ್ತಿಕ ದಾಖಲೆಯನ್ನು ಹೊರತುಪಡಿಸಿದರೂ ವಿಂಡೀಸ್ ವಿರುದ್ಧದ ಈ ಪಂದ್ಯ ರೋಹಿತ್ ಶರ್ಮಾ ಪಾಲಿಗೆ ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದೆ. ಯಾಕೆಂದರೆ ಈ ಪಂದ್ಯವನ್ನು ಭಾರತ ಗೆದ್ದರೆ ರೋಹಿತ್ ಶರ್ಮಾ ಏಕದಿನ ಮಾದರಿಯಲ್ಲಿ ಭಾರತ ತಂಡದ ನಾಯಕತ್ವವನ್ನು ಪೂರ್ಣ ಪ್ರಮಾಣದಲ್ಲಿ ವಹಿಸಿಕೊಂಡ ಬಳಿಕ ಗೆದ್ದ ಮೊದಲ ಏಕದಿನ ಸರಣಿ ಇದಾಗಿರಲಿದೆ.

1000 ಏಕದಿನ ಪಂದ್ಯವನ್ನಾಡಿದ ಭಾರತ: ವೆಂಕಟೇಶ್ ಪ್ರಸಾದ್ ಪ್ರಕಾರ ಸಾರ್ವಕಾಲಿಕ ಬೆಸ್ಟ್ ಪ್ಲೇಯಿಂಗ್ 111000 ಏಕದಿನ ಪಂದ್ಯವನ್ನಾಡಿದ ಭಾರತ: ವೆಂಕಟೇಶ್ ಪ್ರಸಾದ್ ಪ್ರಕಾರ ಸಾರ್ವಕಾಲಿಕ ಬೆಸ್ಟ್ ಪ್ಲೇಯಿಂಗ್ 11

ಇದಕ್ಕೂ ಹಿಂದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ 6 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ರೋಹಿತ್ ಶರ್ಮಾ 51 ಎಸೆತಗಳನ್ನು ಎದುರಿಸಿ 60 ರನ್ ಬಾರಿಸಿದ್ದರು. ಇಶಾನ್ ಕಿಶನ್ ಜೊತೆಕೂಡಿ ಮೊದಲ ವಿಕೆಟ್‌ಗೆ 84 ರನ್‌ಗಳ ಮಹತ್ವದ ಜೊತೆಯಾಟವನ್ನು ನೀಡಿದರು. ಇದಕ್ಕೂ ಮುನ್ನ ಬೌಲಿಂಗ್‌ನಲ್ಲಿ ಯುಜುವೇಂದ್ರ ಚಾಹಲ್ ಹಾಗೂ ವಾಶಿಂಗ್ಟನ್ ಸುಂದರ್ ಅದ್ಭುತ ದಾಳಿಗೆ ನಲುಗಿದ್ದ ವಿಂಡೀಸ್ ಪಡೆ ಕೇವಲ 176 ರನ್‌ಗಳಿಗೆ ಆಲೌಟ್ ಆಗಿತ್ತು.

ವೆಸ್ಟ್ ಇಂಡೀಸ್ ಸ್ಕ್ವಾಡ್: ಶಾಯ್ ಹೋಪ್ (ವಿಕೆಟ್ ಕೀಪರ್), ಕೀರಾನ್ ಪೊಲಾರ್ಡ್ (ನಾಯಕ), ಬ್ರಾಂಡನ್ ಕಿಂಗ್, ಡ್ಯಾರೆನ್ ಬ್ರಾವೋ, ಶಮರ್ ಬ್ರೂಕ್ಸ್, ನಿಕೋಲಸ್ ಪೂರನ್, ಜೇಸನ್ ಹೋಲ್ಡರ್, ಅಕೇಲ್ ಹೊಸೈನ್, ಅಲ್ಜಾರಿ ಜೋಸೆಫ್, ಫ್ಯಾಬಿಯನ್ ಅಲೆನ್,ಕೆಮರ್ ರೋಚ್, ಎನ್‌ಕ್ರುಮಾ ಬೊನ್ನರ್, ಓಡಿಯನ್ ಸ್ಮಿತ್, ರೊಮಾರಿಯೊ ಶೆಫರ್ಡ್

Rohit Sharma ಅವರ ಹೊಸ ಪ್ರಯೋಗ ವರ್ಕೌಟ್ ಆಗುತ್ತಾ? | Oneindia Kannada

ಭಾರತ ಸ್ಕ್ವಾಡ್: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ವಿರಾಟ್ ಕೊಹ್ಲಿ, ರಿಷಬ್ ಪಂತ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಶಾರುಖ್ ಖಾನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ದೀಪಕ್ ಚಹಾರ್, ಅವೇಶ್ ಖಾನ್ , ಕುಲದೀಪ್ ಯಾದವ್, ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್

Story first published: Wednesday, February 9, 2022, 11:58 [IST]
Other articles published on Feb 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X